ನಗರದಲ್ಲಿ ರಸಮಂಜರಿ ಕಾರ್ಯಕ್ರಮ ವೇಳೆ ಪ್ರೇಕ್ಷಕರ ಭಾರೀ ನೂಕುನುಗ್ಗಲು: ಉಸಿರುಗಟ್ಟುವ ವಾತಾವರಣ; ಕುಸಿದುಬಿದ್ದು 12ಕ್ಕೂ ಹೆಚ್ಚು
ಮಂದಿ ಆಸ್ಪತ್ರೆಯಲ್ಲಿ, ಲಾಠಿ ಪ್ರಯೋಗಿಸಿದ ಪೊಲೀಸರು, ಸಂಘಟಕರ ವಿರುದ್ಧ ಕೇಸು ಕಾಸರಗೋಡು: ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಅಭೂತಪೂರ್ವ ಸಂದಣಿಯಿಂದಾಗಿ ಭಾರೀ ನೂಕುನುಗ್ಗಲು ಹಾಗೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ೧೨ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಗರದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿಯ ಖಾಸಗಿ ಸ್ಥಳದಲ್ಲಿ ಎಫ್‌ಎಲ್‌ಇಎ ಎಂಬ ಹೆಸರಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ೩೦೦೦ ಪ್ರೇಕ್ಷಕರು ಭಾಗವಹಿಸುವ ಸೌಕರ್ಯ ಏರ್ಪಡಿಸಲಾಗಿದೆ. ಆದರೆ …