ಸ್ಥಳೀಯಾಡಳಿತ ಚುನಾವಣೆ: ಮತದಾರರ ಯಾದಿ ನವೀಕರಿಸಲು 12ರ ವರೆಗೆ ಅವಕಾಶ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯ  ಪೂರ್ವಭಾವಿಯಾಗಿ ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದಕ್ಕೆ,  ತಿದ್ದುಪಡಿ ಮಾಡುವುದಕ್ಕೆ ಇರುವ ಅರ್ಜಿಗಳು, ಆಕ್ಷೇಪಗಳನ್ನು ಸಲ್ಲಿಸಲಿರುವ ದಿನಾಂಕವನ್ನು  ಈ ತಿಂಗಳ 12ರವರೆಗೆ ಮುಂದೂಡಲಾಗಿದೆಯೆಂದು ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್ ತಿಳಿಸಿದ್ದಾರೆ. 2025 ಜುಲೈ 23ರಂದು ಕರಡು ಮತದಾರರ ಯಾದಿ ಪ್ರಕಟಿಸಲಾಗಿತ್ತು. ಆರೋ ಪಗಳು, ಅರ್ಜಿಗಳನ್ನು ಸಲ್ಲಿಸಲು ನಿನ್ನೆಯವರೆಗೆ ಸಮಯ ನೀಡಲಾಗಿತ್ತು.  2025 ಜನವರಿ ೧ರಂದು ಅಥವಾ ಅದಕ್ಕಿಂತ ಮುಂಚಿತ 18 ವರ್ಷ ಪೂರ್ತಿಯಾ ದವರಿಗೆ ಮತದಾರರ ಯಾದಿಯಲ್ಲಿ ಹೆಸರು ಸೇರಿಸಬಹುದು. ಮತದಾರರ …

ಪೈವಳಿಕೆಯಲ್ಲಿ ಹೊಸ ಪೊಲೀಸ್ ಠಾಣೆ ಬಗ್ಗೆ ಚರ್ಚೆ ನಡೆಸಿದ ಡಿಜಿಪಿ

ಕಾಸರಗೋಡು:  ಮಂಜೇಶ್ವರ ಮತ್ತು  ಕುಂಬಳೆ ಪೊಲೀಸ್ ಠಾಣೆಗಳನ್ನು ವಿಭಜಿಸಿ ಪೈವಳಿಕೆಯಲ್ಲಿ ಹೊಸ ಪೊಲೀಸ್ ಠಾಣೆ ಆರಂಭಿಸುವ ವಿಷಯದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)  ರಾವಡ ಎ ಚಂದ್ರಶೇಖರನ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡ ಸಭಯಲ್ಲಿ ಚರ್ಚೆ ನಡೆಸಿದರು. ಪೈವಳಿಕೆ ಪೊಲೀಸ್ ಠಾಣೆ ನಿರ್ಮಿಸಲು ಬಾಯಿಕಟ್ಟೆಯಲ್ಲಿ ೫೦ ಸೆಂಟ್ಸ್ ಸ್ಥಳವನ್ನು ಕಂದಾಯ ಇಲಾಖೆ ಎರಡು ವರ್ಷಗಳ ಹಿಂದೆಯೇ ಪೊಲೀಸ್ ಇಲಾಖೆಗೆ ಹಸ್ತಾಂತ ರಿಸಿದೆ. ಆದರೆ ಇಲ್ಲಿ ಪೊಲೀಸ್ ಠಾಣೆ ನಿರ್ಮಿಸುವ …

ಮಿತ್ರಕಲಾವೃಂದ ಮಧೂರು 50ನೇ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಮಧೂರು: ಮಿತ್ರಕಲಾವೃಂದ ಮಧೂರು ಇದರ 50ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ಸಂಘದ ಅಧ್ಯಕ್ಷ ಸೂರ್ಯ ಎ.ಕೆ. ಉದ್ಘಾಟಿಸಿ, ಸಂಘವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾರಂಗದಲ್ಲಿ ತೋರ್ಪಡಿ ಸಿದ ಯಶಸ್ಸಿನ ಕುರಿತು ವಿವರಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ವರದಿ, ಕೋಶಾಧಿಕಾರಿ ಸುಜಿತ್ ಕೆ.ಸಿ. ಲೆಕ್ಕಪತ್ರ ಮಂಡಿಸಿದರು. ಸಂಘದ ಸದಸ್ಯರಾದ ಚಂದ್ರಹಾಸ ಕೆ. ಶುಭಾಶಂ ನೆಗೈದರು. ಸಂಘದ ೫೦ನೇ ವಾರ್ಷಿ ಕೋತ್ಸವವನ್ನು ವಿವಿಧ ಕಲಾ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೊಂದಿಗೆ ಒಂದು ವರ್ಷ ಕಾಲ ಆಚರಿಸಲು ತೀರ್ಮಾನಿಸಲಾಯಿತು. ಸಂಘದ ವತಿಯಿಂದ …