ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗುತ್ತಿದೆ- ಕೆ. ರಂಜಿತ್

ಕಾಸರಗೋಡು: ರಾಜ್ಯದ ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದ್ದಾರೆ. ಪಿಣರಾಯಿ ವಿಜಯನ್ ಆಡಳಿತದ ಪೊಲೀಸ್ ದೌರ್ಜನ್ಯ, ಅನಾಸ್ಥೆ ವಿರುದ್ಧ ಹಾಗೂ ಅಭಿವೃದ್ಧಿ ಕೇರಳಕ್ಕಾಗಿ ಪೊಲೀಸ್ ಸೇನೆಯ ಸಮಗ್ರ ಬದಲಾವಣೆ ಆಗ್ರಹಿಸಿ ಕಾಸರಗೋಡು ಎಸ್‌ಪಿ ಕಚೇರಿಗೆ ಬಿಜೆಪಿ ಜಿಲ್ಲಾ ಸಮಿತಿ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಓರ್ವನನ್ನು ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ತೀರ್ಮಾನಿಸುವುದು ಪೊಲೀಸರ ಹಲ್ಲೆ ರೀತಿಗಳನ್ನು ಉಪಯೋಗಿಸಿ ಅಲ್ಲ. ನಿರಪರಾಧಿಗಳು ಆರೋಪವನ್ನು ವಹಿಸಿಕೊಳ್ಳಬೇಕಾದ ಸ್ಥಿತಿ ರಾಜ್ಯ …

ಫಾರ್ಮಸಿಸ್ಟ್ ನಿಧನ

ಕಾಸರ ಗೋಡು: ವಿದ್ಯಾನಗರದ ಜೋಯಲ್ ಮೆಡಿಕಲ್ಸ್‌ನ  ಫಾರ್ಮಸಿಸ್ಟ್ ಕೆ.ಜೆ. ಲಿಲ್ಲಿಕುಟ್ಟಿ (63) ನಿಧನ ಹೊಂದಿದರು.  ಇವರು ರಾಜಪುರಂ ಕುಳಿಕ್ಕಾಟಿಲ್ ಕುಟುಂಬ ಸದಸ್ಯೆಯಾಗಿದ್ದಾರೆ. ಮೃತರು ಪತಿ ಜೋಸೆಫ್ ಲಾರೆನ್ಸ್(ನಿವೃತ್ತ ಅಧ್ಯಾಪಕ, ಟಿಐಎಚ್‌ಎಸ್‌ಎಸ್ ನಾಯಮ್ಮಾರಮೂಲೆ) ಮಕ್ಕಳಾದ ಜೋಯೆಲ್ ಜೋಸೆಫ್ (ಇಂಜಿನಿ ಯರ್ ಬೆಂಗಳೂರು), ಲಿಜೋ ಜೋಸೆಫ್ (ನರ್ಸ್ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು), ಸಹೋದರ-ಸಹೋದರಿಯರಾದ ಮೇರಿ (ನರ್ಸ್, ಯುಕೆ), ಅನ್ನಮ್ಮ (ನಿವೃತ್ತ ಮೆನೇಜಿಂಗ್ ಡೈರೆಕ್ಟರ್ ರಬ್ಬರ್ ಮಾರ್ಕೆಟಿಂಗ್ ಸೊಸೈಟಿ ಮಾಲಕ್ಕಲ್), ಸಿಸಿಲಿ (ರಾಜ್ಯ ಮಾನವಹಕ್ಕು ಆಯೋಗ ಸದಸ್ಯ), ಶಿಬಿ ವಡಕ್ಕಾಂಚೇರಿ …

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೂತನ ಮುಖಮಂಟಪ ಲೋಕಾರ್ಪಣೆ

ಅಗಲ್ಪಾಡಿ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಮುಖಮಂಟಪ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶುಭ ಹಾರೈಸಿದರು. ಸಂಕಪ್ಪ ಪೂಜಾರಿ ಉಡುಪಿ, ಡಾ. ಮನೋಹರ ಎಂ.ಜಿ. ಮುಳ್ಳೇರಿಯ, ಕೆ.ಪಿ. ಮೋಹನ್‌ದಾಸ್, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕೃಷ್ಣಮೂರ್ತಿ ಪುದುಕೋಳಿ, ಡಾ. ಕಿಶೋರ್ ಕುಣಿಕುಳ್ಳಾಯ, ಮಧುಸೂದನ ಆಯರ್ …

ಎಡರಂಗ ಸರಕಾರದ ಜನದ್ರೋಹ ನೀತಿ ಆರೋಪಿಸಿ ಬಿಎಂಎಸ್‌ನಿಂದ ರಾಜ್ಯ ವ್ಯಾಪಕ ಪಂಚಾಯತ್ ಮಟ್ಟದಲ್ಲಿ ಆಂದೋಲನ

