ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪದಲ್ಲಿ ಕ್ಯಾಂಟೀನ್ ನಡೆಸುವ ಬೇತಲಂ ಉಂದತ್ತಡ್ಕದ ಸವಿತ ಎಂಬವರ ಪುತ್ರಿ ದೇವಿಕ (16) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.  ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಇಂದು ಬೆಳಿಗ್ಗೆ ಈಕೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿಷಯ ತಿಳಿದ ಬೇಡಗಂ ಪೊಲೀ ಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದರು. ದೇವಿಕ ಯಾಕಾಗಿ ನೇಣು ಬಿಗಿದು …

16ರ ಬಾಲಕನಿಗೆ ಸಲಿಂಗರತಿ ಕಿರುಕುಳ: 14 ಮಂದಿ ವಿರುದ್ಧ ಕೇಸು, 9 ಆರೋಪಿಗಳು ಕಸ್ಟಡಿಯಲ್ಲಿ

ಕಾಸರಗೋಡು: 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಉನ್ನತರ ಸಹಿತ ಒಂಭತ್ತು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ೮ ಮಂದಿ ಸಹಿತ 14 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಳ್ಳಲಾಗಿದೆ. ಉಳಿದ ಆರು ಮಂದಿ ಆರೋಪಿಗಳ ವಿರುದ್ದ ಕಣ್ಣೂರು, ಕಲ್ಲಿಕೋಟೆ, ಎರ್ನಾಕುಳಂನಲ್ಲಿ ಕೇಸು ದಾಖಲಿಸ ಲಾಗಿದೆ. ಡೇಟಿಂಗ್ ಆಪ್ ಮೂಲಕ ಆರೋಪಿಗಳು ಬಾಲಕನನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಎರಡು ವರ್ಷಗಳಿಂದ ಇವರು ಬಾಲಕನಿಗೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಕಾಸರಗೋಡು ಜಿಲ್ಲೆಯಲ್ಲೂ, …

ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿ ಅಜ್ಮೀರ್‌ನಲ್ಲಿ ಸೆರೆ

ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಸೆರೆಗೀಡಾದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ನಾರಂಪಾಡಿ ನಿವಾಸಿಯಾದ ಅಬ್ದುಲ್ ರಸಾಕ್ (35) ಎಂಬಾತನನ್ನು ಬದಿಯಡ್ಕ ಎಎಸ್‌ಐ ಮುಹಮ್ಮದ್ ನೇತೃತ್ವದ ಪೊಲೀಸ್ ತಂಡ ಅಜ್ಮೀರ್‌ನಿಂದ ಸೆರೆಹಿಡಿದಿದೆ. 2023ರಲ್ಲಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪೋಕ್ಸೋ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಪ್ರಸ್ತುತ ಪ್ರಕರಣದಲ್ಲಿ ಸೆರೆಗೀಡಾದ ಅಬ್ದುಲ್ ರಸಾಕ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂ ಡಿದ್ದನು. ನಿರಂತರ ವಾರಂಟ್ ಹೊರಡಿಸಿದರೂ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಈತನ ಪತ್ತೆಗಾಗಿ …

ಯುವತಿ ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗಕ್ಕೆ ಸಮೀಪದ ಕರಿಂದಳ ಪುಲಿಯನ್ನೂರಿನ ವಿಜಯನ್ ಎಂಬವರ ಪತ್ನಿ ಒ. ಸವಿತ (48) ಸಾವನ್ನಪ್ಪಿದ ಯುವತಿ. ಕಾಂಕ್ರೀಟ್ ಮನೆಯ ಎರಡನೇ ಅಂತಸ್ತಿನ ಕೊಠಡಿಯೊಳಗೆ ಇವರು ನಿನ್ನೆ ದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ದೇಹಪೂರ್ತಿ ಸುಟ್ಟು ಕರಕಲುಗೊಂಡ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.   ಇವರ ಪತಿ ವಿಜಯನ್ ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದ ಹೋಗಿದ್ದರು. ವಿದ್ಯಾರ್ಥಿಯಾಗಿರುವ ಮಗ ಕಾಲೇಜಿಗೆ ಹೋಗಿದ್ದನು. ಆ ಬಳಿಕ ಸವಿತ  ಮನೆಯೊಳಗೆ ಕಿಚ್ಚಿರಿಸಿ ಸಾವನ್ನಪ್ಪಿದ …

