ವಿವಿಧ ಕಡೆಗಳಲ್ಲಿ ಸೌಹಾರ್ದತೆಯ, ಸಂಭ್ರಮದ ನಬಿ ದಿನಾಚರಣೆ

ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ ಅವರ  ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್‌ನಬಿ ಆಚರಣೆ ವಿವಿಧ ಕಡೆಗಳಲ್ಲಿ ಸಂಭ್ರಮದಿಂದ ನಡೆಯಿತು. ಮಂಜೇಶ್ವರದಾದ್ಯಂತ ಮಸೀದಿಗಳಲ್ಲಿ ಮೌಲೂದ್ ಪಠನ, ಧಾರ್ಮಿಕ ಉಪ ನ್ಯಾಸಗಳು, ಪ್ರಾರ್ಥನೆ ಜರಗಿತು. ಬೀದಿ ಗಳಲ್ಲಿ ಮಕ್ಕಳು ಸಹಿತ ಪಾಲ್ಗೊಂಡ ಶೋಭಾಯಾತ್ರೆಗಳು ಜರಗಿತು. ಉದ್ಯಾವರ ಸಾವಿರ ಜಮಾಯತ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಯತ್ ಮದರೀಸ್ ಬಿ.ಎಂ. ಅಬ್ದುಲ್ ಖಾದರ್ ಮದನಿ ಪ್ರಾರ್ಥನೆ ನೆರವೇರಿಸಿದರು. ಅಧ್ಯಕ್ಷ ಸೈಫುಲ್ಲ ತಂಙಳ್ ಧ್ವಜಾರೋ ಹಣಗೈದರು. ಹಲವು ಪದಾಧಿಕಾರಿಗಳು …

ನಿವೃತ್ತ ಅಧ್ಯಾಪಿಕೆ ನಿಧನ

ಕುಂಬಳೆ: ಮೂಲತಃ  ಕುಂಬಳೆ ನಿವಾಸಿಯೂ, ಪ್ರಸ್ತುತ ಮಧೂರಿನಲ್ಲಿ ವಾಸಿಸುತ್ತಿದ್ದ ದಿ| ನಾರಾ ಯಣ ಎಂಬವರ ಪತ್ನಿ  ನಿವೃತ್ತ ಅಧ್ಯಾಪಿಕೆ ಶ್ಯಾಮಲಾ ಟೀಚರ್ (74) ನಿನ್ನೆ ಮಧ್ಯಾಹ್ನ ನಿಧನಹೊಂದಿದರು. ಮೃತರು ಮಕ್ಕಳಾದ ಜ್ಯೋತಿ, ಪ್ರೀತಿ, ಪ್ರಿಜಿತ್, ಸಹೋದರ ಜಯಕುಮಾರ್ ಕೃಷ್ಣನಗರ (ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ), ಸೊಸೆ, ಅಳಿಯಂದಿರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಗ್ನಿ ಫ್ರೆಂಡ್ಸ್ ಬದಿಯಡ್ಕದ ಆಂಬುಲೆನ್ಸ್ ಲೋಕಾರ್ಪಣೆ

ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇದರ ಆಶ್ರಯದಲ್ಲಿ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ತಿರುವೋಣಂ ದಿನವಾದ ನಿನ್ನೆ ಬದಿಯಡ್ಕದಲ್ಲಿ ಜರಗಿತು. ಆರ್‌ಎಸ್‌ಎಸ್ ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉದ್ಘಾಟಿಸಿದರು. ಅಗ್ನಿ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಕುಟ್ಟನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಕಾರ್ಯದರ್ಶಿ ಸುನಿಲ್ ಪಿ.ಆರ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚ್ಚಾಲು, ಹರೀಶ್ ನಾರಂಪಾಡಿ, ಹರೀಶ್ ಗೋಸಾಡ, ಹರಿಪ್ರಸಾದ್ ಪುತ್ರಕಳ, ವಿ. ಬಾಲಕೃಷ್ಣ …

ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಓಣಂ ಆಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಓಣಂ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಶಿವಾನಂದ ಕೋಟಿಯಾನ್ ಕಟಪಾಡಿ ಬರೆದ ಗುರುದರ್ಶನ ಕೃತಿನ್ನು ಇದೇ ಸಂದರ್ಭದಲ್ಲಿ ಶಾಸಕರು ಪ್ರದರ್ಶನಗೈದರು. ಹಿರಿಯ ಪೊಲೀಸ್ ಅಧಿಕಾರಿ ಡಾ. ವಿ. ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕರ್ನಾಟಕ ಕಾರ್ಯನಿರತ …

ಮುಹಿಮ್ಮಾತ್‌ನಿಂದ ಜನರಲ್ ಆಸ್ಪತ್ರೆಯ ರೋಗಿಗಳಿಗೆ ಕಾರುಣ್ಯಸ್ಪರ್ಶ

ಪುತ್ತಿಗೆ: ಕಾಸರಗೋಡು ಜನರಲ್ ಆಸ್ಪತ್ರೆಯ 300ಕ್ಕೂ ಅಧಿಕ ರೋಗಿಗಳಿಗೆ ಹಾಗೂ ಅವರ ಪರಿಚಾರಕರಿಗೆ, ನೌಕರರಿಗೆ ಮುಹಿಮ್ಮಾತ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರ್‌ನಿಂದ ನಬಿದಿನದಂಗವಾಗಿ ಕಾರುಣ್ಯ ಸ್ಪರ್ಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಹಿಮ್ಮಾತ್ ಮದ್‌ಹುರಸೂಲ್ ಫೌಂಡೇಶನ್ ಅಧೀನದಲ್ಲಿ 10 ದಿನಗಳಿಂದ ನಡೆದು ಬರುತ್ತಿದ್ದ ಕಾರ್ಯಕ್ರಮದಂಗವಾಗಿ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಅಗತ್ಯದ ಉಪಕರಣಗಳು, ರೋಗಿಗಳಿಗೆ ಹಣ್ಣು ಹಂಪಲು ಕಿಟ್‌ಗಳನ್ನು ನೀಡಲಾಯಿತು. ಕಳೆದ 10 ವರ್ಷಗಳಿಂದ ಮುಹಿಮ್ಮಾತ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಗತ್ಯದ ಸಾಮಗ್ರಿಗಳನ್ನು ನೀಡುತ್ತಿದೆ. ಕಾರ್ಯಕ್ರಮವನ್ನು ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ ಯವರ …

ಲಯನ್ಸ್‌ಕ್ಲಬ್‌ನಿಂದ ಸಹಾಯಧನ ಹಸ್ತಾಂತರ

ಉಪ್ಪಳ: ಮಣಿಮುಂಡದಲ್ಲಿ ಕಾರ್ಯಾಚರಿಸುವ ಶೇಖ್ ಜಾಹೇದ್ ಆಶ್ರಮಕ್ಕೆ ಲಯನ್ಸ್‌ಕ್ಲಬ್ ಮಂಜೇಶ್ವರ- ಉಪ್ಪಳ ಇದರ ವತಿಯಿಂದ  ವಸ್ತ್ರ ರೂಪದಲ್ಲಿ, ನಗದು ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, ಲ| ಚರಣ್ ಬಂದ್ಯೋಡು, ಲ| ಮಾಧವ ಕೆ, ಲ| ಅಶೋಕ್ ಎಂಜೆಎಫ್, ಲ| ವಿಜಯನ್ ನಾಯರ್, ಲ| ಗಣೇಶ್ ಎಂ, ಲ| ಉದಯ ಕುಮಾರ್ ಶೆಟ್ಟಿ, ಲ| ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.