ಅಸೌಖ್ಯ: ಮೀಯಪದವು ಶಾಲಾ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಅಸೌಖ್ಯದಿಂದ ನಿಧನ ಹೊಂದಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮಜಿಬೈಲು ಶಾಲೆ ಬಳಿಯ ಅಬ್ದುಲ್ ಸಲೀಂ- ಫೌಸಿಯ ದಂಪತಿ ಪುತ್ರ ಫಾಸಿಲ್ ಸಲೀಂ (11) ಮೃತಪಟ್ಟ ವಿದ್ಯಾರ್ಥಿ. ಕಳೆದ ಮೂರು ತಿಂಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದನು. 10 ದಿನದ ಹಿಂದೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಲ್ಲಿ ಅಂತ್ಯ ಸಂಭವಿಸಿದೆ. ಮೃತದೇಹವನ್ನು ಊರಿಗೆ ತಂದು ಮನೆ ಪರಿಸರದ  ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. …

ಹೊಳೆಯಿಂದ  ಅನಧಿಕೃತ ಹೊಯ್ಗೆ ಸಂಗ್ರಹಿಸುತ್ತಿದ್ದ ದೋಣಿ ನಾಶಗೊಳಿಸಿದ ಪೊಲೀಸ್

ಕುಂಬಳೆ: ಚುನಾವಣಾ ಚಟುವಟಿಕೆ ಬಿರುಸುಗೊಳ್ಳುತ್ತಿರುವಂತೆಯೇ ಮೊಗ್ರಾಲ್ ಮಡಿಮು ಗರ್ ಹೊಳೆಯಿಂದ  ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ತೀವ್ರಗೊಂಡ ಬಗ್ಗೆ ದೂರುಂಟಾಗಿದೆ. ಇದರಂತೆ ನಿನ್ನೆ ಸಂಜೆ ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಲ್ಲಿ  ಬಚ್ಚಿಟ್ಟಿದ್ದ ದೋಣಿಯೊಂದನ್ನು  ಮೇಲಕ್ಕೆತ್ತಿ ಜೆಸಿಬಿ ಬಳಸಿ ನಾಶಗೊಳಿಸಿ ದ್ದರು. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹ ನಡೆಸುತ್ತಿದ್ದ ತಂಡ ಅಲ್ಲಿಂದ ಪರಾರಿಯಾಗಿರು ವುದಾಗಿ ಹೇಳಲಾಗುತ್ತಿದೆ.  ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟಕ್ಕೆ  ಅವಕಾಶ ನೀಡ ಲಾಗುವುದಿಲ್ಲವೆಂದು ಇನ್‌ಸ್ಪೆಕ್ಟರ್ …

ಲಾಡ್ಜ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ ಮಾಲಕ, ನೌಕರೆ ಸಹಿತ ಹಲವರ ಸೆರೆ

ಹೊಸದುರ್ಗ:  ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಚಂದೇರ ಪೊಲೀಸರು ಚೆರ್ವ ತ್ತೂರಿನಲ್ಲಿ ಲಾಡ್ಜ್‌ವೊಂದಕ್ಕೆ  ದಾಳಿ ನಡೆಸಿ  ಹಲವರನ್ನು ಬಂಧಿಸಿದ್ದಾರೆ. ಚೆರ್ವತ್ತೂರಿನ  ಮಲಬಾರ್ ಲಾಡ್ಜ್ ಕೇಂದ್ರೀಕರಿಸಿ  ನಡೆಸಿದ ದಾಳಿ ವೇಳೆ ಅಲ್ಲಿ ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಂಡ ತಂಡವನ್ನು ಪೊಲೀಸರು ಕೈಯ್ಯಾರೆ ಸೆರೆಹಿಡಿದಿದ್ದಾರೆ. ಲಾಡ್ಜ್ ಮಾಲಕ ಮೊಹಮ್ಮದ್ ಅಸೈನಾರ್, ನೌಕರೆ ಮುಳ್ಳೇರಿಯ ನಿವಾಸಿ ನಸೀಮ, ಇತರ ನಾಲ್ಕು ಮಂದಿ ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ಸುರೇಶ್ ಬಾಬುರ ನಿರ್ದೇಶ ಮೇರೆಗೆ ಚಂದೇರ ಇನ್‌ಸ್ಪೆಕ್ಟರ್  …

ಶಬರಿಮಲೆ: ಹರಿದುಬರುತ್ತಿರುವ ಭಕ್ತರ ಪ್ರವಾಹ; ನೂಕುನುಗ್ಗಲಿನ ವಾತಾವರಣ ಸೃಷ್ಟಿ: ದರ್ಶನ ಲಭಿಸದೆ ಹಿಂತಿರುಗುತ್ತಿರುವ ಭಕ್ತರು ; ಎಲ್ಲೆಡೆ ಭಾರೀ ಅವ್ಯವಸ್ಥೆ

ಪತ್ತನಂತಿಟ್ಟ: ಶಬರಿಮಲೆ ತೀರ್ಥಾಟನಾ ಋತು ಆರಂಭಗೊAಡಿರುವAತೆ ಕ್ಷೇತ್ರಕ್ಕೆ ಭಕ್ತರ ಮಹಾಪ್ರವಾಹವೇ ಹರಿದು ಬರತೊಡಗಿದೆ. ಇದರಿಂದಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ. ಮಾತ್ರವಲ್ಲ ಭಾರೀ ಅವ್ಯವಸ್ಥೆಯೂ ಉಂಟಾಗಿದೆ. ನಿನ್ನೆ ಮಾತ್ರವಾಗಿ 1,96,594 ಮಂದಿ ಭಕ್ತರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ.ವರ್ಚುವಲ್ ಕ್ಯೂ ಮೂಲಕ ದೈನಂದಿನ 70000 ಮಂದಿಗೆ ಹಾಗೂ ಸ್ಪೋಟ್ ಬುಕ್ಕಿಂಗ್ ಮೂಲಕ 20,000 ಮಂದಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಸ್ಪೋಟ್ ಬುಕ್ಕಿಂಗ್ ಮೂಲಕ ದರ್ಶನ ಪಡೆಯಲು ಈಗ 30,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ನಿಬಿಡತೆ …

ರಸ್ತೆಯಿಂದ ಹಿಂದಕ್ಕೆ ಚಲಿಸಿದ ಜೀಪು ಢಿಕ್ಕಿ ಹೊಡೆದು ಮನೆಯಂಗಳದಲ್ಲಿದ್ದ ತಾಯಿ, ಪುತ್ರಿಗೆ ಗಾಯ

ಉಪ್ಪಳ: ಎತ್ತರ ಪ್ರದೇಶದ ರಸ್ತೆ ಬದಿ ನಿಲ್ಲಿಸಿದ್ದ ಬೊಲೆರೋ ಜೀಪು ಹಿಂದಕ್ಕೆ ಚಲಿಸಿ ಮನೆಯೊಂದರ ಅಂಗಳ ಮೂಲಕ ಸಂಚರಿಸಿದ್ದು, ಈ ವೇಳೆ ಜೀಪು ಹರಿದು ತಾಯಿ ಹಾಗೂ ಪುತ್ರಿ ಗಂಭೀರ ಗಾಯಗೊಂಡ ಘಟನೆ  ಬೇಕೂರು ಬೊಳುವಾಯಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಅಪಘಾತದಲ್ಲಿ ಬೊಳುವಾಯಿ ನಿವಾಸಿ ದಿ| ಮಹಾಬಲ ಭಂಡಾರಿಯವರ ಪತ್ನಿ ಜಯಂತಿ ಭಂಡಾರಿ (74), ಪುತ್ರಿ ಸುಮಲತ ಶೆಟ್ಟಿ (47) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೊಳುವಾಯಿಯ ಎತ್ತರ ಪ್ರದೇಶದ ರಸ್ತೆ ಬದಿ ಕೇರಳ …

ಹೃದಯಾಘಾತ: ಯುವಕ ನಿಧನ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಬಳಿಯ ನಿವಾಸಿ ದಿ| ಕೃಷ್ಣ ಎಂಬವರ ಪುತ್ರ ಜಗದೀಶ ಸಾಲಿಯಾನ್ 42) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ೫.೩೦ರ ವೇಳೆ ಮನೆಯಲ್ಲಿದ್ದ ಇವರಿಗೆ ಹೃದಯಾಘಾತವುಂಟಾಗಿದ್ದು, ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿತ್ತೆನ್ನ ಲಾಗಿದೆ. ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರೂ ಆಗಿದ್ದ ಜಗದೀಶ ಸಾಲಿಯಾನ್ ಪ್ರಸ್ತುತ ಕ್ಷೇತ್ರದ ನವೀಕರಣ ಸಮಿತಿ …

