ಮಾದಕದ್ರವ್ಯ ಸಾಗಾಟ ಪ್ರಕರಣ :ಆರೋಪಿಗೆ ಎರಡು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ದ್ರವ್ಯ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಎರಡು ವರ್ಷ ಮೂರು ತಿಂಗಳ ಕಠಿಣ ಸಜೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಣ್ಣೂರು ಮುಳಪ್ಪಿಲಂಗಾಡ್ ಕುಳಂ ಬಜಾರಿನ ರುಹೈಬ್ ಸಿ.ವಿ.(35)  ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ನಾಲ್ಕು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇ ಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಸೆಪ್ಟಂಬರ್ 6ರಂದು …

ಪೆರಿಯ ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ನಕಲಿ ಕೋವಿ ಅಡಗಿಸಿಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ, ಕಲ್ಯೋಟ್‌ನ ಪೊದೆಗಳೆಡೆಯಲ್ಲಿ ಅಡಗಿಸಿಟ್ಟ ಸ್ಥಿತಿಯಲ್ಲಿ ನಕಲಿ ಕೋವಿ ಪತ್ತೆಯಾಗಿದೆ. ಹೊಸದುರ್ಗ ಅಬಕಾರಿ ಅಧಿಕಾರಿ ಮದ್ಯ ಪತ್ತೆಹಚ್ಚುವುದಕ್ಕಾಗಿ ನಡೆಸಿದ ತಪಾಸಣೆ ಮಧ್ಯೆ ಕೋವಿ ಪತ್ತೆಯಾಗಿದೆ. ಮಾಹಿತಿ ತಿಳಿದು ತಲುಪಿದ ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಕೋವಿಯನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿದ್ದಾರೆ. ಪೆರಿಯ-ಉದಯಪುರಂ ರಸ್ತೆಯ ಕಲ್ಯೋಟ್‌ನಲ್ಲಿರುವ ಇರಿಗೇಶನ್ ಇಲಾಖೆಯ ರೈನ್ ಗೇಜ್ ಸ್ಟೇಶನ್‌ನ ಉತ್ತರ ಭಾಗದ ಪೊದೆಗಳ ಮಧ್ಯೆ ನಿನ್ನೆ ಸಂಜೆ ಕೋವಿಯನ್ನು ಪತ್ತೆಹಚ್ಚ ಲಾಗಿದೆ. ಎರಡು …

ಕಾರಿನಲ್ಲಿ ಸಾಗಿಸುತ್ತಿದ್ದ 6000 ಪ್ಯಾಕೆಟ್ ಪಾನ್‌ಮಸಾಲೆ ವಶ: ಓರ್ವ ಸೆರೆ

ಮಂಜೇಶ್ವರ: ರಾಜ್ಯದಲ್ಲಿ ನಿಷೇಧ ಹೇರಲಾದ ತಂಬಾಕು ಉತ್ಪನ್ನಗಳನ್ನು ಕಾಸರಗೋಡಿಗೆ ತಲುಪಿಸಿ ಮಾರಾಟಗೈಯ್ಯುವ ದಂಧೆ ಮತ್ತೆ ತೀವ್ರಗೊಂಡಿದೆ. ನಿನ್ನೆ ಮಂಜೇಶ್ವರ ಪೊಲೀಸರು ತಲಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ೬೦೦೦ ಪ್ಯಾಕೆಟ್ ಪಾನ್‌ಮಸಾಲೆ ಪತ್ತೆಹಚ್ಚಲಾಗಿದೆ. ಈ ಸಂಬಂಧ ಕಾರಿನಲ್ಲಿದ್ದ ಕಣ್ಣೂರು ಕೊಳಚ್ಚೇರಿ ಕಂಡಪ್ಪನ್ ಕಂಬಿಲ್ ತೇರು ನೋರ್ತ್‌ನ ಅನಿರುದ್ಧನ್ ಕೆ. (53) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ತಲಪಾಡಿ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಗಳೂರು ಭಾಗದಿಂದ ಉಪ್ಪಳ …