ಸಬ್ ಜೈಲ್‌ನಲ್ಲಿದ್ದ ರಿಮಾಂಡ್ ಆರೋಪಿ ಸಾವು: ನಿಗೂಢತೆ ಆರೋಪ; ಪೊಲೀಸ್ ತನಿಖೆ ಆರಂಭ

ಕಾಸರಗೋಡು:  ಕಾಸರ ಗೋಡು ಸಬ್ ಜೈಲಿನಲ್ಲಿದ್ದ ರಿಮಾಂಡ್ ಆರೋಪಿ ಮೃತಪಟ್ಟ ಘಟನೆ ನಡೆದಿದೆ.  ದೇಳಿ ಕುನ್ನುಪ್ಪಾರದ ದಿ| ಅಬ್ದುಲ್ಲ ಎಂಬವರ ಪುತ್ರ ಮುಬಶೀರ್ (29) ಮೃತಪಟ್ಟ ವ್ಯಕ್ತಿ.  ಶಾರೀರಿಕ ಅಸೌಖ್ಯದ ಹಿನ್ನೆಲೆಯಲ್ಲಿ ಇಂದು ಮುಂಜಾನೆ 5.30ರ ವೇಳೆ ಮುಬಶೀರ್‌ನನ್ನು ಜೈಲು ಅಧಿಕಾರಿಗಳು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು.  ಅಷ್ಟರೊಳಗೆ ಸಾವು ಸಂಭವಿಸಿದೆಯೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಗಲ್ಫ್‌ನಲ್ಲಿದ್ದ ಮುಬಶೀರ್ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿ ಬಂದಿದ್ದರ. ಮೂರು ವಾರಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ವಾರಂಟ್ ಇರುವುದಾಗಿ ತಿಳಿಸಿ …

ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತಿಸಿದ ಕಂಡಕ್ಟರ್ ವಿರೋಧಿಸಿದ ವಿದ್ಯಾರ್ಥಿನಿಯನ್ನು ದಾರಿ ಮಧ್ಯೆ ಇಳಿಸಿ ಪ್ರತೀಕಾರ

ಕುಂಬಳೆ: ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಕಾಲೇಜು ವಿದ್ಯಾರ್ಥಿನಿಯನ್ನು ಸ್ಪರ್ಶಿಸಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಬಗ್ಗೆ ದೂರ ಲಾಗಿದೆ. ಕಂಡಕ್ಟರ್‌ನ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದ ವಿದ್ಯಾರ್ಥಿ ನಿಯನ್ನು ದಾರಿ ಮಧ್ಯೆ ಇಳಿಸಿ ಬಸ್ ನೌಕರರು ಪ್ರತೀಕಾರ ತೋರಿಸಿದ್ದಾರೆ. ನಿನ್ನೆ ಬೆಳಿಗ್ಗೆ ೮.೪೫ರ ವೇಳೆ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಂ ದ್ಯೋಡಿನಿಂದ ಪರೀಕ್ಷೆಗಾಗಿ ಮಂಗಳೂರಿನ ಕಾಲೇಜಿಗೆ ತೆರಳುತ್ತಿದ್ದಳು.  ಟಿಕೆಟ್ ನೀಡಲು  ತಲುಪಿದ ಕಂಡಕ್ಟರ್ ಆಕೆಯನ್ನು ಸ್ಪರ್ಶಿಸಿದ್ದ ನೆನ್ನಲಾಗಿದೆ. ಆತನ ವರ್ತನೆಯನ್ನು ವಿದ್ಯಾರ್ಥಿನಿ ಪ್ರಶ್ನಿಸಿದ್ದು, ಈ ವೇಳೆ ಕಂಡಕ್ಟರ್ …

ಜೂಜಾಟ:5 ಮಂದಿ ಸೆರೆ; 24050 ರೂ.ನಗದು ವಶ

ಬದಿಯಡ್ಕ: ಉಕ್ಕಿನಡ್ಕದ ಕೇರಳ ಪ್ಲಾಂಟೇಶನ್ ಕಾರ್ಪರೇಷನ್ ಡೈರಿ ಫಾಂಗೆ ತೆರಳುವ ರಸ್ತೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹಣವಿರಿಸಿ ನಡೆಸುತ್ತಿದ್ದ ಜೂಜಾಟ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಜುಗಾರಿ ಅಡ್ಡೆಯಿಂದ 24050 ರೂ. ನಗದು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬದಿಯಡ್ಕದ ಶಶಿಕುಮಾರ್ (40), ಪಡ್ರೆಯ ಪ್ರದೀಪ್ ಕೆ. (36), ಉಕ್ಕಿನಡ್ಕದ ಪ್ರದೀಪ್ ಕೆ.ಜಿ.(27), ಮೊಹಮ್ಮದ್ ರಫೀಕ್ (43) ಮತ್ತು ಬದಿಯಡ್ಕದ ರವಿ (43) ಎಂಬಿವರು  ಬಂಧಿತ ವ್ಯಕ್ತಿಗಳು.

