ತಿಂಗಳ ಮಗು ಮಾರಾಟ: ನೀರ್ಚಾಲ್‌ನಲ್ಲಿ ಪತ್ತೆ; ತಾಯಿ ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ಒಂದು ತಿಂಗಳು ಪ್ರಾಯದ ಗಂಡು ಮಗುವನ್ನು ತಾಯಿ ಬೇರೊಬ್ಬ ಮಹಿಳೆಗೆ ಮಾರಾಟಗೈದ ಪ್ರಕರಣ ಕುಂಬಳೆಯಲ್ಲಿ ನಡೆದಿದೆ. ಪೊಲೀಸರ ಸಹಾಯದೊಂದಿಗೆ ಶಿಶುಕ್ಷೇಮ ಸಮಿತಿ ನಡೆಸಿದ ತನಿಖೆಯಲ್ಲಿ ಮಗುವನ್ನು ನೀರ್ಚಾಲ್ ವಿಲ್ಲೇಜ್‌ನ ಮನೆಯೊಂದರಲ್ಲಿ ಪತ್ತೆಹಚ್ಚಲಾಗಿದೆ. ಈ ಸಂಬಂಧ ಮಗು ಹಾಗೂ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಸಿಡಬ್ಲ್ಯುಸಿಗೆ ಹಸ್ತಾಂತರಿಸಲಾಗಿದ್ದು, ಮಗುವನ್ನು ಚೈಲ್ಡ್ ಹೋಮ್‌ಗೆ ಕಳುಹಿಸಿ ಕೊಡಲಾಗಿದೆ. ಮಗುವನ್ನು ಮಾರಾಟಗೈದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಈ ರೀತಿ ತಿಳಿಸುತ್ತಿದ್ದಾರೆ- ಕುಂಬಳೆ ಪೇಟೆ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಯುವತಿ ಒಂದು …

ತೋಟದ ಕೆಲಸಕ್ಕೆ ತಲುಪಿ ಮಾಲಕಿಯ ಕುತ್ತಿಗೆಯಿಂದ ಸರ ಅಪಹರಣ ಯತ್ನ: ಯುವಕ ಸೆರೆ

ಕಾಸರಗೋಡು: ಅಡಿಕೆ ತೋಟ ದ ಕೆಲಸಕ್ಕೆ ತಲುಪಿದ ಯುವಕ ತೋಟದ ಮಾಲಕಿಯಾದ ಗೃಹಿಣಿ ಯ ಕುತ್ತಿಗೆ ಯಿಂದ  ಚಿನ್ನದ ಸರ ಕಸಿದು ಪರಾರಿಯಾಗಲೆತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕರ್ನಾಟಕದ ಚಿತ್ರದುರ್ಗ ನಿವಾಸಿಯಾದ ಮಂಜು ಯಾನೆ ಮಂಜುನಾಥ (35) ಎಂಬಾತನನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಚೆಂಗಳ ಚೇರೂರು ಮೇನಂಕೋಡ್‌ನ ಬದ್ರಿ ಯಾ ಮಂಜಿಲ್‌ನ ಅಬ್ದುಲ್ ಖಾದರ್‌ರ ಪತ್ನಿ  ಕುಂಞಿಬಿ (58) ಯವರ ಕುತ್ತಿಗೆಯಿಂದ ಸರ ಅಪಹರಿ ಸಲು ಆರೋಪಿ ಯತ್ನಿಸಿದ್ದಾನೆ. ನಿನ್ನೆ ಬೆಳಿಗ್ಗೆ …

ಚೆರ್ಕಳದಲ್ಲಿ ಬೃಹತ್ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ: 20 ಮಂದಿ ಸೆರೆ

ಕಾಸರಗೋಡು: ಚೆರ್ಕಳದಲ್ಲಿ ಬಹು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೊಠಡಿಯೊಳಗೆ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಇವರ ಕೈಯಿಂದ 55,000 ರೂ. ವಶಪಡಿಸಲಾಗಿದೆ. ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪಿ. ಶೈನ್ರ ನೇತೃತ್ವದಲ್ಲಿ ಮೊನ್ನೆ ರಾತ್ರಿ 10.30ರ ವೇಳೆ ದಾಳಿ ನಡೆಸಲಾಗಿದೆ. ಕುಂಡAಗುಳಿ ಕಾರಕ್ಕಾಡ್ ಹೌಸ್ನ ಮುಹಮ್ಮದ್ ಕುಂuಟಿಜeಜಿiಟಿeಜ (46), ಚೆರ್ಕಳ ಪಾಡಿ ರೋಡ್ ಕುದಿರತ್ ನಗರದ ಅಬ್ದುಲ್ ಹಮೀದ್ (42), ಬೇಡಡ್ಕ ಪಂಚಾಯತ್ …

ಮದ್ಯಪಾನವನ್ನು ವಿರೋಧಿಸಿದ ತಾಯಿಯನ್ನು ಕುತ್ತಿಗೆ ಇರಿದು ಕೊಲೆಗೈದ ಪುತ್ರ

ತಿರುವನಂತಪುರ: ಮದ್ಯಪಾನವನ್ನು ವಿರೋಧಿಸಿದ ತಾಯಿಯನ್ನು ಸ್ವಂತ ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಕಲ್ಲಿಯೂರು ಮನ್ನಂ ಮೆಮೋರಿಯಲ್ ರೋಡ್ ನಿವಾಸಿಯಾದ ವಿಜಯ ಕುಮಾರಿ (74) ಕೊಲೆಗೀಡಾದ ಗೃಹಿಣಿಯಾಗಿದ್ದಾರೆ. ಈ ಸಂಬಂಧ ಇವರ ಪುತ್ರ ಅಜಯ ಕುಮಾರ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 11.45ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಅಜಯ ಕುಮಾರ್ ಮದ್ಯ ಸೇವಿಸುತ್ತಿದ್ದಾಗ ಬಾಟ್ಲಿ ನೆಲಕ್ಕೆ ಬಿದ್ದು ಪುಡಿಯಾಗಿತ್ತು. ಇದನ್ನು ತಾಯಿ ಪ್ರಶ್ನಿಸಿದಾಗ ಬಾಟ್ಲಿಯ ಗಾಜಿನಿಂದ ಆಕೆಯ ಕುತ್ತಿಗೆಗೆ …

ಶಬರಿಮಲೆಯಲ್ಲಿ ಕಾಸರಗೋಡು ನಿವಾಸಿಗಳಾದ ಭಕ್ತರಿಂದ ಹಣ ಪಡೆದು ವಂಚಿಸಿದ ಇಬ್ಬರು ಡೋಲಿ ಕಾರ್ಮಿಕರ ಸೆರೆ

ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳಾದ ಅಯ್ಯಪ್ಪ ಭಕ್ತರನ್ನು ವಂಚಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇಬ್ಬರು ಡೋಲಿ ಕಾರ್ಮಿಕರನ್ನು ಪಂಪಾ ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿ ಪೀರುಮೇಡ್ ರಾಣಿಕೋವಿಲ್ ಎಸ್ಟೇಟ್ ನಿವಾಸಿಗಳಾದ ಕಣ್ಣನ್ (31), ರಘು ಆರ್. (27) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಅಕ್ಟೋಬರ್ 18ರಂದು ಘಟನೆ ನಡೆದಿದೆ.  ತುಲಾ ಮಾಸ ಪೂಜೆಗಾಗಿ ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳು ಒಳಗೊಂಡ ತಂಡವನ್ನು ಆರೋಪಿಗಳು ವಂಚಿಸಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆ ಭಕ್ತರ ಸಂದಣಿ …

