ಹೆರಿಗೆ ಬಳಿಕ ತೀವ್ರ ರಕ್ತಸ್ರಾವ: ಯುವತಿ ಮೃತ್ಯು
ಕಾಸರಗೋಡು: ಹೆರಿಗೆ ಬಳಿಕ ತೀವ್ರ ರಕ್ತಸ್ರಾವವುಂಟಾಗಿ ಯುವತಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಜಮಾಲ್ ಎಂಬವರ ಪತ್ನಿ ಫಾತಿಮತ್ ತಸ್ಲೀಮ (೨೮) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ನಿನ್ನೆ ಬೆಳಿಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ಬಳಿಕ ಅಪರಿಮಿತವಾಗಿ ರಕ್ತಸ್ರಾವವುಂ ಟಾಗಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಅಲ್ಲಿ ಮೃತಪಟ್ಟಿದ್ದಾರೆ.
ಉದುಮ ಪಡಿಂಞಾರ್ ಬೇವೂರ್‌ನ ಟಿ.ಕೆ. ಅಬ್ದುಲ್ಲ ಹಸೈನಾರ್- ಮರಿಯ ದಂಪತಿಯ ಪುತ್ರಿಯಾದ ಮೃತರು ಪತಿ, ಮಕ್ಕಳಾದ ಲಾಮಿಯ ಸಾಂಬಕ್, ಡಾನಿಶ್, ಸಹೋದರ- ಸಹೋದರಿಯರಾದ ಫಸೀಲ, ಫರ್ಸಾನ, ಸಮದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.