ರೈಲು ಪ್ರಯಾಣಿಕನ 40 ಸಾವಿರ ರೂ.ಗಳ ಮೊಬೈಲ್ ಫೋನ್ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ರೈಲು ಪ್ರಯಾ ಣಿಕನ 40 ಸಾವಿರ ರೂಪಾ ಯಿಗಳ ಹಾಗೂ ೧೦ಸಾವಿರ ರೂಪಾಯಿಗಳ ಎರಡು ಮೊಬೈಲ್ ಫೋನ್‌ಗಳನ್ನು ಕಳವುಗೈದ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಪನ್ನಿಪ್ಪಾರೆ ಮುಟ್ಟತ್ತೋಡಿ  ನಿವಾಸಿಯೂ ಕಾಞಂಗಾಡ್ ರೈಲ್ವೇ ನಿಲ್ದಾಣ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕೆ.ಕೆ. ಅಬ್ದುಲ್ಲ (63) ಬಂಧಿತ ಆರೋಪಿ. ಕಳೆದ ತಿಂಗಳ ೨೮ರಂದು ನೇತ್ರಾವತಿ ಎಕ್ಸ್ ಪ್ರೆಸ್‌ರೈಲಿನಲ್ಲಿ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ವೇಂಙೇರಿ ನಿವಾಸಿ ಸೂರ್ಯಕೃಷ್ಣ ಎಂಬವರ ಎರಡು ಮೊಬೈಲ್ ಫೋನ್‌ಗಳನ್ನು ಈತ ಕಳವು ನಡೆಸಿದಾನೆ.    ಮೊಬೈಲ್ ಫೋನ್‌ಗಳು ಕಳವಿಗೀಡಾದ  ಬಗ್ಗೆ  …

ನಾಪತ್ತೆಯಾದ ಯುವತಿ ಇನ್ನೋರ್ವ ಯುವಕನನ್ನು ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಹಾಜರು

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುಂಬಳ ಕೋಳಿಯಡ್ಕದಿಂದ ನಾಪತ್ತೆಯಾದ ಗೃಹಿಣಿ ಇನ್ನೋರ್ವ ಯುವಕನನ್ನು  ಮದುವೆ ಯಾಗಿರವುದಾಗಿ  ತಿಳಿದುಬಂದಿದೆ. ಹಲೀಮ ಸದಿಯ ಎಂಬಾಕೆ ತೃಶೂರು ನಿವಾಸಿಯಾದ ಅಜಯ್ ಎಂಬಾತನನ್ನು  ಮದುವೆಯಾಗಿ  ಚೆರುತುರುತ್ತಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.  ಈ ವಿಷಯವನ್ನು ತೃಶೂರು ಪೊಲೀಸರು ಮೇಲ್ಪರಂಬ ಪೊಲೀಸರಿಗೆ ತಿಳಿಸಿದ್ದಾರೆ.  ಸೋಮವಾರ ರಾತ್ರಿ 11.30ರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆ ಮಧ್ಯೆಗಿನ ಸಮಯದಲ್ಲಿ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ತಂದೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಹಲೀಮ ಗಲ್ಫ್‌ನಲ್ಲಿದ್ದ ಸಂದರ್ಭದಲ್ಲಿ …

11ರ ಬಾಲಕನಿಗೆ ಲೈಂಗಿಕ ಕಿರುಕುಳ ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್  ಯುವತಿ ವಿರುದ್ಧ ಪೋಕ್ಸೋ ಕೇಸು

ತೃಶೂರು: 11ರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಸೋಶ್ಯಲ್ ಮೀ ಡಿಯಾ ಇನ್‌ಫ್ಲುವೆನ್ಸರ್ ನಿಷಾ ರಾಫೇಲ್‌ಳ ವಿರುದ್ಧ ತೃಶೂರು ವೆಸ್ಟ್  ಪೊಲೀಸರು  ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.  ಬಾಲಕನನ್ನು ತೃಶೂರು ಜನರಲ್ ಆಸ್ಪತ್ರೆಗೆ ತಲುಪಿಸಿ ಮೆಡಿಕೋ-ಲೀಗಲ್ ಪರಿಶೀಲನೆಗೊ ಪಡಿ ಸಲಾಯಿತು.   ಬಾಲಕನಿಗೆ  ಲೈಂಗಿಕ ದೌರ್ಜನ್ಯನಡೆದಿರುವುದಾಗಿ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸ್ಪಷ್ಟಗೊಂಡಿದೆ.  ಇದೇ ವೇಳೆ ನಿಷಾ ರಾಪೇಲ್ ವಿರುದ್ಧ ಬಾಲಕ  ಗಂಭೀರ ಆರೋಪಗಳನ್ನು ಹೊರಿಸಿದ್ದಾನೆನ್ನಲಾಗಿದೆ. ನಿಷಾ ರಾಪೇಲ್ ಅಧ್ಯಾಪಿಕೆಯೂ ಆಗಿದ್ದಾಳೆ.

ಕೇಂದ್ರೀಯ ವಿ.ವಿ.ಯ ವಿಚಾರಗೋಷ್ಠಿ ಬುಡಮೇಲುಗೊಳಿಸಲು ಯತ್ನ:  25 ಮಂದಿ ವಿರುದ್ಧ ಕೇಸು

ಕಾಸರಗೋಡು: ಕೇಂದ್ರ ವಿವಿಯಲ್ಲಿ ವಂದೇ ಮಾತರಂ ರಾಷ್ಟ್ರೀಯ ವಿಚಾರಗೋಷ್ಠಿ ಮಧ್ಯೆ ಪ್ರತಿಭಟಿಸಿದ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ಕಂಡರೆ ಗುರುತು ಹಿಡಿಯಬಹುದಾದ 25 ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಸ್ವತಃ ತಂಡ ಸೇರಿ ವಿಚಾರಗೋಷ್ಠಿಯನ್ನು ಅಲ್ಲೋಲಕಲ್ಲೋಲಗೊಳಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ರಾಜ್ಯಪಾಲರ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದ ಪ್ರಧಾನ ಸಂಘಟಕ ಹಾಗೂ ಪ್ರೋಕ್ಟರ್ ಆಗಿರುವ ಕೆ. ಶ್ರೀಕುಮಾರ್‌ರ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದಲ್ಲಿರುವ ಪೊಲೀಸರು ವಿ.ವಿಗೆ ತಲುಪಿದ್ದರು. ಶ್ರೀಕುಮಾರ್ ಮಾತನಾಡುತ್ತಿದ್ದ ಮಧ್ಯೆ …

ಕೃಷಿಕ ಕುಸಿದು ಬಿದ್ದು ಮೃತ್ಯು

ಕುಂಬ್ಡಾಜೆ: ಕೃಷಿಕರೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಏತಡ್ಕ ನಡುಮನೆ ನಿವಾಸಿ  ರವೀಂದ್ರನಾಥ್ ಭಟ್ (67) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮಾರ್ಪನಡ್ಕದ ಗ್ರಾಮೀಣ ಬ್ಯಾಂಕ್ ಸಮೀಪ ಘಟನೆ ನಡೆದಿದೆ. ಬ್ಯಾಂಕ್‌ಗೆ ಬಂದಿದ್ದ ಇವರು ಮರಳಿ ಮನೆಗೆ ಹೋಗಲು ಕಾರಿಗೆ ಹತ್ತುತ್ತಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಸಮೀಪದ ಕುಟುಂಬ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಲಲಿತ, ಮಕ್ಕ ಳಾದ ಸುಷ್ಮ, ನಿಷ್ಮ, ಅಳಿಯಂ ದಿರಾದ ವಿವೇಕ್, ವಿಕಾಸ್, ಸಹೋದರ-ಸಹೋದರಿಯರಾದ ಸೂರ್ಯಪ್ರಕಾಶ್, ಜಯರಾಜ್,  ರಾಣಿಕಲಾ, …

ಕೋಳಿ ಅಂಕ ಅಡ್ಡೆಗೆ ಪೊಲೀಸ್ ದಾಳಿ : 7 ಮಂದಿ ವಿರುದ್ಧ ಪ್ರಕರಣ ದಾಖಲು; ನಗದು ಸಹಿತ 7 ಕೋಳಿ ವಶ

ಬದಿಯಡ್ಕ: ಬೇಳ ಬಿರ್ಮಿನಡ್ಕ ಪಡಿಯಡ್ಪು ಎಂಬಲ್ಲಿ ನಡೆಯುತ್ತಿದ್ದ ಕೋಳಿಅಂಕ ಅಡ್ಡೆಗೆ ಬದಿಯಡ್ಕ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ. ಮಾತ್ರವಲ್ಲ ಈ ಅಡ್ಡೆಯಿಂದ ಏಲು ಕೋಳಿಗಳು, 3800 ರೂ. ವಶಪಡಿಸಿ ಕೊಂಡಿದ್ದಾರೆ.  ಬಂಬ್ರಾಣದ ಜಯರಾಮ್ (36)ಕುಂಟಾರಿನ ಪದ್ಮನಾಭ ಎಂ (45), ನೀರ್ಚಾಲಿನ ನಾರಾಯಣ ಎನ್ (45), ಪಳ್ಳಿಕ್ಕೆರೆ ಪಾಕಂನ ಶಶಿ (65), ಪೆರಡಾಲ ಪೀಲಿತ್ತಡ್ಕದ ಪ್ರಜ್ವಲ್ (25), ಪೆರುಂಬಳ ಕೋಳಿಯಡ್ಕದ ಪ್ರಮೋದ್ ಕೆ (41) ಮತ್ತು ಕುಂಬಳೆ ಮುಜುಂ ಗಾವಿನ ಚಂದ್ರ (45) …

ಫೇಸ್ ಬುಕ್ ಮೂಲಕ ಪರಿಚಯ: ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿ ದೃಶ್ಯಗಳನ್ನು ಪತಿಗೆ ಕಳುಹಿಸಿಕೊಟ್ಟ ಯುವಕನ ವಿರುದ್ಧ ಕೇಸು

ಕಾಸರಗೋಡು:  ಫೇಸ್ ಬುಕ್ ಮೂಲಕ ಪರಿಚಯಗೊಂಡ ಯುವತಿಗೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ೪೦ರ ಹರೆಯದ ಯುವತಿಗೆ  ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಪತ್ತನಂತಿಟ್ಟ ನಿವಾಸಿಯಾದ ಪ್ರೇಂ ಎಂಬಾತನ ವಿರುದ್ಧ  ಪೊಲೀಸರು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ಹಾಗೂ ಪ್ರೇಂ  ಫೇಸ್ ಬುಕ್ ಮೂಲಕ ಪರಿಚಯಗೊಂಡಿದ್ದರು. ಬಳಿಕ ಅದು ಪ್ರೇಮಕ್ಕೆ ತಿರುಗಿತು. ಈಮಧ್ಯೆ  ಯುವತಿಯ ಮನೆಗೆ ತಲುಪಿದ ಪ್ರೇಂ ಆಕೆಯನ್ನು ಭೇಟಿಯಾಗಿ ಲೈಂಗಿಕ ದೌರ್ಜನ್ಯವೆಸಗಿ …

ವಿದ್ಯುತ್ ಶಾಕ್ ತಗಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕಾಸರಗೋಡು: ಕೆಲಸದ ಮಧ್ಯೆ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಕೆಎಸ್‌ಇಬಿ ನೌಕರ ನಿಧನಹೊಂದಿದರು. ಬಳಾಂತೋಡು ಕೆಎಸ್‌ಇಬಿ ಕಚೇರಿಯ ಲೈನ್‌ಮ್ಯಾನ್ ಕಲ್ಲಪ್ಪಳ್ಳಿ ಪಾಡಿ ಕೊಚ್ಚಿಯ ನಿವಾಸಿ ಸುರೇಶ್ (44) ನಿಧನಹೊಂದಿದರು. ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನ ಸಂಭವಿಸಿದೆ. ಕಳೆದ ಅಗೋಸ್ತ್ 15ರಂದು ಕಲ್ಲಪಳ್ಳಿ ಪಾಡಿಕೊಚ್ಚಿಯಲ್ಲಿ ವಿದ್ಯುತ್ ಇಲ್ಲವೆಂದು ಫ್ಯೂಸ್ ಹಾಕುತ್ತಿದ್ದ ವೇಲೆ ಶಾಕ್ ತಗಲಿತ್ತು. ಕೂಡಲೇ ಮಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅಲ್ಲಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಣ್ಣಯ್ಯ ನಾಯ್ಕ್,-ಮೀನಾಕ್ಷಿ ದಂಪತಿ ಪುತ್ರನಾದ ಮೃತರು …

ಇಲಿವಿಷ ಹೊಟ್ಟೆಗೆ ಸೇರಿದ್ದ ಯುವಕ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ಇಲಿ ವಿಷ ಹೊಟ್ಟೆಗೆ ಸೇರಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಕೂಡ್ಲು ಮನ್ನಿಪ್ಪಾಡಿಯ ಕಾನತ್ತಿಕರ ಹೌಸ್‌ನ ಶಶಿಧರ (39) ಮೃತಪಟ್ಟವರು. ದಿನಗಳ ಹಿಂದೆ ಇಲಿ ವಿಷ ಹೊಟ್ಟೆಗೆ ಸೇರಿದ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಯುವಕನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಮಂಗಳೂ ರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ನಿರ್ಮಾಣ ಕಾರ್ಮಿಕನಾಗಿದ್ದ ಶಶಿಧರ ಅವಿವಾಹಿತರಾಗಿದ್ದರು. ಕುಂಞಿರಾಮ ಮಣಿಯಾಣಿ- ಶಂಕರಿಯಮ್ಮ ದಂಪತಿ ಪುತ್ರನಾಗಿದ್ದಾರೆ. ಮೃತರು ಸಹೋದರಿಯರಾದ ಜಯಶ್ರೀ, ಜಲಜ, ವನಜ ಹಾಗೂ …

25 ವರ್ಷದಿಂದಿದ್ದ ಬೃಹತ್ ಹೊಕ್ಕುಳ ಹರ್ನಿಯಕ್ಕೆ ಮುಳ್ಳೇರಿಯ ಕೋ ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಮುಳ್ಳೇರಿಯ: ಸುಮಾರು 25 ವರ್ಷದಿಂದ ಬೆಳೆಯುತ್ತಿದ್ದ ಬೃಹತ್ ಗಾತ್ರದ ಹೊಕ್ಕುಳ ಹರ್ನಿಯಾವನ್ನು ಮುಳ್ಳೇರಿಯ ಕೋ-ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆರವುಗೊಳಿಸಲಾಯಿತು. 62 ವರ್ಷದಿಂದ ಮಹಿಳೆಯ ಅಂದಾಜು 10×8 ಸೆ.ಮೀ. ದೊಡ್ಡದಾದ ಹಲವು ಕಾಲದಿಂದಿದ್ದ ಹೊಕ್ಕುಳ ಹರ್ನಿಯವನ್ನು ಜನರಲ್ ಸರ್ಜನ್ ಡಾ| ಉದತ್ತ್ ಎಂ.ರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆಯಲಾಗಿದೆ. ಹರ್ನಿಯ ಚೀಲದೊಳಗೆ ಓಮೆಂಟಮ್ ಎಂದು ಕರೆಯಲ್ಪಡುವ ಹೊಟ್ಟೆಯ ಒಳಭಾಗದಲ್ಲಿ ಕೊಬ್ಬಿನ ಅಂಗಾಂಶ ಸಿಲುಕಿಕೊಂಡಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಹರ್ನಿಯ ಚೀಲವನ್ನು …