ಜನರಲ್ ಆಸ್ಪತ್ರೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ: ಭಯದ ವಾತಾವರಣ ಸೃಷ್ಟಿ; 8 ಮಂದಿ ಸೆರೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಎರಡು ತಂಡಗಳ ಮಧ್ಯೆ ನಿನ್ನೆ ರಾತ್ರಿ ಪರಸ್ಪರ ಹೊಡೆದಾಟ  ನಡೆದಿದೆ.  ಕೀಯೂರಿನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡು  ಚಿಕಿತ್ಸೆಗಾಗಿ ತಲುಪಿದ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ.  ದೀರ್ಘ ಹೊತ್ತು ಭಯದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ  ಡ್ಯೂಟಿ ಡಾಕ್ಟರ್‌ರ ದೂರಿನಂತೆ  ನಗರಠಾಣೆ ಪೊಲೀಸರು 8 ಮಂದಿ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಘಟನೆ ನಡೆದಿದೆ. ಡಾ| ಮುಹಮ್ಮದ್ ನಿಸಾರ್‌ರ ದೂರಿನಂತೆ …

ಕುಂಬಳೆ ರೈಲು ನಿಲ್ದಾಣದಿಂದ ಸ್ಕೂಟರ್ ಕಳವುಗೈದ ಆರೋಪಿ ಸೆರೆ

ಕುಂಬಳೆ:  ಕುಂಬಳೆ ರೈಲ್ವೇ ನಿಲ್ದಾಣ ಪರಿಸರದಲ್ಲಿ ನವಂಬರ್ 17ರಂದು ಬೆಳಿಗ್ಗೆ  ನಿಲ್ಲಿಸಿದ್ದ ಸ್ಕೂಟ ರನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲಾ ಗಿದೆ. ಕಣ್ಣೂರು ಒಟ್ಟತ್ತಾಯಿ ವೆಳ್ಳಾಡ್‌ನ ಅಲೆಕ್ಸ್ ಡೊಮಿನಿಕ್ ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಹಲವು ಸಿಸಿ ಟಿವಿ ದೃಶ್ಯಗಳು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಫೋನ್ ಕರೆಗಳನ್ನು ಹಿಂಬಾಲಿಸಿ ಆರೋಪಿಯ ಗುರುತು ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಂಗಳೂರಿಗೆ ಬರುತ್ತಿದ್ದಾನೆಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಮಂಗಳೂರಿಗೆ ತೆರಳಿದ್ದರು. ಆದರೆ ಮಂಗಳೂರಿನಲ್ಲಿ ನಡೆದ …

ಅನಸ್ತೇಶಿಯಾ ಚುಚ್ಚು ಮದ್ದು ನೀಡಿದ ಬಳಿಕ ಆರು ತಿಂಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕ ಮೃತ್ಯು

ಕಾಸರಗೋಡು: ಆರು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆಗಾಗಿ  ಅನಸ್ತೇಶಿಯ ಚುಚ್ಚುಮದ್ದು ನೀಡಿದ ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಮಂಗಳೂರು ವಿಮಾನ ಅಪಘಾತದಲ್ಲಿ ಮೃತಪಟ್ಟ ಉದುಮ ಕುಂಡಡ್ಕದ ಮಾಹಿನ್-ಬೀಫಾತಿಮ ದಂಪತಿಯ ಪುತ್ರ ಅಲ್ತಾಫ್ (31) ಮೃತಪಟ್ಟ ವ್ಯಕ್ತಿ. ಆರು ತಿಂಗಳ ಹಿಂದೆ ಗಲ್ಫ್‌ನಿಂದ ಇವರು ಊರಿಗೆ ಬಂದಿದ್ದರು. ಅನಂತರ ಅಪೆಂಡಿಸೈಟಿಸ್ ಬಾಧಿಸಿದ ಹಿನ್ನೆಲೆಯಲ್ಲಿ ಅಲ್ತಾಫ್ ಕಾಸರಗೋಡು ಪರಿಸರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ತಲುಪಿದ್ದರೆನ್ನಲಾಗಿದೆ. ಶಸ್ತ್ರಚಿಕಿತ್ಸೆಯ ಪೂರ್ವಭಾವಿಯಾಗಿ  ಅವರಿಗೆ ಅನಸ್ತೇಶಿಯ ಚುಚ್ಚುಮದ್ದು ನೀಡಿದ್ದು ಬಳಿಕ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಇದರಿಂದ …

ಶಾಸಕ ರಾಹುಲ್ ಮಾಂಕೂಟತ್ತಿಲ್‌ಗಾಗಿ ತೀವ್ರ ಶೋಧ; ಕಾರು ಚಾಲಕ ಕಸ್ಟಡಿಗೆ

ತಿರುವನಂತಪುರ: ಎರಡು ಲೈಂಗಿಕ ಪ್ರಕರಣಗಳಲ್ಲಿ ಆರೋಪಿ ಯಾಗಿ ಕಳೆದ ಎಂಟು ದಿನಗಳಿಂದ ತಲೆಮರೆಸಿಕೊಂ ಡಿರುವ ಪಾಲಕ್ಕಾಡ್ ಶಾಸಕ ರಾಹುಲ್  ಮಾಂಕೂಟತ್ತಿ ಲ್‌ನ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ರಾಹುಲ್‌ನನ್ನು ಹುಡುಕಿಕೊಂಡು ಪ್ರತ್ಯೇಕ ತನಿಖಾ ತಂಡ ವಯನಾಡು-ಕರ್ನಾಟಕದ ಗಡಿ ಪ್ರದೇಶಕ್ಕೆ ತಲುಪಿದೆ.  ರಾಹುಲ್ ತಲೆಮರೆಸಿಕೊಂಡಿರುವ ವಾಸ ಸ್ಥಳಕ್ಕೆ ತನಿಖಾ ತಂಡ ತಲುಪುವುದನ್ನು ತಿಳಿದು ಅಲ್ಲಿಂದ ರಾಹುಲ್ ಪರಾರಿಯಾಗುತ್ತಿದ್ದಾನೆಯೇ ಎಂದು ಪೊಲೀಸರಿಗೆ ಸಂಶಯ ಸೃಷ್ಟಿಸಿದೆ.  ಪೊಲೀಸರಿಂದ ರಾಹುಲ್‌ಗೆ ಮಾಹಿತಿ ಸೋರಿಕೆಯಾಗುತ್ತಿದೆಯೇ ಎಂಬ ಸಂಶಯ ಕೂಡಾ ಹುಟ್ಟಿಕೊಂಡಿದೆ. ಎಸ್‌ಐಟಿಯ ಕಾರ್ಯಾಚರಣೆ  ಗುಪ್ತವಾಗಿ …

ಪೋಕ್ಸೋ ಪ್ರಕರಣದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ: ತಾಸುಗಳೊಳಗಾಗಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿ ಕಾಸರಗೋಡು ಪೊಲೀಸ್ ಠಾಣೆಯಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿ ನಂತರ ನಡೆಸಿದ ಕಾರ್ಯಾಚರಣೆಯಲ್ಲಿ ತಾಸುಗಳೊಳಗಾಗಿ ಆತನನ್ನು ಪೊದೆಯೊಂದರಿಂದ ಪೊಲೀಸರು ಪತ್ತೆಹಚ್ಚಿದ ಘಟನೆ ನಡೆದಿದೆ.  ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಕ್ರೈಂ ನಂಬ್ರ 1245ದ ಪೋಕ್ಸೋ ಪ್ರಕರಣದ ಆರೋಪಿ ನೆಕ್ರಾಜೆ ಕೊರಕ್ಕಾನ ಶಿರೋ ನಿಲಯದ ಅಶ್ವತ್ಥ್ (19) ಪರಾರಿಯಾದ ಆರೋಪಿಯಾಗಿದ್ದಾನೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ನಂತರ ಆತನನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ …

ಮಂಜೇಶ್ವರದಲ್ಲಿ ಕಳವು: ಸಿಸಿ ಟಿವಿ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ ಪೊಲೀಸರು

