ಕೇರಳವನ್ನು ಕಡುಬಡತನಮುಕ್ತ ರಾಜ್ಯವಾಗಿ ವಿದ್ಯುಕ್ತ  ಘೋಷಣೆ

. ರಾಜ್ಯ ನವಯುಗದ ಹೊಸ್ತಿಲಲ್ಲಿ-ಮುಖ್ಯಮಂತ್ರಿ . ವಿಶೇಷ ಅಧಿವೇಶನವನ್ನು . ಬಹಿಷ್ಕರಿಸಿ ವಿಧಾನಸಭೆಯ ಹೊರಗೆ ಧರಣಿ ಮುಷ್ಕರ ನಡೆಸಿದ ವಿಪಕ್ಷ ತಿರುವನಂತಪುರ: ಕೇರಳವನ್ನು ಕಡುಬಡತನಮುಕ್ತ ರಾಜ್ಯವನ್ನಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿದ್ಯುಕ್ತವಾಗಿ ಘೋಷಿಸಿದರು. ಕೇರಳ ರಾಜ್ಯ ರೂಪೀಕರಣ ದಿನ ವಾದ ಇಂದೇ ಈ ಘೋಷಣೆ  ಮೊಳ ಗಿಸಲಾಗಿದೆಯೆಂಬ ವಿಶೇಷತೆಯೂ ಇದಕ್ಕಿದೆ. ಕೇರಳವನ್ನು ಕಡುಬಡತನ ಮುಕ್ತ ರಾಜ್ಯವನ್ನಾಗಿ ಘೋಷಿಸಲು ಹಾಗೂ ರಾಜ್ಯ ಸರಕಾರ ಈತನಕ ಜ್ಯಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಕ್ಷಿಪ್ತ …

ಉಪ್ಪಳದಲ್ಲಿ ನಿಗೂಢ ಸ್ಥಿತಿಯಲ್ಲಿ ಯುವಕನ ಮೃತದೇಹ ರೈಲು ಹಳಿ ಬದಿ ಪತ್ತೆ : ಪ್ಯಾಂಟ್‌ನ ಜೇಬಿನಲ್ಲಿ ಸಿರಿಂಜು, ಕೀಲಿಕೈ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಸಮೀಪ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ರೈಲ್ವೇ ಹಳಿ ಸಮೀಪದಲ್ಲಿ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ.  ವ್ಯಕ್ತಿ ಪ್ಯಾಂಟ್ ಹಾಗೂ ಬನಿಯನ್ ಧರಿಸಿದ್ದಾನೆ.  ಈತ ಧರಿಸಿದ್ದನೆಂದು ಸಂಶಯಿಸಲಾಗುವ ಅಂಗಿಯನ್ನು ತೆಗೆದಿರಿಸಿದ ಸ್ಥಿತಿಯಲ್ಲಿದೆ. ಸುಮಾರು ೪೫ರ ಹರೆಯದ  ವ್ಯಕ್ತಿ  ಗಡ್ಡ ಬಿಟ್ಟಿದ್ದಾನೆ. ಪ್ಯಾಂಟ್‌ನ ಜೇಬಿನಿಂದ ವಾಹನದ ಕೀಲಿಕೈ ಹಾಗೂ ಸಿರಿಂಜು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವಕ  ಯಾವುದಾದರೂ ವಾಹನದಲ್ಲಿ ತಲುಪಿ ಎಲ್ಲಾದರೂ …

ಮಗನನ್ನು ಕಾಣಲು ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಸಾವು

ಕಾಸರಗೋಡು: ಮಗನನ್ನು ಕಾಣಲೆಂದು ಬೆಂಗಳೂರಿಗೆ ಹೊರಟ ತಂದೆ ಪ್ರಯಾಣ ಮಧ್ಯೆ ಬಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ  ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಅಣಂಗೂರು ಸರಕಾರಿ ಆಯುರ್ವೇದ ಆಸ್ಪತ್ರೆ ಬಳಿಯ ಸುನಿತಾ ನಿವಾಸದ ಕೆ.ಕೆ. ಅಶೋಕನ್ (73) ಸಾವನ್ನಪ್ಪಿದ ವ್ಯಕ್ತಿ. ಇವರು ಖಾಸಗಿ ಬಸ್ಸಿನಲ್ಲಿ ಗುರುವಾರ ರಾತ್ರಿ ಕಾಸರಗೋಡಿ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದು ಹಾಸನ ತಲುಪಿದಾಗ ಅವರಿಗೆ ಹೃದಯಾಘಾತವುಂಟಾಗಿದೆ. ತಕ್ಷಣ ಅವರನ್ನು ಹಾಸನದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು  ಕಾಸರಗೋ ಡಿಗೆ …

ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆ: ಓರ್ವ ಆರೋಪಿ ಬಂಧನ: ಇನ್ನೋರ್ವನಿಗಾಗಿ ಶೋಧ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆಗೈದು ಅವಾಚ್ಯವಾಗಿ ನಿಂದಿಸಿದ ಪ್ರಕರಣ ದಲ್ಲಿ ಆರೋಪಿಯಾದ ಓರ್ವನನ್ನು ಬಂಧಿಸಲಾಗಿದೆ.   ಉಪ್ಪಳ ಹಿದಾಯತ್ ಬಜಾರ್‌ನ ಮೊಹಮ್ಮದ್ ಸಿರಾಜುದ್ದೀನ್ (26) ಎಂಬಾತ ಬಂಧಿತ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಅಕ್ಟೋಬರ್ 27ರಂದು ಅಪರಾಹ್ನ ೩.೩೦ಕ್ಕೆ  ಮಂಗಳೂರಿನಿಂದ ಕಾಸರ ಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ಕುಂಬಳೆಯಿಂದ ಹತ್ತಿದ ಮೊಹಮ್ಮದ್ ಸಿರಾಜುದ್ದೀನ್ ಹಾಗೂ ಇನ್ನೋರ್ವ ಮಹಿಳೆ ಯರಿಗೆ ಬಸ್ ನಿಲ್ಲಿಸುತ್ತಿಲ್ಲವೆಂದು  ಆರೋಪಿಸಿ ಚಾಲಕ ಮಲಪ್ಪುರಂ ನಿವಾಸಿ ರಾಜೇಶ್ …

ಜೈಲಿನಲ್ಲಿರುವ ಆರೋಪಿಯಿಂದ ಪತ್ನಿಗೆ ಕೊಲೆ ಬೆದರಿಕೆ: ಆರೋಪಿ ವಿರುದ್ಧ ಮತ್ತೊಂದು ಕೇಸು

ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಕಾಪಾ ಪ್ರಕರಣದ ಆರೋಪಿ ತನ್ನ ಪತ್ನಿಗೆ ಫೋನ್ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪವುಂಟಾಗಿದೆ. ಬೆದರಿಕೆ ಕರೆಯನ್ನು ರೆಕಾರ್ಡ್ ಮಾಡಿ ಪತ್ನಿ ಜೈಲು ಸೂಪರಿಂಟೆಂಡೆಂಟ್‌ಗೆ ಕಳುಹಿಸಿಕೊಟ್ಟಿದ್ದು, ಇದರ ಮುಂದುವರಿಕೆಯಾಗಿ ನಡೆದ ತನಿಖೆಯಲ್ಲಿ ಆರೋಪಿಯ ಕೈಯಲ್ಲಿ ಮೊಬೈಲ್ ಫೋನ್ ಪತ್ತೆಹಚ್ಚಲಾಗಿದೆ. ಜೈಲು ಸೂಪರಿಂಟೆಂಡೆಂಟ್ ಕೆ. ವೇಣು ನೀಡಿದ ದೂರಿನಂತೆ ೧೫ನೇ ನಂಬ್ರ ಸೆಲ್‌ನ ಕಾಪಾ ಪ್ರಕರಣದ ಆರೋಪಿ ಯಾದ ತೃಶೂರು ಪುದುಕ್ಕಾಡ್ ನಾಯರಂಗಾಡಿ ತಾಳೇಕಾಟಿಲ್ ಹೌಸ್‌ನ ಗೋಪ ಕುಮಾರ್ ವಿರುದ್ಧ ಇನ್ನೊಂದು ಕೇಸು …

ಶಬರಿಮಲೆ ಚಿನ್ನವನ್ನು ಕಳವುಗೈಯ್ಯಲು ಅವಕಾಶ ಮಾಡಿಕೊಟ್ಟ ಮಾಜಿ ಎಕ್ಸಿಕ್ಯೂಟಿವ್ ಅಧಿಕಾರಿ ಬಂಧನ

ಪಂದಳಂ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ  ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್ನೋರ್ವನನ್ನು ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ಈಗ ಮೂರಕ್ಕೇರಿದೆ. ಶಬರಿಮಲೆ ಕ್ಷೇತ್ರದ ಈ ಹಿಂದಿನ ಎಕ್ಸಿಕ್ಯೂಟಿವ್ ಆಫೀಸರ್ ಡಿ. ಸುಧೀಶ್ ಕುಮಾರ್ ಬಂಧಿತ ಆರೋಪಿ.  ತನಿಖಾ ತಂಡ ಈತನನ್ನು ನಿನ್ನೆ ಕಸ್ಟಡಿಗೆ ತೆಗೆದು ತಿರುವನಂತಪುರ   ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ   ಆತನನ್ನು ಸತತ ಮೂರು ತಾಸುಗಳ ತನಕ  ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು …

ಕೆ. ಸುರೇಂದ್ರನ್ ನಡೆಸಿದ ಪಾದಯಾತ್ರೆಗಾಗಿ ಪಡೆದ ವಾಹನ ಮರಳಿ ನೀಡದ ಬಗ್ಗೆ ದೂರು ಶಿವಸೇನೆ ನೇತಾರರ ವಿರುದ್ಧ ಕೇಸು

ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ  ಕೆ. ಸುರೇಂದ್ರನ್ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಡೆಸಿದ ಪಾದಯಾತ್ರೆಯ ಅಗತ್ಯಕ್ಕಾಗಿ ಪಡೆದ ವಾಹನವನ್ನು ಮರಳಿ ನೀಡಿಲ್ಲವೆಂಬ ಆರೋಪವುಂ ಟಾಗಿದೆ. ಕಾಞಂಗಾಡ್ ಕುಶಾಲ್ ನಗರದ ಕೆ.ಕೆ. ಸಂತೋಷ್ ಕುಮಾರ್‌ರ ಪತ್ನಿ ಗೀತು ರೈ (42) ನೀಡಿದ ದೂರಿನಂತೆ ಶಿವಸೇನೆ ಎರ್ನಾಕುಳಂ ಜಿಲ್ಲಾಧ್ಯಕ್ಷ ಸುಧೀರ್ ಗೋಪಿ, ಶಿವಸೇನೆ ರಾಜ್ಯಾಧ್ಯಕ್ಷ ಪೇರೂರ್‌ಕಡ ಹರಿಕುಮಾರ್ ಎಂಬಿವರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೂರು ದಾತೆಯ ಪತಿಯ ಮಾಲ ಕತ್ವದಲ್ಲಿರುವ ಟಾಟಾ ಏಸ್ ವಾಹನವನ್ನು ಕೆ. ಸುರೇಂದ್ರನ್ ನಡೆಸಿದ ಪಾದಯಾತ್ರೆಗಾಗಿ …

ನಾಲ್ಕೂವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ನಾಲ್ಕೂವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್‌ಟ್ರಾಕ್ ಸ್ಪೆಷಲ್ (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ಚಂದ್ರಭಾನುರವರು ಜೀವಾವಧಿ ಸಜೆ ಮತ್ತು 3 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲ್ಲಂ ಕಾರಿಚ್ಚಿರದ ಎಸ್. ರಾಜೀವನ್ (55) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೨ ಆಗಸ್ಟ್ ತಿಂಗಳಲ್ಲಿ ನಾಲ್ಕೂವರೆ ವರ್ಷ ಪ್ರಾಯದ ಬಾಲಕಿಗೆ …

ರಾಜ್ಯೋತ್ಸವ ವಿಶೇಷ: ತಮಿಳು ಕ್ಷೌರಿಕನ ಕನ್ನಡಪ್ರೇಮ

ಕಾಸರಗೋಡು: ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಮಾತ್ರ ವಿಜ್ರಂಭಿಸುತ್ತಿರುವ ಕಾಲಘಟ್ಟದಲ್ಲಿ ಹೊರ ರಾಜ್ಯದಿಂದ ಇಲ್ಲಿಗೆ ಬಂದ ಅನ್ಯಭಾಷಾ ಪ್ರೇಮಿಯೊಬ್ಬರ ಭಾಷಾ ಸಾಮರಸ್ಯವು ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಹಿತಾನುಭವ ಮೂಡಿಸುತ್ತಿದೆ. ತಮಿಳುನಾಡಿನ ತಂಜಾವೂರು ತಿರುಚ್ಚಿಯ ಇಳಂಗೋವನ್ ಎಂಬವರು ನಗರದ ಚಂದ್ರಗಿರಿ ಜಂಕ್ಷನ್ ಎಂ.ಜಿ ರಸ್ತೆಯ ಪೆಟ್ರೋಲ್ ಬಂಕ್ ಮತ್ತು ಜೀವ ವಿಮಾ ನಿಗಮದ ಕಚೇರಿ ನಡುವೆ ಇರುವ ಕಟ್ಟಡದಲ್ಲಿ ಆರಂಭಿಸಿರುವ ತಮ್ಮ ಸೆಲೂನ್‌ಗೆ ‘ಕ್ಷೌರದಂಗಡಿ’ ಎಂದು ಅಚ್ಚ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಿರು ವುದು ಕನ್ನಡ ಭಾಷಾ …

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು 20 ವರ್ಷ, 6 ತಿಂಗಳ ಕಠಿಣ ಸಜೆ ಹಾಗೂ 16,000  ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮುಳಿಯಾರು ಪೈಕದ ಕೆ. ನಿತ್ಯಾನಂದ (29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 8 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2023 ಜುಲೈ 21ರಂದು ಆದೂರು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ …