ಹೊಸಂಗಡಿ ರೈಲ್ವೇ ಗೇಟ್‌ಗೆ ಟೆಂಪೊ ಢಿಕ್ಕಿ ಒಂದೂವರೆ ಗಂಟೆ ಕಾಲ ಸಾರಿಗೆ ಅಡಚಣೆ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್‌ಗೆ ಟೆಂಪೊ ಢಿಕ್ಕಿ ಹೊಡೆದಿದ್ದು, ಇದರಿಂದ ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು. ಇಂದು ಬೆಳಿಗ್ಗೆ ೮ಗಂಟೆ ವೇಳೆ ಘಟನೆ ನಡೆದಿದೆ. ರೈಲುಗಾಡಿಯೊಂದು ಆಗಮಿಸಲಿದ್ದ ಹಿನ್ನೆಲೆಯಲ್ಲಿ ಗೇಟ್ ಹಾಕುತ್ತಿದ್ದಂತೆ ಬಂಗ್ರಮಂಜೇಶ್ವರದಿಂದ ಹೊಸಂಗಡಿಯತ್ತ ಸಾಗುತ್ತಿದ್ದ ಟೆಂಪೋ ಗೇಟ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಗೇಟ್ ಮುರಿದು ಬಿದ್ದಿದ್ದು, ಕೂಡಲೇ ತಲುಪಿದ ಸಿಬ್ಬಂದಿಗಳು ಅದನ್ನು ತೆರವುಗೊಳಿಸಿದ್ದಾರೆ. ಇದರಿಂದ ಒಂದೂವರೆ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿ ಬಂತು.

ಪೈವಳಿಕೆ ನಗರ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟನೆ

ಮಂಜೇಶ್ವರ :64 ನೇ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಪೈವಳಿಕೆ ನಗರ ಶಾಲೆಯಲ್ಲಿ ಆರಂಭವಾಯಿತು.ಎಲ್ ಪಿ, ಯು ಪಿ,ಹೈಸ್ಕೂಲ್, ಹೈಯರ್ ಸೆಕೆಂಡರಿ ಶಾಲೆಗಳಲ್ಲಾಗಿ ಸುಮಾರು, 4500 ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸುತ್ತಿದ್ದಾರೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾ ಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿದ್ದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಧ್ವಜÁರೋಹಣಗೈದರು. ಜಿಲ್ಲಾ ಪಂಚಾಯತ್ ಸದಸ್ಯರಾದ …

ಕುಸಿದುಬಿದ್ದು ನಿಧನ

ಕುಂಬಳೆ: ವಾಣಿಯ ಗಾಣಿಗ ಸಭಾ ಕುಂಬಳೆ ಘಟಕದ ಗೌರವಾಧ್ಯಕ್ಷರಾಗಿದ್ದ ಆರಿಕ್ಕಾಡಿ ನಿವಾಸಿ ತೇರಪ್ಪ ಪಾಟಾಳಿ (69) ನಿಧನ ಹೊಂದಿದರು. ನಿನ್ನೆ ರಾತ್ರಿ ವೇಳೆ ಕುಸಿದುಬಿದ್ದಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ನಿಧನ ಸಂಭವಿಸಿದೆ. ಈ ಹಿಂದೆ ಕೊಲ್ಲಿಯಲ್ಲಿ ಉದ್ಯೋಗಿಯಾಗಿದ್ದರು. ಇವರ ತಂದೆ  ಮಾನ ಕಾರ್ನವರ್ ಈ ಹಿಂದ ನಿಧನಹೊಂದಿದ್ದಾರೆ. ಮೃತರು ಪತ್ನಿ ವಿಶಾಲಾಕ್ಷಿ, ಮಕ್ಕಳಾದ ಶ್ರೀಕಾಂತ್,  ಶ್ರೀಕಲಾ, ಅಳಿಯ ನವೀನ್, ಸೊಸೆ ಸುಷ್ಮಾ, ಸಹೋದರಿಯರಾದ ಬೇಬಿ, ಸೀತಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೇಡಗಂ ಜನತೆಗೆ ಭೀತಿ ಹುಟ್ಟಿಸಿದ್ದ ಚಿರತೆ ಇನ್ನು ಪುತ್ತೂರ್‌ನ ಮೃಗಾಲಯದಲ್ಲಿ

