ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಮುಂದೂಡಿರುವುದಾಗಿ ಜಿಲ್ಲಾಧಿಕಾರಿ ಭರವಸೆ- ಶಾಸಕ

ಕುಂಬಳೆ: ತಲಪಾಡಿ- ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ಇಂದಿನಿಂದ ವಾಹನಗಳಿಂದ ಟೋಲ್ ಸಂಗ್ರಹ ಆರಂಭಿಸುವುದರ ವಿರುದ್ಧ ತೀವ್ರ ಪ್ರತಿಭಟನೆ ಕೇಳಿ ಬಂದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಮುಂದೂಡಿರು ವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಕುಂಬಳೆಯಲ್ಲಿ ಟೋಲ್ ಪ್ಲಾಜಾ ಮಂಜೂರು ಮಾಡಿರುವುದರ ವಿರುದ್ಧ ಕ್ರಿಯಾ ಸಮಿತಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ನ.೧೪ರಂದು ಅಂತಿಮ ತೀರ್ಪು ಬರುವವರೆಗೆ ಟೋಲ್ ಸಂಗ್ರಹ ನಡೆಸುವುದಿಲ್ಲವೆಂದು ಜಿಲ್ಲಾಧಿಕಾರಿ …

ಕುಂಬಳೆ ಪಂಚಾಯತ್ನ 13 ವಾರ್ಡ್ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕುಂಬಳೆ: ಮುಂದಿನ ತಿಂಗಳ 11ರಂದು ನಡೆಯಲಿರುವ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್ನ 24 ವಾರ್ಡ್ಗಳಲ್ಲಿ ಮೊದಲ ಹಂತದ 13 ವಾರ್ಡ್ಗಳ ಬಿಜೆಪಿ ಅಭ್ಯರ್ಥಿ ಗಳ ಯಾದಿಯನ್ನು ಕುಂಬಳೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಬಿಡುಗಡೆಗೊಳಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಕುಂಬಳೆ ಪಂ ಚಾಯತ್ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, …

ಅಣಂಗೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಿಫ್ಟ್ ನಿರ್ಮಾಣಕ್ಕೆ ಚಾಲನೆ

ಕಾಸರಗೋಡು:  ನಗರಸಭೆಯ ಅಧೀನದಲ್ಲಿರುವ ಅಣಂಗೂರು ಆಯುರ್ವೇದ ಆಸ್ಪತ್ರೆಯಲ್ಲಿ ಲಿಫ್ಟ್ ಸೌಕರ್ಯ ಸಿದ್ಧವಾಗುತ್ತಿದೆ. ಇದರಿಂದಾಗಿ ರೋಗಿಗಳು ಸಹಿತದ ಆಸ್ಪತ್ರೆಗೆ ತಲುಪುವವರಿಗೆ ಮೇಲಿನ ಮಹಡಿಗೆ ಹೋಗಲು ಇರುವ ಸಮಸ್ಯೆಗೆ ಪರಿಹಾರವಾಗಲಿದೆ. ಲಿಫ್ಟ್ ನಿರ್ಮಾಣ ಕಾಮಗಾರಿಯ ಉದ್ಘಾಟ ನೆಯನ್ನು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ನಿರ್ವಹಿಸದರು. ಕಾಮಗಾರಿ ಶೀಘ್ರವೇ ಪೂರ್ತಿಗೊಳಿಸಲಾಗುವು ದೆಂದು ಆಸ್ಪತ್ರೆಯಲ್ಲಿ ಇನ್ನಷ್ಟು ಹೆಚ್ಚಿನ ಸೌಕರ್ಯಗಳನ್ನು ಏರ್ಪಡಿಸಲಾಗು ವುದೆಂದು ಅಧ್ಯಕ್ಷರು ಈ ವೇಳೆ ನುಡಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದರು. ಮುಖ್ಯ ವೈದ್ಯಾಧಿಕಾರಿ ಸ್ವಪ್ನ, …

ಸೋಂಕಾಲು ಜಂಕ್ಷನ್‌ನಲ್ಲಿ ಕುಸಿದುಬಿದ್ದ ಸ್ಲ್ಯಾಬ್: ಸಂಚಾರಕ್ಕೆ ಆತಂಕ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಪೇಟೆ ಬಸ್ ನಿಲ್ದಾಣ ಬಳಿ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಸ್ಥಿತಿಯಲ್ಲಿದ್ದು, ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಈ ಪರಿಸರ ದಲ್ಲಿ  ತಿಂಗಳ ಹಿಂದೆ ವಾಹನ ವೊಂದು ಸ್ಲ್ಯಾಬ್‌ನ ಮೇಲೆ ಸಂಚರಿಸಿರುವುದೇ  ಸ್ಲ್ಯಾಬ್ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.  ದಿನನಿತ್ಯ ಮಕ್ಕಳ ಸಹಿತ  ಹಲವಾರು ಮಂದಿ ಈ ಪರಿಸರದಲ್ಲೇ ಬಸ್ ತಂಗು ದಾಣಕ್ಕೆ ತೆರಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ರಾತ್ರಿ ಕಾಲದಲ್ಲಿ ಹೊಂಡ ಗಮನಕ್ಕೆ ಬಾರದೆ ಬೀಳುವ …

