ಎಸ್‌ಐಆರ್ ಪರಿಷ್ಕರಣೆ: ಕನ್ನಡ ಭಾಷೆಯಲ್ಲೂ  ಫಾರ್ಮ್ ವಿತರಣೆಗೆ ಅನುಕೂಲ ತೀರ್ಮಾನ ಉಂಟಾಗಲಿದೆ-ಬಿಜೆಪಿ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಮತದಾರರ ಯಾದಿಯ  ಪ್ರತ್ಯೇಕ ಪರಿಷ್ಕರಣೆ ಆರಂಭಿಸಿರುವಂತೆ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಎನ್ಯುಮರೇಶನ್, ಫಾರ್ಮ್ 6 ಸಹಿತ ಎಲ್ಲಾ ಅರ್ಜಿ ಫಾರ್ಮ್‌ಗಳು, ಸೂಚನೆಗಳನ್ನು ಕನ್ನಡ ಭಾಷೆಯಲ್ಲೂ ಲಭ್ಯಗೊಳಿ ಬೇಕೆಂಬ ಬೇಡಿಕೆಯೊಂದಿಗೆ ಚುನಾವಣಾ ಆಯೋಗವನ್ನು ಸಮೀಪಿಸಿರುವು ದಾಗಿಯೂ, ಅನುಕೂಲ ತೀರ್ಮಾನ ಉಂಟಾಗ ಬಹುದೆಂದು ಸಂಬಂಧ ಪಟ್ಟ ಅಧಿಕಾರಿಗಳಿಂದ ಖಚಿತತೆ ಲಭಿಸಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಯಾದಿ ಸಹಿತ ಕನ್ನಡ, ಮಲೆಯಾಳ ಭಾಷೆಗಳಲ್ಲಿ ಲಭ್ಯಗೊಳಿಸಬೇಕೆಂದು ರಾಷ್ಟ್ರೀಯ ಚುನಾವಣಾ ಆಯೋಗದ …

ರಾಷ್ಟ್ರೀಯ ತೈಕೋಂಡಾದಲ್ಲಿ ಕಾಸರಗೋಡಿನ ವಿದ್ಯಾರ್ಥಿನಿಗೆ ಚಿನ್ನದ ಪದಕ

ಕಾಸರಗೋಡು: ಅಕ್ಟೋಬರ್ 28ರಿಂದ ನವಂಬರ್ 2ರ ವರೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ತೈಕೋಂಡಾ ಚಾಂಪ್ಯನ್‌ಶಿಪ್‌ನಲ್ಲಿ ವಿದ್ಯಾನಗರ ಪಡುವಡ್ಕದ ಎ.ಎಂ. ಫಾತಿಮಳಿಗೆ ಚಿನ್ನದ ಪದಕ ಲಭಿಸಿದೆ. ಈ ಬಾರಿ ಕೇರಳ ತೈಕೋಂಡಾ ತಂಡಕ್ಕೆ ಸಮಗ್ರ ಪ್ರಶಸ್ತಿ ಲಭಿಸಿರುತ್ತದೆ. ತೈಕೋಂಡಾ ದಲ್ಲಿ ರಾಜ್ಯಮಟ್ಟದಲ್ಲಿ ನಿರಂತರ ೬ನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಫಾತಿಮ ಈ ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದಳು. ರಾಜ್ಯದಲ್ಲಿ ಚಿನ್ನದ ಪದಕ ಗಳಿ ಸಿದ ಮೊದಲ ಎರಡು ಬಾರಿಯೂ ಕೊರೋನ ರೋಗ …