ಆರಿಕ್ಕಾಡಿ ರೈಲು ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಕುಂಬಳೆ: ಆರಿಕ್ಕಾಡಿ ಕಡವತ್ತ್‌ನ ರೈಲು ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಲೆ ದೇಹದಿಂದ ಬೇರ್ಪಟ್ಟ ಸ್ಥಿತಿಯಲ್ಲಿದ್ದು, ತಲೆ ಪೂರ್ಣವಾಗಿ ಜಜ್ಜಿಹೋಗಿದೆ. ಇಂದು ಮುಂಜಾನೆ ೫ ಗಂಟೆ ವೇಳೆ ರೈಲು ಹಳಿಯಲ್ಲಿ ಮೃತದೇಹ ಕಂಡುಬಂದಿದ್ದು ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿಲ್ಲ. ಸುಮಾರು ೩೦ ವರ್ಷ ಪ್ರಾಯ ಅಂದಾಜಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ ನೀಲಿ ಬಣ್ಣದ ಪ್ಯಾಂಟ್ ಹಾಗೂ …

ಐಎನ್‌ಎಲ್ ಮುಖಂಡ ನಿಧನ

ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಐಎನ್‌ಎಲ್ ಮುಖಂಡ ನಿಧನ ಹೊಂದಿದರು. ಚೌಕಿ ನಿವಾಸಿ ಸಾದಿಕ್ ಕಡಪ್ಪುರಂ (45) ಚಿಕಿತ್ಸೆ ಮಧ್ಯೆ ನಿಧನ ಹೊಂದಿದ್ದಾರೆ. ಹಲವು ತಿಂಗಳಿಂದ ಇವರು ಚಿಕಿತ್ಸೆಯಲ್ಲಿದ್ದರು. ಮೊಗ್ರಾಲ್ ಪುತ್ತೂರು ಪಂಚಾಯತ್‌ನ ರಾಜಕೀಯ, ಸಾಂಸ್ಕೃತಿಕ ವಲಯ ಗಳಲ್ಲಿ ಸಕ್ರಿಯರಾಗಿದ್ದರು. ಐಎನ್‌ಎಲ್ ಜಿಲ್ಲಾ ಕಾರ್ಯ ದರ್ಶಿ ಅಸೀಸ್ ಕಡಪ್ಪುರಂ ಇವರ ಸಹೋದರನಾಗಿದ್ದಾರೆ. ದಿ| ಅಬ್ಬಾಸ್- ಆಯಿಶಾಬಿ ದಂಪತಿ ಪುತ್ರನಾದ ಇವರು ತಾಯಿ, ಪತ್ನಿ ಶಮೀಮ, ಮಕ್ಕಳಾದ ಶಿಜಿನ, ಮುಹಮ್ಮದ್ ಮುಸ್ತಫ, ಸಲ್ಮಾನ್ ಹಾಗೂ ಇತರ ಸಹೋದರರಾದ ಹನೀಫ್ …

8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಿರುವನಂತಪುರ: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನೆಯ್ಯಾಟಿಂಗರ ನಾರಾಣಿ ನಿವಾಸಿ ಅನಂತು (13)ನನ್ನು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಾರಕೋಣಂ ಪಿಪಿಎಂ ಹೈಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾನೆ. ಮಾಹಿತಿ ತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಅಲ್ಲಿನ ಮೆಡಿಕಲ್ ಕಾಲೇಜು ಶವಾಗಾರಕ್ಕೆ ಕೊಂಡೊಯ್ಯಲಾ ಯಿತು. ಆತ್ಮಹತ್ಯೆಗೆ ಕಾರಣ ಸ್ಪಷ್ಟವಿಲ್ಲ.

ಶಬರಿಮಲೆಯ ಆಹಾರ ಪದಾರ್ಥಗಳಲ್ಲಿ ಬದಲಾವಣೆ

ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನ ದಲ್ಲಿ ನೀಡುತ್ತಿರುವ ಅನ್ನ ಸಂತರ್ಪಣೆಯ ಭಕ್ಷ್ಯದಲ್ಲಿ ಬದಲಾವಣೆ ಮಾಡಲು ಚಿಂತಿಸಲಾಗಿದೆ. ಭಕ್ತರಿಗೆ ಕೇರಳೀಯ ರೀತಿಯ ಆಹಾರ ನೀಡಲಾಗುವುದು. ಹಪ್ಪಳ, ಪಾಯಸ ಸಹಿತದ ಭೋಜನ ನೀಡಲಾಗುವುದೆಂದು ತಿರುವಾಂಕೂರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ. ಜಯಕುಮಾರ್ ನುಡಿದರು. ನಾಳೆ ಅಥವಾ ನಾಡಿದ್ದು ಈ ರೀತಿಯ ಆಹಾರ ಪದಾರ್ಥಗಳನ್ನು ಜ್ಯಾರಿಗೊಳಿಸಲಾಗುವುದೆಂದು ಅವರು ನುಡಿದರು. ಇದೇ ವೇಳೆ ಭಕ್ತರ ಸಂದಣಿ ಶಬರಿಮಲೆಯಲ್ಲಿ ನಿಯಂತ್ರಣವಿದೇಯವಾಗಿದೆ. ಶಬರಿಮಲೆಯ ವಿಷಯದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅವಲೋಕನ ನಡೆಸಲಾಗಿದೆ. ಎರುಮೇಲಿಯಲ್ಲಿ ಸ್ಪೋಟ್ ಬುಕ್ಕಿಂಗ್ …