ಕನ್ನಡ ರಾಜ್ಯೋತ್ಸವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ

ಕಾಸರಗೋಡು: ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯಸಾಂಸ್ಕೃತಿಕ ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು.  ಮಧುಲತಾ ಪುತ್ತೂರು, ದಿವಾಕರ ಕಾಸರಗೋಡು ಅವರಿಂದ ಗಾನ ವೈಭವ ನಡೆಯಿತು. ಡಾ. ವಾಣಿಶ್ರೀ ಪ್ರಸ್ತುತಪಡಿಸಿದರು.  ನೃತ್ಯದಲ್ಲಿ ವಿಶ್ವದಾಖಲೆ ಮಾಡಿದ ಕಲಾವಿದೆ  ರೆಮೋನ ಉದ್ಘಾಟಿಸಿದರು. ಸಂಸ್ಥೆಯ ಕಲಾವಿದರು ವಿವಿಧ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. ಈ ವೇಳೆ ಭಾಗವಹಿಸಿದ ಕಲಾವಿದರಿಗೆ ರಾಮ ನಾಥ ಸಾಂಸ್ಕೃತಿಕ …

ಕೇರಳ-ಕೇಂದ್ರ ವಿವಿಯಲ್ಲಿ 923 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪೆರಿಯ: ಕೇರಳ- ಕೇಂದ್ರ ವಿವಿಯಲ್ಲಿ 9ನೇ ಪದವಿ ಪ್ರದಾನ ಸಮ್ಮೇಳನ ಜರಗಿದ್ದು, ಡಾ. ಎನ್. ಕಲೈಶೆಲ್ವಿ ಪ್ರಧಾನ ಭಾಷಣ ಮಾಡಿದರು. 2000ದಷ್ಟು ಮಂದಿ ಭಾಗವಹಿಸಿದ ಕಾರ್ಯಕ್ರಮದಲ್ಲಿ 2025ರಲ್ಲಿ ಅಧ್ಯಯನ ಪೂರ್ತಿಗೊಳಿಸಿದ 923 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. 36 ಮಂದಿಗೆ ಪದವಿ, 771 ಮಂದಿಗೆ ಸ್ನಾತಕೋತ್ತರ ಪದವಿ, 36 ಮಂದಿಗೆ ಪಿಎಚ್ಡಿ, 80 ಮಂದಿ ಪಿಜಿ ಡಿಪ್ಲೊಮಾ ಪದವಿ ಪಡೆದರು. ಇದರಲ್ಲಿ 750 ಮಂದಿ ನೇರವಾಗಿ ಭಾಗವಹಿಸಲು ನೋಂದಾಯಿಸಿದ್ದರು. ವಿವಿಧ ಅಧ್ಯಯನ ಇಲಾಖೆಗಳಲ್ಲಿ ಉನ್ನತ ಜಯಗಳಿಸಿದ ವಿದ್ಯಾರ್ಥಿಗಳಿಗೆ …

ಸೇವಾ ಭಾರತಿಯಿಂದ ರಕ್ತದಾನ ಶಿಬಿರ

ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಇದರ ಆಶ್ರಯದಲ್ಲಿ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ರಕ್ತದಾನ ಶಿಬಿರ ಜರಗಿತು. ಸೇವಾ ಭಾರತಿ ಅಧ್ಯಕ್ಷ ಸದಾಶಿವ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರೈ ಸ್ವಾಗತಿಸಿದರು. ಸೀತಾರಾಮ ಗುರುಸ್ವಾಮಿ, ಉದಯ ಭಟ್ ಕೋರಿಕ್ಕಾರು, ಮುದ್ದುಮಂದಿರದ ವ್ಯವಸ್ಥಾಪಕಿ ಶ್ಯಾಮಲಾ ಎಸ್.ಎನ್.ಭಟ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾಂತಾ ಕುಮಾರಿ, ಬ್ಲಡ್ ಬ್ಯಾಂಕ್‌ನ ಡಾ| ಸೌಮ್ಯ, ಉಷಾ ಪಳ್ಳತ್ತಡ್ಕ, ಸೇವಾ ಭಾರತಿ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ಮಾತನಾಡಿದರು. …