ಸಾಲವಾಗಿ ನೀಡಿದ ಯಂತ್ರ ಮರಳಿ ನೀಡದ ದ್ವೇಷ: ವ್ಯಕ್ತಿಯನ್ನು ಕಗ್ಗಲ್ಲಿನಿಂದ ಹೊಡೆದು ಕೊಲೆಗೈಯ್ಯಲೆತ್ನಿಸಿದ ಆರೋಪಿಗೆ ಏಳು ವರ್ಷ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಕೊಲೆಯತ್ನ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (3)ರ ನ್ಯಾಯಧೀಶರಾದ ಅಚಿಂತ್ಯಾ ರಾಜ್ ಉಣ್ಣಿ ಏಳು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮೂಲತಃ ಕರ್ನಾಟಕ ಶಿವಮೊಗ್ಗ ರಾಜೀವ್‌ನಗರ ನಿವಾಸಿ ಹಾಗೂ ಈಗ ಉಪ್ಪಳ ಅಂಚೆ ಕಚೇರಿ ಬಳಿ ವಾಸಿಸುತ್ತಿರುವ ವಿಜಯ ನಾಯ್ಕ (50) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. …