ಬೀಡಿ ಕಾರ್ಮಿಕೆ ನಿಧನ

ಪೈವಳಿಕೆ: ಇಲ್ಲಿಗೆ ಸಮೀಪದ ಮಾಸಿಕುಮೇರಿ ನಿವಾಸಿ ಬೀಡಿ ಕಾರ್ಮಿಕೆ, ಸಿಪಿಎಂ ಹಿತೈಷಿ ಗುಲಾಬಿ (59) ನಿಧನಹೊಂದಿದರು.  ಇವರ ಪತಿ ಕೃಷ್ಣ, ಓರ್ವ ಪುತ್ರ ಚಂದ್ರ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಪುತ್ರ ಹರೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಮಾನಿಪ್ಪಾಡಿ, ಮುಖಂಡರಾದ ಹಾರಿಸ್ ಪೈವಳಿಕೆ, ಖಲೀಲ್ ಚಿಪ್ಪಾರು, ರಫೀಕ್, ಜಗದೀಶ್ ಶೆಟ್ಟಿ, ನಾರಾಯಣ ಶೆಟ್ಟಿ, ಸೀತಾರಾಮ …

ಕಾಂಜಿಪುರದಲ್ಲಿ ದರೋಡೆ: ಐದು ಮಂದಿ ಸೆರೆ

ಚೆನ್ನೈ: ಕಾಂಜೀಪುರದ  ಹೆದ್ದಾರಿಯಲ್ಲಿ ಕಾರು ತಡೆದು ನಿಲ್ಲಿಸಿ 4.5 ಕೋಟಿ ರೂ. ದರೋಡೆ  ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕೇರಳೀಯರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ  ದರೋಡೆ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ ಕೊಲ್ಲಂ, ಪಾಲಕ್ಕಾಡ್, ತೃಶೂರು ನಿವಾಸಿಗಳಾದ ಸಂತೋಷ್, ಸುಜಿತ್‌ಲಾಲ್, ಜಯನ್, ಮುರುಗನ್, ಕುಂಞುಮೊಹಮ್ಮದ್ ಎಂಬಿವರನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಹಳೆಯ ಬಟ್ಟೆಗಳ ಮಧ್ಯೆ ಲಭಿಸಿದ  ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರಿಗೆ ಅಭಿನಂದನೆ

ಮುಳ್ಳೇರಿಯ: ಹಳೆಯ ಸಾಮಗ್ರಿಗಳನ್ನು  ಸಂಗ್ರಹಿಸುವ ಮಧ್ಯೆ ಲಭಿಸಿದ ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಮಾದರಿಯಾಗಿದ್ದಾರೆ. ಕಾರಡ್ಕ ಪಂಚಾಯತ್‌ನ  ೬ನೇ ವಾರ್ಡ್ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯ ರಾದ ತಾರಾ, ಮೀನಾಕ್ಷಿ ಕಡೆಂಗೋಡು ಪ್ರಾಮಾಣಿಕತೆ ಮೆರೆದು ಮಾದರಿಯಾದವರು. ಇವರು ಮಲ್ಲಾವರ ನಿವಾಸಿ ಆನಂದ ಭಟ್‌ರ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿದ್ದರು. ಇದನ್ನು ತೆಗೆದುಕೊಂಡು ಹೋಗಿ ಸಂಗ್ರಹಣಾ ಕೇಂದ್ರದಲ್ಲಿ ಹಾಕುವ ವೇಳೆ  ಬಟ್ಟೆಗಳ ಮಧ್ಯೆ ೫೦೦೦ ರೂ. ಪತ್ತೆಯಾಗಿದೆ. ಕೂಡಲೇ ಇದನ್ನು ಮಲ್ಲಾ ವರದ ಆನಂದ …

ಎಫ್‌ಎಸ್‌ಇಟಿಒ ಕಾಲ್ನಡೆ ಜಾಥಾ ಉದ್ಘಾಟನೆ: ನಾಳೆ ಕುಂಬಳೆಯಲ್ಲಿ ಸಮಾಪ್ತಿ

ಪೈವಳಿಕೆ: ಕೇಂದ್ರ ಸರಕಾರದ ಜನ ವಿರೋಧಿ ನೀತಿ ಆರೋಪಿಸಿ, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಎಫ್‌ಎಸ್‌ಇಟಿಒ ಸಂಘಟನೆಯ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುವ ಕಾಲ್ನಡೆ ಜಾಥಾದಂತೆ ಇಂದು ಮತ್ತು ನಾಳೆ ಮಂಜೇಶ್ವರದ ವಿವಿಧ ಭಾಗಗಳಲ್ಲಿ ಸಂಚರಿಸುವ ಕಾಲ್ನಡೆ ಜಾಥಾವನ್ನು ನಿನ್ನೆ  ಪೈವಳಿಕೆ ನಗರದಲ್ಲಿ ಉದ್ಘಾಟಿಸಲಾ ಯಿತು. ಇಂದು ಮತ್ತು ನಾಳೆ ವಿವಿಧ ಕಡೆಗಳಲ್ಲಿ ಸಂಚರಿಸುವ ಜಾಥಾ ಕುಂಬಳೆಯಲ್ಲಿ ಸಮಾಪ್ತಿಗೊಳ್ಳ ಲಿದೆ.  ಪೈವಳಿಕೆ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ …

ಪೇಟೆ ಅಭಿವೃದ್ಧಿಗಾಗಿ ಕುಂಬಳೆ ಪಂಚಾಯತ್ ಆಡಳಿತ ಏನೂ ಕೈಗೊಂಡಿಲ್ಲವೆಂದು ಕೇಶವ ನಾಯ್ಕ್ ಆರೋಪ

ಕುಂಬಳೆ: ಪಂಚಾಯತ್  ಕುಂಬಳೆ ಪೇಟೆ ಅಭಿವೃದ್ಧಿಗಾಗಿ ಏನನ್ನೂ ನಡೆಸಿಲ್ಲವೆಂದು ಕುಂಬಳೆಯ  ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಪೇಟೆಯ ಅಭಿವೃದ್ಧಿಯೆಂದರೆ ಸಂಚಾರ ಪರಿಷ್ಕಾರವಲ್ಲವೆಂದು ಬಸ್ ನಿಲ್ದಾಣವನ್ನು ಬದಿಯಡ್ಕ  ರಸ್ತೆಗೆ ಬದಲಿಸಿದ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು. ಚಿಕಿತ್ಸೆಗಾಗಿ ಮಂಗಳೂರು, ತಲಶ್ಶೇರಿಗೆ, ಕಲ್ಲಿಕೋಟೆಗೆ ತೆರಳುವ ರೋಗಿಗಳು ಸಹಿತದವರಿಗೆ ರೈಲ್ವೇ ಪ್ರಯಾಣಕ್ಕೆ  ಸಾರಿಗೆ ಪರಿಷ್ಕಾರ ಸಂಕಷ್ಟ ತಂದಿದೆಯೆಂದು ಅವರು ದೂರಿದರು. ಈಗ ಬಸ್‌ನಿಂದ ಇಳಿದು ರೈಲು ನಿಲ್ದಾಣಕ್ಕೆ ಬಹಳ ದೂರ ನಡೆಯಬೇಕಾಗಿ ಬರುತ್ತಿದೆ. …

ಮೂರು ರಸ್ತೆಗಳಿಗೆ 8 ಕೋಟಿ 96 ಲಕ್ಷ ರೂ.ಮಂಜೂರು-ಶಾಸಕ ಎನ್.ಎ

ಕಾಸರಗೋಡು: ಬೋವಿಕ್ಕಾನ-ಬೇವಿಂಜೆ ರಸ್ತೆ ಅಭಿವೃದ್ಧಿಗೆ ೪ಕೋಟಿ ೮೦ ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕ ಎನ್.ಎ. ನೆಲ್ಲಿಕುನ್ನು ತಿಳಿಸಿದ್ದಾರೆ. ಚೌಕಿ ಕುನ್ನಿಲ್-ಮಜಲ್-ಉಜಿರೆಕೆರೆ ರಸ್ತೆ, ಕೋಟೆಗುಡ್ಡೆ-ಮೊಗರ್ ಮಸೀದಿ ರಸ್ತೆ ಎಂಬಿವುಗಳ ಅಭಿವೃದ್ಧಿಗೆ ಕಾಸರ ಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮೊತ್ತ ಮಂಜೂರು ಮಾಡಲಾಗಿದೆ. ಈ ಮೂರೂ ರಸ್ತೆಗಳಿಗಾಗಿ 8 ಕೋಟಿ 96 ಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕರು ತಿಳಿಸಿ ದ್ದಾರೆ. ಉಜಿರೆಕೆರೆ ರಸ್ತೆಗೆ 1 ಕೋಟಿ 93 ಲಕ್ಷ, ಮೊಗರ್ ರಸ್ತೆಗೆ 2 ಕೋಟಿ 23 ಲಕ್ಷ ರೂ. …

ಮಂಜೇಶ್ವರ ಪಾಲಿಯೇಟಿವ್ ಸ್ನೇಹ ಸಂಗಮ

ಮಂಜೇಶ್ವರ:  ನೋವು ಅನುಭವಿಸುವವರಿಗೆ, ಏಕಾಂತವಾ ಗಿರುವವರಿಗೆ  ಸ್ನೇಹಸ್ಪರ್ಶ, ಸಂತೃಪ್ತ ಆರೈಕೆ ಎಂಬ ಗುರಿಯೊಂದಿಗೆ ರೋಗಿಗಳನ್ನು ಹಾಗೂ ಶಯ್ಯಾವಲಂ ಬಿಯಾದವರ ಮಾನಸಿಕ ಅಸ್ವಸ್ಥತೆ ಕಡಿಮೆಗೊಳಿಸಲು ಮಂಜೇಶ್ವರ ಪಂಚಾಯತ್ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಪಾಲಿಯೇಟಿವ್ ಸ್ನೇಹ ಸಂಗಮ ನಡೆಸಿತು.  ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಉದ್ಘಾ ಟಿಸಿದರು. ಉಪಾಧ್ಯಕ್ಷ ಮುಹಮ್ಮದ್ ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ಡಾ| ಪ್ರಭಾಕರ ರೈ ಸ್ವಾಗತಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ  ರಾಧಾ, ಯಾದವ ಬಡಾಜೆ, ಮುಮ್ತಾಸ್ ಸಮೀರ, ಪಂಚಾಯತ್ ಕಾರ್ಯದರ್ಶಿ ಸುಮೇಶ್, ಡಾ| …

ಸೀತಾಂಗೋಳಿ-ಕಾವೇರಿಕಾನ ರಸ್ತೆ ಉದ್ಘಾಟನೆ

ಸೀತಾಂಗೋಳಿ: ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಿಂದ 17 ಲಕ್ಷ ರೂ. ವೆಚ್ಚಮಾಡಿ ನಿರ್ಮಿಸಿದ ಪುತ್ತಿಗೆ ಪಂಚಾಯತ್‌ನ ಸೀತಾಂಗೋಳಿ-ಮದನಡ್ಕ-ಕಾವೇರಿಕಾನ ರಸ್ತೆಯ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಕಾವ್ಯ,ಅನಿತ, ಆಸಿಫಲಿ ಕಂದಲ್, ಪ್ರೇಮ, ಕೇಶವ ಪುತ್ತಿಗೆ,  ವಿವಿಧ ರಾಜಕೀಯ, ಸಾಮಾಜಿಕ ಪ್ರತಿನಿಧಿಗಳಾದ ಅಬ್ದುಲ್ಲ ಕಂಡತ್ತಿಲ್, ಸುಲೈಮಾನ್ ಊಜಂಪದವು, ಇ.ಕೆ.ಮುಹಮ್ಮದ್ ಕುಂಞಿ, ಶಾನಿದ್ ಕಯ್ಯಾಂಕೂಡಲ್, ಚಂದ್ರನ್ ಕಟ್ಟತ್ತಡ್ಕ, ಸ್ಟಾನಿ ಡಿ’ಸೋಜಾ, ಸವಾದ್ ಅಂಗಡಿಮೊ ಗರು, ಕುಂಞು ಕಯ್ಯಾಂಕೂಡಲ್, …