ಬಸ್‌ನಲ್ಲಿ ಗಾಂಜಾ ಸಹಿತ ಯುವಕ ಸೆರೆ

ಮಂಜೇಶ್ವರ:  ಗಾಂಜಾ ಸಹಿತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದ ಯುವಕನನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ಬಂಧಿಸಿದ್ದಾರೆ. ಕಾಸರಗೋಡು ಕೂಡ್ಲು ವಿಲ್ಲೇಜ್‌ನ ಬಳ್ಳಿಮೊಗರು ನಿವಾಸಿ ಗೌತಮ್ ಕೆ. (20) ಬಂಧಿತ ಯುವಕ ನಾಗಿದ್ದಾನೆ. ಮೊನ್ನೆ ಬೆಳಿಗ್ಗೆ ಮಂಗಳೂರು ಭಾಗದಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದಾಗ ಅದರ ಪ್ರಯಾಣಿಕನಾದ ಗೌತಮ್‌ನ ಕೈಯಿಂದ 10 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಈ ಸಂ ಬಂಧ ಈತನನ್ನು ಬಂಧಿಸಿ ಎನ್‌ಡಿಪಿ ಎಸ್ ಕೇಸು ದಾಖಲಿಸಲಾಗಿದೆ. ಅಬಕಾರಿ …

ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದರು. ಕಲೆಕ್ಟರೇಟ್‌ಗೆ ಮೆರವಣಿಗೆಯೊಂದಿಗೆ ತಲುಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎಂ. ವಿಜಯ ಕುಮಾರ್ ರೈ (ವರ್ಕಾಡಿ), ಮಣಿಕಂಠ ಪಟ್ಲ (ಪುತ್ತಿಗೆ), ರಾಮಪ್ಪ ಕೆ.ಪಿ (ಬದಿಯಡ್ಕ), ಬೇಬಿ ಜಿ. (ದೇಲಂಪಾಡಿ), ಮನುಲಾಲ್ ಎಂ. (ಕುತ್ತಿಕ್ಕೋಲ್), ಧನ್ಯಾ ಎಂ. (ಕಳ್ಳಾರ್), ಟಿ.ಡಿ. ಭರತನ್ (ಕಯ್ಯೂರು), ರಮಣಿ ಕೆ.ಎಸ್. (ಚಿಟ್ಟಾರಿಕಲ್), ಶೀಬಾ ಟಿ. (ಚೆರುವತ್ತೂರು), ಎ. ವೇಲಾಯುಧನ್ (ಮಡಿಕೈ), ಹೇಮಲತ (ಪೆರಿಯ), ಮಾಲತಿ (ಬೇಕಲ), ಸೌಮ್ಯಾ ಎಸ್. …

ಎಸ್‌ಐಆರ್: ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿ; 26ರಂದು ಅರ್ಜಿಗಳ ಪರಿಶೀಲನೆ

ತಿರುವನಂತಪುರ: ಕೇರಳದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿಗೊಳಿಸಿದೆ. ಕೇರಳದಲ್ಲ್ಲಿ ಎಸ್‌ಐಆರ್ ಕ್ರಮವನ್ನು ಪ್ರಶ್ನಿಸಿ ಹಾಗೂ ಅದರ ವಿರುದ್ಧ ಕೇರಳ ಸರಕಾರ, ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ರ ನೇತೃತ್ವದ ಸುಪ್ರಿಂಕೋರ್ಟ್‌ನ ಪೀಠ ಕೊನೆಗೆ ಆ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಅರ್ಜಿಗಳ ಮೇಲಿನ ಮುಂದಿನ …

ಜಿಲ್ಲಾ ಪಂಚಾಯತ್ ವಿವಿಧ ಡಿವಿಶನ್‌ಗಳಿಂದ  ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ಪುತ್ತಿಗೆ ಡಿವಿಶನ್‌ನಿಂದ ಸೋಮಶೇಖರ ಜೆ.ಎಸ್, ವರ್ಕಾಡಿಯಿಂದ ಹರ್ಷಾದ್ ವರ್ಕಾಡಿ, ಪಿಲಿಕೋಡ್‌ನಿಂದ ಕರಿಂಬಿಲ್ ಕೃಷ್ಣನ್, ಉದುಮದಿಂದ ಸುಕುಮಾರಿ ಶ್ರೀಧರನ್, ಚಿತ್ತಾರಿಕ್ಕಲ್‌ನಿಂದ ವಿನ್ಸಿ ಜೈನ್, ಕಳ್ಳಾರ್‌ನಿಂದ ಸ್ಟಿಮಿ ಸ್ಟೀಫನ್, ಕಯ್ಯೂರ್‌ನಿಂದ ಸುಂದರನ್ ಸ್ಪರ್ಧಿಸುವರು. ಇವರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಕಲೆಕ್ಟರೇಟ್‌ಗೆ ತಲುಪಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಐಕ್ಯರಂಗದ ಸಂಚಾಲಕ ಗೋವಿಂದನ್ ನಾಯರ್,ಸೇವಾ ದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚ್ಚೇರಿ, ಪದಾಧಿಕಾರಿಗಳಾದ …

