ಕುಂಬಳೆಯ ಲಾಡ್ಜ್ ಕೊಠಡಿಯಲ್ಲಿ ಮಾದಕವಸ್ತು ಬಳಸುತ್ತಿದ್ದ ಮೂವರು ಬಂಧನ

ಕುಂಬಳೆ: ಕುಂಬಳೆಯ ಲಾಡ್ಜ್‌ಯೊಂದರ ಕೊಠಡಿಯಲ್ಲಿ ಮಾದಕವಸ್ತು ಉಪಯೋಗಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಲಾಗಿದೆ. ಕುಂಬಳೆ ಶ್ರೀ ನಿತ್ಯಾನಂದ ಮಠದ ಸಮೀಪ ಬಟ್ಟುಂಞಿ ಹೌಸ್‌ನ ಸಿ.ಕೆ. ಕೇತನ್, ಕುಂಟಗೇರಡ್ಕ ಜಿಡಬ್ಲ್ಯುಎಲ್‌ಪಿ ಶಾಲೆ ಸಮೀಪದ ನಿಸಾರ್ ಮಂಜಿಲ್‌ನ ಅಬ್ದುಲ್ ನಿಸಾರ್, ಕರ್ನಾಟಕದ ಪುತ್ತೂರು ಗಾಳಿಮುಖ ನಿವಾಸಿ ಬ್ರಿಜೇಶ್ ಎಂಬಿವರನ್ನು ಕುಂಬಳೆ ಎಕ್ಸೈಸ್ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ನೇತೃತ್ವದ ತಂಡ ಬಂಧಿಸಿದೆ. ನಿನ್ನೆ ರಾತ್ರಿ 10 ಗಂಟೆಗೆ ಕುಂಬಳೆ ರೈಲ್ವೇ ನಿಲ್ದಾಣದಿಂದ ಸಿ.ಎಚ್.ಸಿ.ಗೆ ತೆರಳುವ ರಸ್ತೆಯಲ್ಲಿ ರಾಕೇಶ್ ಕಾಂಪ್ಲೆಕ್ಸ್ ಎಂಬ ಲಾಡ್ಜ್‌ನಿಂದ ಇವರನ್ನು …

ಕಿರಿಯ ವಿದ್ಯಾರ್ಥಿಗಳಿಗೆ ಹಲ್ಲೆ : ಮೊಗ್ರಾಲ್ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಅಮಾನತು

ಕಾಸರಗೋಡು:  ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂ ಡರಿ ಶಾಲೆಯಲ್ಲಿ ಕಿರಿಯ ವಿದ್ಯಾರ್ಥಿ ಗಳಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ೧೦ನೇ ತರಗತಿಯ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಅಮಾನ ತುಗೊಳಿಸಿ ಮುಖ್ಯೋ ಪಾಧ್ಯಾಯ   ಕ್ರಮ ಕೈಗೊಂಡಿದ್ದಾರೆ. ಈ ನಾಲ್ವರು ವಿದ್ಯಾರ್ಥಿಗಳು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಹಲ್ಲೆಗೈದು ಗಾಯ ಗೊಳಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ಅಮಾನತಿಗೊಳಗಾದ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚೈಲ್ಡ್ ಪ್ರೊಟೆಕ್ಟ್ ಆಫೀಸರ್‌ಗೆ ಎಸ್‌ಬಿಆರ್ ( ಸೋಶ್ಯಲ್ ಬ್ಯಾಕ್ ಗ್ರೌಂಡ್ ರಿಪೋರ್ಟ್) ಸಲ್ಲಿಸುವು …

ಬಾಲಕಿಗೆ ಕಿರುಕುಳ: ಯುವಕನ ಬಂಧನ

ಮುಳ್ಳೇರಿಯ:15ರ ಹರೆಯದ ಬಾಲಕಿಗೆ  ಕಿರುಕುಳ ನೀಡಿದ ಆರೋಪದಂತೆ ಯುವಕನನ್ನು ಪೋಕ್ಸೋ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಂಗಾರು ನೆಟ್ಟಣಿಗೆ ಈಂದುಮೂಲೆ ನಿವಾಸಿ ಶ್ರೀಕೃಷ್ಣ  ಯಾನೆ ಸುಮಂತ್ (21) ಎಂಬಾತನನ್ನು ಬದಿಯಡ್ಕ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ನೇತೃತ್ವದಲ್ಲಿ ಎಸ್‌ಐ ರಾಜೇಶ್ ಬಂಧಿಸಿದ್ದಾರೆ. ಈ ತಿಂಗಳ 14ರಂದು ಶ್ರೀಕೃಷ್ಣ ೧೫ರ ಹರೆಯದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಂತೆ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು. ಇದನ್ನರಿತ ಆರೋಪಿ ತಲೆಮರೆಸಿಕೊಂಡಿದ್ದನು. ಇದರಿಂದ ಎಎಸ್‌ಐ ಪಿ.ಕೆ. ಪ್ರಸಾದ್ ನೇತೃತ್ವದ ಪೊಲೀಸರು ಶೋಧ …

ವಾರಗಳ ಹಿಂದೆ ನಾಪತ್ತೆಯಾದ ಯುವತಿಗಾಗಿ ಮುಂದುವರಿದ ತೀವ್ರ ಶೋಧ

ಕಾಸರಗೋಡು: ವಾರಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಪತ್ತೆಗಾರಿರುವ ಶೋಧ ಕಾರ್ಯಾಚರಣೆಯನ್ನು ವಿದ್ಯಾನಗರ ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಪಾಡಿ ಗ್ರಾಮದ ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ (39) ಎಂಬವರು ಅಕ್ಟೋಬರ್ ೨೫ರಂದು ಬೆಳಿಗ್ಗೆ ಮನೆಯಿಂದ ಹೊರಹೋಗಿದ್ದು, ನಂತರ ಅವರು ಹಿಂತಿರುಗಿಲ್ಲವೆಂದು ಅವರ ಮನೆಯವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ  ಆರಂಭಿಸಿದರೂ, ಅವರನ್ನು ಪತ್ತೆಹಚ್ಚಲು ಈ ತನಕ ಸಾಧ್ಯವಾಗಿಲ್ಲ. ಆದ್ದರಿಂದ ಪತ್ತೆಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇವರು ಎಲ್ಲಿಯಾದರೂ …

ಭಾರತದಾದ್ಯಂತ ಆತ್ಮಾಹುತಿ ದಾಳಿಗೆ ನೀಲನಕ್ಷೆ ತಯಾರಿಸಿದ ಜೈಶ್ ಎ ಮೊಹಮ್ಮದ್

ನವದೆಹಲಿ: ಈ ವರ್ಷ ಭಾರತದ ವಿವಿಧೆಡೆಗಳಲ್ಲಿ ವ್ಯಾಪಕ ಆತ್ಮಾಹುತಿ ಬಾಂಬರ್ ದಾಳಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್ ನೀಲನಕ್ಷೆ ತಯಾರಿಸಿದೆ ಎಂಬ ಆಘಾತಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ನವದೆಹಲಿಯಲ್ಲಿ ನಡೆದ ಸ್ಫೋಟ ಕೇವಲ ಒಂದು ಟ್ರಯಲ್ ಮಾತ್ರವೇ ಆಗಿತ್ತು. ಭಾರತದಾದ್ಯಂತವಾಗಿ ಇಂತಹ ದಾಳಿ ನಡೆಸುವ ಭಾರೀ ಷಡ್ಯಂತ್ರಕ್ಕೆ ಜೈಶ್ ಎ ಮೊಹಮ್ಮದ್ ರೂಪು ನೀಡಿದೆ ಎಂಬ ಸ್ಪಷ್ಟ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.ಭಯೋತ್ಪಾದಕ ಹಣಕಾಸು ಮತ್ತು ಜಿಹಾದ್ಗಾಗಿ ಜೈಶ್ ಎ ಮೊಹಮ್ಮದ್ ಡಿಜಿಟಲ್ …

‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಸೆರೆ

ಬದಿಯಡ್ಕ: ‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಇನ್ನೋರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಸಾಲತ್ತಡ್ಕ ನಿವಾಸಿ ಇಕ್ಬಾಲ್ ಪಿ.ಎಂ. ಬಂಧಿತ ವ್ಯಕ್ತಿ. ಈತ ಬದಿಯಡ್ಕ, ಕಾಸರಗೋಡು ಮತ್ತು ಕರ್ನಾಟಕದಲ್ಲಿ ದಾಖಲಿಸಿಕೊಳ್ಳಲಾದ ಹಲವು ಮಾದಕ ದ್ರವ್ಯ ಸಾಗಾಟ ಪ್ರಕಣದ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2019ರಂದು 41.140 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಪ್ರಕರಣದಲ್ಲಿ ಹಾಗೂ 2025 ರಲ್ಲಿ ಮಾದಕ ದ್ರವ್ಯವಾದ 26,100 ಗ್ರಾಂ …

ಹೆದ್ದಾರಿಯಲ್ಲಿ ಸಂಚರಿಸುವ  ವಾಹನಗಳ ನಿರೀಕ್ಷಿಸುವ ನಿಯಂತ್ರಣ ಕೊಠಡಿ ಸಜ್ಜು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಪ್ರಥಮ  ರೀಚ್ ತಲಪ್ಪಾಡಿಯಿಂದ ಚೆಂಗಳ ತನಕ ಪೂರ್ತಿಗೊಳ್ಳುವ ಹಂತದಲ್ಲಿದ್ದು,  ಈ ಮೂಲಕ ಸಾಗುವ ವಾಹನಗಳು ಜಾಗ್ರತೆ ವಹಿಸಬೇಕಾ ಗಿದೆ. ತಲಪ್ಪಾಡಿಯಿಂದ ಚೆಂಗಳದವ ರೆಗಿನ ಹೆದ್ದಾರಿಯಲ್ಲಿ ಸಂಪೂರ್ಣ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದರ ನಿಯಂತ್ರಣ ಕೊಠಡಿಗೆ ಮಂಜೇಶ್ವರ ದಲ್ಲಿ ಚಾಲನೆ ನೀಡಲಾಗಿದೆ. ಮಂಜೇಶ್ವರ ರೈಲು ನಿಲ್ದಾಣ ಸಮೀಪದ ಸರ್ವೀಸ್ ರಸ್ತೆ ಬಳಿಯಲ್ಲಿ ನಿಯಂತ್ರಣ ಕೊಠಡಿ ಸಿದ್ಧಗೊಂಡಿದೆ. ಅಲ್ಲದೆ ಇಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  ಇಲ್ಲಿ ಸಿಸಿ ಕ್ಯಾಮರಾ ನಿಯಂತ್ರಣ ಕೊಠಡಿ, …

ಪುತ್ರಿಯನ್ನು 3 ಬಾರಿ ಮಾನಭಂಗ ಗೈದ ತಂದೆಗೆ 178 ವರ್ಷ ಕಠಿಣ ಸಜೆ, 10.75 ಲಕ್ಷ ರೂ. ದಂಡ ಶಿಕ್ಷೆ

ಮಂಜೇರಿ: 11 ವರ್ಷದ ಪುತ್ರಿಯನ್ನು ಮಾನಭಂಗಗೈದ ತಂದೆಗೆ ಮಂಜೇರಿ ಸ್ಪೆಷಲ್ ಪೋಕ್ಸೋ ನ್ಯಾಯಾಲಯ ವಿವಿಧ ಕಾಯ್ದೆಗಳಲ್ಲಾಗಿ 178 ವರ್ಷ 1 ತಿಂಗಳು ಕಠಿಣ ಸಜೆ, 10.75 ಲಕ್ಷ ರೂ. ದಂಡ ಶಿಕ್ಷೆ ವಿಧಿಸಿದೆ. ಅರಿಕೋಡ್ ನಿವಾಸಿಯಾದ ನ್ಯಾಯಾಧೀಶ ಎ.ಎಂ. ಅಶ್ರಫ್ ಈ ಶಿಕ್ಷೆ ಘೋಷಿಸಿದ್ದಾರೆ. ಪೋಕ್ಸೋ ಆಕ್ಟ್ನ ಮೂರು ವಿಭಾಗಗಳಲ್ಲಾಗಿ ಭಾರತೀಯ ಶಿಕ್ಷಾ ಕಾನೂನಿನ 376 ಕಾಯ್ದೆಯಲ್ಲಿ ತಲಾ 40 ವರ್ಷದಂತೆ ಕಠಿಣ ಸಜೆ ಹಾಗೂ 2 ಲಕ್ಷ ರೂ. ದಂಡ ಪಾವತಿಸಬೇಕಾಗಿದೆ. ದಂಡ ಪಾವತಿಸದಿದ್ದರೆ ಪ್ರತಿ …