ಗುಣಾಜೆಯಲ್ಲಿ ನಾಗನ ಕಟ್ಟೆಗೆ ಕಿಡಿಗೇಡಿಗಳಿಂದ ಹಾನಿ

ಮುಂಡಿತ್ತಡ್ಕ: ಇಲ್ಲಿಗೆ ಸಮೀಪ ಗುಣಾಜೆ ಎಂಬಲ್ಲಿರುವ ನಾಗನ ಕಟ್ಟೆ, ಗುಳಿಗನ ಕಲ್ಲಿಗೆ ಕಿಡಿಗೇಡಿಗಳು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ನಾಗನಕಟ್ಟೆಯಲ್ಲಿರುವ ಗುಳಿಗನ ಕಟ್ಟೆಗೆ ಕಲ್ಲೆಸೆದ ಸ್ಥಿತಿಯಲ್ಲಿ ಕಂಡು ಬಂದಿದೆ. ಅಲ್ಲದೆ ಕಟ್ಟೆ ಸಮೀಪವಿರುವ ಕಾಣಿಕೆ ಹುಂಡಿಯ ಕಟ್ಟೆಯಲ್ಲಿರುವ ನಾಗನ ಚಿತ್ರವನ್ನು ಹಾನಿಗೊಳಿಸಲಾಗಿದೆ. ನಿನ್ನೆ ರಾತ್ರಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಇದು ಸ್ಥಳೀಯರ ಗಮನಕ್ಕೆ ಬಂದಿದೆ.

82,000 ರೂ. ದಾಟಿ ನೆಗೆದ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯಲ್ಲಿ

ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆ ಹೆಚ್ಚುತ್ತಲೇ ಇದೆ. ನಿನ್ನೆ ಅಲ್ಪ ಕುಸಿತ ಕಂಡು ಬಂದ ಬೆಲೆ ಇನ್ನು ಮತ್ತೆ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ದರ ದಾಖಲಿಸಿದೆ. ಇದುವರೆಗಿನ ಸಾರ್ವಕಾಲಿಕ ದಾಖಲೆಗಳನ್ನೆಲ್ಲಾ ಮುರಿದು ಚಿನ್ನದ ಬೆಲೆಯ ನೆಗೆತ ಮುಂದುವರಿಯುತ್ತಿದೆ. 82,080 ರೂ. ಇಂದು ಒಂದು ಪವನ್ ಚಿನ್ನದ ಬೆಲೆಯಾಗಿದೆ. 640 ರೂ. ಇಂದು ಒಂದೇ ದಿನದಲ್ಲಿ ಹೆಚ್ಚಳ ಉಂಟಾಗಿದೆ. ಇದರಿಂದ 1 ಗ್ರಾಂ ಚಿನ್ನದ ಬೆಲೆ 10260 ಕ್ಕೆ ತಲುಪಿದೆ.ಇಂದು ಒಂದು ಪವನ್ ಚಿನ್ನಾಭರಣ ಖರೀದಿಸಬೇಕಿದ್ದರೆ 3 ಶೇ. …

ಕುಂಬಳೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಬೂತ್ ಕ್ರಿಯಾ ಸಮಿತಿಯಿಂದ ಎಸ್‌ಡಿಪಿಐ ಹೊರಕ್ಕೆ- ಸುಬೈರ್

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್ ಕ್ರಿಯಾ ಸಮಿತಿಯಿಂದ ಎಸ್‌ಡಿಪಿಐಯನ್ನು  ಹೊರತು ಪಡಿಸಿರುವುದಾಗಿ ಕ್ರಿಯಾ ಸಮಿತಿ ವರ್ಕಿಂಗ್ ಚೆಯರ್‌ಮೆನ್ ಸಿ.ಎ. ಸುಬೈರ್ ತಿಳಿಸಿದ್ದಾರೆ.  ಟೋಲ್ ಬೂತ್ ವಿರುದ್ದ ಕ್ರಿಯಾ ಸಮಿತಿ ನಡೆಸುವ ಚಳವಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆಂದೂ  ಎಸ್‌ಡಿಪಿಐಯ  ಇತರ ಪದಾಧಿ ಕಾರಿಗಳು ಎರಡು ದೋಣಿಯಲ್ಲಿ ಕಾಲಿಟ್ಟ ರೀತಿಯಲ್ಲಿ ವರ್ತಿ ಸುತ್ತಿದ್ದಾ ರೆಂದು ಸುಬೈರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರಿಯಾಸಮಿತಿ ನಡೆಸುವ  ಚಳವಳಿಯನ್ನು ದೂಷಿಸುವ ವರನ್ನು  ಹಾಗೂ ಕ್ರಿಯಾ ಸಮಿತಿ ವಿರುದ್ಧ ಸುಳ್ಳು ಪ್ರಚಾರ ನಡೆಸುವವರನ್ನು ಮುಷ್ಕರ ಸಮಿತಿ …

ಕಾರು ಖರೀದಿಸಿ ಹಣ ನೀಡದೆ ವಂಚನೆ, ಬೆದರಿಕೆ: 5 ಮಂದಿ ವಿರುದ್ಧ ಕೇಸು

ಮಂಜೇಶ್ವರ: ಮದುವೆ ಅಗತ್ಯಕ್ಕೆಂದು ತಿಳಿಸಿ ವ್ಯಕ್ತಿಯೊಬ್ಬರಿಂದ ಕಾರು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಐದು ಮಂದಿ ವಿರದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹೊಸಬೆಟ್ಟು ಕಟ್ಟೆ ಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರು ನೀಡಿದ ದೂರಿನಂತೆ ಹೊಸಬೆಟ್ಟು ನಿವಾಸಿ ಅಹಮ್ಮದ್ ಝುಹೈಬ್, ಕಾಸರಗೋಡು ಕೂಡ್ಲು ನಿವಾಸಿಗಳಾದ ಅಬ್ದುಲ್ ರಿಸ್ವಾನ್, ಮೊಹಮ್ಮದ್ ಸಿನಾನ್, ಮಧೂರು ನಿವಾಸಿ ಅಶ್ಫಾಕ್ ಹಾಗೂ ಸೀತಾಂಗೋಳಿ ಬಳಿಯ ಮುಗು ನಿವಾಸಿಯಾದ ಓರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನಾದ ಪಾಂಡ್ಯಾಲದ ಮಜೀದ್‌ರ …

ಲಾರಿ-ಫೋರ್ಚುನರ್ ಕಾರು ಢಿಕ್ಕಿ: ಲಾರಿ ಮಗುಚಿ ಇಬ್ಬರಿಗೆ ಗಾಯ

ಕಾಸರಗೋಡು: ಪಾಲಕುನ್ನು ಪಳ್ಳಂನಲ್ಲಿ ಲಾರಿ ಹಾಗೂ ಫೋರ್ಚೂನರ್ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ಲಾರಿ ರಸ್ತೆ ಬದಿಗೆ ಮಗುಚಿದೆ. ಕಾರಿನಲ್ಲಿದ್ದ ಉದುಮ ನಿವಾಸಿ ಮಗುವಿಗೂ, ಲಾರಿಯಲ್ಲಿದ್ದ  ಓರ್ವರಿಗೂ ಗಾಯವುಂಟಾಗಿದೆ. ಆದರೆ  ಗಾಯ ಗಂಭೀರ ಸ್ಥಿತಿಯಲ್ಲಿಲ್ಲ. ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ತಿರುವನಂತಪುರಕ್ಕೆ ಟಯರ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಹಾಗೂ ಉದುಮ ಭಾಗಕ್ಕೆ ಬರುತ್ತಿದ್ದ ಕಾರು ಪಳ್ಳಂನಲ್ಲಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ತಲುಪಿದ ಬೇಕಲ ಎಸ್‌ಐ ಸವ್ಯಸಾಚಿಯವರ ನೇತೃತ್ವದಲ್ಲಿ ಗಾಯಗೊಂಡವರನ್ನು ಕಾಸರಗೋಡು …

ಜನರ ಹೃದಯದಿಂದ ದೂರವಾದ ಎಡರಂಗ- ಜೆ.ಎಸ್. ಸೋಮಶೇಖರ್

ಉಪ್ಪಳ: ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.  ಅವರು ಮಾತನಾಡಿ,  ಕೋಮುಶಕ್ತಿಗಳ ಬೆಂಬಲದೊಂದಿಗೆ ಕೀಳುತಂತ್ರದ ಮೂಲಕ ಅಧಿಕಾರಕ್ಕೇರಿದ ಎಡರಂಗ ಜನರ ಹೃದಯದಿಂದ ಶಾಶ್ವತವಾಗಿ ಮರೆಯಾಗುವ ಹಂತದಲ್ಲಿದೆ. ಕಾರ್ಮಿಕರು, ಕೃಷಿಕರು, ಭೂರಹಿತರು ಮುಂತಾದವರಿಗಾಗಿ ಹೋರಾಟ ನಡೆಸುತ್ತಿದ್ದ ಸಿಪಿಎಂ ಈಗ ಶೋಷಕರಾಗಿ ಮಾರ್ಪಟ್ಟದ್ದು ವಿಷಾದನೀಯವೆಂದು ಅವರು ನುಡಿದರು. ಸಿಪಿಎಂ ಹಾಗೂ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗು ತ್ತಿರುವುದು ಕಾಂಗ್ರೆಸ್‌ನ ಉಚ್ಛ್ರಾಯ ಸ್ಥಿತಿಗೆ ಉದಾಹರಣೆಯಾಗಿದೆ ಎಂದು ಅವರು ನುಡಿದರು. ಸಿಪಿಎಂ ಕಾರ್ಯಕರ್ತರಾದ …