ವಿರೋಧದ ನಡುವೆ ಪಿಎಂಶ್ರೀಗೆ ಸಹಿ ಹಾಕಿದ ಸರಕಾರ: ಎಡರಂಗದಲ್ಲಿ ಭಿನ್ನಮತ; ತುರ್ತು ಸೆಕ್ರೆಟರಿಯೇಟ್ ಸಭೆ ಕರೆದ ಸಿಪಿಐ
ತಿರುವನಂತಪುರ: ಎಡರಂಗದ ಘಟಕ ಪಕ್ಷವಾದ ಸಿಪಿಐಯ ಭಾರೀ ವಿರೋಧದ ನಡುವೆಯೇ ಪಿ.ಎಂ.ಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯ) ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದೆ. ಕೇರಳ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಕೆ. ವಾಸುಕಿಯವರು ದಿಲ್ಲಿಗೆ ತೆರಳಿ ಒಪ್ಪಂದ ಪತ್ರಕ್ಕೆ ವಿದ್ಯುಕ್ತವಾಗಿ ಸಹಿ ಹಾಕಿದ್ದಾರೆ. ಈ ಯೋಜನೆಗೆ ಸಿಪಿಐ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಮಾತ್ರವಲ್ಲ ರಾಜ್ಯ ಸಚಿವ ಸಂಪುಟ ಸಭೆ ಮತ್ತು ಎಡರಂಗ ಸಭೆಯಲ್ಲೂ ಸಿಪಿಐ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಅದನ್ನು ಕಡೆಗಣಿಸಿ …