ಅನಂತಪುರ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಸ್ಫೋಟ : ಓರ್ವ ಮೃತ್ಯು; ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

ಕುಂಬಳೆ: ಅನಂತಪುರ ಉದ್ದಿಮೆ ಕೇಂದ್ರದಲ್ಲಿರುವ  ಫ್ಲೈವುಡ್ ಫ್ಯಾಕ್ಟರಿ ಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭಯಾನಕ ಸ್ಫೋಟದ ಕುರಿತು ಬಾಂಬ್ ಸ್ಕ್ವಾಡ್ ಹಾಗೂ ಆರೋಗ್ಯ ಇಲಾಖೆ ತಂಡ ತಲುಪಿ ಪರಿಶೀಲನೆ ಆರಂಭಿಸಿದೆ. ನಿನ್ನೆ ಸಂಜೆ ೬.೩೦ರ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ  ಓರ್ವ  ಕಾರ್ಮಿಕ ಮೃತಪಟ್ಟು ೨೦ ಮಂದಿ ಗಾಯಗೊಂಡಿ ದ್ದಾರೆ. ಗಾಯಾಳುಗಳಲ್ಲಿ ಐದು ಮಂದಿಯ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ.  ಗಾಯಾಳುಗಳನ್ನು ಕಾಸರಗೋಡು, ಕುಂಬಳೆ, ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಘಟನೆ ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿ …

ಅಬಕಾರಿ ಕಾರ್ಯಾಚರಣೆ: ಮನೆ, ಕಾರಿನಲ್ಲಿ ಬಚ್ಚಿಟ್ಟಿದ್ದ 11 ಕಿಲೋ ಗಾಂಜಾ ಪತ್ತೆ; ಓರ್ವ ಸೆರೆ, ಬಂಧಿತನು ಈ ಹಿಂದೆ ಬೇರೊಂದು ಪ್ರಕರಣದಲ್ಲೂ ಸೆರೆಗೊಳಗಾಗಿ ಜೈಲುವಾಸ ಅನುಭವಿಸಿದ್ದ

ಮಂಜೇಶ್ವರ: ಕುಬಣೂರುನಲ್ಲಿ ಕಾಸರಗೋಡು ಎಕ್ಸೈಸ್ ಆಂಡ್ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಇನ್ಸ್ಪೆಕ್ಟರ್ ವಿಷ್ಣುಪ್ರಕಾಶ್ರ ನೇತೃತ್ವದ ತಂಡ ನಿನ್ನೆ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆ ಮತ್ತು ಕಾರಿನಲ್ಲಿ ಬಚ್ಚಿಟ್ಟಿದ್ದ ಒಟ್ಟು 11.769 ಕಿಲೋ ಗಾಂಜಾ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಕುಬಣೂರು ಕಾಡಮೂಲೆ ನಿವಾಸಿ ಮೊದೀನ್ ಶಬೀರ್ (36) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.ಅಬಕಾರಿ ತಂಡ ನಿನ್ನೆ ಸಂಜೆ ಸುಮಾರು 7.10ರ ವೇಳೆಗೆ ಆರೋಪಿಯ ಮನೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಲಗುವ ಕೊಠಡಿಯ ಹಾಸಿಗೆಯ ಅಡಿಭಾಗದಲ್ಲಿ ಬಚ್ಚಿಟ್ಟಿದ್ದ 5.269 …

ಅಸೌಖ್ಯ: ಮಹಿಳೆ ನಿಧನ

ಮಂಗಲ್ಪಾಡಿ: ಪ್ರತಾಪನಗರ ಸಮೀಪದ ತಿಂಬರ ನಿವಾಸಿ ಕೈಕಂಬದಲ್ಲಿ ವ್ಯಾಪಾರಿಯಾಗಿರುವ ದುಗ್ಗಪ್ಪ ಟಿ. ಶೆಟ್ಟಿಯವರ ಪತ್ನಿ ಸುಜಾತ ಶೆಟ್ಟಿ (45) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಕೇಪು ಬೆಂಗ್ರೋಡಿ ನಿವಾಸಿ ವೆಂಕಪ್ಪ ಶೆಟ್ಟಿ- ಲೀಲಾವತಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಆಕರ್ಶ್ ಶೆಟ್ಟಿ, ಆದರ್ಶ್, ಸಹೋದರಿ ಸುನಿತ, ಸಹೋದರರಾದ ಶಾಂತಾರಾಮ ಶೆಟ್ಟಿ, ದಯಾನಂದ ಶೆಟ್ಟಿ, ರವೀಶ್ ಶೆಟ್ಟಿ, ವಿನೋದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಹಾಗೂ ಅಪಾರ …

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಕೇಸು ದಾಖಲು

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ  ಹಲ್ಲೆ ನಡೆಸಿ   ನಷ್ಟ ವುಂಟುಮಾಡಿದ ದೂರಿನಂತೆ ಕುಂಬಳೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲಪ್ಪುರಂ ಚೆನ್ನಂಗೋಡ್ ನಿವಾಸಿ ರಾಜೇಶ್ ಕುಮಾರ್ ಕೆ (47) ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾ ಗಿದೆ. ಮಹಿಳೆಯರನ್ನು ಬಸ್ಸಿಗೆ ಹತ್ತಿಸಲಾಗುವುದಿಲ್ಲವೆಂದು ಆರೋಪಿಸಿ ಕುಂಬಳೆ ಪೇಟೆಯಲ್ಲಿ ನಿನ್ನೆ ಅಪರಾಹ್ನ ಇಬ್ಬರು ಬಸ್ಸಿಗೇರಿ ಬೈದು ತನ್ನ ಮೇಲೆ ಹಲ್ಲೆ ನಡೆಸಿದ ರೆಂದು ಆ ಮೂಲಕ ತನ್ನ ಹಾಗೂ ನಿರ್ವಾಹಕನ ಕರ್ತವ್ಯ ನಿರ್ವಹಣೆಗೆ …

ಮೋನ್‌ಥ ಚಂಡಮಾರುತ ಸಂಜೆ ಅಪ್ಪಳಿಸುವ ಸಾಧ್ಯತೆ

ಬೆಂಗಳೂರು: ಬಂಗಾಳ ಸಮುದ್ರದಲ್ಲಿ ಉದ್ಭವಿಸಿರುವ ಮೋನ್‌ಥ ಚಂಡಮಾರುತ ಇಂದು ದಡಕ್ಕೆ ಅಪ್ಪಳಿಸಲಿದೆ. ಸಂಜೆ ಆಂಧ್ರ ಪ್ರದೇಶದ ಕಾಕಿನಾಡ ಬಳಿಯ ಪಚ್ಚಲಿಪಳ್ಳ ಪರಿಸರದಲ್ಲಿ 100 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾದಲ್ಲಿ ಮುಂಜಾಗ್ರತೆ ಏರ್ಪಡಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ಇಂದು ರಜೆ ಸಾರಲಾಗಿದೆ. ಆಂಧ್ರ ಪ್ರದೇಶದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿವಿಧೆಡೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಚಳ್ಳಂಗಯ ನಿವಾಸಿ ಸೌದಿಯಲ್ಲಿ  ನಿಧನ

