ಮೂಸೋಡಿ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಬೀಳುವ ಸ್ಥಿತಿಯಲ್ಲಿ ಮರದ ರೆಂಬೆಗಳು: ಸ್ಥಳೀಯರಲ್ಲಿ ಭೀತಿ

ಉಪ್ಪಳ: ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳು ಯಾವುದೇ ಕ್ಷಣ ವಿದ್ಯುತ್ ತಂತಿ ಮೇಲೆ ಮುರಿದು ಬೀಳುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮೂಸೋಡಿ ರಸ್ತೆಯಲ್ಲಿ ಅಪಾಯಕಾರಿ ಮರಗಳಿಂದ ಆತಂಕ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ಬೃಹತ್ ಮರಗಳು, ತೆಂಗಿನ ಮರಗಳು ವಿದ್ಯುತ್ ತಂತಿ ಮೇಲೆ ಭಾಗಿಕೊಂಡಿವೆ. ಪ್ರಮುಖ ವಿದ್ಯುತ್ ತಂತಿಗಳು ಮನೆಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮರಗಳ ರೆಂಬೆಗಳು ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಮುರಿದು ಬಿದ್ದರೆ …

ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ

ಕುಂಬಳೆ: ಕೇರಳ ಇಲೆಕ್ಟ್ರಿಕಲ್ ವಯರ್‌ಮ್ಯಾನ್ ಆಂಡ್ ಸೂಪರ್‌ವೈಸರ್ಸ್ ಅಸೋಸಿಯೇಶನ್ ರಾಜ್ಯ ಸಮ್ಮೇಳನದಂಗವಾಗಿ ನಡೆಯುವ ಕಾಸರಗೋಡು ಜಿಲ್ಲಾ ಸಮ್ಮೇಳನ ಈ ತಿಂಗಳ ೧೭ರಂದು ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂಗವಾಗಿ ಮೆರವಣಿಗೆ, ಪ್ರತಿನಿಧಿ ಸಮ್ಮೇಳನ, ವಯರಿಂಗ್, ಪ್ಲಂಬಿಂಗ್ ಉತ್ಪನ್ನ ಪ್ರದರ್ಶನ, ಸಾಂತ್ವನ ಸಹಾಯ ವಿತರಣೆ ನಡೆಯಲಿದೆ. ಪ್ರತಿನಿಧಿ ಸಮ್ಮೇಳನವನ್ನು ರಾಜ್ಯ ಅಧ್ಯಕ್ಷ ಪಿ.ವಿ. ರಾಜೇಶ್ ಉದ್ಘಾಟಿಸುವರು.   ಜಿಲ್ಲಾಧ್ಯಕ್ಷ ರಾಜು ಕಪ್ಪಣಕ್ಕಾಲ್ ಅಧ್ಯಕ್ಷತೆ ವಹಿಸುವರು. ರಾಜ್ಯ, ಜಿಲ್ಲಾ ಮುಖಂಡರು ಭಾಗವಹಿಸುವರು. ರಾಜ್ಯ ಅಸಿಸ್ಟೆಂಟ್ …

ಚೇವಾರು, ಕುಳೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಪೈವಳಿಕೆ: ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರಗಿತು. ಪಿಟಿಎ ಅಧ್ಯಕ್ಷ ಅಬ್ದುಲ್ ಅಸೀಸ್ ಚೇವಾರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ರಾಜೇಶ್ವರಿ ಶುಭ ಕೋರಿದರು. ಉಪಜಿಲ್ಲಾ ಮಟ್ಟದ ವಿದ್ಯಾರಂಗ, ವಿಜ್ಞಾನೋತ್ಸವ, ಕ್ರೀಡಾಕೂಟ , ಕಲೋತ್ಸವಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು. ರವಿಕುಮಾರ್ ಸ್ವಾಗತಿಸಿ, ಪ್ರಸಾದ್ ರೈ ವಂದಿಸಿದರು. ರಾಜೇಶ್ವರಿ ಟೀಚರ್ ಸಿಹಿ ಹಂಚಿಸಿದರು. ಪ್ರಮೀಳಾ ಡಿ.ಎನ್., ಗೀತಾಂಜಲಿ, ಸಾತ್ವಿಕ್ ಎನ್., ಹಾರೀಸ್ ಟಿ., ಫಾಯಸ್, …