ನಿಷೇಧಿತ ಉತ್ಪನ್ನಗಳನ್ನು ಬಚ್ಚಿಟ್ಟ, ತ್ಯಾಜ್ಯ ಉಪೇಕ್ಷಿಸಿದ  ವ್ಯಕ್ತಿಗಳಿಗೆ ದಂಡ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ವಿವಿಧ ಕಾನೂನು ಉಲ್ಲಂಘನೆಗಳಿಗೆ ದಂಡ ಹೇರಲಾಗಿದೆ. ನಿಷೇಧಿತ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ಗಳನ್ನು ಗೋದಾಮಿನಲ್ಲಿ ಬಚ್ಚಿಟ್ಟಿರುವ ಕುಂಬಳೆ ಆರಿಕ್ಕಾಡಿಯ ಹೈಪರ್ ಮಾರ್ಕೆಟ್ ಮಾಲಕನಿಗೆ 10 ಸಾವಿರ ರೂ. ದಂಡ ಹೇರಿ ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮೊಗ್ರಾಲ್ ಹೊಳೆ ಸಮೀಪದ ರಸ್ತೆ ಬದಿ ರಾಶಿ ಹಾಕಿರುವ ತ್ಯಾಜ್ಯಗಳಿಂದ ಲಭಿಸಿದ  ಪುರಾವೆ ಪ್ರಕಾರ ಹೈಪರ್ ಮಾರ್ಕೆಟ್, ಕಾಸರಗೋಡು ರೆಸ್ಟೋರೆಂಟ್ ಮಾಲಕರಿಗೆ 7 ಸಾವಿರ ರೂ. ದಂಡ ಹೇರಲಾಗಿದೆ. ಹೋಟೆ …

ಕಾಸರಗೋಡು ರೈಲ್ವೇ ಠಾಣೆಯ ಇಬ್ಬರಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಪ್ರದಾನ

ಕಾಸರಗೋಡು: ಸೇವೆಯ ಹಾಗೂ ಸಮರ್ಪಣೆಯ ಮೆರುಗಿನಲ್ಲಿ  ರಾಜ್ಯ ಮುಖ್ಯಮಂತ್ರಿಯ ಈ ವರ್ಷದ ಪೊಲೀಸ್ ಪಡೆ ಕಾಸರಗೋಡು ರೈಲ್ವೇ ಪೊಲೀಸ್ ಸ್ಟೇಶನ್‌ನ ಇಬ್ಬರು ಅಧಿಕಾರಿಗಳಿಗೆ ಲಭಿಸಿದೆ. ಎಸ್‌ಎಪಿ ಕ್ಯಾಂಪ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎಸ್‌ಎಚ್‌ಒ ಎಂ. ರಜಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಎಂ.ವಿ. ಪ್ರಕಾಶನ್ ಎಂಬಿವರಿಗೆ ಪೊಲೀಸ್ ಪದಕವನ್ನು ಮುಖ್ಯಮಂತ್ರಿ  ಪಿಣರಾಯಿ ವಿಜಯನ್  ಪ್ರದಾನ ಮಾಡಿದರು. ಕೇರಳ ರೈಲ್ವೇಯ ಮೂರು ಮಂದಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಲಭಿಸಿದೆ. ಅದರಲ್ಲಿ ಇಬ್ಬರು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ. ಠಾಣೆಯಲ್ಲಿ ಕಳೆದ …

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಮುದೆ ಘಟಕ ವಾರ್ಷಿಕ ಮಹಾಸಭೆ

ಪೆರ್ಮುದೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಮುದೆ ಘಟಕದ ವಾರ್ಷಿಕ ಮಹಾಸಭೆ ಪೆರ್ಮುದೆ ಚರ್ಚ್ ಹಾಲ್‌ನಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಅಹಮದ್ ಶರೀಫ್ ಉದ್ಘಾಟಿಸಿದರು. ಪೆರ್ಮುದೆ ಘಟಕದ ಅಧ್ಯಕ್ಷ ಎ ವೈ ಅಬ್ಬಾಸ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಜೆ ಸಜಿ ವ್ಯಾಪಾರಿಗಳಿಗಿರುವ ಕ್ಷೇಮ ಯೋಜನೆಯ ವಿವರಗಳನ್ನು ನೀಡಿದರು. ಕಾರ್ಯದರ್ಶಿ ದಿನೇಶ್ ಶುಭ ಹಾರೈಸಿದರು. ಯಾವುದೇ ಪರವಾನಿಗೆ ಇಲ್ಲದೆ ಫುಟ್ಪಾತ್ನಲ್ಲಿ ನಡೆಯುವ ಅನಧಿಕೃತ ವ್ಯಾಪಾರ ದಿಂದಾಗಿ ಅಧಿಕೃತ ವ್ಯಾಪಾರಿಗಳು ತೊಂದರೆ ಅನುಭವಿಸುವುದರೊಂ …