ಮಂಜೇಶ್ವರ: ಇಲ್ಲಿನ ರಾಗಂ ಜಂಕ್ಷನ್‌ನಲ್ಲಿ ಒಂದು ಅಂಗಡಿಯಿಂದ ಕಳವು, ಎರಡು ಅಂಗಡಿಗಳಿಂದ ಕಳವಿಗೆತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೊನ್ನೆ ರಾತ್ರಿ ಕಳವು ನಡೆದಿದ್ದು, ಅಶ್ರಫ್ ಎಂಬವರ ಭಾರತ್ ಜನರಲ್ ಸ್ಟೋರ್‌ನಿಂದ ೩೫,೦೦೦ ರೂ. ಮತ್ತು 10,೦೦೦ ರೂ. ಮೌಲ್ಯದ ಸಾಮಗ್ರಿ ಕಳವುಗೈಯ್ಯಲಾಗಿತ್ತೆಂದು ದೂರಲಾಗಿದೆ. ಅಲ್ಲದೆ ಪರಿಸರದ ಜಾಬಿರ್ ಎಂಬವರ ಮೊಬೈಲ್ ಅಂಗಡಿ ಶಫೀಕ್ ಎಂಬವರ ಅಂಗಡಿಯಿಂದ ಕಳವಿಗೆ ಯತ್ನಿಸಲಾಗಿದೆ. ಈ ಪರಿಸರದಲ್ಲಿರುವ ಸಿಸಿ ಕ್ಯಾಮರಾವನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸುತ್ತಿರುವುದಾಗಿ ಸಿ.ಐ. ಅಜಿತ್ ಕುಮಾರ್ ಪಿ. …

ಜಿಲ್ಲಾ ಪಂಚಾಯತ್ : ಪುತ್ತಿಗೆ  ಡಿವಿಶನ್‌ನಲ್ಲಿ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ

ಪುತ್ತಿಗೆ: ಪುತ್ತಿಗೆ ಡಿವಿಶನ್‌ನಲ್ಲಿ ಕಳೆದ ಬಾರಿ ಬಿಜೆಪಿಯ ನಾರಾಯಣ ನಾಯ್ಕ್ ಜಯ ಗಳಿಸಿದ್ದು, ಸಿಪಿಎಂನ ವಿ. ವಿಜಯ ಕುಮಾರ್ ದ್ವಿತೀಯ ಸ್ಥಾನದಲ್ಲಿದ್ದರು. 17,647 ಮತ ಗಳಿಸಿ ಬಿಜೆಪಿ ಜಯ ಗಳಿಸಿದರೆ ಸಿಪಿಎಂಗೆ 16,445 ಮತಗಳು ಲಭಿಸಿತ್ತು. ಇದೇ ವೇಳೆ ಕಾಂಗ್ರೆಸ್‌ನ ಗೋವಿಂದ ನಾಯ್ಕ್‌ರಿಗೆ 11,201 ಮತ ಲಭಿಸಿತ್ತು. ಈ ಬಾರಿ ಇಲ್ಲಿ ತೀವ್ರ ಸ್ಪರ್ಧೆಯೊಡ್ಡಿ ಡಿವಿಶನ್‌ನ್ನು ಬಿಜೆಪಿ ಕೈಯಿಂದ ವಶಪಡಿಸಲು ಕಾಂಗ್ರೆಸ್‌ನ ಪ್ರಮುಖ ಮುಖಂಡ ಸೋಮಶೇಖರ್ ಜೆ.ಎಸ್. ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿಪಿಎಂನ ಕಾಸರಗೋಡು ಏರಿಯ ಮಾಜಿ ಕಾರ್ಯದರ್ಶಿ …