ಯುವತಿಗೆ ಕೇಬಲ್ ವಯರ್ ಉಪಯೋಗಿಸಿ ಹಲ್ಲೆ: ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆರೆ

ಕೊಚ್ಚಿ: ಯುವತಿಯನ್ನು ಕ್ರೂರವಾಗಿ ಹಲ್ಲೆಗೈದ ಪ್ರಕರಣದಲ್ಲಿ ಯುವಮೋರ್ಚಾ ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪು ಪರಮಶಿವಂ ಸೆರೆಯಾಗಿದ್ದಾನೆ. ಕೊಲೆಯತ್ನಕ್ಕೆ ಕೇಸು ದಾಖಲಿಸಲಾಗಿದೆ. ಮೊಬೈಲ್ ಚಾರ್ಜರ್ ಕೇಬಲ್ ಉಪಯೋಗಿಸಿ ಈತ ಯುವತಿಗೆ ಹಲ್ಲೆಗೈದಿದ್ದಾನೆ. ದೇಹದಲ್ಲಿ ಸಂಪೂರ್ಣ ಹಲ್ಲೆಯ ಗಾಯಗಳೊಂದಿಗೆ ಯುವತಿ ಮರಡ್ ಪೊಲೀಸ್ ಠಾಣೆಗೆ ನೇರವಾಗಿ ಹಾಜರಾಗಿ ಮಾಹಿತಿ ನೀಡಿದ್ದಾಳೆ. ಈಕೆಯ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ. ಕಳೆದ 5 ವರ್ಷದಿಂದ ಯುವತಿ ಹಾಗೂ ಗೋಪು ಪರಮಶಿವ ಜೊತೆಯಾಗಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಈತ ಯುವತಿಗೆ ನಿರಂತರವಾಗಿ ದೈಹಿಕ ದೌರ್ಜನ್ಯಗೈಯ್ಯುತ್ತಿದ್ದನೆಂದು …

ಅದ್ರುಕುಳಿಯಿಂದ ನಾಪತ್ತೆಯಾದ ಯುವತಿ ಪತ್ತೆಗಾಗಿ ಲುಕೌಟ್ ನೋಟೀಸ್

ಕಾಸರಗೋಡು: ಚೆರ್ಕಳ ಪಾಡಿ ಅದ್ರುಕುಳಿಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದರಂಗವಾಗಿ ವಿದ್ಯಾನಗರ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದಾರೆ. ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ(39)ಯ ಪತ್ತೆಗಾಗಿ ಲುಕೌಟ್ ನೋಟೀಸ್ ಹೊರಡಿಸಲಾಗಿದೆ. ಕಳೆದ ಅಕ್ಟೋಬರ್ 25ರಂದು ಬೆಳಿಗ್ಗೆ ಮನೆಯಿಂದ ಹೋದ ಲಕ್ಷ್ಮಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್‌ರ ನೇತೃತ್ವದಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆಯಾದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯ …

ಪಿಡಬ್ಲ್ಯುಡಿಯ ಅನಾಸ್ಥೆ: ಬ್ಯಾಂಕ್ ರಸ್ತೆ ದುರಸ್ತಿಗೊಳಿಸದಿದ್ದರೆ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸುವುದಾಗಿ ಎಚ್ಚರಿಕೆ

ಕಾಸರಗೋಡು: ನಗರದ ರೈಲ್ವೇ ನಿಲ್ದಾಣ-ಕರಂದಕ್ಕಾಡು-ಮಧೂರು ರೂಟ್‌ನಲ್ಲಿ ರಸ್ತೆ ಶೋಚನೀಯಾವಸ್ಥೆ ಗೊಂಡು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಹಲವು ಬಾರಿ ದೂರು ನೀಡಿದ್ದರೂ ಇದುವರೆಗೂ ಸೂಕ್ತ ಪರಿಹಾರ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆ  ಡಾಮರೀಕರಣ ಆರಂಭಗೊಂಡು ತಿಂಗಳುಗಳು ಕಳೆದರೂ ಇನ್ನೂ ಕೂಡಾ ಕಾಮಗಾರಿ ಪೂರ್ತಿ ಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟ ವರಿಗೆ ಈ ಬಗ್ಗೆ ತಿಳಿಸಲಾಗಿದ್ದರೂ ಮಳೆಯ ಹೆಸರಲ್ಲಿ ಮುಂದೂಡಲಾಗು ತ್ತಿತ್ತು.  ಮಳೆಗಾಲ ಮುಗಿದಾಗ ಡಾಮರೀಕರಣ ಪೂರ್ತಿಗೊಳಿಸುವು ದಾಗಿ ಪಿಡಬ್ಲ್ಯು ಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ರಸ್ತೆಯಲ್ಲಿ …