ಸಬ್ ಜೈಲಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿಯ ಸಾವು: ದೇಹದಲ್ಲಿ ಗಾಯಗಳಿಲ್ಲ, ಹೃದಯಾಘಾತವುಂಟಾಗಿಲ್ಲ; ಸಾವಿಗೆ ಕಾರಣ ತಿಳಿಯಲು ರಾಸಾಯನಿಕ ತಪಾಸಣೆ 

ಕಾಸರಗೋಡು: ಕಾಸರಗೋಡು ಸಬ್ ಜೈಲಿನಲ್ಲಿ ಪೋಕ್ಸೋ ಪ್ರಕರಣದ ರಿಮಾಂಡ್ ಆರೋಪಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಮುಂದುವರಿ ದಿದೆ. ಸಾವಿಗೆ ಕಾರಣ ಪತ್ತೆಹಚ್ಚಲು ಮೃತದೇಹದಿಂದ ಸಂಗ್ರಹಿಸಿದ ಗಂಟಲ ದ್ರವವನ್ನು ರಾಸಾಯನಿಕ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ. ಇದರ ವರದಿ ಲಭಿಸಿದರೆ ಮಾತ್ರವೇ ಸಾವಿಗೆ ಕಾರಣವೇನೆಂದು ತಿಳಿಯಬಹುದಾಗಿದೆ ಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ವಿದ್ಯಾನಗರ ಪೊಲೀಸರು 2016ರಲ್ಲಿ ದಾಖಲಿಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯಾದ ದೇಳಿ ಕುನ್ನುಪ್ಪಾರದ ಮುಬಶೀರ್(29) ನಿನ್ನೆ ಮುಂಜಾನೆ  ಮೃತಪಟ್ಟಿದ್ದಾನೆ. ಸಬ್ ಜೈಲಿನಲ್ಲಿ ಶಾರೀರಿಕ ಅಸ್ವಸ್ಥತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಈತನನ್ನು ಜನರಲ್ …

ನಿಲ್ಲಿಸದೆ ಪರಾರಿಯಾದ ಆಟೋ ರಿಕ್ಷಾದಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಸೆರೆ

ಕಾಸರಗೋಡು:  ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಮಾದಕದ್ರವ್ಯವಾದ 28.32 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮುಳಿಯಾರು ಮಾಸ್ತಿಕುಂಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ಕೆ. ಉಸ್ಮಾನ್ ಯಾನೆ ಚಾರ್ಲಿ ಉಸ್ಮಾನ್ (43), ಮಧೂರು ಶಿರಿಬಾಗಿಲು ಬದರ್ ಜುಮಾ ಮಸೀದಿ ಸಮೀಪದ ಕುಳತ್ತಿಂಗರ ಹೌಸ್‌ನ ಎಂ. ಅಬ್ದುಲ್ ರಹ್ಮಾನ್ (55) ಎಂಬಿವರನ್ನು ಕಾಸರಗೋಡು ನಗರಠಾಣೆ ಎಸ್.ಐ. ಕೆ. ರಾಜೀವನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.  ನಿನ್ನೆ ಸಂಜೆ ಶಿರಿಬಾಗಿಲಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ …

ಶಬರಿಮಲೆಯಲ್ಲಿ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್‌ನಲ್ಲಿ: ಗಂಭೀರ ಲೋಪ ಪತ್ತೆ ; ಗುತ್ತಿಗೆದಾರ, ರೆಡ್ಕೋಗೆ ನೋಟೀಸ್