ವ್ಯಕ್ತಿಪಲ್ಲಟ ನಡೆಸಿ ದೂರು ನೀಡಿದ ಆರೋಪದಂತೆ ಕೇಸು ದಾಖಲು

ಬದಿಯಡ್ಕ: ನಕಲಿ ದಾಖಲುಪತ್ರ ಗಳನ್ನು ಅಸಲಿ ದಾಖಲುಪತ್ರದ ರೂಪದಲ್ಲಿ ಉಪಯೋಗಿಸಿ ಜಮಾ ಯತ್ ಸಮಿತಿಯ ಕಾರ್ಯದರ್ಶಿ ಎಂಬ ಹೆಸರಲ್ಲಿ ಜ್ಯಾರಿಯಲ್ಲಿರುವ ಕಾರ್ಯದರ್ಶಿಯಾಗಿದ್ದೇನೆಂಬ ರೀತಿಯಲ್ಲಿ  ವ್ಯಕ್ತಿಪಲ್ಲಟಗೊಳಿಸಿ ವಕ್ಫ್ ಮಂಡಳಿಗೆ 2025 ಮೇ 16ರಲ್ಲಿ ನಕಲಿ ದೂರು ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏತಡ್ಕ ಬೆಳಿಂಜೆ ಬದರ್ ಜುಮಾ ಮಸೀದಿಯ ಅಬ್ದುಲ್ಲ ಜಿ.ಬಿ ಎಂಬವರು ಈ ಬಗ್ಗೆ ಮೊದಲು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯನೀಡಿದ ನಿರ್ದೇಶ ಪ್ರಕಾರ ಪೊಲೀಸರು ಅಹಮ್ಮದ್ ಮುಸ್ತಫಾ ಎಂಬವರ …

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 5ರಿಂದ

ತಿರುವನಂತಪುರ: ಎಸ್‌ಎಸ್ ಎಲ್‌ಸಿ ಪರೀಕ್ಷೆ ಮುಂದಿನ ವರ್ಷ ಮಾರ್ಚ್ ೫ರಿಂದ ಆರಂಭಗೊಂಡು ೩೦ರಂದು ಕೊನೆಗೊಳ್ಳಲಿದೆ. ಇದೇ ರೀತಿ ಹೈಯರ್ ಸೆಕೆಂಡರಿ ಪ್ರಥಮ ವರ್ಷ ಪರೀಕ್ಷೆ ಮಾರ್ಚ್ 5ರಂದು ಆರಂಭಗೊಂಡು 27ರ ತನಕ ಮುಂದುವರಿಯಲಿದೆ. ಹೈಯರ್ ಸೆಕೆಂಡರಿ ದ್ವಿತೀಯ ವರ್ಷದ ಪರೀಕ್ಷೆ ಮಾರ್ಚ್ ೬ರಂದು ಆರಂಭಗೊಂಡು 28ರ ತನಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಬೆಳಿಗ್ಗೆ 9.30 (ಶುಕ್ರವಾರದಂದು 9.15) ಆರಂಭಗೊಳ್ಳಲಿದೆ. ಪ್ಲಸ್‌ವನ್ ಪರೀಕ್ಷೆ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ರಾಜ್ಯ ದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ …

ಅನ್‌ಲೈನ್ ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಓರ್ವ ಸೆರೆ

ಕಾಸರಗೋಡು: ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗದ ಭರವಸೆಯೊಡ್ಡಿ 11 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಸೆರೆಗೀಡಾಗಿದ್ದಾನೆ. ಕಣ್ಣೂರು ಕದಿರೂರು ಪುಳಿಯೋಡ್ ನಿವಾಸಿ ಯಾದ ಸಿ. ವಿನೀಶ್ (39) ಸೆರೆಗೀಡಾದ ವ್ಯಕ್ತಿ. ಇರಿಂಙಾಲಕುಡ ಅವಿಟ್ಟತ್ತೂರು ನಿವಾಸಿ ಆದರ್ಶ್ (32) ಎಂಬವರನ್ನು ಆರೋಪಿ ವಂಚಿಸಿರುವುದಾಗಿ ದೂರ ಲಾಗಿದೆ. ವಾಟ್ಸಪ್ ಮೂಲಕ ಆರೋಪಿ ಯುವಕನನ್ನು ಸಂಪರ್ಕಿಸಿದ್ದನು. ‘ಡಿ.ಡಿ.ಬಿ. ವರ್ಲ್ಡ್ ವೈಡ್ ಮೀಡಿಯಾ ಇಂಡಿಯಾ’ ಎಂಬ ಕಂಪೆನಿಯ ಹೆಸರಲ್ಲಿ ಹೋಟೆಲ್‌ಗಳಿಗೆ ಹಾಗೂ ರೆಸ್ಟೋರೆಂಟ್‌ಗಳಿಗೆ ಸ್ಟಾರ್ ರೇಟಿಂಗ್ …

