ನಿವೃತ್ತ ಹವೀಲ್ದಾರ್ ನಿಧನ

ಬೆಳ್ಳೂರು: ಇಲ್ಲಿಗೆ ಸಮೀಪದ ಬೆಳೇರಿ ನಿವಾಸಿ, ಭಾರತೀಯ ಸೇನೆ ಯಲ್ಲಿ ಹವೀಲ್ದಾರ್ ಆಗಿ ನಿವೃತ್ತರಾಗಿ ರುವ ಲಕ್ಷ್ಮೀನಾರಾಯಣ ರೈ (66) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಕೆಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಸುಮಾರು 18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ 95-96 ಇಸವಿಯಲ್ಲಿ ಸೇವೆಯಿಂದ ನಿವೃತ್ತರಾ ಗಿದ್ದರು.  ಬಂಟರ ಸಂಘದ ಬೆಳ್ಳೂರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ ನಳಿನಾಕ್ಷಿ, ಮಕ್ಕಳಾದ ಹರ್ಷಿತ್ ರೈ, ಅಕ್ಷತ ಕೆ. ರೈ, ಅಳಿಯ ಅವಿನಾಶ್ ಶೆಟ್ಟಿ, ಸೊಸೆ ಸ್ವಾತಿ …

ಅಸೌಕರ್ಯಗಳಿಂದ ಕಂಗೆಟ್ಟಿರುವ ತಾಲೂಕು ಕಚೇರಿ: ಮಂಜೇಶ್ವರ ತಾಲೂಕು ಕಚೇರಿಯನ್ನು ಉಪಯುಕ್ತ ಕಟ್ಟಡಕ್ಕೆ ಸ್ಥಳಾಂತರಿಸಲು ಒಬಿಸಿ ಮೋರ್ಚಾ ಮಂಡಲ ಸಮಿತಿ ಆಗ್ರಹ

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿ ಕಟ್ಟಡವನ್ನು ಜನರಿಗೆ ಉಪಯು ಕ್ತವಾದ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿ ಆಗ್ರಹಿಸಿದೆ. ಪ್ರಸ್ತುತ ಮಂಜೇಶ್ವರ ತಾಲೂಕು ಕಚೇರಿ ಎರಡನೇ ಮಹಡಿಯಲ್ಲಿರುವುದರಿಂದಾಗಿ ವೃದ್ದರು ಮೆಟ್ಟಿಲು ಹತ್ತಿ ತಲುಪುವುದು ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಈ ಕಚೇರಿ ಉಪ್ಪಳದ ಬಾಡಿಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯಾಚರಿ ಸುತ್ತಿದ್ದು, ಇಲ್ಲಿ ಮೂಲಭೂತ ಸೌಕರ್ಯವೂ ಲಭ್ಯವಿಲ್ಲ. ವೆಳ್ಳರಿಕುಂಡ್, ಮಂಜೇಶ್ವರ ತಾಲೂಕುಗಳನ್ನು ಹಲವು ವರ್ಷಗಳ ಹಿಂದೆ ಒಂದೇ ಬಾರಿ ಸರಕಾರ ಘೋಷಿಸಿದ್ದು, ಆದರೆ ಮಂಜೇಶ್ವರ …

ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಶಿವರಾಮ ಕಾಸರಗೋಡು ಅಭಿನಂದನೆ

ಕಾಸರಗೋಡು: ಕನ್ನಡ ಗ್ರಾಮದಲ್ಲಿ ನಡೆದ ಶಿವರಾಮ ಕಾಸರಗೋಡು 60ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ವತಿಯಿಂದ ಶಿವರಾಮ ಕಾಸರಗೋಡು ಅವರನ್ನು ಅಭಿನಂದಿಸಲಾಯಿತು. ಪರಿಷತ್‌ನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ, ಗಡಿನಾಡು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ್, ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ …

ಎನ್ಯುಮರೇಷನ್ ಫಾರ್ಮ್ ಕನ್ನಡದಲ್ಲಿ ವಿತರಿಸಲು ವಿವಿಧ ಕಡೆಗಳಿಂದ ಹೆಚ್ಚಿದ ಬೇಡಿಕೆ

ಕಾಸರಗೋಡು: ಚುನಾವಣೆಗೆ ಸಂಬಂಧಿಸಿ ಬಿಎಲ್‌ಒಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಷನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಲಭಿಸುತ್ತಿದ್ದು, ಇದನ್ನು ಕನ್ನಡದಲ್ಲಿ ವಿತರಿಸಲು ಆಗ್ರಹ ತೀವ್ರಗೊಂಡಿದೆ. ವಿವಿಧ ಸಂಘಟನೆಗಳು ಕನ್ನಡದಲ್ಲಿ ಫಾರ್ಮ್ ವಿತರಿಸಲು ಆಗ್ರಹಿಸಿದ್ದು ಅಧಿಕಾರಿಗಳ ನಿಲುವನ್ನು ಖಂಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಜನರು ಕನ್ನಡ ಭಾಷೆ ತಿಳಿದವರಾಗಿದ್ದು, ಮಲಯಾಳ ಫಾರ್ಮ್ ಓದಲು, ಬರೆಯಲು ತಿಳಿಯದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಫಾರ್ಮ್ ಭರ್ತಿಗೊಳಿಸುವಾಗ ತಪ್ಪುಗಳು ಸಂಭವಿಸಿದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಮಲೆಯಾಳಂ ಜೊತೆಗೆ ಕನ್ನಡದಲ್ಲೂ ಫಾರ್ಮ್ ಮುದ್ರಿಸಿ ವಿತರಿಸಬೇಕು …

