ಸುರತ್ಕಲ್‌ನಲ್ಲಿ ಯುವಕರಿಗೆ ಇರಿತ: ಅಕ್ರಮಿಗಳ ಬಗ್ಗೆ ಸೂಚನೆ

ಮಂಗಳೂರು: ಸುರತ್ಕಲ್‌ನಲ್ಲಿ ಬೈಕ್ ತಡೆದು ನಿಲ್ಲಿಸಿ ಯುವಕರನ್ನು ಆಕ್ರಮಿಸಿದ ಘಟನೆ ನಡೆದಿದೆ. ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ನಿಜಾಮ್ (23),ಕೃಷ್ಣಾಪುರ ಹಿಲ್‌ಸೈಡ್ ನಿವಾಸಿ ಹಸನ್ ಮುರ್ಶಿದ್ (18) ಎಂಬಿವರಿಗೆ ಇರಿಯಲಾಗಿದೆ. ಇವರಲ್ಲಿ ನಿಜಾಮ್‌ನ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಚೊಕ್ಕಬೆಟ್ಟು ಕಾನದಲ್ಲಿ  ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಇರುವವರು ಹಾಗೂ 3 ಮಂದಿ ಗೆಳೆಯರು ಎರಡು ಬೈಕ್‌ಗಳಲ್ಲಾಗಿ ತೆರಳುತ್ತಿದ್ದರು. ಈ ಮಧ್ಯೆ  ಪೆಟ್ರೋಲ್ ತುಂಬಿಸಲೆಂದು ಒಂದು ಬೈಕ್ ಪೆಟ್ರೋಲ್ ಬಂಕ್‌ಗೆ …

ಮಾದಕದ್ರವ್ಯ ಸಾಗಾಟ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು:  ಮಾದಕದ್ರವ್ಯ  ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಾನು ಎಸ್ ಪಣಿಕ್ಕರ್ ೭ ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸ ಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಹೊಸದುರ್ಗ ಆರಂಗಾಡಿ ಅರಾಯಿಕಡವು ನಿವಾಸಿ ಅಬ್ದುಲ್ ಶೆಫೀಕ್ (39) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2019 ಫೆಬ್ರವರಿ 13ರಂದು  ಮುಳ್ಳೇರಿಯ-ಕುಂಟಾರಿನಲ್ಲಿ  ಆದೂರು ಪೊಲೀಸರು ನಡೆಸಿದ …

ಶೆಡ್‌ನಿಂದ 116 ಕಿಲೋ ಗಾಂಜಾ ವಶಪಡಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮಡಿಕೇರಿಯಿಂದ ಸೆರೆ

ಮಂಜೇಶ್ವರ: ಕೊಡ್ಲಮೊಗರು ಬಳಿಯ ಸುಳ್ಯಮೆಯ ಮನೆಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದ 116 ಕಿಲೋ ಗಾಂಜಾ ಪತ್ತೆಹಚ್ಚಿದ ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ರತೀಶ್ ಗೋಪಿಯವರ ನೇತೃತ್ವದ ತಂಡ  ಮಡಿಕೇರಿಯಿಂದ ಬಂಧಿಸಿದೆ. ಮಂಗಳೂರು  ತೊಕ್ಕೋಟು ನಿವಾಸಿ ಸೆನೋಹರ್ (28) ಬಂಧಿತ ಆರೋಪಿ. ಗಾಂಜಾ ಪತ್ತೆಯಾದ ದಿನದಿಂದ ಈತ ತಲೆಮರೆಸಿಕೊಂಡಿದ್ದನು. ಈತನ ಗೂಗಲ್ ಪೇ ಅಕೌಂಟ್  ಟ್ರಾಕ್ ಮಾಡಿ  ಅದರ ಜಾಡು ಹಿಡಿದು ನಡೆಸಿದ  ಪರಿಶೀಲನೆಯಲ್ಲಿ ಆರೋಪಿ ಮೈಸೂರು ಮತ್ತಿತರೆಡೆಗಳಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರ …

ಪ್ರತಾಪನಗರ ಲೋಕೋಪಯೋಗಿ ಇಲಾಖೆ ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂಕಾಲು-ಪ್ರತಾಪನಗರದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗು ತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ರಸ್ತೆಯಲ್ಲಿರುವ ಹೊಂಡಗಳಲ್ಲಿ ಮಳೆ ನೀರು ಸಂಗ್ರಹಗೊAಡಿರುವುದರಿAದ ಸಂಚಾರದ ವೇಳೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೊಂಡದಲ್ಲಿ ಸಿಲುಕಿ ಹಾನಿಗೀಡಾಗುತ್ತಿದೆ. ಈ ರಸ್ತೆ ಶಿಶು ಮಂದಿರ ಹಾಗೂ ಬೀಟಿಗದ್ದೆ ಪರಿಸರದಲ್ಲಿ ಶೋಚನೀಯವಸ್ಥೆಗೆ ತಲುಪಿದೆ.ಎರಡು ವಾರದ ಹಿಂದೆ ಜಲ್ಲಿಕಲ್ಲುಗಳನ್ನು ತಂದು ಹಾಕಲಾ ಗಿದೆ. ಆದರೆ ಅದನ್ನು ಸಮತಟ್ಟು ಗೊಳಿಸಲಿಲ್ಲ, ಡಾಮಾ ರೀಕರಣ ಗೊಳಿಸಲಿಲ್ಲ. ಇದರಿಂದ ಜಲ್ಲಿ ಕಲ್ಲು …

