ಟ್ರಾನ್ಸ್‌ಫಾರ್ಮರ್‌ಗಳಿಂದ ಫ್ಯೂಸ್ ಕಿತ್ತೆಸೆದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ವಿದ್ಯುತ್ ಬಿಲ್‌ನ ಮೊತ್ತ ಪಾವತಿಸದ ಕಾರಣದಿಂದ ಮನೆಯ ವಿದ್ಯುತ್ ಸಂಪರ್ಕವನ್ನು ವಿದ್ಯುನ್ಮಂಡಳಿಯವರು ವಿಚ್ಛೇಧಿಸಿದ ದ್ವೇಷದಿಂದ ಟ್ರಾನ್ಸ್ ಫಾರ್ಮರ್‌ಗಳ ಫ್ಯೂಸ್‌ಗಳನ್ನು ಕಳಚಿ ತೆಗೆದು ಎಸೆದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಸೂರ್ಲು ಹೈದ್ರೋಸ್ ಜುಮಾ ಮಸೀದಿ ಬಳಿಯ  ಪಿ.ಎಂ. ಮುಹಮ್ಮದ್ ಮುನಾವರ್ (35) ಬಂಧಿತ ಆರೋಪಿಯಾಗಿದ್ದಾನೆ. ಕಾಸರಗೋಡು ಠಾಣೆ  ಎಸ್‌ಐ ಕೆ. ರಾಜು ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿದ್ಯುನ್ಮಂಡಳಿಯ ನೆಲ್ಲಿಕುಂಜೆ ಮತ್ತು ಕಾಸರಗೋಡು ಸೆಕ್ಷನ್‌ಗಳಿಗೊಳಪಟ್ಟ 24 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳ 170ಕ್ಕೂ ಹೆಚ್ಚು …

ಮುಟ್ಟಂ ರಾ. ಹೆದ್ದಾರಿಯಲ್ಲಿ ವಾಹನ ಅಪಘಾತ: ಯುವತಿ ಮೃತ್ಯು; ಪತಿ, ಮಗು ಸಹಿತ ನಾಲ್ಕು ಮಂದಿಗೆ ಗಾಯ

ಕುಂಬಳೆ: ಬಂದ್ಯೋಡು ಬಳಿಯ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಯುವತಿಯ ಪತಿ, ಮಗು ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಫಾತಿಮತ್ ಮಿರ್ಸಾನತ್ತ್ (28) ಮೃತಪಟ್ಟ ದುರ್ದೈವಿ. ಇವರ ಪತಿ ಹುಸೈನ್ ಸಅದಿ (35), ಪುತ್ರ ಶಾಹಿಂ ಅಬ್ದುಲ್ಲ (3), ಹುಸೈನ್ ಸ ಅದಿಯ ಸಹೋದರಿಯರಾದ ಜುಮಾನ, ಜಕಿಯ ಎಂಬಿವರು ಗಾಯ ಗೊಂಡಿ ದ್ದು   ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ  ಹುಸೈನ್ …

ಎಸ್.ಐ.ಆರ್: ಅಪರಿಮಿತ ಕೆಲಸದ ಹೊರೆ ಆರೋಪ: ಬಿಎಲ್‌ಒ ಆತ್ಮಹತ್ಯೆ ; ಕೆಲಸ ಬಹಿಷ್ಕರಿಸಿ ಬಿಎಲ್‌ಒಗಳಿಂದ ರಾಜ್ಯಾದ್ಯಂತ ಪ್ರತಿಭಟನೆ

ಕಾಸರಗೋಡು: ಮತಪಟ್ಟಿಯ  ತೀವ್ರ  ಪರಿಷ್ಕರಣೆಗೆ ಸಂಬಂಧಿಸಿದ  (ಎಸ್‌ಐಆರ್)ಗೆ ಸಂಬಧಿಸಿದ ಅಪರಿಮಿತ ಕೆಲಸದ ಹೊರೆಯಿಂದ ಮಾಸಿಕ ಒತ್ತಡದಲ್ಲಿ ಸಿಲುಕಿ ಪಯ್ಯನ್ನೂರಿನಲ್ಲಿ ಬೂತ್ ಲೆವೆಲ್ ಆಫೀಸರ್ (ಬಿಎಲ್‌ಒ) ಅನೀಶ್ ಜೋರ್ಜ್ (44) ಎಂಬವರು ಆತ್ಮಹತ್ಯೆಗೈಯ್ಯಲು ಕಾರಣವಾದ ಹಿನ್ನೆಲೆಯನ್ನು ಪ್ರತಿಭಟಿಸಿ ಆಡಳಿತ ಮತ್ತು ವಿರೋಧ ಪಕ್ಷ ಅನುಕೂಲಕರ  ಸರಕಾರಿ ಸಿಬ್ಬಂದಿಗಳ ಸಂಘಟನೆಗೊಳಪಟ್ಟ ಬಿಎಲ್‌ಒಗಳು ಇಂದು ತಮ್ಮ ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದೆ. ವಾಮಪಕ್ಷಗಳ ಅನುಕೂಲಕರ ಸಂಘಟನೆಯಾದ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ …

ಮಧೂರು ನಿವಾಸಿ ಪ್ರಾಂಶುಪಾಲ ನಿಧನ

ಮಧೂರು: ಇಲ್ಲಿನ ಚೇನೆಕ್ಕೋ ಡು ನಿವಾಸಿಯೂ, ಪುತ್ತೂರು ವಿವೇಕಾನಂದ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ನಾಯ್ಕ್ (57) ನಿಧನಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿ ಸಿದೆ. ಮೃತದೇಹವನ್ನು ಚೇನಕ್ಕೋಡ್‌ನ  ಮನೆಗೆ  ತಲುಪಿಸಲಾಗಿದೆ. ದಿ| ರಾಮಯ್ಯ ನಾಯ್ಕ್ ಬದಿಮನೆ ಅವರ ಪುತ್ರನಾದ ಮೃತರು ತಾಯಿ ಸುಂದರಿ, ಪತ್ನಿ ಆಶಾ (ಅಧ್ಯಾಪಿಕೆ, ಜಿಎಚ್ ಎಸ್ ಎಡ ನೀರು), ಪುತ್ರ ಡಾ| ವಿಷ್ಣು ಕೀರ್ತಿ, ಸಹೋದರ ಸಂತೋಷ್ ನಾಯ್ಕ್ ಹಾಗೂ …

ತೆಂಗಿನಮರದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ಮನೆ ಹಿತ್ತಿಲಿನಲ್ಲಿರುವ  ತೆಂಗಿನ ಮರದಿಂದ  ಕಾಯಿಕೊಯ್ಯುತ್ತಿದ್ದ ವೇಳೆ  ಬಿದ್ದು  ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಬಂಗಳಂ ಪಳ್ಳತ್ತುವಯಲ್ ನಿವಾಸಿ ಪಿ.ವಿ. ಕೊಟ್ಟನ್ (65) ಮೃತ ವ್ಯಕ್ತಿ. ನಿನ್ನೆ ಇವರು ಮನೆ ಹಿತ್ತಿಲಿನಲ್ಲಿರುವ ತೆಂಗಿನ ಮರದಿಂದ ಕಾಯಿ ಕೊಯ್ಯುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದು  ಗಾಯಗೊಂಡಿ ದ್ದರು. ಕೂಡಲೇ ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಮೃತರು ಪತ್ನಿ ಕಾರ್ತ್ಯಾಯಿನಿ, ಮಕ್ಕಳಾದ ನಿತಿನ್, ನಿಖಿಲ, ನಿತ್ಯ, ಅಳಿಯಂದಿರಾದ ಸಂತೋಷ್, ಪ್ರಶಾಂತ್ ಹಾಗೂ ಅಪಾರ ಬಂಧು-ಮಿತ್ರರನ್ನು …

ವೃಶ್ಚಿಕ ಮಾಸದ ಮೊದಲ ಮುಂಜಾನೆ ಶಬರಿಮಲೆಯಲ್ಲಿ ನೂತನ ಅರ್ಚಕರಿಂದ ಪೂಜೆ ಆರಂಭ

ಶಬರಿಮಲೆ: ಶಬರಿಮಲೆಯಲ್ಲಿ ಹೊಸತಾಗಿ ಅಧಿಕಾರ ವಹಿಸಿಕೊಂಡ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿಯವರ ನೇತೃತ್ವದಲ್ಲಿ ಗರ್ಭಗುಡಿಯ ಬಾಗಿಲು ತೆರೆಯುವುದರೊಂದಿಗೆ ವೃಶ್ಚಿಕ ಮಾಸದ ಮೊದಲ ಮುಂಜಾನೆ ಶಬರಿಮಲೆಯಲ್ಲಿ ದರ್ಶನಕ್ಕಾಗಿ ನೂರಾರು ಭಕ್ತರು ತಲುಪಿದರು. ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಉಪಸ್ಥಿತಿಯಲ್ಲಿ ನಡೆ ಬಾಗಿಲು ತೆಗೆದಾಗ ಶರಣು ಘೋಷಗಳು ಮೊಳಗಿತು. ದೇವಸ್ವಂಬೋರ್ಡ್ ಕಾರ್ಯದರ್ಶಿ ಪಿ.ಎನ್. ಗಣೇಶ್ವರನ್ ಪೋತ್ತಿ, ಎಕ್ಸಿಕ್ಯೂಟಿವ್ ಆಫೀಸರ್ ಒ.ಜಿ. ಬಿಜು ಉಪಸ್ಥಿತರಿದ್ದರು. ಮುಂಜಾನೆ 3 ಗಂಟೆಗೆ ನಡೆ ಬಾಗಿಲು ತೆರೆಯಲಾಗಿದೆ. ಬಳಿಕ ನಿರ್ಮಾಲ್ಯ ಅಭಿಷೇಕ, ಗಣಪತಿ ಹೋಮ, …

ಹೈದರಾಬಾದ್ ನಿವಾಸಿಗಳು ಸಂಚರಿಸಿದ ಬಸ್‌ಗೆ ಸೌದಿಯಲ್ಲಿ ಬೆಂಕಿ: 42 ಸಾವು

ಮಕ್ಕ: ಸೌದಿಯಲ್ಲಿ ಉಂರ ತೀರ್ಥಾಟಕರು ಸಂಚರಿಸಿದ ಬಸ್‌ಗೆ  ಬೆಂಕಿ  ತಗಲಿ  ಸಂಭವಿಸಿದ ಅಪಘಾತದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 20 ಮಹಿಳೆಯರು, 11 ಮಕ್ಕಳು ಸೇರಿದ್ದಾರೆ.  ಹೈದರಾಬಾದ್ ನಿವಾಸಿಗಳು ಸಂಚರಿಸಿದ ಬಸ್ ಇದಾಗಿತ್ತೆಂದು ತಿಳಿದುಬಂದಿದೆ. ಬಸ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೆಂಕಿ ಸೃಷ್ಟಿಯಾಗಿದೆ. ಬಸ್‌ನಲ್ಲಿದ್ದ ಓರ್ವ ಮಾತ್ರ ಅಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. 43 ಮಂದಿ ಹೈದರಾಬಾದ್ ನಿವಾಸಿಗಳು ಮಕ್ಕಾ ತೀರ್ಥಾಟನೆ ಪೂರ್ತಿಗೊಳಿಸಿ ಮದೀನಕ್ಕೆ ತೆರಳುತ್ತಿದ್ದ ವೇಳೆ ಇಂದು ಮುಂಜಾನೆ 1.30ರ ವೇಳೆ ದುರ್ಘಟನೆ ಸಂಭವಿಸಿದೆ.

