ಮನೆಯೊಡೆಯ ಸ್ವತಃ ಗುಂಡು ಹಾರಿಸಿಕೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಪಿಸ್ತೂಲು ಪೊಲೀಸ್ ವಶಕ್ಕೆ

ಮಂಜೇಶ್ವರ: ವ್ಯಕ್ತಿಯೊಬ್ಬರು ಸ್ವತಃ ಎದೆಗೆ ಗುಂಡಿಕ್ಕಿಕೊಂಡು ಸಾವಿಗೀಡಾದ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವು ಮದಂಗಲ್ಲು ನಿವಾಸಿ ಸುಬ್ಬಣ್ಣ ಭಟ್ (86) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ನಾಡನ್ನು ಬೆಚ್ಚಿ ಬೀಳಿಸಿದ ಈ ದಾರುಣ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಊಟದ ಬಳಿಕ  ಮಾತ್ರೆ ಸೇವಿಸಲು ನೀರು ತರುವಂತೆ ಸುಬ್ಬಣ್ಣ ಭಟ್ ಪತ್ನಿ ರಾಜಮ್ಮಾಳ್‌ರಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಂತೆ  ಪತ್ನಿ ನೀರು ತರಲು ಅಡುಗೆ ಕೋಣೆಗೆ ಹೋದ ಸಂದರ್ಭದಲ್ಲಿ ಸುಬ್ಬಣ್ಣ ಭಟ್ ಇದ್ದ …

ಮನೆ ಬಳಿಯ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಮಂಜೇಶ್ವರ: ಮನೆಯಿಂದ ನಾಪತ್ತೆಯಾದ ಮಹಿಳೆಯ ಮೃತದೇಹ ಬಾವಿಯಲ್ಲಿಪತ್ತೆಯಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ಅಡ್ಕತ್ತಗುರಿ ನಿವಾಸಿ ರೋಕಿ ಡಿ ಸೋಜಾರ ಪತ್ನಿ ಐರಿನಾ ಡಿ ಸೋಜಾ [60] ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆ ತನಕ ಮನೆಯಲ್ಲಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಡಿದಾಗ 8.30ರ ವೇಳೆ ಮನೆ ಪರಿಸರದ ಬಾವಿಯಲ್ಲಿ ಮೃತದೇಹ ಕಂಡುಬAದಿದೆ. ಉಪ್ಪಳದಿಂದ ಅಗ್ನಿ ಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಲಾಗಿದೆ. ಮಂಜೇಶ್ವರ ಪೊಲೀಸರು ತಲುಪಿ ಪಂಚನಾಮೆ ನಡೆಸಿದ್ದಾರೆ. ಕಾಸರಗೋಡು ಜನರಲ್ …

ಉದ್ವಿಗ್ನತೆಯ ಮಂಜು ಕರಗತೊಡಗಿದೆಯೇ?: ಮೋದಿ ಅದ್ಭುತ, ಉತ್ತಮ ಪ್ರಧಾನಿ; ಅವರು ಎಂದೂ ನನ್ನ ಆಪ್ತ ಸ್ನೇಹಿತ-ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ  ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ ಹೊಡೆಯತೊಡಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರಮೋದಿ ಓರ್ವ ಅದ್ಭುತ ಹಾಗೂ ಉತ್ತಮ ಪ್ರಧಾನಿಯಾಗಿದ್ದಾರೆ. ಮಾತ್ರವಲ್ಲ ಅವರು ನನ್ನ ಉತ್ತಮ ಸ್ನೇಹಿತರೂ ಆಗಿದ್ದಾರೆ. ನಮ್ಮ ಈ ಸ್ನೇಹವು ಯಾವಾಗಲೂ ಶಾಶ್ವತವಾಗಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದು ಇದು ಸುಂಕ ಸಮರದ ಹೆಸರಲ್ಲಿ ಭಾರತ ಮತ್ತು …

ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ವಿದ್ಯಾರ್ಥಿ ಮೃತಪಟ್ಟನು. ಸಹ ಸವಾರ ಗೆಳೆಯ ಗಾಯಗೊಂಡಿದ್ದಾನೆ. ಬೇಡಡ್ಕ ನಿವಾಸಿ ಸಿ. ಕೌಶಿಕ್‌ನಾಥ್ (19) ಮೃತಪಟ್ಟ ವಿದ್ಯಾರ್ಥಿ. ಗೆಳೆಯ ಕೈಲಾಸ್ ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಪೊಯಿನಾಚಿ- ಕುಂಡಂಗುಳಿ ರಸ್ತೆಯ ಪರಂಬ್‌ನಲ್ಲಿ ಅಪಘಾತ ಸಂಭವಿಸಿದೆ. ಚೆರ್ಕಳ ದಲ್ಲಿರುವ ಗೆಳೆಯನ ಮನೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರಾದರೂ ಕೌಶಿಕ್ ಮೃತಪಟ್ಟಿದ್ದಾನೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಸ್ಕೂಟರ್ ಚಲಾಯಿಸುತ್ತಿದ್ದ ಮಧ್ಯೆ …

ಪುತ್ರಿ, ಸಂಬಂಧಿಕನ ಮಗಳ ಮೇಲೆ ಆಸಿಡ್ ದಾಳಿ: ತಲೆಮರೆಸಿಕೊಂಡ ವ್ಯಕ್ತಿಗಾಗಿ ಶೋಧ

ಕಾಸರಗೋಡು: 17ರ ಹರೆಯದ ಸ್ವಂತ ಪುತ್ರಿ ಹಾಗೂ ಸಹೋದರನ 10 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೋರ್ವ ಆಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆ ಬಳಿಕ ತಲೆಮರೆಸಿಕೊಂಡ ಕರ್ನಾಟಕದ ಕರಿಕೆ ನಿವಾಸಿಯಾದ ಮನೋಜ್ ಎಂಬಾತನ ಪತ್ತೆಗಾಗಿ ರಾಜಪುರಂ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪನತ್ತಡಿ ಪಾರ ಕ್ಕಡವ್ ಎಂಬಲ್ಲಿನ ಸಂಬಂಧಿಕರ ಮನೆಯಲ್ಲಿ ಮನೋಜ್‌ನ ಮಗಳು ವಾಸಿಸುತ್ತಿದ್ದಳು. ಮನೋಜ್ ಪತ್ನಿಯೊಂದಿಗೆ ಸಿಟ್ಟುಗೊಂಡು ಬೇರೆಯೇ ವಾಸಿಸುತ್ತಿದ್ದಾನೆನ್ನಲಾಗಿದೆ. ಪತ್ನಿ ಹಾಗೂ ಮಗಳು ಸಹೋದರನ ಮನೆಯಲ್ಲಿರುವುದನ್ನು ತಿಳಿದು ನಿನ್ನೆ ಅಲ್ಲಿಗೆ ತಲುಪಿದ ಮನೋಜ್ ಅವರ …

ಯುವಕ ನಾಪತ್ತೆ: ಬೈಕ್ ಹೊಳೆ ಬಳಿ ಪತ್ತೆ, ವ್ಯಾಪಕ ಶೋಧ

ಕಾಸರಗೋಡು: ಯುವಕನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಇದೇ ಸಂದರ್ಭದಲ್ಲಿ ಆತನ ಬೈಕ್ ಹೊಳೆ ಬಳಿ ಪತ್ತೆಯಾಗಿದೆ. ಕೋಡೋಂ ಗ್ರಾಮ ಕರಿಯಂವಳಪ್ಪಿನ ಬಾಲಕೃಷ್ಣನ್ ಎಂಬವರ ಪುತ್ರ, ಪೊಯಿನಾಚಿಯ ವಾಹನ ಶೋರೂಂ ಸಿಬ್ಬಂದಿ ಸಜಿತ್‌ಲಾಲ್ (26) ನಾಪತ್ತೆಯಾದ ಯುವಕ. ಇವರು ಮೊನ್ನೆ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಕೆಲಸ ಮಾಡುವ ಕಚೇರಿಗೆ ಹೋಗಿದ್ದು ನಂತರ ಅವರು ಮನೆಗೆ ಹಿಂತಿರುಗಿಲ್ಲ ವೆಂದು  ರಾಜಪುರಂ ಪೊಲೀಸ್ ಠಾಣೆಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗೊಳ ಪಟ್ಟ …

ಸಾಮಾಜಿಕ ಕಾರ್ಯಕರ್ತ ಉಬೈದುಲ್ಲಾ ಕಡವತ್ ನಿಧನ

ಕಾಸರಗೋಡು: ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕರ್ತ ಮೇಲ್ಪರಂಬ ಕಡವತ್ ನಿವಾಸಿ ಹಾಗೂ ನೆಲ್ಲಿಕುಂಜೆ ಬಂಗರಗುಡ್ಡೆ ಕುದೂರಿನಲ್ಲಿ ವಾಸಿಸುತ್ತಿದ್ದ ಉಬೈದುಲ್ಲಾ ಕಡವತ್ (63) ನಿಧನಹೊಂದಿದರು. ನೆಬಿ ದಿನ ಕಾರ್ಯಕ್ರಮದಲ್ಲಿ  ಭಾಗವಹಿಸಲು ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿಗೆ ಹೋಗಿದ್ದ ಇವರಿಗೆ ದೈಹಿಕ ಅಸ್ವಸ್ಥತೆ  ಕಂಡುಬಂದಿದ್ದು, ಇದರಿಂದ ಇವರನ್ನು  ಮನೆಗೆ ತಲುಪಿಸಲಾಯಿತು. ಚೆಂಬರಿಕ ಖಾಸಿಯಾಗಿದ್ದ ಸಿ.ಎಂ. ಅಬ್ದುಲ್ಲ ಮೌಲವಿಯವರ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಹೋರಾಟ ನಡೆಸುವ ಸಮಿತಿಯ ಮುಂಚೂಣಿ ಕಾರ್ಯಕರ್ತನಾಗಿ ದ್ದರು. ಎನ್‌ಸಿಪಿ ಶರತ್ ಪವಾರ್ ವಿಭಾಗ ಕಾಸರಗೋಡು ಬ್ಲೋಕ್ ಮಾಜಿ …

ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ವ್ಯಕ್ತಿಗೆ ನೆರವಾಗಿ ಮಾನವೀಯತೆ ಮೆರೆದ ಕುಂಬಳೆ ಪೊಲೀಸರು

ಕುಂಬಳೆ: ಬಸ್ ನಿಲ್ದಾಣ ದಲ್ಲಿ ಬಿದ್ದು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀ ಸರು ತಕ್ಷಣ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದರು. ನಿನ್ನೆ ಮಧ್ಯಾಹ್ನ ವೇಳೆ ಕುಂಬಳೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಇನ್‌ಸ್ಪೆಕ್ಟರ್  ಕೆ.ಪಿ. ಜಿಜೀಶ್‌ರ ನಿರ್ದೇಶದ ಮೇರೆಗೆ ಜನಮೈತ್ರಿ ಬೀಟ್ ಆಫೀಸರ್ ವಸಂತನ್, ಪೊಲೀಸರಾದ ಮಹೇಶ್, ಕಿಶೋರ್, ಚಾಲಕ ಜಾಬಿರ್ ಎಂಬಿವರು ತಕ್ಷಣ ಬಸ್ ನಿಲ್ದಾಣಕ್ಕೆ ತಲುಪಿದಾಗ ವ್ಯಕ್ತಿ ಬಿದ್ದಿರುವುದು ಕಂಡುಬಂದಿದೆ. …

ದೈಹಿಕ ಸಾಮರ್ಥ್ಯ ಪರೀಕ್ಷೆ ವೇಳೆ ಜವಾನ ಕುಸಿದುಬಿದ್ದು ಸಾವು

ಕಾಸರಗೋಡು: ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ ಕಾಸರಗೋಡು ನಿವಾಸಿಯಾದ ಭಾರತೀಯ ಸೇನಾ ಜವಾನ ದಿಢೀರ್ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವೆಳ್ಳರಿಕುಂಡ್ ಪನ್ನಿತ್ತಡ ನಿವಾಸಿ ಅರುಣ್‌ರಾಮಕೃಷ್ಣನ್ (38) ಸಾವನ್ನಪ್ಪಿದ ಯುವಕ. ದೆಹಲಿಯಲ್ಲ್ಲಿರುವ ಭಾರತೀಯ ಸೇನೆಯ  ಪ್ರಧಾನ ಕಚೇರಿಯಲ್ಲಿ ಸಿಗ್ನಲ್ ರೆಜಿಮೆಂಟ್  ಹವಲ್ದಾರ್ ಆಗಿ ಸೇವೆ ಸಲ್ಲಸುತ್ತಿದ್ದ ಅರುಣ್ ರಾಮಕೃಷ್ಣನ್  ಅಲ್ಲಿ ಬೆಳಿಗ್ಗೆ ಬೆಟಾಲಿಯನ್ ಫಿಸಿಕಲ್ ಎಲಿಜಿಬಿಲಿಟಿ ಟೆಸ್ಟ್ ಬಿಪಿಇಟಿ (ದೈಹಿಕ ಸಾಮರ್ಥ್ಯ ಪರೀಕ್ಷೆ) ಗೊಳಪಡುತ್ತಿದ್ದ ವೇಳೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ …

ಕಾಸರಗೋಡು ಶ್ರೀ ಗಣೇಶೋತ್ಸವ: ಹಿಂದೂ ಸಮಾಜ ಹರಿಯುವ ನೀರಾಗಬೇಕು- ತನ್ಮಯ್ ಪ್ರೇಮ್ ಕುಮಾರ್

ಕಾಸರಗೋಡು: ಹಿಂದೂ ಸಮಾಜವು ಎಂದೂ ನಿಂತ ನೀರಾಗಬಾರದು, ಬದಲಾಗಿ ಹರಿಯುವ ನೀರಾಗಬೇಕು ಎಂದು ಖ್ಯಾತವಾಗ್ಮಿ ತನ್ಮಯ್ ಪ್ರೇಮ್ ಕುಮಾರ್ ಚಿಕ್ಕಮಗಳೂರು  ಹೇಳಿದ್ದಾರೆ. ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗ ವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು. ನಮ್ಮ ಮನೆಗಳಲ್ಲಿ ಹಿಂದುತ್ವದ ಬಗ್ಗೆ ಶೃದ್ಧೆಯಿಂದ ಕಲಿಯುವುದನ್ನು ನಾವು ಮರೆಯುತ್ತಿದ್ದೇವೆ. ನಾವು ಇಂದು ನಮ್ಮ ಧರ್ಮದ ಬಗ್ಗೆ ಬೋಧನೆ ಮಾಡುತ್ತಿದ್ದೇವೆ, ಆದರೆ ಆಚರಣೆ ಕಡಿಮೆಯಾಗುತ್ತಿದೆ. ಮುಂದಿನ ತಲೆಮಾರಿಗೆ ಹಿಂದುತ್ವದ ಬಗ್ಗೆ …