ವಸತಿಗೃಹದಲ್ಲಿ ವಡಗರ ನಿವಾಸಿ ಅಸ್ಮಿನಾಳ ಕೊಲೆ: ಆರೋಪಿ ಕಲ್ಲಿಕೋಟೆಯಲ್ಲಿ ಸೆರೆ

ಕಲ್ಲಿಕೋಟೆ: ವಡಗರ ಒಂಜೀಯಂ ಕಣ್ಣೂರಕ್ಕರ ಮಾಡಕ್ಕರ ಪಾಂಡಿಗದಲ್ಲಿ ಅಸ್ಮಿನಾ (38)ಳನ್ನು ವಸತಿ ಗೃಹದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ವಸತಿ ಗೃಹದ ರಿಸಪ್ಶನಿಸ್ಟ್ ಹಾಗೂ ಕಾಯಂಕುಳಂ ನಿವಾಸಿಯಾದ ಜೋಬಿ ಜೋರ್ಜ್ ಯಾನೇ ರೋಯ್‌ಯನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ಆಟಿಂಗಲ್‌ನ ಲಾಡ್ಜ್‌ನಲ್ಲಿ ರಿಸಪ್ಶನಿಸ್ಟ್‌ಯಾಗಿರುವ ಜೋಬಿ ಜೋರ್ಜ್ ಪತ್ನಿಯೆಂದು ತಿಳಿಸಿ ಅಸ್ಮಿನಾಳ ಸಹಿತ ಮಂಗಳವಾರ ಸಂಜೆ ವಸತಿ ಗೃಹಕ್ಕೆ ತಲುಪಿದ್ದನು. ಅಸ್ಮಿನಾಳನ್ನು ಕೊಠಡಿಯಲ್ಲಿ ಕುಳ್ಳಿರಿಸಿದ ಬಳಿಕ ರಾತ್ರಿ ಒಂದೂವರೆ ಗಂಟೆ ವರೆಗೆ ಕೆಲಸದಲ್ಲಿ ನಿರತನಾಗಿದ್ದ ಈತ ಆ ಬಳಿಕ ಕೊಠಡಿಗೆ …

ಕಾನತ್ತೂರು ವಡಕ್ಕೇಕೆರೆ ಪರಿಶಿಷ್ಟ ಜಾತಿ, ಪಂಗಡ ಕೇಂದ್ರದಲ್ಲಿ 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ : ಸಚಿವ ಒ.ಆರ್. ಕೇಳು 28ರಂದು ಉದ್ಘಾಟನೆ

ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಕಾನತ್ತೂರು ವಡಕ್ಕೇಕರೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕೇಂದ್ರದಲ್ಲಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗಿ ದ್ದು, ಇದರ ಉದ್ಘಾಟನೆಯನ್ನು ಈ ತಿಂಗಳ 28ರಂದು ಪರಿಶಿಷ್ಟ ಜಾತಿ ಹಿಂದುಳಿದ ವಿಭಾಗ ಕ್ಷೇಮ ಇಲಾಖೆ ಸಚಿವ ಒ.ಆರ್. ಕೇಳು ನಿರ್ವಹಿಸು ವರು. ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಂಗವಾಗಿ ಈ ಯೋಜನೆ ಜ್ಯಾರಿಗೊಳಿಸಲಾಗಿದೆ. ೩೫ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ, ಉಪಯೋಗಶೂನ್ಯವಾದ ಬಾವಿಗಳು, ಪೂರ್ತಿಗೊಳ್ಳದ ಮನೆಗಳು ಮೊದಲಾದ ಸಮಸ್ಯೆಗಳು ಈ ಕೇಂದ್ರದಲ್ಲಿ ಕಂಡು ಬರುತ್ತಿತ್ತು. 2021-22ರ …

ಕುಂಬಳೆ ಪಂಚಾಯತ್ ಕುಟುಂಬಶ್ರೀ ಮೊಟ್ಟೆ ಉತ್ಸವ, ಕೃಷಿ ವಿಚಾರಗೋಷ್ಠಿ

ಕುಂಬಳೆ: ಪಂಚಾಯತ್ ಕುಟುಂಬಶ್ರೀ ಮೊಟ್ಟೆ ಉತ್ಸವ ಹಾಗೂ ಕೃಷಿ ವಿಚಾರಗೋಷ್ಠಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಉದ್ಘಾಟಿಸಿದರು. ಕುಟುಂಬಶ್ರೀ ಚೆಯರ್‌ಪರ್ಸನ್ ಖದೀಜ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಮೃಗಾಸ್ಪತ್ರೆಯ ಡಾ. ಅರುಣ್ ರಾಜ್ ತರಗತಿ ನಡೆಸಿದರು. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ರಹ್‌ಮಾನ್ ಅರಿಕ್ಕಾಡಿ, ನಸೀಮಾ ಖಾಲಿದ್, ಸದಸ್ಯರು, ಸಿಡಿಎಸ್ ಸದಸ್ಯರು, ವಿನಿಶಾ ಶಾಜಿ, ಆರ್.ಪಿ. ಫಾತಿಮಾ, ಮೆಂಬರ್ ಸೆಕ್ರಟರಿ ಶೈಜು ಮಾತ ನಾಡಿದರು. ಮೊಟ್ಟೆ ಫೆಸ್ಟ್‌ನಂಗವಾಗಿ ಮೊಟ್ಟೆ ಉಪಯೋಗಿಸಿ ತಯಾರಿಸಿದ ವಿವಿಧ …

ಕನ್ನಡ ಗ್ರಾಮದಲ್ಲಿ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ 4ರಂದು: ಸಿದ್ಧತಾ ಸಭೆ

ಕಾಸರಗೋಡು: ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮ ನವಂಬರ್ 4ರಂದು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಶಿವರಾಮ ಕಾಸರಗೋಡು 60 ಫೊಟೋ ಗ್ಯಾಲರಿ ಉದ್ಘಾಟನೆ, ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ, ನುಡಿ …