ಜಿಲ್ಲಾ ಪಂಚಾಯತ್, ಬ್ಲೋಕ್ ಪಂಚಾಯತ್ ಡಿವಿಶನ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳು

ಕಾಸರಗೋಡು: ಜಿಲ್ಲಾ ಪಂಚಾ ಯತ್‌ಗೆ,  ವಿವಿಧ ಬ್ಲೋಕ್ ಪಂಚಾ ಯತ್‌ಗಳಿಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಯಾದಿಯನ್ನು ಅಂತಿಮ ಗೊಳಿಸಲಾಗಿದೆ.  ಜಿಲ್ಲಾ ಪಂಚಾಯ ತ್‌ನ ಮಂಜೇಶ್ವರ ಡಿವಿಶನ್‌ನಿಂದ ಜಯಂತಿ ಶೆಟ್ಟಿ ಸ್ಪರ್ಧಿಸಲಿದ್ದು, ಕುಂಬಳೆಯಲ್ಲಿ ಸುನಿಲ್ ಅನಂತಪುರ, ಚೆಂಗಳದಿಂದ ನಳಿನಿಕೃಷ್ಣ, ಬೇಕಲದಿಂದ ಮಾಲತಿ ಪಿ, ಪೆರಿಯಾದಿಂದ  ಹೇಮ ಮಣಿಕಂಠನ್, ಚೆರ್ವತ್ತೂರಿನಿಂದ ಪಿ.ವಿ.ಶೀಬಾ ಸ್ಪರ್ಧಿಸುವರು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಆರಿಕ್ಕಾಡಿ ಡಿವಿಶನ್‌ನಿಂದ ಪುಷ್ಪಲತಾ ಪಿ. ಶೆಟ್ಟಿ, ಉಳಿಯತ್ತಡ್ಕದಿಂದ ಸರಸ್ವತಿ ಚೇನಕ್ಕೋಡು, ಬೇಳದಿಂದ ಪ್ರಶಾಂತ್ ರೈ, ಪಾಡಿಯಿಂದ ಚಂದ್ರಾವತಿ, ಸಿವಿಲ್ ಸ್ಟೇಶನ್‌ನಿಂದ ಶಶಿಧರನ್ …

ಪಡಿತರ ಚೀಟಿಯಲ್ಲಿ ಕನ್ನಡವನ್ನುಮುದ್ರಿಸಲು ಸರಕಾರ ಆದೇಶ

ಕಾಸರಗೋಡು: ಕನ್ನಡದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪಡಿತರ ಚೀಟಿಯಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕೇರಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯವರು ಪ್ರಸ್ತುತ ಇಲಾಖೆಯ ಆಯುಕ್ತರಿಗೆ ನಿರ್ದೇಶ ನೀಡಿದ್ದಾರೆ. ರೇಶನ್ ಕಾರ್ಡ್‌ಗಳು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿದ್ದು, ಕನ್ನಡ ಭಾಷಾ ಅಲ್ಪ ಸಂಖ್ಯಾತರ ಹಿತಾಸಕ್ತಿ ಪರಿಗಣಿಸಿ, ರೇಶನ್ ಕಾರ್ಡ್‌ಗಳಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು …

ಬಿಎಲ್‌ಒಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ 10 ವರ್ಷಗಳ ತನಕ ಸಜೆ

ಕಾಸರಗೋಡು; ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮದಂತೆ ಕರ್ತವ್ಯದಲ್ಲಿ ನಿರತರಾಗುವ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್)ಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾ ಗುವುದೆಂದು ಕೇಂದ್ರ ಚುನಾವಣಾ ಆಯೋಗದ ರಾಜ್ಯ ಆಯುಕ್ತ ರತನ್ ಯು. ಖೇಲ್ಕರ್ ತಿರುವನಂತಪುರ ದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ. ಬಿಎಲ್‌ಒಗಳು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲು ಚುನಾವಣಾ ಆಯೋಗ ನಿಯೋಜಿಸಿದ ಸಾರ್ವಜನಿಕ ಸೇವಕರಾಗಿದ್ದಾರೆ. ಆದ್ದರಿಂದ ಎಸ್‌ಐಆರ್ ನಡೆಸುವ ವೇಳೆ ಅವರಿಗೆ ಅಡಚಣೆ   ಉಂಟುಮಾಡಿದಲ್ಲಿ ಅದು ಹತ್ತು …

ಮಜಿಬೈಲು ತಿರುವಿನಲ್ಲಿ ತುಂಬಿಕೊಂಡ ಕಾಡು ಪೊದೆ: ಅಪಾಯಭೀತಿ

ಮೀಂಜ:  ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲ್ ಸೇತುವೆ ಸಮೀಪ ತಿರುವಿನಲ್ಲಿ ಕಾಡುಪೊದೆ ಆವರಿಸಿಕೊಂ ಡಿದ್ದು ವಾಹನ ಸವಾರರಲ್ಲಿ ಅಪಘಾತಭೀತಿ ಸೃಷ್ಟಿಯಾಗಿದೆ.  ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವುಗಳಿದ್ದು ಎರಡೂ ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಆದರೆ ಸೇತುವೆ ಸಮೀಪದಲ್ಲಿ  ದೊಡ್ಡ ತಿರುವು ಇದ್ದು ಪೊದೆಗಳು ಆವರಿಸಿದ ಕಾರಣ ಗಮನಕ್ಕೆ ಬಾರದೆ ಅಪಾಯ ಉಂಟಾಗುವ ಸಾಧ್ಯತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮೀಯಪದವು ಭಾಗದಿಂದ ಹೊಸಂಗಡಿಗೆ ಹಾಗೂ ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ರಸ್ತೆ ಬದಿಯಲ್ಲಿ ತುಂಬಿಕೊಂಡಿರುವ …

