ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ಬಾಯಾರು ಸಜಂಕಿಲದ ವಿಷ್ಣು ಭಟ್ (75) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರಮಾವತಿ, ಪುತ್ರ ಕೃಷ್ಣ ಪ್ರಸನ್ನ, ಸೊಸೆ ಪೂಜಾ, ಸಹೋದರ ಸೂರ್ಯ ನಾರಾಯಣ ಭಟ್, ಸಹೋದರಿಯ ರಾದ ಶಶಿಪ್ರಭ, ಸರಸ್ವತಿ, ವಿಶಾಲಾಕ್ಷಿ, ಸೀತಾದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಬೆಸ್ತ ನಾಪತ್ತೆ: ವ್ಯಾಪಕ ಶೋಧ

ಕಾಸರಗೋಡು: ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಬೆಸ್ತ ನಾಪತ್ತೆಯಾದ ಘಟನೆ ನಡೆದಿದೆ. ಕೊಳತ್ತೂರು ತೊಟ್ಟಿ ನಿವಾಸಿ  ಕುಮಾರ್ ಎಂಬವರ  ಪುತ್ರ ರಾಮಕೃಷ್ಣನ್ (48) ನಾಪತ್ತೆಯಾದ ಬೆಸ್ತ. ನಿನ್ನೆ ಮುಂಜಾನೆ  ಚೆಂಬರಿಕ ಸಮುದ್ರ ದಡದಿಂದ ಸುಮಾರು ಏಳು ಕಿಲೋ ಮೀಟರ್ ನಷ್ಟು ದೂರದಲ್ಲಿ ಸಮುದ್ರದಲ್ಲಿ  ಈ ಘಟನೆ ನಡೆದಿದೆ. ರಾಮಕೃಷ್ಣನ್ ಮೇಲ್ಪರಂಬದ ರಾಜನ್, ಕೀಯೂರಿನ ಶಾಫಿ ಎಂಬವರೊಂದಿಗೆ ಶನಿವಾರ ಸಂಜೆ ಮೀನುಗಾರಿಕೆಗಾಗಿ ದೋಣಿಯಲ್ಲಿ  ಸಮುದ್ರಕ್ಕಿಳಿದಿದ್ದರು. ರಾತ್ರಿ ಮೀನುಗಾರಿಕೆ  ನಡೆಸಿ ಬಳಿಕ ನಿನ್ನೆ ಮುಂಜಾನೆ ಹಿಂತಿರುಗುತ್ತಿದ್ದ ವೇಳೆ ರಾಮಕೃಷ್ಣನ್ …

ಎಸ್‌ಐಆರ್: ಕೇರಳದ ಅರ್ಜಿ ಸುಪ್ರೀಂಕೋರ್ಟ್ ಪರಿಶೀಲನೆ ನಾಳೆ

ನವದೆಹಲಿ: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮವನ್ನು ಮುಂದೂಡಬೇಕೆಂದು ಕೋರಿ ಕೇರಳ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ಪರಿಶೀಲಿಸಲಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕ್ರಮದ ಸಮಯವನ್ನು ಇನ್ನೊಂದೆಡೆ ಕೇಂದ್ರ ಚುನಾವಣಾ ಆಯೋಗ ಡಿ. 4ರ ಬದಲಾಗಿ ಡಿ.11ರ ತನಕ ವಿಸ್ತರಿಸಿದೆ. ಇದರಂತೆ ಕರಡು ಮತದಾರ ಯಾದಿಯನ್ನು ಪ್ರಕಟಿಸುವ ಸಮಯವನ್ನು ಆಯೋಗ ಡಿ. 9ರ ಬದಲು ಡಿ. 16ಕ್ಕೆ ಮುಂದೂಡಿದೆ. ಇದಕ್ಕೆ ಹೊಂದಿಕೊಂಡು  …

ಬೀದಿ ನಾಯಿ ಕಾಟ: 20 ಮಂದಿಗೆ ಗಾಯ

ಕಾಸರಗೋಡು: ನೆಲ್ಲಿಕುಂಜೆ ಕಸಬಾ ಕಡಪ್ಪುರದಲ್ಲಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿ 20 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಬೀದಿ ನಾಯಿಗಳ ಉಪಟಳ ಹೆಚ್ಚಾಗತೊಡಗಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ಮಾತ್ರವಾಗಿ 6 ಮಂದಿಗೆ ಬೀದಿ ನಾಯಿ ಕಚ್ಚಿದೆಯೆಂದು ಅವರು ತಿಳಿಸಿದ್ದಾರೆ. ಮಾತ್ರವಲ್ಲ ಆ ಪರಿಸರದ ಸಾಕು ನಾಯಿಗಳಿಗೂ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದೆ ಯೆಂದು ಮಾಹಿತಿಯೂ ಲಭಿಸಿದೆ. ಬೀದಿ ನಾಯಿ ಉಪಟಳ ತಡೆಗಟ್ಟಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಊರವರು ಸಂಬಂಧಪಟ್ಟವರಲ್ಲಿ ವಿನಂತಿಸಿದ್ದಾರೆ.