ಜಿಲ್ಲೆಯಾದ್ಯಂತ ಪೊಲೀಸ್ ಕಾರ್ಯಾಚರಣೆ: ತಲೆ ಮರೆಸಿಕೊಂಡವರೂ ಸೇರಿ 221 ವಾರಂಟ್ ಆರೋಪಿಗಳ ಸೆರೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಪೊಲೀಸರು ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳು ಸೇರಿ ಒಟ್ಟು 221 ವಾರಂಟ್ ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿ ೧೨೬ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ 3711 ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ. ಇದರ ಹೊರತಾಗಿ ಹೋಟೆಲ್ ಮತ್ತು ವಸತಿಗೃಹಗಳೂ ಸೇರಿದಂತೆ ೬೫ ಕೇಂದ್ರಗಳಿಗೆ …

ಸಾಲ ಪಡೆದ ಹಣವನ್ನು ಹಿಂತಿರುಗಿಸದಿರಲು ನಗ್ನ ವೀಡಿಯೋ ತೆಗೆದು ಪ್ರಚಾರ: ಮನನೊಂದು ಯುವಕ ಆತ್ಮಹತ್ಯೆ; ಯುವತಿ ಸಹಿತ 4ಮಂದಿ ಸೆರೆ

ನಿಲಂಬೂರ್: ಇಲ್ಲಿಗೆ ಸಮೀಪದ ಚುಂಗತ್ತರದಲ್ಲಿ 42ರ ಯುವಕ ಆತ್ಮಹತ್ಯೆಗೈಯ್ಯಲು ಕಾರಣ ನಗ್ನ ವೀಡಿಯೋ ಪ್ರಚಾರಪಡಿಸಿದ ಹಿನ್ನೆಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುಂಗತ್ತರ ಪಳ್ಳಿಕುತ್ ಕುಂಡುಕುಳದಲ್ಲಿ ರತೀಶ್ (42) ಕಳೆದ ಜೂನ್ ೧೧ರಂದು ಆತ್ಮಹತ್ಯೆಗೈದಿದ್ದರು. ಸಾಲ ಪಡೆದ ಹಣವನ್ನು ವಾಪಸು ನೀಡದಿರುವುದಕ್ಕಾಗಿ ಸಂಬಂಧಿಕೆಯಾದ ಯುವತಿ, ಪತಿ ಹಾಗೂ ಗೆಳೆಯರು ಸೇರಿ ರತೀಶ್‌ನನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದ ರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪಳ್ಳಿಕುತ್ ಇಡಪ್ಪಲಂ ಸಿಂಧು (41), ಪತಿ ಶ್ರೀರಾಜ್ (44), ಸಿಂಧುನ ಸಂಬಂಧಿಕ ಪಳ್ಳಿಕುತ್ತ್ ಕೊನ್ನಮಣ್ಣ ನಿವಾಸಿ ಪ್ರವೀಣ್ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಸಮಗ್ರ ಪ್ರಶಸ್ತಿ : ಹೈಸ್ಕೂಲ್ ವಿಭಾಗದಲ್ಲಿ ಕಾರಡ್ಕ ಶಾಲೆ ಪ್ರಥಮ

ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮ ಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಚಾಂಪ್ಯನ್ ಪಟ್ಟ ಗೆದ್ದುಕೊಂಡಿದೆ. ಈ ಶಾಲೆ ಸತತ ಮೂರನೇ ಬಾರಿ ಚಾಂಪ್ಯನ್ಶಿಪ್ ಗೆದ್ದುಕೊಂಡು ಹ್ಯಾಟ್ರಿಕ್ ಸಾಧನೆಗೈದಿದೆ.ಐದು ದಿನಗಳ ಕಾಲ ನಡೆದ ಕಲೋತ್ಸವದಲ್ಲಿ 243 ಅಂಕ ಗಳಿಸಿ ಚಾಂಪ್ಯನ್ ಪಟ್ಟವನ್ನು ಕಾಟುಕುಕ್ಕೆ ಶಾಲೆ ತನ್ನದಾಗಿಸಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ 203 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗ್ರೂಪ್ ಸ್ಪರ್ಧೆಗಳಾದ ಚೆಂಡೆ …