ಉಪಯೋಗಶೂನ್ಯಗೊಂಡ ಕೊಳವೆ ಬಾವಿಯಿಂದ ಅಪಾಯ ಆಹ್ವಾನ

ಉಪ್ಪಳ: ಕೊಳವೆ ಬಾವಿ ಯೊಂದು ಉಪಯೋಗ ಶೂನ್ಯ ಗೊಂಡು ತುಕ್ಕುಹಿಡಿದು ಅಪಾಯ ಆಹ್ವಾನಿಸುತ್ತಿದೆ.  ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ-ಪುಳಿಕುತ್ತಿ ರಸ್ತೆಯಲ್ಲಿ ಸುಮಾರು 15 ವರ್ಷಗಳಿಂದ ಉಪಯೋಗ ಶೂನ್ಯಗೊಂಡಿರುವ ಕೊಳವೆಬಾವಿ ಈಗ ಅಪಾಯಕ್ಕೆ ಕಾರಣವಾಗಿದೆ. ಇದರ  ಹ್ಯಾಂಡಲ್ ಸಹಿತದ ಭಾಗಗಳು ಜೀರ್ಣಗೊಂಡು ಮುರಿದುಬಿದ್ದಿದ್ದು, ಹೊಂಡ ಬಾಯ್ದೆರದ ಸ್ಥಿತಿಯಲ್ಲಿದೆ. ರಸ್ತೆ ಬದಿಯಲ್ಲೇ ಇರುವ ಈ ಕೊಳವೆ ಬಾವಿಯ ಹ್ಯಾಂಡಲ್ ಮಗುಚಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೂ ಸಮಸ್ಯೆಯಾಗಿದೆ. ಅಲ್ಲದೆ ಮಕ್ಕಳು ಸಹಿತ ರಸ್ತೆಯಲ್ಲಿ ಸಂಚರಿಸುವವರಿಗೆ ಬಾಯ್ದೆರೆದಿರುವ ಕೊಳವೆ ಬಾವಿ ಭೀತಿ ಸೃಷ್ಟಿಸುತ್ತಿದೆ.  …

ಹೆಚ್ಚುತ್ತಿರುವ ಅಪ್ರಾಪ್ತರ ವಾಹನ ಸವಾರಿ : ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ

ಮಂಜೇಶ್ವರ: ಅಪ್ರಾಪ್ತರು ಚಲಾಯಿಸಿದ ದ್ವಿಚಕ್ರ ವಾಹನಗಳು, ದಾಖಲೆಪತ್ರಗಳಿಲ್ಲದೆ ಚಲಾಯಿಸಿದ ವಾಹನ,ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದು  ಮೊದಲಾದ ಪ್ರಕರಣಗಳಲ್ಲಿ ಪೊಲೀಸರು ವಾಹನಗಳನ್ನು ವಶಪಡಿಸುತ್ತಿದ್ದಾರೆ. ಈ ರೀತಿಯ ತಪಾಸಣೆಯನ್ನು ಮಂಜೇಶ್ವರ ಪೊಲೀಸರು ಬಿಗುಗೊಳಿಸಿದ್ದು, ಕಳೆದ ಒಂದು ವಾರದಲ್ಲಿ 15ರಷ್ಟು ಪ್ರಕರಣಗಳು ದಾಖಲಾಗಿವೆ. ಮೊನ್ನೆ ಸಂಜೆ ಮೀಯಪದವಿನಲ್ಲಿ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಾಯಿಕಟ್ಟೆ ಭಾಗದಿಂದ ಮೀಯಪದವು ಕಡೆಗೆ ಅಪ್ರಾಪ್ತ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಇಂದು ಮುಂಜಾನೆ ಕಣ್ವತೀರ್ಥದಿಂದ ಮದ್ಯ ದಮಲಿನಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದಾಗ ವಾಹನವನ್ನು ವಶಪಡಿಸಿ …