ಶುಚಿತ್ವ ವಲಯದಲ್ಲಿ ಕ್ಲೀನ್ ಕೇರಳ ಕಂಪೆನಿ ಚಟುವಟಿಕೆ ಶ್ಲಾಘನೀಯ- ಎಂ.ಬಿ. ರಾಜೇಶ್

ಕುಂಬಳೆ: ಅನಂತಪುರದಲ್ಲಿ ಕ್ಲೀನ್ ಕೇರಳ ಕಂಪೆನಿ ಲಿಮಿಟೆಡ್‌ನ ಗ್ರೀನ್ ಪಾರ್ಕ್‌ನ್ನು ಸ್ಥಳೀಯಾಡಳಿತ, ಅಬಕಾರಿ ಇಲಾಖೆ ಸಚಿವ ಎಂ.ಬಿ. ರಾಜೇಶ್ ಆನ್‌ಲೈನ್ ಆಗಿ ಉದ್ಘಾಟಿಸಿದರು. ನಾಡಿನ ಶುಚಿತ್ವ ಚಟುವಟಿಕೆಗಳಲ್ಲಿ ಹಸಿರು ಕ್ರಿಯಾ ಸೇನೆ ವಹಿಸುತ್ತಿರುವ ಪಾತ್ರ ಬಹಳ ದೊಡ್ಡದು ಎಂದು ಸಚಿವರು ನುಡಿದರು. ಹಸಿರು ಕ್ರಿಯಾ ಸೇನೆಯ ಚಟುವಟಿಕೆಗಳನ್ನು ಪೂರ್ಣತೆಯಲ್ಲಿ ಕೊಂಡೊಯ್ಯಲು ಕ್ಲೀನ್ ಕೇರಳ ಕಂಪೆನಿ ಪರ್ಯಾಪ್ತವೆಂದು ಸಚಿವರು ನುಡಿದರು. ಹಸಿರು ಕ್ರಿಯಾಸೇನೆಯ ಸಹಾಯ ದೊಂದಿಗೆ ಕ್ಲೀನ್ ಕೇರಳ ಕಂಪೆನಿ ಜಿಲ್ಲೆಯಲ್ಲಿ ಪ್ರತೀ ತಿಂಗಳು ಸಂಗ್ರಹಿಸುವ 400 ಟನ್ …

10ನೇ ತರಗತಿ ತತ್ಸಮಾನ ಪರೀಕ್ಷೆ ನ.8ರಿಂದ

ಕಾಸರಗೋಡು: 10ನೇ ತರಗತಿ ತತ್ಸಮಾನ ಪರೀಕ್ಷೆ ಈ ತಿಂಗಳ 8ರಿಂದ ಆರಂಭಗೊಳ್ಳಲಿದೆ. 420 ಮಂದಿ ಪರೀಕ್ಷೆ ಬರೆಯುವರು. ಸಾರ್ವತ್ರಿಕ ಶಿಕ್ಷಣ ಇಲಾಖೆ ಸಾಕ್ಷರತಾ ಮಿಷನ್ ಮೂಲಕ ನಡೆಸುವ 10ನೇ ತರಗತಿ ತತ್ಸಮಾನದ 18ನೇ ಬ್ಯಾಚ್ನ ಪರೀಕ್ಷೆ ನವೆಂಬರ್ 18ರವರೆಗೆ ಜಿಲ್ಲೆಯ 8 ಶಾಲೆಗಳಲ್ಲಿ ನಡೆಯಲಿದೆ. 109 ಮಂದಿ ಕನ್ನಡ ಮಾಧ್ಯಮದಲ್ಲಿದ್ದಾರೆ.ವೆಸ್ಟ್ ಎಳೇರಿ ಪಂಚಾಯತ್ನ 68ರ ತಂಬಾಯಿ, ಕುಂಬಳೆಯ 67ರ ರಾಮಕೃಷ್ಣನ್, ತೃಕರಿಪುರದ 64ರ ರಾಮಚಂದ್ರನ್, ಹೊಸದುರ್ಗದ 62ರ ಸರಸ್ವತಿ ಈ ಬ್ಯಾಚ್ನಲ್ಲಿ ಅತ್ಯಂತ ಹೆಚ್ಚು ಪ್ರಾಯದ ಕಲಿಕೆದಾರರಾಗಿದ್ದಾರೆ. …

