ಮನೆಯ ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ ದ್ವೇಷ: 50 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್ ನಾಶಪಡಿಸಿ ಯುವಕನಿಂದ ಪ್ರತಿಕಾರ
ಕಾಸರಗೋಡು: ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಫ್ಯೂಸ್ ತೆಗೆದ ಕೆಎಸ್‌ಇಬಿಗೆ ವಿಚಿತ್ರವಾದ ತಿರುಗೇಟು ಯುವಕ ನೀಡಿದ್ದಾನೆ. ಕಾಸರಗೋಡು ನಗರದ ವಿವಿಧ ಭಾಗಗಳ ಫ್ಯೂಸ್ ತೆಗೆದು ಯುವಕ ಇದಕ್ಕೆ ಪ್ರತಿಕಾರ ನೀಡಿದ್ದಾನೆ. ಘಟನೆಯಲ್ಲಿ ಚೂರಿ ನಿವಾಸಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ನೆಲ್ಲಿಕುಂಜೆ, ಕಾಸರಗೋಡು ಸೆಕ್ಷನ್‌ಗಳ ಫ್ಯೂಸ್‌ಗಳನ್ನು ಈತ ತೆಗೆದಿದ್ದಾನೆ. ವಿದ್ಯುತ್ ಬಿಲ್ ಪಾವತಿಸದಿರುವುದಕ್ಕೆ ಮನೆಯ ಸಂಪರ್ಕವನ್ನು ಕೆಎಸ್‌ಇಬಿ ವಿಚ್ಛೇಧಿಸಿದ ದ್ವೇಷದಿಂದ ನಗರದ 50 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್ ಯುವಕ ಹಾನಿಗೊಳಿಸಿದ್ದಾನೆ. ಇದರಿಂದಾಗಿ ವ್ಯಾಪಾರ ಸಂಸ್ಥೆಗಳು ಸಹಿತದ 8000ಕ್ಕೂ ಅಧಿಕ ಫಲಾನುಭವಿಗಳು ಎರಡು …