ಚುನಾವಣಾ ಕೊಡುಗೆ: ಕಲ್ಯಾಣನಿಧಿ ಪಿಂಚಣಿ 2000 ರೂ.ಗೇರಿಕೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನೇನು ಚುನಾವಣೆ ನಡೆಯಲಿರುವಂತೆಯೇ ಅದನ್ನು ಮುಂದಕ್ಕೆ ಕಂಡುಕೊAಡು ರಾಜ್ಯ ಸರಕಾರ ಕೊಡುಗೆಗಳ ಮಹಾಪೂರವನ್ನೇ ಘೋಷಿಸಿದೆ.ಇದರಂತೆ ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು ಈಗಿರುವ 1600ರೂ.ನಿಂದ 2000 ರೂ.ಗೇರಿಸ ಲಾಗಿದೆ. ಆಶಾಕಾರ್ಯಕರ್ತರು, ಅಂಗನವಾಡಿ ವರ್ಕರ್ಸ್ ,ಹೆಲ್ಪರ್, ಪ್ರೈಮರೀ ಟೀಚರ್, ಆಯಾ, ಸಾಕ್ಷರತಾ ಪ್ರೇರಕ್ರ ಗೌರವಧನದಲ್ಲೂ ತಲಾ 1000 ರೂ.ನಂತೆ ಹೆಚ್ಚಳ ಘೋಷಿಸ ಲಾಗಿದೆ. ಆಶಾ ಕಾರ್ಯಕರ್ತರಿಗೆ ವಿತರಿಸಲು ಬಾಕಿ ಇರುವ ಹಣವನ್ನು ಶೀಘ್ರ ವಿತರಿಸಲಾಗುವುದು. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ತರ …

ಚಿಪ್ಪಾರುಪದವು-ಪೊಸಡಿಗುಂಪೆ ರಸ್ತೆ ದುರಸ್ತಿ ಕಾಮಗಾರಿ ಅರ್ಧದಲ್ಲಿ ಮೊಟಕು ವಾಹನ ಸಂಚಾರಕ್ಕೆ ಸಮಸ್ಯೆ; ಬಿಜೆಪಿಯಿಂದ ಹೋರಾಟ ಎಚ್ಚರಿಕೆ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚಿಪ್ಪಾರುಪದವು-ಬಾಯಾರು ಸೊಸೈಟಿ, ಸರ್ಕುತ್ತಿ, ಸಜಂಕಿಲ, ಪೊಸಡಿಗುಂಪೆ ದಾರಿ ಯಾಗಿ  ಪೆರ್ಮುದೆ ಸಂಗಮಿಸುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ಅರ್ಧದಲ್ಲೇ ಮೊಟಕು ಗೊಳಿಸಿದ ಹಿನ್ನೆಲೆಂiiಲ್ಲಿ ಬಸ್ ಸಹಿತ ವಾಹನ ಸಂಚಾರ ಕಷ್ಟಕರವಾಗಿದ್ದು,  ಸಾರ್ವಜನಿಕರು ಸಂಕಷ್ಟಗೊಂಡಿದ್ದಾರೆ. ರಸ್ತೆ ದುರಸ್ತಿ ಶೀಘ್ರ ಮುಂದುವರಿಸದಿದ್ದಲ್ಲಿ  ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಹೋರಾಟಕ್ಕೆ  ಮುಂದಾಗುವುದಾಗಿ ತಿಳಿಸಿದೆ. ನಾಲ್ಕು ತಿಂಗಳ ಹಿಂದೆ ಈ ರಸ್ತೆಯನ್ನು ಅಗಲ ಹಾಗೂ ಮರು ಡಾಮರೀಕರಗೊಳಿಸಲು ಚಾಲನೆ ನೀಡಲಾಗಿತ್ತು. ಆದರೆ ಮಳೆಯಿಂದಾಗಿ ಕಾಮಗಾರಿ ಮೊಟಕು …