ಬಿದ್ದು ಸಿಕ್ಕಿದ ಚಿನ್ನಾಭರಣ ಹಿಂತಿರುಗಿಸಿ ಅಣ್ಣ-ತಂಗಿಯ ಪ್ರಾಮಾಣಿಕತೆ: ಕಲ್ಕಾರ್ ಉನ್ನತಿಯ ಬಡ ಕುಟುಂಬಕ್ಕೆ ಪ್ರಶಂಸೆ

ಅಂಗಡಿಮೊಗರು: ಬಿದ್ದು ಸಿಕ್ಕಿದ ಚಿನ್ನಾಭರಣಗಳನ್ನು ವಾರಿಸುದಾರರಿಗೆ ಹಿಂತಿರುಗಿಸಿ ಹಳ್ಳಿಯ ಮುಗ್ದ ಮನಸ್ಸುಗಳು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.  ಪುತ್ತಿಗೆ ಪಂ.ನ ಅಂಗಡಿಮೊಗರು ವಾರ್ಡ್‌ನ ಕಲ್ಕಾರ್ ಉನ್ನತಿಯ ಬಾಬು ಎಂಬವರಿಗೆ ಇಲ್ಲಿನ ಮಸೀದಿ ಪಕ್ಕದ ಮನೆಯೊಂದರ ಅಂಗಳದಲ್ಲಿ ಪರ್ಸೊಂದು ಬಿದ್ದು ಸಿಕ್ಕಿದ್ದು ಅದನ್ನು ಆಮನೆಯೊಡತಿಯಲ್ಲಿ ಕೇಳಿ  ತೆಗೆದುಕೊಂಡಿದ್ದರು. ಮನೆಗೆ ಬಂದ ಬಳಿಕ ಪರ್ಸ್ ನೋಡಿದಾಗ ಅದರಲ್ಲಿ ಚಿನ್ನದ ಪದಕ ಕಂಡುಬಂದಿದೆ. ಕೂಡಲೇ  ಬಾಬುರ ತಂಗಿ ಗೀತಾ ಆ ಪದಕವನ್ನು ಅದರ ವಾರಿಸುದಾರರಿಗೆ  ಹಿಂತಿರುಗಿಸಿ ಬರಲು ತಿಳಿಸಿದ್ದಾರೆ. ಅದರಂತೆ ಬಾಬು …

ಇಂಟರ್ವ್ಯೂಗೆಂದು ತಿಳಿಸಿ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಯುವಕನೊಂದಿಗೆ ಸೆರೆ

ಕಾಸರಗೋಡು: ಇಂಟರ್ವ್ಯೂ ಗೆಂದು ತಿಳಿಸಿ ಮನೆಯಿಂದ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಅನ್ಯ ಮತದ ಯುವಕನೊಂದಿಗೆ ಕಾಸರಗೋಡಿನಲ್ಲಿ ಸೆರೆಗೀಡಾಗಿದ್ದಾಳೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ  ಕೂವೇರಿ ನಿವಾಸಿಯಾದ 42ರ ಹರೆಯದ ಗೃಹಿಣಿ ಚೆಂಗಳಾ ಯಿ ನಿವಾಸಿಯಾದ ಶಫೀರ್ ಎಂಬಾತನೊಂದಿಗೆ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು  ಅವರನ್ನು ನಗರಠಾಣೆ ಪೊಲೀಸರು ಕಸ್ಟಡಿಗೆ ತೆಗೆದು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನವಂಬರ್ 7ರಂದು ಬೆಳಿಗ್ಗೆ ಇಂಟರ್ವ್ಯೂಗೆಂದು ತಿಳಿಸಿ ಗೃಹಿಣಿ ಹೋಗಿದ್ದಳು. ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದರು. ಇದೇ …

