ಲಾಲ್‌ಬಾಗ್-ಕುರುಡಪದವು ಶೋಚನೀಯ ರಸ್ತೆ ಅಭಿವೃದ್ಧಿಗೆ ಚಾಲನೆ

ಪೈವಳಿಕೆ: ಹದಗೆಟ್ಟು ಶೋಚನೀ ಯಾವಸ್ಥೆಯಲ್ಲಿರುವ, ಊರವರ ಪ್ರತಿಭಟನೆಗೆ ಕಾರಣವಾಗಿದ್ದ ಲಾಲ್‌ಬಾಗ್- ಕುರುಡಪದವು ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಧಿಕಾರಿ ವರ್ಗ ಕೊನೆಗೂ ಮುಂದಾಗಿದೆ. ಪ್ರಥಮ ಹಂತದಲ್ಲಿ ಲಾಲ್‌ಬಾಗ್ ನಿಂದ ಚಿಪ್ಪಾರು ಅಮ್ಮೇರಿ ತನಕ ಸುಮಾರು ಮೂರುವರೆ ಕಿಲೋ ಮೀಟರ್ ರಸ್ತೆಯನ್ನು ಅಭಿವೃ ದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ರಸ್ತೆಯನ್ನು ಅಗಲೀಕರಣಗೊಳಿಸುವ ಕಾಮಗಾರಿ ಒಂದು ವಾರದಿಂದ ನಡೆಯುತ್ತಿದೆ. ಕುಂಬಳೆ ನಿವಾಸಿಯೋ ರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಈ …

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಡಿಸೆಂಬರ್‌ನಲ್ಲಿ ಕೇರಳಕ್ಕೆ

ಕೊಚ್ಚಿ: ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಡಿಸೆಂಬರ್ನಲ್ಲಿ ಕೇರಳಕ್ಕೆ ಆಗಮಿಸುವರು. ಆರ್‌ಎಸ್‌ಎಸ್‌ನ ಶತಮಾನೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವರು. ಆರ್‌ಎಸ್‌ಎಸ್ ಉತ್ತರ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ ಡಿ. 7ರಂದು ತೃಶೂರು ಹಾಗೂ ದಕ್ಷಿಣ ಕೇರಳ ಪ್ರಾಂತ್ಯದ ನೇತೃತ್ವದಲ್ಲಿ 8ರಂದು ತಿರುವನಂತಪರದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದೆ. ಈ ವರ್ಷ ವಿಜಯ ದಶಮಿ ದಿನದಿಂದ 2026 ವಿಜಯದಶಮಿವರೆಗೆ ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯಲಿದೆ.

ಬಡಗಿ ನಿಧನ

ಕುಂಬಳೆ: ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ ಪೆರ್ಣೆ ಜನಾರ್ದನ ಆಚಾರ್ಯ (71) ನಿಧನ ಹೊಂದಿದರು. ಇವರು ಬಡಗಿ ವೃತ್ತಿ ನಡೆಸುತ್ತಿದ್ದರು. ಇತ್ತೀಚೆಗೆ ಹೃದಯಾಘಾತವುಂಟಾದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಮೃತರು ಪತ್ನಿ ಲಲಿತ, ಮಕ್ಕಳಾದ ಚಿತ್ರಲೇಖ, ವಿಜಯಲಕ್ಷ್ಮಿ, ಗಣೇಶ, ಮೋಹನ, ಭವ್ಯಶ್ರೀ, ಅಳಿಯ-ಸೊಸೆಯಂದಿರಾದ ಅಶೋಕ್ ಆಚಾರ್ಯ ಮೀಪುಗುರಿ, ಪುರೋಹಿತ ಕುಡಾಲ್ ದೇವಿಪ್ರಸಾದ್ ಶರ್ಮ ಮಂಜೇಶ್ವರ, ಮಹೇಶ್ ಆಚಾರ್ಯ ಪುತ್ತೂರು, ಅನಿತ, ದಿವ್ಯಶ್ರೀ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಛಾಯಾಗ್ರಹಣ ವಲಯದಲ್ಲಿ 40 ವರ್ಷ ಪೂರ್ತಿಗೊಳಿಸಿದ ಸದಸ್ಯರಿಗೆ ಎಕೆಪಿಎಯಿಂದ ಗೌರವರ್ಪಣೆ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ವತಿಯಿಂದ ಎಕೆಪಿಎ ಸ್ಥಾಪಕ ದಿನಾಚರಣೆಯಂಗವಾಗಿ ಜಿಲ್ಲೆಯ ಛಾಯಾಗ್ರಹಣ ಸಂಬಂಧಪಟ್ಟ ವಲಯದಲ್ಲಿ 40 ವರ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದ ಸದಸ್ಯರನ್ನು ಗೌರವಿಸಲಾಯಿತು. ಕಾಸರಗೋಡು ಎಕೆಪಿಎ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸುಗುಣನ್ ಇರಿಯಾರ ಅಧ್ಯಕ್ಷತೆಯಲ್ಲಿ ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಉದ್ಘಾಟಿಸಿದರು. ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಮುಖ್ಯ ಅತಿಥಿಯಾಗಿದ್ದರು. ಛಾಯಾಗ್ರಹಣ ವಲಯದಲ್ಲಿ ೪೦ ವರ್ಷ ಪೂರ್ತಿಗೊಳಿಸಿದವರನ್ನು ಕುಮಾರನ್ ಮಾಸ್ತರ್ …