ಪತ್ತನಂತಿಟ್ಟ: ಶಬರಿಮಲೆ ದೇಗುಲ ದಲ್ಲಿ ಜೇನುತುಪ್ಪದ ಹರಕೆ ಸೇವೆಗಿರುವ ಜೇನುತುಪ್ಪ ವಿತರಿಸಿದ್ದು ಪೊಮಿಕ್ ಆಸಿಡ್ ಕಂಟೈನರ್‌ನಲ್ಲಿ ಆಗಿತ್ತೆಂಬ ಗಂಭೀರ ವಿಷಯ ಹೊರಬಂದಿದೆ. ಇದಕ್ಕೆ ಸಂಬಂಧಿಸಿ ಜೇನುತುಪ್ಪ ವಿತರಿಸಿದ  ಗುತ್ತಿಗೆದಾರರಿಗೆ ಶಬರಿಮಲೆ ದೇಗುಲದ ಎಕ್ಸಿಕ್ಯೂಟಿವ್ ಆಫೀಸರ್ ನೋಟೀಸು ಜ್ಯಾರಿಗೊಳಿಸಿದ್ದಾರೆ. ಹೀಗೆ ವಿತರಿಸಲಾದ  ಜೇನುತುಪ್ಪ ವನ್ನು ಉಪಯೋಗಿಸದೆ  ಅದನ್ನು ಇನ್ನಷ್ಟು ಸಮಗ್ರ ರಾಸಾಯನಿಕ ಪರೀಕ್ಷೆ ಗಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ.  ಶಬರಿಮಲೆ ದೇಗುಲದಲ್ಲಿ ಉಪಯೋಗಿಸುವ  ಎಲ್ಲಾ ಸಾಮಾಗ್ರಿಗಳನ್ನು ಮೊದಲು ಪಂಪಾದಲ್ಲಿರುವ ಆಹಾರ ಭದ್ರತಾ ವಿಭಾಗದ  ಲ್ಯಾಬ್‌ಗೆ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಹೀಗೆ …

ಬಾವಿಗೆ ಬಿದ್ದ ಕಾಡುಹಂದಿಯ ಪ್ರಾಣ ರಕ್ಷಿಸಿದ ಅಗ್ನಿಶಾಮಕದಳ

ಉಪ್ಪಳ: ಮನೆ ಹಿತ್ತಿಲಲ್ಲಿರುವ ಬಾವಿಗೆ ಬಿದ್ದ ಕಾಡು ಹಂದಿಯನ್ನು ಅಗ್ನಿಶಾಮಕದಳ ಮೇಲಕ್ಕೆತ್ತಿ ಅದರ ಪ್ರಾಣ ಉಳಿಸಿದೆ. ಆದರೆ ಬಾವಿ ಯಿಂದ ಮೇಲಕ್ಕೆ ಬಂದ ತಕ್ಷಣ ಹಂದಿ ಓಡಿ ಪರಾರಿಯಾಗಿದೆ. ಬಂದ್ಯೋಡು ಬಳಿ ಶಿರಿಯಾ ಪೆಟ್ರೋಲ್ ಬಂಕ್ ಪರಿಸರದಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿರುವ ಆವರಣ ರಹಿತ ಬಾವಿಗೆ ನಿನ್ನೆ ಕಾಡುಹಂದಿ ಬಿದ್ದಿತ್ತು. ಬಾವಿಯಿಂದ ಶಬ್ದ ಕೇಳಿ ಬಂದು ಮನೆಯವರು ನೋಡಿದಾಗ ಹಂದಿ ಪತ್ತೆಯಾಗಿತ್ತು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಉಪ್ಪಳ ಅಗ್ನಿಶಾಮಕದಳದ  ಫಯರ್ ಮೆನ್‌ಗಳಾದ ರಫೀಕ್, ಪಶುಪತಿ, ಅಭಿಜಿತ್, ಹೋಂಗಾರ್ಡ್ …

ಸಮಯದ ಹೆಸರಲ್ಲಿ ಬಸ್ ಕಾರ್ಮಿಕರ ಮಧ್ಯೆ ಮಾರಾಮಾರಿ: ಓರ್ವ ಚಾಲಕನಿಗೆ ಗಾಯ, ನಾಲ್ಕು ಮಂದಿ ವಿರುದ್ಧ ಕೇಸು ದಾಖಲು

ಕುಂಬಳೆ: ಬಸ್‌ಗಳ ಸಂಚಾರ ಸಮಯದ ಹೆಸರಲ್ಲಿ ನಿನ್ನೆ ಸಂಜೆ ಕುಂಬಳೆ ಬಸ್ ತಂಗುದಾಣ ಬಳಿ ಖಾಸಗಿ ಬಸ್ ಕಾರ್ಮಿಕರ ನಡುವೆ ಮಾರಾಮಾರಿ ನಡೆದು ಓರ್ವ ಚಾಲಕ ಗಾಯಗೊಂಡ ಘಟನೆ ನಡೆದಿದೆ. ಕಾಸರಗೋಡು-ತಲಪ್ಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸೊಂದರ ಚಾಲಕ ನೀರ್ಚಾಲು ಕನ್ಯಪ್ಪಾಡಿಯ ಅಮೀರ್ ಎನ್ (30) ಎಂಬವರು ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಅವರು ನೀಡಿದ ದೂರಿನಂತೆ  ಇದೇ ರೂಟ್‌ನಲ್ಲಿ ಸಂಚರಿಸುವ ಎರಡು ಖಾಸಗಿ ಬಸ್‌ಗಳ ಕಾರ್ಮಿಕರಾದ ಸಹದ್, ನಿಶಾದ್, ಬಾದಿಶಾ ಹಾಗೂ ಅಮೀನ್ ಎಂಬವರ ವಿರುದ್ದ ಕುಂಬಳ …