ಮಂಜೇಶ್ವರ ಮಂಡಲ ಲೀಗ್ ಪದಾಧಿಕಾರಿಗಳು ಸ್ಪರ್ಧಾ ಕಣಕ್ಕೆ: ಮಂಡಲ ಕಮಿಟಿಯನ್ನು ಶೀಘ್ರ ವಿಸರ್ಜಿಸುವಂತೆ ಒತ್ತಾಯ

ಮಂಜೇಶ್ವರ: ಮುಸ್ಲಿಂಲೀಗ್‌ನ ಅಭ್ಯರ್ಥಿ ಪಟ್ಟಿ ಪೂರ್ತಿಗೊಳ್ಳುತ್ತಿ ರುವಂತೆಯೇ ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲೂ, ಅನಂತರವೂ ಪಕ್ಷಕ್ಕೆ ಮಂಜೇಶ್ವರ ಮಂಡಲದಲ್ಲಿ ಯಾರು ನೇತೃತ್ವ ನೀಡುವರೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಮಂಡಲ ಲೀಗ್ ಕಮಿಟಿಯನ್ನು ಕೂಡಲೇ ವಿಸರ್ಜಿಸಿ ಅಡ್‌ಹೋಕ್ ಕಮಿಟಿ ರೂಪೀಕರಿಸಬೇಕೆಂದು ಒತ್ತಾಯವೂ ಕೇಳಿ ಬಂದಿದೆ. ಇದೇ ವೇಳೆ ಅಸೀಸ್ ಮರಿಕ್ಕೆ ಅವರನ್ನು ಮಂಡಲ ಲೀಗ್ ಅಧ್ಯಕ್ಷ ಸ್ಥಾನದಿಂದ ಅತೀ ಶೀಘ್ರವಾಗಿ ತೆರವುಗೊಳಿಸಬೇಕೆಂದು ಮಂಗಲ್ಪಾಡಿ ಪಂಚಾಯತ್ ಲೀಗ್ …

ಬಂದ್ಯೋಡು ಬ್ಲೋಕ್ ಡಿವಿಶನ್ ಅಭ್ಯರ್ಥಿ ಘೋಷಣೆ ಫೇಸ್‌ಬುಕ್‌ನಲ್ಲಿ: ಲೀಗ್ ಕಾರ್ಯಕರ್ತರಿಂದ ಪ್ರತಿಭಟನೆ

ಕುಂಬಳೆ: ಮಂಜೇಶ್ವರ ಬ್ಲೋಕ್ ಪಂಚಾಯತ್‌ನ ಡಿವಿಷನ್‌ಗಳಿಗೆ ಅಭ್ಯರ್ಥಿಗಳನ್ನು ಮುಸ್ಲಿಂ ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ನಿನ್ನೆ ಬೆಳಿಗ್ಗೆ ಘೋಷಿಸಲಿರುವಂತೆಯೇ ಮೊನ್ನೆ ಮಧ್ಯರಾತ್ರಿ ಫೇಸ್‌ಬುಕ್ ಮೂಲಕ  ಓರ್ವ ಅಭ್ಯರ್ಥಿಯನ್ನು ಘೋಷಿಸಿರುವುದು  ಕಾರ್ಯಕರ್ತರಲ್ಲಿ  ಆಶ್ಚರ್ಯ ಮೂಡಿಸಿದೆ. ಪಕ್ಷದ ನಾಯಕತ್ವಕ್ಕೆ ನೀಡಿದ ಹೆಸರುಗಳಲ್ಲಿ ಇಲ್ಲದಿದ್ದ ವ್ಯಕ್ತಿಯ ಹೆಸರನ್ನು ಈ ರೀತಿಯಲ್ಲಿ ಘೋಷಿಸಿರುವುದು ಯಾರು, ಯಾರಲ್ಲಿ ಕೇಳಿಯಾಗಿದೆ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಬ್ಲೋಕ್ ಪಂ.ನ ಬಂದ್ಯೋಡು ಡಿವಿಶನ್‌ಗೆ ಮುಸ್ಲಿಂ ಲೀಗ್ ಪಂ.ಕಮಿಟಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅವರನ್ನು  ಮೊದಲ ಹೆಸರಾಗಿ …