ವಾಹನ ಅಪಘಾತದಲ್ಲಿ ವ್ಯಕ್ತಿಯ ಪಕ್ಕೆಲುಬು ಮುರಿತ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಕುಂಬಳೆ: ವಾಹನ ಅಪಘಾತದಲ್ಲಿ ಪಕ್ಕೆಲುಬು ಮುರಿತಕ್ಕೊಳಗಾದ ವ್ಯಕ್ತಿಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ತಜ್ಞರು  ಅತೀ ಸಾಹಸಿಕ ರೀತಿಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.  ಕರ್ನಾಟಕದ ಪುತ್ತೂರಿನಲ್ಲಿ  ಎರಡು ದಿನಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ ಕುಂಬಳೆ ನಿವಾಸಿಯಾದ 57ರ ಹರೆಯದ ವ್ಯಕ್ತಿಯ ಪಕ್ಕೆಲುಬು ಮುರಿದಿತ್ತು. ಇದರಿಂದ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗೆ ಅತೀ ಸಾಹಸಿಕ ಹಾಗೂ ಸಂಕೀರ್ಣ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ ಪಕ್ಕೆಲುಬನ್ನು ಪೂರ್ವಸ್ಥಿತಿಗೆ ತಲುಪಿಸಲಾಯಿತು.  ಮೂರು ದಿನಗಳೊಳಗೆ ಆಸ್ಪತ್ರೆಯಿಂದ ವ್ಯಕ್ತಿಯನ್ನು ಬಿಡುಗಡೆಗೊಳಿಸಬಹುದೆಂದು ತಿಳಿಸಲಾಗಿದೆ. …

ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ 80ರ ಹರೆಯದ ವ್ಯಕ್ತಿಗೆ ಅತ್ಯಪೂರ್ವ ಅಡ್ರಿನಲ್ ಟ್ಯೂಮರ್ ಶಸ್ತ್ರಚಿಕಿತ್ಸೆ  

ಕಾಸರಗೋಡು: ಹೃದಯದ ವಾಲ್ವ್‌ಗೆ ಉಂಟಾದ ಹಾನಿ ಸಹಿತ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 80ರ ಹರೆಯದ ವ್ಯಕ್ತಿಗೆ ಕಾಸರಗೋಡು ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಅಡ್ರಿನಲಾಕ್ಟಮಿ (ಹೊಟ್ಟೆಯನ್ನು ತೆರೆಯದೆ ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ  ಅಡ್ರಿನಲ್ ಗ್ರಂಥಿ ಹಾಗೂ ಟ್ಯೂಮರ್ ತೆರವುಗೊಳಿಸುವಿಕೆ) ಯಶಸ್ವಿಯಾಗಿ ನಡೆಸಲಾಯಿತು. ಈ ಅತೀ ಸಾಹಸಕರ ಶಸ್ತ್ರಚಿಕಿತ್ಸೆ ಮೂಲಕ ಕಾಸರಗೋಡು ಆರೋಗ್ಯ ರಂಗದಲ್ಲಿ ವೈದ್ಯರ ಸಾಧನೆ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಸಾಬೀತುಗೊಂ ಡಿದೆ.  ರೋಗಿಯ ಕಿಡ್ನಿಯ ಮೇಲ್ಭಾಗದಲ್ಲಿರುವ 12 ಸೆಂಟಿಮೀಟರ್ ವ್ಯಾಪ್ತಿಯ ಹ್ಯೂಮರ್ ತೆರವುಗೊಳಿಸಲು …

ಕೆಲಸದ ಮಧ್ಯೆ ಅಸ್ವಸ್ಥಗೊಂಡ ಕೂಲಿ ಕಾರ್ಮಿಕ ನಿಧನ

ಉಪ್ಪಳ: ಪ್ರತಾಪನಗರ ನಿವಾಸಿ, ಕೂಲಿ ಕಾರ್ಮಿಕ ಸದಾನಂದ (56) ನಿಧನ ಹೊಂದಿದರು. ಮೊನ್ನೆ ಮನೆ ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅಸ್ವಸ್ಥಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು. ಆದರೆ ರಾತ್ರಿ ಮತ್ತೆ ಉಲ್ಬಣಗೊಂಡು ನಿಧನ ಸಂಭವಿಸಿದೆ. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಯತೀಶ್ ಕುಮಾರ್, ನವ್ಯ, ಸೊಸೆ ಸನ್ಮಿತ, ಅಳಿಯ ಕೃಷ್ಣ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೂರ್ತಿಯಾಗುತ್ತಿದೆ ಆರಿಕ್ಕಾಡಿ ಟೋಲ್‌ಗೇಟ್ ನಿರ್ಮಾಣ: ನ್ಯಾಯಾಲಯದಲ್ಲಿ ವಿಚಾರಣೆ ಮತ್ತೆ ಮುಂದೂಡಿಕೆ

ಕುಂಬಳೆ: ನ್ಯಾಯಾಲಯದ ನಿರೀಕ್ಷಣೆ, ಕೇಸು ಜ್ಯಾರಿಯಲ್ಲಿರುವಾಗಲೇ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುವ ಟೋಲ್‌ಗೇಟ್ ಕಾಮಗಾರಿ ಪೂರ್ತಿ ಗೊಳ್ಳುತ್ತಿದೆ. ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿದರೆ ಟೋಲ್‌ಗೇಟ್‌ನ 95 ಶೇಕಡಾ ಕೆಲಸವು ಪೂರ್ತಿಗೊಂಡಿದೆ. ಗೇಟ್‌ನ ಷರತ್ತುಗಳು ಅಡಕವಾದ ಬೋರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಟೋಲ್ ಸಂಗ್ರಹಿಸುವುದಕ್ಕಿರುವ ಕೇಂದ್ರ ಸರಕಾರದ ಅನುಮತಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ. ಅದು ಲಭಿಸಿದ ಕೂಡಲೇ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ. ಹೆದ್ದಾರಿ 66 ಆರಿಕ್ಕಾಡಿಯಲ್ಲಿ ನಿರ್ಮಿಸುವ ಟೋಲ್ ಪ್ಲಾಝಾ ವಿರುದ್ಧ ನ್ಯಾಯಾಲಯ ವಿಚಾರಣೆ ಅಕ್ಟೋಬರ್ …

ಶಬರಿಮಲೆ: ದಿನಂಪ್ರತಿ 70,000 ಮಂದಿಗೆ ದರ್ಶನ ಭಾಗ್ಯ

ಶಬರಿಮಲೆ: ಮಂಡಲ, ಮಕರಜ್ಯೋತಿ ತೀರ್ಥಾಟನೆ ಋತುವಿನಲ್ಲಿ ಶಬರಿಮಲೆ ಕ್ಷೇತ್ರಕ್ಕೆ ಪ್ರತೀ ದಿನ 70,000 ಮಂದಿಗೆ ವರ್ಚುವಲ್ ಕ್ಯೂ ಮೂಲಕ ದರ್ಶನ ನಡೆಸಲು ಅನುಮತಿ ನೀಡಲಾಗುವುದು. ಇದಕ್ಕಿರುವ ಬುಕ್ಕಿಂಗ್ ನವೆಂಬರ್ 1ರಂದು ಆರಂಭಗೊಳ್ಳಲಿದೆ. ಸ್ಪೋಟ್ ಬುಕ್ಕಿಂಗ್ ಮುಂದುವರಿಯಲಿದೆ. ದೇವಸ್ವಂ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಲಕಾಲ ತೀರ್ಥಾಟನೆಗಾಗಿ ನವೆಂಬರ್ 16ರಂದು ಸಂಜೆ 5 ಗಂಟೆಗೆ ಕ್ಷೇತ್ರ ಬಾಗಿಲು ತೆಗೆಯಲಾಗುವುದು.

ಎಡಕ್ಕಾನ ಮಹಾಬಲೇಶ್ವರ ಭಟ್‌ರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು : 2025 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಎಡಕ್ಕಾನ ಮಹಾಬಲೇಶ್ವರ ಭಟ್ ಆಯ್ಕೆಯಾಗಿದ್ದಾರೆ. ದ. ಕ ಜಿಲ್ಲಾಧಿಕಾರಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಘೋಷಿಸಿದ್ದು, ಉಧ್ಯಮ ವಿಭಾಗದಲ್ಲಿ ಮಹಾಬಲೇಶ್ವರ ಭಟ್ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಗೆ ಕಾಸರಗೋಡಿನ ಕನ್ನಡಪರ ಸಂಘಟನೆಗಳು ಸಂತೋಷ ವ್ಯಕ್ತಪಡಿಸಿವೆ. ಇಂದು ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾಡಳಿತ ಪ್ರಶಸ್ತಿ ನೀಡಿ ಗೌರವಿಸಲಿದೆ.ಎಡಕ್ಕಾನ ಮಹಾಬಲೇಶ್ವರ ಭಟ್ ಅಥವಾ ರವಿ ಭಟ್ ಕಾಸರಗೋಡು …