ಆರಿಕ್ಕಾಡಿಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ

ಕುಂಬಳೆ: ಆರಿಕ್ಕಾಡಿ ಕಡವತ್‌ನಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಆಸಿಫ್ (30) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ನಿನ್ನೆ ಮುಂಜಾನೆ 5 ಗಂಟೆ ವೇಳೆ ಇವರ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಆಸಿಫ್ ಮೀನು ಕಾರ್ಮಿಕನಾಗಿದ್ದರು. ಮೀನುಗಾರಿಕೆ ಬಳಿಕ ಮನೆಗೆ ಮರಳುತ್ತಿದ್ದ ವೇಳೆ ಇವರಿಗೆ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ತಲೆಗೆ ಉಂಟಾದ ಗಂಭೀರ ಗಾಯದಿಂದ ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. …

ಕುಂಬಳೆ ಪಂಚಾಯತ್‌ನಲ್ಲಿ ಮೈತ್ರಿಕೂಟ, ಪಕ್ಷಗಳೊಳಗೆ ವಿಚಿತ್ರ ಸ್ಪರ್ಧೆ: 2 ವಾರ್ಡ್‌ಗಳಲ್ಲಿ ಕಾಂಗ್ರೆಸ್- ಲೀಗ್, ಲೀಗ್-ಲೀಗ್ ಸ್ವತಂತ್ರ ಮಧ್ಯೆ ತೀವ್ರ ಹೋರಾಟ

ಕುಂಬಳೆ: 25 ವಾರ್ಡ್‌ಗಳಿರುವ ಕುಂಬಳೆ ಪಂಚಾಯತ್‌ನ ಚುನಾವಣೆಯಲ್ಲಿ 4 ವಾರ್ಡ್‌ಗಳಲ್ಲಿ ಸ್ಪರ್ಧೆ ಜಿದ್ದಾಜಿದ್ದಿನತ್ತ ಸಾಗಿದೆ. ಸಾಮಾನ್ಯವಾಗಿ ಪ್ರಮುಖ ಒಕ್ಕೂಟಗಳು ಹಾಗೂ ಪಕ್ಷಗಳ ಮಧ್ಯೆ ಸ್ಪರ್ಧೆ ನಡೆಯುವುದಾದರೂ ಕುಂಬಳೆಯ  ನಾಲ್ಕು ವಾರ್ಡ್‌ಗಳಲ್ಲಿ ಎರಡರಲ್ಲಿ ಯುಡಿಎಫ್‌ನ ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಹಾಗೂ ಲೀಗ್ ಮಧ್ಯೆ ಹೋರಾಟ ನಡೆಯುತ್ತಿದೆ. ಒಂದು ವಾರ್ಡ್‌ನಲ್ಲಿ ಸಾಮಾನ್ಯವಾಗಿ ಸ್ಪರ್ಧಿಸಿ ಸೋಲುವ ಕಾಂಗ್ರೆಸ್ ಈ ಬಾರಿ ಸೋತ ಅಭ್ಯರ್ಥಿಯನ್ನು ಕೂಡಾ ನಿಲ್ಲಿಸದೆ ಸ್ಪರ್ಧೆಯಿಂದ ಹಿಂಜರಿದಿದೆ. ಆ ವಾರ್ಡ್‌ನಲ್ಲಿ ಯುಡಿಎಫ್‌ನ ಸಾನ್ನಿಧ್ಯವನ್ನು ತಿಳಿಸಲು ಲೀಗ್‌ಗೆ ಅಗತ್ಯವಿದ್ದರೆ ಅಭ್ಯರ್ಥಿಯನ್ನು ನಿಲ್ಲಿಸಬಹುದಾಗಿತ್ತು. …

ಕುಂಬಳೆ ಪಂಚಾಯತ್‌ನಲ್ಲಿ ವಿಚಿತ್ರ ಸ್ಪರ್ಧೆ : ಶಾಂತಿಪಳ್ಳ ವಾರ್ಡ್‌ನಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿಯೂ ಕಣದಲ್ಲಿ: ಚರ್ಚೆಗೆ ಗ್ರಾಸ

