ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಶ್ವೇತಾ ಮೆನನ್ ಆಯ್ಕೆ

ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘಟನೆಯಾದ ಅಮ್ಮ ಇದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಅದರ ಉನ್ನತ ನಾಯಕತ್ವ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ. ಅಮ್ಮದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಟಿ ಶ್ವೇತಾ ಮೆನನ್ ಅಧ್ಯಕ್ಷರಾಗಿ  ಮತ್ತು ಕುಕು ಪರಮೇಶ್ವರನ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಇದರ ಹೊರತಾಗಿ   ಅನ್ಸಿಬಾ ಹಸನ್ ಜತೆ ಕಾರ್ಯದರ್ಶಿ ಮತ್ತು ಲಕ್ಷ್ಮೀಪ್ರಿಯಾ ಮತ್ತು ಜಯನ್ ಚೇರ್ತಲ ಆಯ್ಕೆಗೊಂಡಿದ್ದಾರೆ.  ಕೋಶಾಧಿಕಾರಿಯಾಗಿ ಉಣ್ಣಿ ಶಿವಪಾಲನ್ ಆರಿಸಲ್ಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ವಿರುದ್ಧ …

ಕಾಸರಗೋಡಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ದೇಶದ ಸಂವಿಧಾನ ತತ್ವ ಚಿಂತನೆಗಳ ಮೇಲೆ ಉಂಟಾಗುತ್ತಿರುವ ಸವಾಲುಗಳ ಬಗ್ಗೆ ಜಾಗ್ರತೆ ಪಾಲಿಸಬೇಕು-ಸಚಿವ ಕೃಷ್ಣನ್‌ಕುಟ್ಟಿ

ಕಾಸರಗೋಡು: ದೇಶದ ಸಂವಿಧಾನ ತತ್ವ ಚಿಂತನೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಲ್ಲರೂ ಜಾಗ್ರತೆ ಪಾಲಿಸಬೇಕೆಂದು ರಾಜ್ಯ ವಿದ್ಯುತ್ ಖಾತೆ ಸಚಿವ ಕೆ.ಕೃಷ್ಣನ್ ಕುಟ್ಟಿ  ಕರೆ ನೀಡಿದ್ದಾರೆ. ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಅದ್ದೂರಿಯ ಸ್ವಾತಂತ್ರ್ಯೋತ್ಸವದಲ್ಲಿ ತ್ರಿವರ್ಣ ಧ್ವಜ ಹಾರಿಸಿ ವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು. ಸಮಾಜವಾದ, ಧರ್ಮ ನಿರಪೇಕ್ಷತೆ ಮತ್ತು ಫೆಡರಲಿಸಂ ಇದು ಇಂದು ಬೆದರಿಕೆ ಎದುರಿಸುತ್ತಿದೆ. ದೇಶದ ಒಟ್ಟು ಸಂಪತ್ತಿನಲ್ಲಿ ಶೇ. ೪೫ರಷ್ಟು ದೇಶದಲ್ಲಿರುವ ಕೇವಲ1 ಶೇ.ದಷ್ಟು ಮಾತ್ರವೇ ಇರುವ ಶ್ರೀಮಂತ ವರ್ಗದವರ ಕೈಯಲ್ಲಿದೆ. …

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಆಗಸ್ಟ್ 30ರಂದು ಮತದಾರ ಯಾದಿ ಪ್ರಕಟ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿರುವಂತೆಯೇ ಅದರ ಮತದಾರ ಯಾದಿಯನ್ನು ಆಗಸ್ಟ್ 30ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಆ ಬಳಿಕ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಗತ್ಯದ ಎಲ್ಲಾ ಸಜ್ಜೀಕರಣಗಳನ್ನೂ ಆರಂಭಿಸಲಿದೆ. ಮತದಾರಯಾದಿ ಪ್ರಕಟಗೊಂಡ ಬಳಿಕ ಮತಗಟ್ಟೆಗಳ ಕ್ರಮೀಕರಣೆ, ಮೀಸಲಾತಿ ವಾರ್ಡ್‌ಗಳು ಇತ್ಯಾದಿ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಇತ್ಯಾದಿಗಳು ಸೇರಿದಂತೆ ಒಟ್ಟು ೩೫.೦೮ ಲಕ್ಷ ಅರ್ಜಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಲಭಿಸಿದೆ. ಅದು ಈಗ ಆಯೋಗದ ಪರಿಶೀಲನೆಯಲ್ಲಿದೆ. ಇದರಲ್ಲಿ ಐದು ಲಕ್ಷದಷ್ಟು ಮಂದಿಯನ್ನು …

ಅಸೌಖ್ಯ: ಮಹಿಳೆ ನಿಧನ

ಉಪ್ಪಳ: ಚೆರುಗೋಳಿ ತೋಟ ನಿವಾಸಿ ದಿ| ಬಾಬು ಚೆಟ್ಟಿಯಾರ್ ರವರ ಪತ್ನಿ ನಾರಾಯಣಿ (83) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭವಾನಿ, ಕೃಪಾಕರ, ದಾಕ್ಷಾಯಿಣಿ, ಅಳಿಯಂದಿರಾದ ರವಿಚಂದ್ರನ್, ಪ್ರಭಾಕರನ್, ಸೊಸೆ ಸಂಧ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ದ್ವಿತೀಯ ಸ್ವಾತಂತ್ರ್ಯ ಮುಷ್ಕರಕ್ಕೆ ಚಾಲನೆ – ಟಿ.ಎನ್. ಪ್ರತಾಪನ್

ಕಾಸರಗೋಡು: ಸ್ವಾತಂತ್ರ್ಯ ಚಳವಳಿ ಬಗ್ಗೆ ಚಾಡಿ ಹೇಳಿದವರಿಗೆ ಪ್ರಜಾಪ್ರಭುತ್ವದ ಬೆಲೆ ತಿಳಿಯದೆಂದು, ಬ್ರಿಟಿಷ್‌ನವರಿಗೆ ಕ್ಷಮೆ ಬರೆದು ಕೊಟ್ಟು ಜೈಲಿನಿಂದ ಬಿಡುಗಡೆಗೊಂಡವರು ಈಗ ಸಂವಿಧಾನವನ್ನು ಬುಡಮೇಲು ಗೊಳಿಸಲು ಯತ್ನಿಸುತ್ತಿರುವುದಾಗಿ ಇದರ ವಿರುದ್ಧ ದ್ವಿತೀಯ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ನೀಡುವುದಾಗಿ ಕೆಪಿಸಿಸಿ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಟಿ.ಎನ್. ಪ್ರತಾಪನ್ ನುಡಿದರು. ಆರ್‌ಎಸ್‌ಎಸ್, ನರೇಂದ್ರ ಮೋದಿ ಸಂಘ ಪರಿವಾರ ಸಂಸ್ಥೆಗಳು ಸೇರಿ ಮತ ಕಳವು ನಡೆಸಿರುವುದಾಗಿಯೂ, ಇವರನ್ನು ಆಡಳಿತದಿಂದ ಕೆಳಗಿಳಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ನುಡಿದರು. ಬಿಜೆಪಿಯ ಪೋಷಕ …

ನಗರಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಾಸರಗೋಡು: ಕಾಸರಗೋಡು ನಗರಸಭಾ ಕಾರ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷ ಅಬ್ಬಾಸ್ ಬೀಗಂ ಧ್ವಜಾರೋ ಹಣಗೈದರು. ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಿ ವಿಭಾಗೀಯತೆ ಸೃಷ್ಟಿಸಲು ಯತ್ನಿಸುವವರನ್ನು ದೂರ ಮಾಡಬೇಕೆಂದು ಯಾವುದೇ ಬೆಲೆ ತೆತ್ತಾದರೂ ದೇಶದ ಜನರ ಐಕ್ಯವನ್ನು ಸಂರಕ್ಷಿಸಬೇಕೆಂದು ಈ ವೇಳೆ ಅವರು ಕರೆ ನೀಡಿದರು. ಉಪಾಧ್ಯಕ್ಷೆ ಶಂಸೀದಾ ಫಿರೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ರೀತಾ ಆರ್, ಖಾಲಿದ್ ಪಚ್ಚಕ್ಕಾಡ್, ರಜನಿ ಕೆ, ಕೌನ್ಸಿಲರ್‌ಗಳು, ನಾರಾಯಣ ನಾಯ್ಕ್, ಸಿಬ್ಬಂದಿಗಳು, ನಗರಸಭಾ ಬಡ್ಸ್ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದರು.

ವಿ.ಹಿಂ.ಪ.ದಿಂದ ಉಪ್ಪಳದಲ್ಲಿ ಪಂಜಿನ ಮೆರವಣಿಗೆ

ಉಪ್ಪಳ: ವಿಶ್ವಹಿಂದೂ ಪರಿಷತ್ ಭಜರಂಗದಳ ಮಂಗಲ್ಪಾಡಿ ಖಂಡಸಮಿತಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ನಿನ್ನೆ ಸಂಜೆ ಜರಗಿತು. ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟ ಮೆರವಣಿಗೆ ಪೇಟೆಯಲ್ಲಿ ಸಮಾಪ್ತಿಗೊಂಡಿತು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಶಿವರಾಯ ಭಟ್ ಮುಳ್ಳೇರಿಯ ಮಾತನಾಡಿದರು. ಮುಖಂಡರಾದ ಹರಿನಾಥ ಭಂಡಾರಿ ಮುಳಿಂಜ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ನಿರಂಜನ ಚೆರುಗೋಳಿ ಉಪಸ್ಥಿತರಿದ್ದರು. ಸತ್ಯ ವೀರನಗರ ಸ್ವಾಗತಿಸಿ, ರವಿ ಪರಂಕಿಲ ವಂದಿಸಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಪ್ತತಿ ಮಹೋತ್ಸವ ಪ್ರಾದೇಶಿಕ ಸಮಿತಿಗೆ ರೂಪು

ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ (70ನೇ ವಾರ್ಷಿಕ) ಮಹೋತ್ಸವ ದಂಗವಾಗಿ ಅಗೋಸ್ತ್ ೨೮ರಿಂದ ಸೆಪ್ಟಂಬರ್ 9ರ ತನಕ ನಡೆಯಲಿರುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಕರಂದಕ್ಕಾಡ್ ಶಿವಾಜಿನಗರದ ಶ್ರೀ ವೀರ ಹನುಮಾನ್ ಪ್ರಾದೇಶಿಕಸಮಿತಿಗೆ ರೂಪು ನೀಡಲಾಯಿತು. ಸಪ್ತತಿ ಮಹೋತ್ಸವದಂಗವಾಗಿ ಕರಂದಕ್ಕಾಡ್  ಶಿವಾಜಿ ನಗರವನ್ನು ಕೇಸರಿ ಧ್ವಜಗಳ ಸಹಿತ ತಳಿರು ತೋರಣಗಳು ಮತ್ತು ವಿದ್ಯುದ್ದೀಪಾಲಂಕೃತ ವ್ಯವಸ್ಥೆ ಮಾಡುವುದು, ಅನ್ನದಾನಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಮನೆಗಳಿಂದ ಸಂಗ್ರಹಿಸಿ ಹಸಿರುವಾಣಿ ಸಮರ್ಪಿಸುವುದು, ಕೊನೆಯ ದಿನದಂದು ಶ್ರೀ ಗಣೇಶ …

ಮುಸ್ಲಿಂ ಲೀಗ್ ಕಾರ್ಯಕರ್ತರ ಆಕ್ರಮಣದಿಂದ ಗಾಯಗೊಂಡಿದ್ದ ಸಿಪಿಎಂ ಕಾರ್ಯಕರ್ತ ನಿಧನ

ಕಣ್ಣೂರು: ಮುಸ್ಲಿಂ ಲೀಗ್ ಕಾರ್ಯಕರ್ತರ ಆಕ್ರಮಣದಲ್ಲಿ ಗಂಭೀರ ಗಾಯಗೊಂಡು 13 ವರ್ಷದಿಂದ ಶಯ್ಯಾವಲಂಭಿಯಾಗಿದ್ದ ಸಿಪಿಎಂ ಕಾರ್ಯಕರ್ತ ನಿಧನ ಹೊಂದಿದರು. ತಳಿಪರಂಬ್ ಅರಿಯಿಲ್ ವಳ್ಳೇರಿ ಮೋಹನನ್ (60) ಮೃತಪಟ್ಟವರು. 2012 ಫೆಬ್ರವರಿ 12ರಂದು ಮೋಹನ್‌ರಿಗೆ ಆಕ್ರಮಣ ನಡೆಸಲಾಗಿತ್ತು. ಅಂದು ಬೆಳಿಗ್ಗೆ ಮೋಹನನ್‌ರನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಡಿದು ಗಾಯಗೊಳಿಸಲಾಗಿತ್ತು. ಮೃತಪಟ್ಟರೆಂದು ತಿಳಿದು ಪೊದೆಗಳೆಡೆಯಲ್ಲಿ ಉಪೇಕ್ಷಿಸಿ ಅಕ್ರಮಿ ತಂಡ ಪರಾರಿಯಾಗಿತ್ತು. ಆಕ್ರಮಣವನ್ನು ತಡೆಯಲೆತ್ನಿಸಿದ   ವಿದ್ಯಾರ್ಥಿಯಾದ ಪುತ್ರ ಮಿಥುನ್‌ಗೂ ಗಾಯವುಂಟಾಗಿತ್ತು. ಆ ಬಳಿಕ 13 ವರ್ಷದಿಂದ ಚಿಕಿತ್ಸೆಯಲ್ಲಿದ್ದ ಮೋಹನನ್ ನಿನ್ನೆ ಬೆಳಿಗ್ಗೆ …

ಕುಂಬಳೆ ಭಾಸ್ಕರನಗರದಲ್ಲಿ ನವೋದಯ ಗ್ರಂಥಾಲಯ, ವಾಚನಾಲಯ ಉದ್ಘಾಟನೆ

ಕುಂಬಳೆ: ಭಾಸ್ಕರನಗರದಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಆರಂಭಿಸಿದ ನವೋದಯ ಗ್ರಂಥಾಲಯ ಹಾಗೂ ವಾಚನಾಲಯದ ಉದ್ಘಾಟನೆಯನ್ನು ನಿನ್ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟನೆ ನಿರ್ವಹಿಸಿ ಶುಭಾಶಂಸನೆಗೈದರು. ನಿವೃತ್ತ ಎಎಸ್‌ಪಿ ಟಿ.ಪಿ. ರಂಜಿತ್ ಧ್ವಜಾರೋಹಣ ನಡೆಸಿದರು. ನಿವೃತ್ತ ಅಡಿಶನಲ್ ಎಸ್.ಐ. ಬಾಬು, ನಿವೃತ್ತ ಎಎಸ್‌ಐ ಗೋಪಾಲಕೃಷ್ಣ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಸದಸ್ಯೆ ಶೋಭಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ ಧಿಗಳು ಹಾಗೂ ನಾಗರಿಕರು ಭಾಗವಹಿಸಿದರು.