ವಾಹನ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಮೃತ್ಯು: ಚಿಕಿತ್ಸೆ ಲೋಪ ಆರೋಪಿಸಿ ಆಸ್ಪತ್ರೆ ಮುಂದೆ ಬಿಜೆಪಿ ಪ್ರತಿಭಟನೆ
ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರುವಾಡ್‌ನಲ್ಲಿ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಗಾಯಗೊಂಡ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆರಿಕ್ಕಾಡಿ ಪಾರೆಸ್ಥಾನದ ಕೃಷ್ಣ ಬೆಳ್ಚಪ್ಪಾಡರ ಪುತ್ರ ಎನ್.ಹರೀಶ್ ಕುಮಾರ್ (37) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಾರು ಪ್ರಯಾಣಿಕರಾದ ಮಹಿಳೆ ಹಾಗೂ ಪುರುಷ ಕೂಡಾ ಗಾಯ ಗೊಂಡಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತದಿಂದ ಸ್ಕೂಟರ್ ನಜ್ಜುಗು ಜ್ಜಾಗಿದ್ದು, ಕಾರು ಮಗುಚಿಬಿದ್ದಿದೆ. ಸ್ಕೂಟರ್ ಸವಾರನಾದ …