ಕುಂಬಳೆ: ಸ್ಥಳೀಯಾಡಳಿತ ಪಂಚಾಯತ್ ಚುನಾವಣೆಗೆ ಇನ್ನು ಕೇವಲ 13 ದಿನಗಳು ಬಾಕಿಯಿ ರುವಂತೆ ಅಭ್ಯರ್ಥಿಗಳ ಮತಯಾಚನೆ ಪ್ರಕ್ರಿಯೆಗೆ ವೇಗ ಹೆಚ್ಚಿದೆ.  ಇದೇ ವೇಳೆ ಕೆಲವೆಡೆ ಅಭ್ಯರ್ಥಿಗಳ ಸ್ಪರ್ಧೆ ಹೆಸರಲ್ಲಿ ರಾಜಕೀಯ ಪಕ್ಷಗಳ ಕೆಸರೆ ರೆಚಾಟ ತೀವ್ರಗೊಂಡಿದೆ. ಆರೋಪ-ಪ್ರತ್ಯಾರೋ ಗಳು ಕೂಡಾ ಕೇಳಿಬರುತ್ತಿದ್ದು ಒಟ್ಟಾರೆಯಾಗಿ ಇದು ಮತದಾರರಿಗೆ ಕುತೂಹಲದ ಜತೆಗೆ ಆಶ್ಚರ್ಯ ಮೂಡಿಸಿದೆ. ಇಂತಹ ವೊಂದು ಕುತೂಹಲ ಕುಂಬಳೆ ಗ್ರಾಮ ಪಂಚಾಯತ್‌ನ 21ನೇ ವಾರ್ಡ್ ಶಾಂತಿಪಳ್ಳದಲ್ಲ್ಲಿ ಸೃಷ್ಟಿಯಾಗಿದೆ.  ಈ ವಾರ್ಡ್‌ನಲ್ಲಿ ಒಟ್ಟು ಮೂವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಎಡರಂಗದಿಂದ …

ಸಿಪಿಎಂ ಮುಟ್ಟತ್ತೋಡಿ ಮಾಜಿ ಬ್ರಾಂಚ್ ಕಾರ್ಯದರ್ಶಿ ನಿಧನ

ಕಾಸರಗೋಡು: ಸಿಪಿಎಂ ಮುಟ್ಟತ್ತೋಡಿ ಮಾಜಿ ಬ್ರಾಂಚ್ ಕಾರ್ಯದರ್ಶಿ ಬಶೀರ್ (86) ನಿಧನ ಹೊಂದಿದರು. ಮೃತರು ಮಕ್ಕಳಾದ ಅಬ್ದುಲ್ಲ, ಅಬ್ದುಲ್ ರಹಿಮಾನ್, ಅಬೂಬಕ್ಕರ್, ಇಬ್ರಾಹಿಂ, ಇಲ್ಯಾಸ್, ಸುಹರ, ಬುಶ್ರ, ಅಳಿಯ ಸಮೀರ್, ಸೊಸೆಯಂದಿರಾದ ರಹ್ಮತ್ ಬೀವಿ, ಫಾತಿಮತ್ ಸುಹರ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಶೋಚನೀಯಗೊಂಡ ತಿಂಬರ- ಕುಬಣೂರು ರಸ್ತೆ ದುರಸ್ತಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ತಿಂಬರ-ಕುಬಣೂರು ಒಳ ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಗೆ ತಲುಪಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ದುರಸ್ತಿಗೆ ಊರವರು ಆಗ್ರಹಿಸಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದೇ ರಸ್ತೆ ಶೋಚನೀಯಗೊಳ್ಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಪ್ರತಾಪನಗರ, ಬೀಟಿಗದ್ದೆ ಸಹಿತ ಪರಿಸರ ಪ್ರದೇಶದ ನಾಗರಿಕರು, ಕುಬಣೂರು ಶಾಲಾ ಮಕ್ಕಳು, ಕ್ಷೇತ್ರ, ಮಸೀದಿ ಸಹಿತ ವಿವಿಧ ಕೆಲಸಗಳಿಗೆ ತೆರಳಲು ಹತ್ತಿರದ ರಸ್ತೆ ಇದಾಗಿದೆ. ಈಗ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ …