೨೦೦೦ ರೂ. ನೋಟುಗಳ ಬದಲಾವಣೆಗೆ ಇಂದು ಕೊನೆ ದಿನ

ಕಾಸರಗೋಡು: ೨೦೦೦ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳ ಮೂಲಕ ಬದಲಾಯಿಸಲು ನೀಡಲಾದ ಸಮಯ ಅವಧಿ ಇಂದು ಸಂಜೆ ಕೊನೆಗೊಳ್ಳಲಿದೆ.

ಬಳಿಕ ನಾಳೆಯಿಂದ ೨೦೦೦ ರೂ. ಮುಖಬೆಲೆಯ ನೋಟುಗಳು ಇತಿಹಾಸ ಪುಟಕ್ಕೆ ಸೇರಿಕೊಳ್ಳಲಿದೆ.  ಆದ್ದರಿಂದ ೨೦೦೦ ರೂ. ನೋಟು ಹೊಂದಿರುವವರು ಅದನ್ನು ಇಂದು ಸಂಜೆಯೊಳಗಾಗಿ ಬ್ಯಾಂಕ್‌ನ ಮೂಲಕ ಬದಲಾಯಿಸಬಹುದು. ಇಂತಹ ನೋಟುಗಳು ನಾಳೆಯಿಂದ ಅಮಾನ್ಯಗೊಳ್ಳಲಿದೆ.

೩.೪೩ ಕೋಟಿ ರೂ.ಗಳ ೨೦೦೦ ರೂ.ಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಈಗಾಗಲೇ ಹಿಂತಿರುಗಿ ಬಂದು ಸೇರಿದೆ. ಹೆಚ್ಚು ಕಡಿಮೆ ೧೨,೦೦೦ ಕೋಟಿ ರೂ. ಮೌಲ್ಯದ ೨೦೦೦ ರೂ. ನೋಟುಗಳು ರಿಸರ್ವ್ ಬ್ಯಾಂಕ್‌ಗೆ ಬಂದುಸೇರಲು ಇನ್ನಷ್ಟೇ ಬಾಕಿ ಇದೆ.

RELATED NEWS

You cannot copy contents of this page