ಶಬರಿಮಲೆ: ಸೇವೆ, ಕೊಠಡಿ ಬುಕ್ಕಿಂಗ್ ಇಂದಿನಿಂದ

ಶಬರಿಮಲೆ: ಮಂಡಲ, ಮಕರ ಜ್ಯೋತಿ ತೀರ್ಥಾಟನೆ ಕಾಲದಲ್ಲಿ ಸನ್ನಿಧಾನದಲ್ಲಿ ಸೇವೆಗಳು ಹಾಗೂ ವಾಸಿಸಲು ಕೊಠಡಿಗಳ ಬುಕ್ಕಿಂಗ್ ಇಂದಿನಿಂದ ಆನ್‌ಲೈನ್ ಮೂಲಕ ಆರಂಭಗೊಂಡಿದೆ.  www.onlinetoldb.com ಮೂಲಕ ಬುಕ್ಕಿಂಗ್ ನಡೆಸಬೇಕಾಗಿದೆ. ಉದಯಾ ಸ್ತಮಾನ ಪೂಜೆ, ಮೆಟ್ಟಿಲುಪೂಜೆ, ಸಹಸ್ರ ಕಲಶ, ಕಳಬಾಭಿಷೇಕ, ಉಷಪೂಜೆ, ಮಧ್ಯಾಹ್ನಪೂಜೆ, ರಾತ್ರಿಪೂಜೆ, ತುಪ್ಪಾಭಿಷೇಕ ಮೊದಲಾದ ಸೇವೆಗಳನ್ನು ದರ್ಶನಕ್ಕಿರುವ ವರ್ಚುವಲ್ ಕ್ಯೂ ಜೊತೆ ಬುಕ್ಕಿಂಗ್ ನಡೆಸಬಹುದು. 5 ವರ್ಷಕ್ಕಿಂತ ಕೆಳಪ್ರಾಯದವರಿಗೆ ಬುಕ್ಕಿಂಗ್ ಅಗತ್ಯವಿಲ್ಲ. ವರ್ಚುವಲ್ ಕ್ಯೂ ಬುಕ್ಕಿಂಗ್ https://sabarimalaonline.org ಎಂಬ ವೆಬ್‌ಸೈಟ್ ಮೂಲಕ ನಡೆಸಬೇಕಾಗಿದೆ.

ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ: ಹಳೆ ವಿದ್ಯಾರ್ಥಿ ಸಂಘದಿಂದ ಸ್ಮರಣಿಕೆ, ಟ್ರೋಫಿ ಹಸ್ತಾಂತರ

ಕಾಸರಗೋಡು: ಕಾಸರಗೋಡು ಜಿಎಚ್‌ಎಸ್‌ಎಸ್‌ನಲ್ಲಿ ನಡೆಯುತ್ತಿರುವ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವದ ವಿಜೇತರಿಗಿರುವ ಸ್ಮರಣಿಕೆ ಹಾಗೂ ಟ್ರೋಫಿಗಳನ್ನು ಶಾಲೆಯ ಪೂರ್ವ ವಿದ್ಯಾರ್ಥಿ ಸಂಘಟನೆ ಹಸ್ತಾಂತರಿಸಿದೆ. ಸ್ಪರ್ಧಾ ವಿಜೇತರಾದ ಎಲ್ಲಾ ಮಕ್ಕಳಿಗೂ ಸ್ಮರಣಿಕೆ, ಜನರಲ್ ವಿಭಾಗದಲ್ಲೂ ಅರೆಬಿಕ್, ಸಂಸ್ಕೃತ ಕಲೋತ್ಸವ ಚಾಂಪ್ಯನ್‌ರಿಗಿರುವ ರೋಲಿಂಗ್ ಟ್ರೋಫಿಯನ್ನು ಹಳೆ ವಿದ್ಯಾರ್ಥಿ ಸಂಘಟನೆ ಕೊಡುಗೆಯಾಗಿ ನೀಡಿದೆ. ಜನರಲ್ ವಿಭಾಗದ ರೋಲಿಂಗ್ ಟ್ರೋಫಿಯನ್ನು ಸಂಘಟನೆಯ ಅಧ್ಯಕ್ಷ, ನಗರಸಭಾಧ್ಯಕ್ಷನಾಗಿದ್ದ ಟಿ.ಇ. ಅಬ್ದುಲ್ಲರ ಸ್ಮರಣೆಗಾಗಿ ನೀಡಲಾಗುತ್ತಿದೆ. ಸಂಘಟನೆಯ ಅಧ್ಯಕ್ಷ ಕೆ. ಜಯಪ್ರಕಾಶ್, ಸ್ವಾಗತ ಸಮಿತಿ ಸಂಚಾಲಕ, ಪ್ರಾಂಶುಪಾಲ ಪಿ.ಕೆ. …