ಟೋಲ್ ಬೂತ್ ಕ್ರಿಯಾಸಮಿತಿ: ಸಿಪಿಎಂ ಏರಿಯಾ ಕಾರ್ಯದರ್ಶಿಯ ಚಟುವಟಿಕೆ ಏಕಪಕ್ಷೀಯ-ಎಸ್‌ಡಿಪಿಐ

ಕುಂಬಳೆ: ಕುಂಬಳೆಯಲ್ಲಿ ನಿರ್ಮಾಣ ನಡೆಯುತ್ತಿರುವ ಟೋಲ್ ಬೂತ್ ವಿರುದ್ಧ ರೂಪೀಕರಿಸಲಾದ ಟೋಲ್ ವಿರುದ್ಧ ಕ್ರಿಯಾ ಸಮಿತಿಯಲ್ಲಿ ಸಿಪಿಎಂ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಏಕಾಧಿಪತ್ಯ ಚಟುವಟಿಕೆ ನಡೆಸುತ್ತಿದ್ದಾರೆಂದು ಎಸ್‌ಡಿಪಿಐ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ನಾಸರ್ ಬಂಬ್ರಾಣ ಆರೋಪಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕುಂಬಳೆ ಪಂಚಾಯತ್ ಹಾಲ್‌ನಲ್ಲಿ ಕ್ರಿಯಾ ಸಮಿತಿ ಕನ್ವೀನರ್ ಯು.ಪಿ. ತಾಹಿರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಡಿಪಿಐಯನ್ನು ಕ್ರಿಯಾಸಮಿತಿಯಿಂದ ಹೊರ ಹಾಕುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಚಳವಳಿಯ ಭವಿಷ್ಯದ ಕುರಿತು ಚರ್ಚೆ ನಡೆಸಿ ೨೪ರಿಂದ …

ಪ್ರತಾಪನಗರ ಶ್ರೀ ಗಾಯತ್ರಿ ಮಂದಿರದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾಪ್ತಿ

ಮಂಗಲ್ಪಾಡಿ: ಪ್ರತಾಪನಗರ ಶ್ರೀ ಗಾಯತ್ರಿವಿಶ್ವಕರ್ಮ ಮಂದಿರದಲ್ಲಿ 47ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ ಇಂದು ಬೆಳಿಗ್ಗೆ ಸಮಾಪ್ತಿಗೊಂಡಿತು. ನಿನ್ನೆ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಗಣಹೋಮ, ವಿಶ್ವಕರ್ಮ ಹೋಮ, ಮಹಾಪೂಜೆ, ಮಧ್ಯಾಹ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ ಹಾಗೂ ಸೂರ್ಯಾಸ್ತಮಾನದಿಂದ ಇಂದು ಬೆಳಿಗ್ಗೆ ಸೂರ್ಯೋದಯದ ತನಕ ವಿವಿಧ ಸಂಘ ಸಂಸ್ಥೆಗಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.