ರೈಲು ಯಾತ್ರೆ ಮಧ್ಯೆ ಮೊಬೈಲ್ ಕದ್ದ ಆರೋಪಿ ಗಂಟೆಗಳೊಳಗೆ ಸೆರೆ

ಕಾಸರಗೋಡು: ರೈಲಿನಲ್ಲಿ ನಿದ್ರಿಸುತ್ತಿದ್ದ ಕಾಸರಗೋಡು ನಿವಾಸಿಯ ಮೊಬೈಲ್ ಫೋನ್ ಕಳವುಗೈದ ಕಳ್ಳನನ್ನು ಗಂಟೆಗಳೊಳಗೆ ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಕನ್ಯಾಕುಮಾರಿ ನಿವಾಸಿ ಇ. ಸುರೇಶ್ (47) ಸೆರೆಯಾದವ. ಇತ್ತೀಚೆಗೆ ಕಾಸರಗೋಡು ನಿವಾಸಿ ಹಾಶಿಂ ಬಂಬ್ರಾಣಿಯವರ ಮೊಬೈಲ್ ಫೋನನ್ನು ಆರೋಪಿ ರೈಲಿನಿಂದ ಕಳವುಗೈದಿದ್ದನು. ಎರ್ನಾಕುಳಂನಿಂದ ಒಕೆ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಹಾಶಿಂ ಬಂಬ್ರಾಣಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.

ತ್ರಿಸ್ತರ ಪಂ. ಚುನಾವಣೆ : ಜಿಲ್ಲೆಯಲ್ಲಿ ಇದುವರೆಗೆ 830 ನಾಮಪತ್ರಿಕೆ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆ ಅಂಗವಾಗಿ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳು ಹಾಗೂ ಡಿವಿಶನ್ಗಳಲ್ಲಿ ನಿನ್ನೆ ಸಂಜೆ ವರೆಗೆ 830 ನಾಮಪತ್ರಿಕೆಗಳನ್ನು ಸಲ್ಲಿಸಲಾಗಿದೆ. ನಾಳೆ ವರೆಗೆ ನಾಮಪತ್ರ ಸಲ್ಲಿಸಲು ಸಮ ಯಾವಕಾಶವಿದೆ. ನವಂಬರ್ 22ರಂದು ಸೂಕ್ಷ್ಮ ತಪಾಸಣೆ ನಡೆಯಲಿದೆ. ನವಂಬರ್ 24ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದು.ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ ಹೊಸತಾಗಿ ಐದು ನಾಮಪತ್ರಗಳನ್ನು ನಿನ್ನೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾ ಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಉಪಚುನಾವಣೆ ಅಧಿಕಾರಿ ಎಡಿಎಂ ಅಖಿಲ್ರಿಗೆ …

ಕುಂಬಳೆಯಲ್ಲಿ ಪ್ರಮುಖ ಪಕ್ಷಗಳ ವಿರುದ್ಧ  ಮಾಹಿತಿ ಹಕ್ಕು ಕಾರ್ಯಕರ್ತ ಚುನಾವಣಾ ಕಣಕ್ಕೆ

ಕುಂಬಳೆ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕುಂಬಳೆ ಪಂಚಾಯತ್‌ನಲ್ಲಿ ಪ್ರಮುಖ ಪಕ್ಷಗಳ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕುಂಬಳೆ ಪಂಚಾಯತ್‌ನಲ್ಲಿ ಹೊಸತಾಗಿ ರೂಪೀಕರಿಸಿದ ಶೇಡಿಕಾವು 24ನೇ ವಾರ್ಡ್‌ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯ್ಕ್ ಸ್ಪರ್ಧಿಸುತ್ತಿದ್ದಾರೆ. ಕುಂಬಳೆ ಪೇಟೆ ಒಳಗೊಂಡ ಈ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಈ ಹಿಂದೆ ಗೆಲುವು ಸಾಧಿಸಿದ್ದವು. ಇದೀಗ ಈ ವಾರ್ಡ್‌ನಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕೇಶವ ನಾಯ್ಕ್ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕುಂಬಳೆ ಪಂಚಾಯತ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರತಿಭಟಿಸಿ ತಾನು …

ಎಕೆಪಿಎ ವೆಸ್ಟ್ ಯೂನಿಟ್‌ನಿಂದ ವಿಶೇಷ ಆರೈಕೆ ಕೇಂದ್ರದಲ್ಲಿ ಕಾರ್ಯಕ್ರಮ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ವೆಸ್ಟ್ ಯೂನಿಟ್‌ನಿಂದ ಪರವನಡ್ಕದಲ್ಲಿ ರುವ ವಿಶೇಷ ಆರೈಕೆ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು.  ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಾರ್ಡ್ ಪ್ರತಿನಿಧಿ ಚಂದ್ರ ಶೇಖರನ್ ಕುಳಂಗರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು. ಸಂಯೋಜಕ ಸುಧೀಶ್, ಶಿಕ್ಷಕಿ ದಿವ್ಯಾ, ಮಿನಿ ಟೀಚರ್, ಸ್ಪೀಚ್ ತೆರಾಫಿಸ್ಟ್ ಸಿತಾರ, ಫಿಸಿಯೋ ತೆರಾಫಿಸ್ಟ್ ಭಾವನ, ಪೋಷಕರು, ಎಕೆಪಿಎ ಜಿಲ್ಲಾ ಕ್ರೀಡಾ ಸಂಯೋಜಕ ರತೀಶ್, ಸುಬ್ರಹ್ಮಣ್ಯ, …