ಕಾಸರಗೋಡು: ಒಂದೂವರೆ ವರ್ಷ ಕಾಲ ಬೇಡಡ್ಕ ಪಂಚಾಯತ್‌ನ ಜನತೆಗೆ ಭಯ ಹುಟ್ಟಿಸಿದ್ದ ಚಿರತೆ ಇನ್ನು ಮುಂದೆ ಪುತ್ತೂರ್ ಜುವೋಲೋಜಿಕಲ್ ಪಾರ್ಕ್‌ನಲ್ಲಿ ಪ್ರವಾಸಿಗರ ಆಕರ್ಷಣಾಬಿಂದುವಾಗಲಿದೆ. ಗಾಯಗೊಂಡಿದ್ದ ರೆಮೊ ಎಂಬ ಗಂಡು ಚಿರತೆಗೆ ಪಾರ್ಕ್‌ನ ವೆಟರ್ನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಕೇಂದ್ರ ಮೃಗಾಲಯ ಅಥೋರಿಟಿಯ ಅನುಮತಿ ಪಡೆದ ಬಳಿಕ ಪಾರ್ಕ್‌ಗೆ ಸ್ಥಳಾಂತರಿಸಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಉದ್ಘಾಟಿಸಿದ ಜುವೋಲೋಜಿಕಲ್ ಪಾರ್ಕ್‌ನಲ್ಲಿರುವ ಮೂರು ಚಿರತೆಗಳ ಪೈಕಿ ಈ ಚಿರತೆಯೂ ಕೂಡಾ ಒಳಗೊಂಡಿದೆ. ಕಳೆದ ಮಾರ್ಚ್ 26ರಂದು ಬೇಡಡ್ಕ ಪಂಚಾಯತ್‌ನ ಕೊಳತ್ತೂರು …

ಹಿರಿಯ ಕೃಷಿಕ ನಿಧನ

ಬದಿಯಡ್ಕ: ಬದಿಯಡ್ಕ ಕಮ್ಮರ್ತಮೂಲೆ ನಿವಾಸಿ ಹಿರಿಯ ಕೃಷಿಕ ಅಂಬಾಡಿ (85) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಶಾರದ, ಸುಧಾಕರ, ಭವಾನಿ, ಪುಷ್ಪಲತಾ, ಸೊಸೆ ರೇಖಾ, ಅಳಿಯಂದಿರಾದ ಕೃಷ್ಣ, ಸುಕುಮಾರ, ಯೋಗೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ರೇವತಿ ಈ ಹಿಂದೆ ನಿಧನರಾಗಿದ್ದಾರೆ.

ಬಿಜೆಪಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಿಂದ ಆರೋಗ್ಯ ವಿಮೆ ಶಿಬಿರ

ಕಾಸರಗೋಡು: ಬಿಜೆಪಿ ಜಿಲ್ಲಾಹೆಲ್ಪ್ ಡೆಸ್ಕ್ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ ಆರೋಗ್ಯ ವಿಮೆ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಅವರು ಮಾತನಾಡಿ ಅಂಚೆ ಕಚೇರಿಗಳನ್ನು ಬ್ಯಾಂಕ್‌ಗಳಿಗೆ ಸಮಾನವಾದ ಸೇವೆ ನೀಡಲು ಪ್ರಾಪ್ತಿಗೊಳಿಸಿದ್ದು, ನರೇಂದ್ರ ಮೋದಿ ಸರಕಾರವಾಗಿದೆ ಎಂದು ನುಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್. ಬಾಬುರಾಜ್, ಪಿ.ಆರ್. ಸುನಿಲ್ ಜಿಲ್ಲಾ ಉಪಾಧ್ಯಕ್ಷ ಡಿ. ಶಂಕರ, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್, …

ಸಂಸ್ಕೃತದಲ್ಲಿ ಮಾತನಾಡಲು ಅರಿಯದ ವ್ಯಕ್ತಿಗೆ ಸಂಸ್ಕೃತ ಪಿಎಚ್‌ಡಿ ನೀಡಲೆತ್ನ: ತಡೆದ ಡೀನ್

ತಿರುವನಂತಪುರ: ಸಂಸ್ಕೃತ ಭಾಷೆಯಲ್ಲಿ ಮಾತನಾಡಲು ಅರಿಯದ ಎಸ್‌ಎಫ್‌ಐ ನೇತಾರನಿಗೆ ಸಂಸ್ಕೃತದಲ್ಲಿ ಪಿಎಚ್‌ಡಿ ನೀಡಲು ನಡೆಸಲಾದ ಯತ್ನವನ್ನು ಕೇರಳ ವಿಶ್ವವಿದ್ಯಾಲಯದ ಓರಿಯೆಂಟಲ್ ಭಾಷೆ ವಿಭಾಗದ ಡೀನ್ ತಡೆದಿದ್ದಾರೆ. ಮಾತ್ರವಲ್ಲ ಈ ವಿಷಯವನ್ನು ಅವರು ಪ್ರಸ್ತುತ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ನವಂಬರ್ 2ರಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭ ನಡೆಯಲಿದ್ದು, ಅದರಲ್ಲಿ ಈ ವಿಷಯವನ್ನು ಪರಿಶೀಲಿಸುವಂತೆ ಮುಖ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಶಿಫಾರಸ್ಸು ಮಾಡಿದ್ದಾರೆ. ಮಾತ್ರವಲ್ಲ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಇನ್ನೊಂದೆಡೆ ಉಪಕುಲಪತಿ ನಿರ್ದೇಶವನ್ನೂ ನೀಡಿದ್ದಾರೆ.  …