ಧರ್ಮತ್ತಡ್ಕ: ಇಲ್ಲಿಗೆ ಸಮೀಪದ ಚಳ್ಳಂಗಯ ಅಂಬೇರಿ ನಿವಾಸಿ, ಕೇರಳ ಮುಸ್ಲಿಂ ಜಮಾಯತ್ ಚಳ್ಳಂಗಯ ಘಟಕ ಸದಸ್ಯ, ಕೊಲ್ಲಿ ಉದ್ಯೋಗಿ ಎ.ಎಂ. ಅಬ್ಬಾಸ್ (60), ಸೌದಿ ಅರೇಬಿಯಾದ ದಮಾಮ್‌ನಲ್ಲಿ ಕೆಲಸದ ಸ್ಥಳದಲ್ಲಿ ನಿಧನ ಹೊಂದಿದರು. ಹೃದಯಾಘಾತ ಸಂಭವಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ಮರಣ ಸಂಭವಿಸಿದೆ. ಒಂದು ವರ್ಷದ ಹಿಂದೆ ಊರಿಗೆ ಬಂದು ಹಿಂತಿರುಗಿ ದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಮುಹಮ್ಮದ್ ಶಂಸೀರ್, ಅಬ್ದುಲ್ ಖಾದರ್, ಆಯಿಷತ್ ತೌಫೀರ, ಖದೀಜತ್ ತನ್ವೀರ, ಅಳಿಯ ಜಮಾಲ್ ಉರ್ಮಿ, ಸಹೋದರರಾದ …

ಬಂದಡ್ಕ ಬಳಿ ನಾಯಿಮೇಲೆ ದಾಳಿ ನಡೆಸಿರುವುದು ಚಿರತೆ

ಬಂದಡ್ಕ:  ಮಾಣಿಮೂಲೆ ಕಣ್ಣಾಡಿತೋಡು ಬಳಿ  ಇತ್ತೀಚೆಗೆ  ಕಟ್ಟಿ ಹಾಕಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ಚಿರತೆಯೇ ಆಗಿದೆಯೆಂದು ದೃಢೀಕರಿಸಲಾಗಿದೆ.  ಬಂದಡ್ಕ ಸೆಕ್ಷನ್ ಫಾರೆಸ್ಟ್ ಆಫೀಸರ್ ಪಿ. ಶೇಷಪ್ಪ ಎಂಬಿವರು ಈ ಬಗ್ಗೆ ಖಚಿತಪಡಿಸಿದ್ದು, ಸಾರ್ವಜನಿಕರಿಗೆ ಜಾಗ್ರತಾ ನಿರ್ದೇಶ ಹೊರಡಿಸಿದ್ದಾರೆ.  ಕಟ್ಟಿ ಹಾಕಿದ ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ನೋಡಿದಾಗ ಚಿರತೆ ಓಡಿ ಹೋಗಿತ್ತು.  ಈ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ನಾಯಿ ಮೇಲೆ ದಾಳಿ ನಡೆಸಿರುವುದು ಚಿರತೆಯಾಗಿದೆಯೆಂದು ತಿಳಿದುಬಂದಿದೆ. …

ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭ

ತಿರುವನಂತಪುರ: ಕೇರಳ ಸೇರಿದಂತೆ 9 ರಾಜ್ಯಗಳ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ನಿನ್ನೆ ಅರ್ಧರಾತ್ರಿಯಿಂ ದಲೇ ಚಾಲನೆ ನೀಡಲಾಗಿದೆ. ಸದ್ಯ ಕೇರಳದಲ್ಲಿ ಮತದಾರ ಪಟ್ಟಿಯಲ್ಲಿ ಒಟ್ಟು 2.785 ಕೋಟಿ ಮತದಾರರಿದ್ದಾರೆ. ಕೊನೆಗೆ ಎಂಬಂತೆ ಕೇರಳದಲ್ಲಿ 2002ರಲ್ಲಿ ಎಸ್‌ಐಆರ್ ನಡೆದಿತ್ತು. ಆ ಬಳಿಕ ಈ ಪ್ರಕ್ರಿಯೆ ನಡೆಯುತ್ತಿರುವುದು ಇದು ಮೊದಲ ಬಾರಿಯಾಗಿದೆ. ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣಾ ಅಧಿಸೂಚನೆ ಈ ತನಕ ಪ್ರಕಟಿಸದೇ ಇರುವ ಹಿನ್ನೆಲೆಯಲ್ಲಿ ಎಸ್‌ಐಆರ್ …

