ರೈಲ್ವೇ ನಿಲ್ದಾಣದಿಂದ ಪಾನ್‌ಮಸಾಲೆ ಸಹಿತ ಇಬ್ಬರ ಸೆರೆ

ಮಂಜೇಶ್ವರ: ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ  1632 ಪ್ಯಾಕೆಟ್ ಪಾನ್‌ಮಸಾಲೆ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಮರವಟ್ಟಂ ನಿವಾಸಿ ಶೌಕತ್‌ಅಲಿ (43), ಕಣ್ಣೂರು ಚೆಂಗಲಾಯಿ ನಿವಾಸಿ ಮೊಹಮ್ಮದ್ ಮೊಯ್ದೀನ್ (65) ಸೆರೆಗೀಡಾದವರು. ಶನಿವಾರ ಅಪರಾಹ್ನ 2 ಗಂಟೆಗೆ ಪ್ಲಾಟ್‌ಫಾರ್ಮ್‌ನಲ್ಲಿ ಗೋಣಿಚೀಲ ಸಹಿತ ನಿಂತಿದ್ದ ವೇಳೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಪಾನ್‌ಮಸಾಲೆ ಪತ್ತೆಯಾಗಿದೆ. ಠಾಣೆ ಎಸ್‌ಐ ರತೀಶ್ ನೇತೃತ್ವದ ಪೊಲೀಸರು ಇವರನಬ್ಬರನ್ನು ಕಸ್ಟಡಿಗೆ ತೆಗೆದು ಮಾಲನ್ನು ವಶಪಡಿಸಿದ್ದಾರೆ.

ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಣ

ಕಾಸರಗೋಡು: ಕಾಸರಗೋಡು ನಿವಾಸಿಯನ್ನು ಕಲ್ಲಿಕೋಟೆಯಲ್ಲಿ ಅಪಹರಿಸಲಾಗಿದೆ. ಯೂನುಸ್ ಎಂಬಾ ತನನ್ನು ಚೇವಾಯೂರಿನಲ್ಲಿ ಅಪಹರಿಸಲಾ ಗಿದ್ದು, ಘಟನೆಯಲ್ಲಿ ನಾಲ್ಕು ಮಂದಿಯನ್ನು ಚೇವಾಯೂರ್ ಪೊಲೀಸರು ಕಸ್ಟಡಿಗೆ ಚೆಗೆದಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಅಪಹರಣಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಸ್ಟಡಿಗೆ ತೆಗೆದವರನ್ನು ವಿಚಾರಣೆಗೆ ಳಪಡಿಸಲಾಗುತ್ತಿದೆ.

ಆಟೋದಲ್ಲಿ ಮದ್ಯ ಸಾಗಾಟ: ಚಾಲಕ ಪರಾರಿ

ಕಾಸರಗೋಡು: ಆಟೋದಲ್ಲಿ 34.2 ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ವಶಪಡಿಸಲಾಗಿದೆ. ಆಟೋಚಾಲಕ ವಾಹನವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಶನಿವಾರ ರಾತ್ರಿ 8 ಗಂಟೆ ವೇಳೆ ಕೂಡ್ಲು ಪಾಯಿಚ್ಚಾ ಲ್‌ನಲ್ಲಿ ಘಟನೆ ನಡೆದಿದೆ. ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ ಪ್ರಿವೆಂಟಿವ್ ಆಫೀಸರ್ ಕೆ.ವಿ. ರಂಜಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಆಟೋವನ್ನು ತಡೆದು ನಿಲ್ಲಿಸಿದಾಗ ಚಾಲಕ ಪರಾರಿ ಯಾಗಿದ್ದಾನೆ.  ಮಾಲನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ಕೂಲಿ ಕಾರ್ಮಿಕ ನಿಧನ

ಮುಳ್ಳೇರಿಯ: ನೆಟ್ಟಣಿಗೆ ನಾಕೂರು ನಿವಾಸಿ, ಕೂಲಿ ಕಾರ್ಮಿಕ ಗುರುಪ್ರಸಾದ್ (30) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ದಿ| ದೇವಪ್ಪ ನಾಯ್ಕ್- ಇಂದಿರ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಸಹೋದರ ಯೋಗೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.

ಬಾಲಗೋಕುಲ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೇಂದ್ರ- ನ್ಯಾಯವಾದಿ ಅಕ್ಷತಾ

ಸೀತಾಂಗೋಳಿ: ಮಕ್ಕಳನ್ನು ಶಾಲೆಗೆ ಸೇರಿಸೋದು, ಅವರಿಗೆ ಬೇಕಾದ್ದನ್ನು ತೆಗೆದುಕೊಟ್ಟ ಮಾತ್ರಕ್ಕೆ ಹೆತ್ತವರ ಜವಾಬ್ದಾರಿ ಮುಗಿಯೋದಿಲ್ಲ. ಅವರೇನು ಮಾಡುತ್ತಾರೆ? ಯಾರೊಂ ದಿಗೆ ಸೇರುತ್ತಾರೆ? ಅವರ ಇಷ್ಟ ಕಷ್ಟ ಗಳೇನು ಎನ್ನುವುದನ್ನೂ ಗಮನಿಸ ಬೇಕು ಎಂದು ಯುವ ನ್ಯಾಯವಾದಿ ಅಕ್ಷತಾ ಇಕ್ಕೇರಿ ಅಭಿಪ್ರಾಯಪಟ್ಟರು. ಮುಕಾರಿಕಂಡಕ್ಕೆ ಸಮೀಪದ ಕುಕ್ಕೂಡೆಲ್‌ನ ಸ್ವಾಮಿ ಕೊರಗಜ್ಜ ಬಾಲ ಗೋಕುಲ ಕುಣಿತ ಭಜನಾ ಸಂಘದ 2ನೇ ವಾರ್ಷಿಕೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಭಾಷಣ ಮಾಡಿ ಮಾತಾ ಡುತ್ತಿದ್ದರು.ಕ್ಷೇತ್ರಗಳು ಜೀವನದಲ್ಲಿ ಸಂಸ್ಕಾರ, ಧರ್ಮ ಜಾಗೃತಿ ಮೂಡಿಸುವ …