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ-ಸಣ್ಣಿ ಜೋಸೆಫ್

ಕಾಸರಗೋಡು: ರಾಜ್ಯವನ್ನು ಅಭಿವೃದ್ಧಿಯತ್ತ ಸಾಗಿಸಲು ಇಲ್ಲಿನ ಎಡ ರಂಗ ಸರಕಾರಕ್ಕೆ ಸಾಧ್ಯವಾಗಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಂಗವಾಗಿ ಕಾಸರಗೋಡು ಪ್ರೆಸ್ ಕ್ಲಬ್ ಇಂದು ಬೆಳಿಗ್ಗೆ ಹಮ್ಮಿಕೊಂಡ ‘ಮೀಟ್‌ದ ಪ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಎಲ್ಲಾ ವಲಯಗಳು ಸ್ತಬ್ದಗೊಂಡಿದೆ. ಕೃಷಿ ವಲಯ ನಾಶದತ್ತ ಸಾಗಿದೆ.  ವನ್ಯ ಮೃಗಗಳ ಹಾವಳಿಯಿಂದ ಜನರು ತತ್ತರಿಸಿದ್ದಾರೆ. ಎಕ್ರೆಗಟ್ಟಲೆ ಕೃಷಿ  ನಾಶಗೊಂಡಿದ್ದರೂ  ವನ್ಯ ಮೃಗಗಳ ಹಾವಳಿ ತಡೆಗಟ್ಟುವಲ್ಲಿ  ಸರಕಾರ ವಿಫಲಗೊಂಡಿದೆಯೆಂದೂ ಸಣ್ಣಿ ಜೋಸೆಫ್ ಆರೋಪಿಸಿದ್ದಾರೆ. ರಾಜ್ಯದ ವಿದ್ಯಾವಂತರು …

ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯಲ್ಲಿ ದೊಡ್ಡ ತಿರುವು: ತಂತ್ರಿವರ್ಯರ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ

ಪಂದಳಂ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಬರಿಮಲೆ ದೇವಸ್ಥಾನದ ತಂತ್ರಿವರ್ಯರುಗಳಾದ ಕಂಠರರ್ ರಾಜೀವರ್ ಮತ್ತು ಕಂಠರರ್ ಮೋಹನರ್‌ಗಳ ಹೇಳಿಕೆಗಳನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ  ದಾಖಲಿಸಿಕೊಂಡಿದೆ. ಮುಜರಾಯಿ ಮಂಡಳಿಯ ಅಧಿಕಾರಿಗಳು ನೀಡಿದ ನಿರ್ದೇಶದಂತೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿ ಬಾಗಿಲ ಚಿನ್ನದ ಕವಚಗಳನ್ನು ಹೊರಕ್ಕೆ ಸಾಗಿಸಲು ಅನುಮತಿ ನೀಡಲಾಗಿದೆ. ದೈವಹಿತ ನೋಡಿ ಮಾತ್ರವೇ ಯಾವುದಕ್ಕೂ ಅನುಮತಿ ನೀಡುವುದು …

ಕೆರೆಗೆ ಬಿದ್ದ ಚಿರತೆ ಗಂಡು: ಹೆಸರು ‘ಕಾಸ್ಟ್ರೋ’ ಇನ್ನು ತೃಶೂರು ಮೃಗಾಲಯದಲ್ಲಿ ವಾಸ

ಕಾಸರಗೋಡು:  ಪುಲ್ಲೂರು ಕೊಡವಲದಲ್ಲಿ ಕೆರೆಗೆ ಬಿದ್ದು ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ  ಚಿರತೆ ಗಂಡು ಎಂದು ಇದೀಗ ಗುರುತಿಸಲಾಗಿದೆ.  ಈ ಚಿರತೆಗೆ ಅರಣ್ಯ ಪಾಲಕರು ‘ಕಾಸ್ಟ್ರೋ’ ಎಂಬ ಹೆಸರಿಟ್ಟಿ ದ್ದಾರೆ. ಈ ಚಿರv ಯನ್ನು ನಿನ್ನೆ ರಾತ್ರಿ 10.30ರ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೆಂಗಾವಲಿನೊಂದಿಗೆ ವಿಶೇಷ ವಾಹನದಲ್ಲಿ ತೃಶೂರು ಮೃಗಾಲಯಕ್ಕೆ ಸಾಗಿಸಲಾಯಿತು. ಕಳೆದ ಭಾನುವಾರ ರಾತ್ರಿ ಪುಲ್ಲೂರು ಕೊಡವಲ ನೀರಳಂ ಕಯದ ಮಧು ಎಂಬವರ ಹಿತ್ತಿಲ ಕೆರೆಯಲ್ಲಿ ಚಿರತೆ ಬಿದ್ದಿತ್ತು.  ನಂತರ ಅರಣ್ಯ ಇಲಾಖೆಯವರು …