ಆಚಾರ ಉಲ್ಲಂಘನೆ, ಶಬರಿಮಲೆ ಕ್ಷೇತ್ರದ ಚಿನ್ನ ಅಪಹರಣ ನಡೆಸಿದವರಿಗೆ ದೇವದೋಷ ತಪ್ಪದು- ಸಾಧ್ವಿ ಶ್ರೀ ಮಾತಾನಂದಮಯಿ

ಕಾಸರಗೋಡು: ಶಬರಿಮಲೆ ಚಿನ್ನ ಅಪಹರಣ ಮತ್ತು ಆಚಾರ ಉಲ್ಲಂಘನೆ ಮಾಡಿದವರಿಗೆ ದೋಷ ತಪ್ಪದು. ಎಲ್ಲಿ ಅನ್ಯಾಯ, ಅಧರ್ಮ, ಅಕ್ರಮ ನಡೆಯುತ್ತದೋ ಆವಾಗ ಮಹಿಳೆ ಅಬಲೆಯಾಗದೆ ಸಬಲೆಯಾಗುತ್ತಾಳೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ನುಡಿದರು. ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ನಡೆಯುವ ಮಂಡಲ ಭಜನೆ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಮನುಷ್ಯ ಇಂದ್ರಿಯಗಳ ದಾಸನಾಗದೆ ಭೂಮಿಯಲ್ಲಿ ಬದುಕುವ ಅವಕಾಶವಿತ್ತ ಭಗವಂತನ ದಾಸನಾಗಬೇಕು. ದೇವರು ಮೆಚ್ಚುವ ಕೆಲಸಗಳನ್ನಷ್ಟೇ ಮಾಡಬೇಕು. ಅದರಿಂದಲೇ ಮಾನವ ಜನ್ಮಕ್ಕೆ ಮಾಧವನಿಂದ …

ಅವಳಿ ಸಿಹಿ ನೀಡಿ ವಳಪ್ಪಿಲ ಕಮ್ಯೂನಿಕೇಶನ್ಸ್‌ಗೆ ರಾಷ್ಟ್ರೀಯ ಪುರಸ್ಕಾರ

ಕಣ್ಣೂರು: ಮಾಧ್ಯಮರಂಗದ ರಾಷ್ಟ್ರೀಯ ಪುರಸ್ಕಾರಗಳಾದ ಇ.ಫಾರ್ ಎಂ. ಮೀಡಿಯಾ ಏಸ್‌ಏಸ್ ಪ್ರಶಸ್ತಿಯಲ್ಲಿ ಅಭಿಮಾನಕರವಾದ ಅವಳಿ ಸಾಧನೆಯನ್ನು ವಳಪ್ಪಿಲ ಕಮ್ಯೂನಿಕೇ ಶನ್ಸ್ ಮಾಡಿದೆ.  ಇಂಡಿಪೆಂಡೆಂಟ್ ಏಜೆನ್ಸಿ ಆಫ್ ದಿ ಇಯರ್ ಪುರಸ್ಕಾರ ವಳಪ್ಪಿಲ ಕಮ್ಯೂನಿಕೇಷನ್ಸ್‌ಗೂ, ಇಂಡಿಪೆಂಡೆಂಟ್ ಏಜೆನ್ಸಿ ಹೆಡ್ ಆಫ್ ದಿ ಇಯರ್ ಪುರಸ್ಕಾರ ಮೆನೇಜಿಂಗ್ ಡೈರೆಕ್ಟರ್ ಆದ ಜೇಮ್ಸ್ ವಳಪ್ಪಿಲ್‌ಗೂ ಲಭಿಸಿದೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ವಳಪ್ಪಿಲ ಕಮ್ಯೂನಿಕೇಶನ್ಸ್ ಮೆನೇಜಿಂಗ್ ಡೈರೆಕ್ಟರ್‌ಗಳಾದ ಜೇಮ್ಸ್ ವಳಪ್ಪಿಲ,  ಜೋನ್ಸ್ ವಳಪ್ಪಿಲ, ನಿರ್ದೇಶಕ ಲಿಯೋ ವಳಪ್ಪಿಲ ಎಂಬಿವರು ಜಂಟಿಯಾಗಿ ಪುರಸ್ಕಾರ ಸ್ವೀಕರಿಸಿದರು. …

ಟೈಲರ್ ನಿಧನ

ದೈಗೋಳಿ: ಹಲವು ವರ್ಷ ಗಳಿಂದ ದೈಗೋಳಿಯಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ, ದೈಗೋಳಿ ಜ್ಞಾನೋದಯ ಸಮಾಜ ಸ್ಥಾಪಕ ಸದಸ್ಯ ಕೃಷ್ಣಪ್ಪ (80) ನಿಧನ ಹೊಂದಿದರು. ದೈಗೋಳಿ ಸಾರ್ವ ಜನಿಕ ಶ್ರೀ ಗಣೇಶೋತ್ಸವ ಕಾರ್ಯ ಕಾರಿ ಸಮಿತಿ ಉಪಾಧ್ಯಕ್ಷರಾಗಿ ಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ರತ್ನಾವತಿ, ಮಕ್ಕಳಾದ ಆಶಾಲತಾ, ಪುಷ್ಪಲತಾ, ಸುಜಾತ, ಮಮತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ನಿಧನಕ್ಕೆ ಜ್ಞಾನೋದಯ ಸಮಾಜ ಸಂತಾಪ ವ್ಯಕ್ತಪಡಿಸಿದೆ.

ಎಡರಂಗ ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ

ಪೈವಳಿಕೆ: ಎಡರಂಗ ಸರಕಾರ ನಡೆಸುತ್ತಿರುವ ಜನಕಲ್ಯಾಣ ಯೋಜನೆಗಳು ಹಾಗೂ ಪಂಚಾಯತ್ ಆಡಳಿತ ಸಮಿತಿ ನಡೆಸಿದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಎಡರಂಗದ ಉಮೇದ್ವಾರರು ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಪಡೆಯಲಿದ್ದಾರೆ ಎಂದು ಎಂ.ವಿ. ಜಯರಾಜನ್ ನುಡಿದರು. ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ.ಸಿ. ಲಾಲ್‌ಬಾಗ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಬಾಬು, ಎಡರಂಗದ ಪುತ್ತಿಗೆ ಜಿಲ್ಲಾ ಪಂಚಾಯತ್ ಡಿವಿಷನ್ ಅಭ್ಯರ್ಥಿ ಮೊಹಮ್ಮದ್ ಹನೀಫ, ಸಿಪಿಐ …

ಪಾಕತಜ್ಞ ನಿಧನ

ಮಂಜೇಶ್ವರ: ವರ್ಕಾಡಿ ನಲ್ಲಂಗಿಪದವು ನಿವಾಸಿ, ಪಾಕತಜ್ಞ ಗೋಪಾಲಕೃಷ್ಣಯ್ಯ (ಬಾಬಣ್ಣ 62) ನಿಧನ ಹೊಂದಿದರು. ಶನಿವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ಈ ವೇಳೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮನೆ ಪರಿಸರದಲ್ಲಿ ಹಲವಾರು ವರ್ಷಗಳಿಂದ ಕ್ಯಾಟರಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಶ್ವೇತ, ಜಯಲಕ್ಷ್ಮಿ, ಭವ್ಯ, ಅಳಿಯಂದಿರಾದ ರವೀಶ್, ಮಧು ಹೆಗ್ಡೆ, ಸಹೋದರ- ಸಹೋದರಿಯರಾದ ರಾಮ್‌ರಾವ್, ಪ್ರಕಾಶ್, ಭಾರತಿ, ಚಂದ್ರಪ್ರಕಾಶ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಂದೆ ಕಂಬಾರು ನಾರಾಯಣ್ಣ, ತಾಯಿ ರಾಜೀವಿ, ಸಹೋದರರಾದ …

ಅಬಕಾರಿ ಅಧಿಕಾರಿಗಳನ್ನು ಕಂಡು ಗಾಂಜಾ, ಸ್ಕೂಟರ್ ಉಪೇಕ್ಷಿಸಿ ಆರೋಪಿ ಪರಾರಿ

ಕಣ್ಣೂರು: ಅಬಕಾರಿ ಅಧಿಕಾರಿಗಳನ್ನು ಕಂಡು ಗಾಂಜಾ ಹಾಗೂ ಸ್ಕೂಟರನ್ನು ಉಪೇಕ್ಷಿಸಿ ಹಲವಾರು ಮಾದಕ ಪದಾರ್ಥ ಪ್ರಕರಣಗಳಲ್ಲಿ ಆರೋಪಿಯಾದ ಯುವಕ ಪರಾರಿಯಾಗಿದ್ದಾನೆ. ತಳಿಪರಂಬ್ ಏರಿಯಾತ್ ನಿವಾಸಿ ಶಮ್ಮಾಸ್ (27) ಪರಾರಿಯಾದ ಯುವಕ. ನಿನ್ನೆ ಮಧ್ಯಾಹ್ನ ಎಡಕ್ಕೊಂನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ತಳಿಪರಂಬ್ ಅಬಕಾರಿ ಇನ್ಸ್‌ಪೆಕ್ಟರ್ ಸತೀಶ್ ಹಾಗೂ ತಂಡವನ್ನು ನೋಡಿದ ಶಮ್ಮಾಸ್ ಸ್ಕೂಟರ್ ಹಾಗೂ ಗಾಂಜಾವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಸ್ಕೂಟರ್‌ನಿಂದ 204 ಗ್ರಾಂ ಗಾಂಜಾವನ್ನು ಪತ್ತೆಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶಮ್ಮಾಸ್‌ನ ಮನೆಗೂ ದಾಳಿ ನಡೆಸಲಾಗಿದೆ.

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕರಿಗೆ ಬದಿಯಡ್ಕದಲ್ಲಿ ಅಶ್ರುತರ್ಪಣ: ಕೇರಳದ ಪಠ್ಯಪುಸ್ತಕದಲ್ಲಿ ಜೀವನ ಚರಿತ್ರೆಗೆ ಆಗ್ರಹ

ಬದಿಯಡ್ಕ: ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕರ ನಿಧನಕ್ಕೆ ಜಿ.ಕೆ. ಚಾರಿಟೇಬಲ್ ಟ್ರಸ್ಟ್ ವಾಂತಿಚ್ಚಾಲು ಇವರ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ಜರಗಿತು. ಡಾ. ಶ್ರೀನಿಧಿ ಸರಳಾಯ ಪುಷ್ಪಾರ್ಚನೆ ಗೈದು ನುಡಿನಮನ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಅವರು ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರ ಹೆಸರು ಸದಾ ಹಸಿರಾಗಿರುವಂತೆ ನೋಡಿಕೊ ಳ್ಳಲು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಗಿಡವನ್ನು ನೆಟ್ಟು ಸದಾ ಕಾಲ ಪೋ ಷಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೇರಳದ …