೩.೩೮೬ ಕಿಲೋ ಚಿನ್ನ ವಶ: ಮೂವರ ಸೆರೆ

ಕಾಸರಗೋಡು: ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚರ ಣೆಯಲ್ಲಿ ೩.೩೮೬ ಕಿಲೋ ಅಕ್ರಮ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದುಮ ಪೊವ್ವಲ್‌ನ ನಿಜಾಮುದ್ದೀನ್ (೪೪) ಎಂಬಾತನ್ನು ಸೆರೆ ಹಿಡಿದು ಆತನಿಂದ ೧.೧೦೦ ಕೆಜಿ ಚಿನ್ನ ಪತ್ತೆಹಚ್ಚಲಾಗಿದೆ. ಇನ್ನೊಂದೆಡೆ ಕಣ್ಣೂರು ಮಾನಂದೇರಿಯ ನೌಫಲ್ (೪೬) ಎಂಬಾತನಿಂದ ೧.೧೫೬ ಕೆಜಿ ಚಿನ್ನ ಪತ್ತೆಹಚ್ಚಲಾಗಿದೆ. ಇವರಿಬ್ಬರೂ ಅಬುದಾಬಿಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಇದೇ ರೀತಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಉದುಮದ ಅಬ್ದುಲ್ ರಹ್‌ಮಾನ್ ಎಂಬಾತನಿಂದ ೧೧೩೮ ಗ್ರಾಂ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ.

RELATED NEWS

You cannot copy contents of this page