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಪೈವಳಿಕೆನಗರ ಶಾಲೆಯಲ್ಲಿ ಧ್ವಜಾರೋಹಣ

ಪೈವಳಿಕೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಪೈವಳಿಕೆ ಜಿಎಚ್‌ಎಸ್‌ಎಸ್ ನಗರದಲ್ಲಿ ಆರಂಭ ಗೊಂಡಿತು. ಉಪಜಿಲ್ಲಾ ವ್ಯಾಪ್ತಿಯ 113 ಶಾಲೆಗಳಿಂದ 5000ದಷ್ಟು ವಿದ್ಯಾ ರ್ಥಿಗಳು ಭಾಗವಹಿಸುವ ಕಲೋತ್ಸವದ ಮೊದಲ ದಿನ ವೇದಿಕೇತರ ಸ್ಪರ್ಧೆಗಳು ಪೂರ್ತಿಗೊಂಡಿದೆ. ೫೦೦೦ದಷ್ಟು ಮಂ ದಿಗೆ ಮೊದಲ ದಿನ ಆಹಾರ ನೀಡಲಾ ಯಿತು. ನಾಲ್ಕು ದಿನಗಳಲ್ಲಾಗಿ  ಕಲೋ ತ್ಸವ 27 ವೇದಿಕೆಗಳಲ್ಲಾಗಿ ನಡೆಯಲಿದೆ. ಶಾಲಾ ಕ್ಯಾಂಪಸ್, ಪಂಚಾಯತ್ ಕಚೇರಿ ಮೈದಾನ, ಪೈಯಕ್ಕಿ ಉಸ್ತಾದ್ ಆವರಣ ಎಂಬೆಡೆಗಳಲ್ಲಿ ಪ್ರಮುಖ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಇಂದು ಬೆಳಿಗ್ಗೆ  ಮಂಜೇಶ್ವರ ಎಇಒ …

ಹೊಸಂಗಡಿ ರೈಲ್ವೇ ಗೇಟ್ ಹಳಿ ಪರಿಸರದ ರಸ್ತೆಯಲ್ಲಿ ಚರಂಡಿಯ ಸ್ಲ್ಯಾಬ್ ಹಾನಿ: ವಾಹನ ಸವಾರರಲ್ಲಿ ಭೀತಿ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಮೂಲಕ ಬಂಗ್ರಮAಜೇಶ್ವರಕ್ಕೆ ಹಾದು ಹೋಗುವ ರಸ್ತೆಯಲ್ಲಿ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲಾ ್ಯಬ್ ಹಾನಿಗೊಂಡು ಕಬ್ಬಿಣದ ಸಲಾಕೆ ಗೋಚರಿಸುತ್ತಿದೆ. ಇದು ವಾಹನ ಸಂಚಾರದ ವೇಳೆ ಅಪಾಯಕ್ಕೆ ಕಾರಣವಾಗುತ್ತಿದೆ. ಗೇಟ್ ಪರಿಸರದಲ್ಲಿ ರೈಲ್ವೇ ಇಲಾಖೆ ಇಂಟರ್‌ಲಾಕ್ ಅಳವಡಿಸಿದೆ. ಇದರ ಮಧ್ಯ ಭಾಗದಲ್ಲಿ ಚರಂಡಿಗೆ ನಿರ್ಮಿಸಿದ ಕಾಂಕ್ರೀಟ್‌ನ ಸ್ಲಾ ್ಯಬ್ ಕಳೆದ ಹಲವು ದಿನಗಳಿಂದ ಹಾನಿಗೀಡಾಗಿ ಕಬ್ಬಿಣದ ಸಲಾಕೆ ಎದ್ದು ಕಾಣುತ್ತಿದೆ. ಉಳಿದ ಸ್ಲಾ ್ಯಬ್ ಕೂಡಾ ಮುರಿದು ಹೋಗುವ ಮುನ್ನವೇ ಇದನ್ನು ದುರಸ್ತಿಗೊಳಿಸಲು …