ದುರಸ್ತಿ ಕಾಮಗಾರಿ: ವಿದ್ಯುತ್ ವಿತರಣೆ ಆಂಶಿಕ ಮೊಟಕು

ಕಾಸರಗೋಡು: 110 ಕೆ.ವಿ. ಮೈಲಾಟಿ- ವಿದ್ಯಾನಗರ ಫೀಡರ್‌ನ ಸಾಮರ್ಥ್ಯ ಹೆಚ್ಚಿಸುವುದರಂಗ ವಾಗಿರುವ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ಇಂದಿನಿಂದ ನ.7ರವರೆಗಿನ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ 110 ಕೆ.ವಿ. ಸಬ್‌ಸ್ಟೇಶನ್‌ಗಳಲ್ಲಿ ವಿದ್ಯುತ್ ವಿತರಣೆ ಆಂಶಿಕವಾಗಿ ಮೊಟಕುಗೊಳ್ಳಲು ಸಾಧ್ಯತೆ ಇದೆ. ಸಬ್ ಸ್ಟೇಶನ್‌ಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33ಕೆ.ವಿ. ಸ್ಟೇಶನ್‌ಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಎಂಬೆಡೆಗಳಿಂದಿರುವ ವಿದ್ಯುತ್ ವಿತರಣೆಯಲ್ಲಿ ತಡೆ ಉಂಟಾಗಲಿದೆ ಎಂದು ಮೈಲಾಟಿ ಲೈನ್ ಮೈಂಟನೆನ್ಸ್ ಸಬ್ ಡಿವಿಶನ್ ಅಸಿಸ್ಟೆಂಟ್ …

ಎಕೆಪಿಎ ಕಾಸರಗೋಡು ವಲಯ ಪದಾಧಿಕಾರಿಗಳು

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ವಲಯ ಸಮ್ಮೇಳನ ನಿನ್ನೆ ಜರಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಅಧ್ಯಕ್ಷರಾಗಿ ವಾಮನ್ ಕುಮಾರ್, ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಸರಿತಾ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ರೈ, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಆಯ್ಕೆಯಾದರು. ಸಮ್ಮೇಳನವನ್ನು ಕಾಸರಗೋಡು ಎಕ್ಸೈಸ್ ಅಸಿಸ್ಟೆಂಟ್ ಕಮಿಶನರ್ ಅನ್ವರ್ ಸಾದಾತ್ ಉದ್ಘಾಟಿಸಿದರು. ಪ್ರತಿನಿಧಿ ಸಮ್ಮೇಳನವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಸುಕು ನೈರಿಯ ಉದ್ಘಾಟಿಸಿದರು.

ಮುಹಿಮ್ಮಾತ್‌ನಲ್ಲಿ ಉರೂಸ್, ಸನದುದಾನ ಜನವರಿಯಲ್ಲಿ

ಪುತ್ತಿಗೆ: ಸಯ್ಯಿದ್ ತ್ವಾಹಿರುಲ್ ಅಹ್‌ದಲ್ ತಂಙಳ್‌ರ ಇಪ್ಪತ್ತನೇ ವರ್ಷದ ಉರೂಸ್ ಹಾಗೂ ಸನದುದಾನ ಸಮ್ಮೇಳನ ಜನವರಿ 29ರಿಂದ 31ರ ವರೆಗೆ ನಡೆಯಲಿದೆ. ಕೇರಳ ಮುಸ್ಲಿಂ ಜಮಾಯತ್ ಜಿಲ್ಲಾ ಅಧ್ಯಕ್ಷ ಹಸನುಲ್ ಅಹ್‌ದ್ ತಂಙಳ್ ಈ ಬಗ್ಗೆ ಘೋಷಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲ ಫೈಸಿ ಅಧ್ಯಕ್ಷತೆ ವಹಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಹಲವರು  ಮಾತನಾಡಿದರು.