ಕಾಸರಗೋಡು: ಎಡ ಪ್ರಜಾಪ್ರಭುತ್ವ ಒಕ್ಕೂಟ ಸರಕಾರದ ಪಿಣರಾಯಿ ವಿಜಯನ್ ನೇತೃತ್ವದಲ್ಲಿರುವ ಸರಕಾರ ೯ ವರ್ಷ ಕೇರಳವನ್ನು ಸಾಲದ ಕೂಪಕ್ಕೆ ತಳ್ಳಿರು ವುದಾಗಿ ಬಿಎಂಎಸ್ ಆರೋಪಿಸಿದೆ. ವಿಶ್ವದ ಅತ್ಯಂತ ಉನ್ನತ ಆರ್ಥಿಕ ಬೆಳವಣಿಗೆ ನಮ್ಮ ದೇಶದಲ್ಲಿರುವ ಸಂದರ್ಭದಲ್ಲೇ ಕೇರಳ ತೀವ್ರ ಆರ್ಥಿಕ ಸಂದಿಗ್ಧತೆಯಲ್ಲಿ, ಸಾಲದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದೆ. ಇಲ್ಲಿನ ಕೃಷಿಕರು, ಕಾರ್ಮಿಕರು, ಉದ್ಯಮಿಗಳು, ಸರಕಾರಿ ನೌಕರರು ಕೂಡ ಈ ವಿಷಯದಲ್ಲಿ ಪ್ರತಿಭಟನೆಯಲ್ಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಂಡುಬರುವುದರ ಐದು ಮಡಿಯಷ್ಟು ರಾಜ್ಯದಲ್ಲಿ ನಿತ್ಯೋಪಯೋಗ ಸಾಮಗ್ರಿಗಳಿಗೆ ಬೆಲೆ ಏರಿಕೆ ಕಂಡುಬರುತ್ತಿದೆ. ಕ್ಷೇಮ …

ಕಣ್ವತೀರ್ಥ ಪರಿಸರದಲ್ಲಿ ಮೀನು ಸಂಸ್ಕರಣ ಫ್ಯಾಕ್ಟರಿಯಿಂದ ಪರಿಸರ ಮಲಿನ: ಕ್ರಿಯಾ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಕಣ್ವತೀರ್ಥ ಪರಿಸರ ದಲ್ಲಿ ಹಲವು ವರ್ಷಗಳಿಂದ ಕಾರ್ಯಾ ಚರಿಸುತ್ತಿರುವ ಯುನೈಟೆಡ್ ಸಿ-ಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಕಣ್ವತೀರ್ಥ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಲಾಯಿತು. ಕಣ್ವತೀರ್ಥ ಗೇಟ್‌ನಿಂದ ಆರಂಭಗೊಂಡ ಪ್ರತಿ ಭಟನಾ ಮೆರವಣಿಗೆಯನ್ನು ಮಂಜೇಶ್ವರ ಪಂ. ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ಪಂಚಾಯತ್ ಮುಂಭಾಗದಲ್ಲಿ ನಿವೃತ್ತ ಸೇನಾಧಿಕಾರಿ ವಿಜಯ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಧುಸೂದನ ಆಚಾರ್ಯ ಉದ್ಘಾಟಿಸಿ ದರು. ಈ ಫ್ಯಾಕ್ಟರಿಯಿಂದ …

ಕ.ಸಾ.ಪ.ದಿಂದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ

ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಸರ್.ಎಂ. ವಿಶ್ವೇಶ್ವರಯ್ಯನವರ 165 ನೆಯ ಜನ್ಮದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಸಿರಿಗನ್ನಡ ವೇದಿಕೆಯ ಅಧ್ಯಕ್ಷ , ಸಾಹಿತಿ ವಿ. ಬಿ. ಕುಳಮರ್ವ ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ಥೋಮಸ್ ಡಿ’ಸೋಜ, ಸಾಹಿತಿ ಬಾಲಮಧುರಕಾನನ, ಪತ್ರಕರ್ತ ಪುರುಷೋತ್ತಮ ಭಟ್ ಶುಭಾಶಂಸನೆ ಮಾಡಿದರು. …

ಕೆ.ಪಿ.ಎಸ್.ಟಿ.ಎ ಸಾರ್ವತ್ರಿಕ ಶಿಕ್ಷಣ ಪರಿವರ್ತನ ಸಂದೇಶಯಾತ್ರೆ ಆರಂಭ

ಕಾಸರಗೋಡು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್‌ಟಿಎ) ನೇತೃತ್ವದ ಸಾರ್ವತ್ರಿಕ ಶಿಕ್ಷಣ ಪರಿವರ್ತನೆ ಸಂದೇಶ ಯಾತ್ರೆ ನಿನ್ನೆ ಚೆರ್ಕಳದಿಂದ ಪ್ರಯಾಣ ಆರಂಭಿಸಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರ್ಯಟನೆ ನಡೆಸಲಿರುವ ಈ ಯಾತ್ರೆ ಸೆಪ್ಟಂಬರ್ 27ರಂದು ತಿರುವನಂತಪುರದಲ್ಲಿ ಸಮಾಪ್ತಿ ಹೊಂದಲಿದೆ. ಚೆರ್ಕಳದಿಂದ ನಿನ್ನೆ ಆರಂಭಗೊಂಡ ಯಾತ್ರೆಯನ್ನು ಕಾಂಗ್ರೆಸ್‌ನ ರಾಜ್ಯ ಕಾರ್ಯನಿರ್ವಹಣಾಧ್ಯಕ್ಷ ಸಂಸದ  ಶಾಫಿ ಪರಂಬಿಲ್ ಸಂದೇಶಯಾತ್ರೆಯ ನಾಯಕ ಕೆ.ಪಿ.ಎಸ್.ಟಿ.ಎ ರಾಜ್ಯ ಅಧ್ಯಕ್ಷ ಕೆ. ಅಬ್ದುಲ್ ಮಜೀದ್‌ರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯದ ಕೆಲವು ಪೊಲೀಸರು ಸಿಪಿಎಂನ ಗೂಂಡಾಗಳಾಗಿ …