ಉಪ್ಪಳದಲ್ಲಿ ಗಲ್ಫ್ ಉದ್ಯೋಗಿ ಮನೆಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಹೊಸ ತಿರುವು: ಗುಂಡು ಹಾರಿಸಿದ್ದು ಮನೆಯೊಡೆಯನ 14ರ ಹರೆಯದ ಪುತ್ರ
ಉಪ್ಪಳ: ಉಪ್ಪಳದಲ್ಲಿ ಗಲ್ಫ್ ಉದ್ಯೋಗಿಯ ಮನೆಗೆ ಗುಂಡು ಹಾರಿಸಲಾಯಿತೆಂಬ ಪ್ರಕರಣಕ್ಕೆ ಹೊಸ ತಿರುವು ಮೂಡಿದೆ. ಗುಂಡು ಹಾರಿಸಿರುವುದು ಮನೆ ಮಾಲಕನ ೧೪ರ ಹರೆಯದ ಪುತ್ರನಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಇದರಿಂದ ನಾಗರಿಕರು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಆತಂಕ ದೂರವಾಗಿದೆ. ನಿನ್ನೆ ಸಂಜೆ ಪೊಲೀಸರು ನಡೆಸಿದ ತನಿಖೆ ವೇಳೆ ಬಾಲಕ ಘಟನೆಯ ಸತ್ಯಾವಸ್ಥೆಯನ್ನು ಬಹಿರಂಗಪಡಿಸಿ ದ್ದಾನೆ. ಗುಂಡು ಹಾರಿಸಲು ಬಳಸಿದ ಏರ್‌ಗನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಸಂಜೆ ಮನೆಗೆ ಗುಂಡು ಹಾರಿಸಿರುವುದಾಗಿ ದೂರು ಕೇಳಿಬಂದಿತ್ತು. ಘಟನೆ …