ಜಿಲ್ಲಾ ಪಂಚಾಯತ್ ಚುನಾವಣೆ: ದೇಲಂಪಾಡಿ ಡಿವಿಶನ್‌ನಲ್ಲಿ ಪಕ್ಷಗಳ ಮಧ್ಯೆ ಪೈಪೋಟಿ

ದೇಲಂಪಾಡಿ: ಯಾವುದೇ ಪಕ್ಷ ಜಯ ಗಳಿಸಿದರೂ ಅಲ್ಪ ಮೊತ್ತ ಬಹುಮತ ಲಭಿಸುವ ಡಿವಿಶನ್‌ಗಳಲ್ಲಿ ಒಂದಾಗಿದೆ ದೇಲಂಪಾಡಿ ಜಿಲ್ಲಾ ಪಂಚಾಯತ್ ಡಿವಿಶನ್. ಇಲ್ಲಿ ಕಳೆದ ಬಾರಿ ಮುಸ್ಲಿಂ ಲೀಗ್‌ನ ಬಿ. ಶಫೀಕ್ ಜಯಗಳಿಸಿದ್ದು 263 ಮತ ಹೆಚ್ಚುವರಿ ಯಾಗಿ ಲಭಿಸಿಯಾಗಿತ್ತು. ಸಿಪಿಎಂನ ಎ.ಪಿ.ಕುಶಲರಿಗೆ 13,185 ಮತ ಲಭಿಸಿದ್ದು, ಶಫೀಕ್‌ಗೆ 13,448 ಲಭಿಸಿ ಜಯ ಗಳಿಸಿದ್ದರು. ಇದೇ ವೇಳೆ ಬಿಜೆಪಿ ಯ ಎಂ. ಸುಧಾಮ ಗೋಸಾಡರಿಗೆ 9,997 ಮತ ಲಭಿಸಿದೆ. ಈ ಬಾರಿ ಐಕ್ಯರಂಗದಿಂದ  ದಲಿತ್ ಲೀಗ್ ಕಾರ್ಯಕರ್ತೆ ಪ್ರೇಮ …

ಕೇರಳದಲ್ಲಿ ಬಿಜೆಪಿಗೆ  ಇಷ್ಟವಿರುವ ಕೇಂದ್ರ ಯೋಜನೆಗಳನ್ನು ಶೀಘ್ರ ಜ್ಯಾರಿಗೊಳಿಸಲಾಗುತ್ತಿದೆ-ಕೆ.ಸಿ. ವೇಣುಗೋಪಾಲ್

ಕುಂಬಳೆ: ಬಿಜೆಪಿಗೆ ಇಷ್ಟವಿರುವ ಕೇಂದ್ರ ಯೋಜನೆಗಳನ್ನು ಬಹುಬೇ ಗನೆ ಕೇರಳದಲ್ಲಿ  ಜ್ಯಾರಿಗೊಳಿಸಲಾಗುತ್ತಿದೆ. ಇದು ಸಿಪಿಎಂ ಹಾಗೂ ಬಿಜೆಪಿ ಮಧ್ಯೆ ಹಲವು ವರ್ಷಗಳಿಂದ ಮುಂದುವರಿಯುತ್ತಿರುವ ಅಪವಿತ್ರ ಮೈತ್ರಿ ಕೂಟದ ಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಕುಂಬಳೆಯಲ್ಲಿ   ತ್ರಿಸ್ತರ ಪಂಚಾಯತ್ ಚುನಾವಣೆಯ ಸಂಬಂಧ ನಡೆದ  ಯುಡಿಎಫ್ ಅಭ್ಯರ್ಥಿಗಳ ಸಂಗಮ ಹಾಗೂ ಸಾರ್ವಜನಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇ.ಡಿಯಿಂದ ಸಾವಿರ ನೋಟೀಸು ಲಭಿಸಿದರೂ ಸಿಪಿಎಂ ಭಯಪಡದು. ಶಬರಿಮಲೆಯ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ  …

ಈ ಚುನಾವಣೆಯಲ್ಲಿ ಕೇರಳದ ಜನತೆ ಬಿಜೆಪಿಯನ್ನು ಎರಡೂ ಕೈ ಚಾಚಿ ಸ್ವೀಕರಿಸಲಿದ್ದಾರೆ-ಸಿ.ಕೆ. ಪದ್ಮನಾಭನ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕೇರಳದ ಜನರು ಬಿಜೆಪಿಯನ್ನು ಎರಡೂ ಕೈಗಳನ್ನು ಚಾಚಿ ಸ್ವೀಕರಿಸಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ತಿಳಿಸಿದ್ದಾರೆ. ಬಿಜೆಪಿ ಕಾಸರಗೋಡು ನಗರಸಭೆಯ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಬಗ್ಗೆ ನಡೆಸಲಾಗುತ್ತಿರುವ ಅಪಪ್ರಚಾರಗಳಿಗೆ ಜನರು ಬೆಲೆ ಕಲ್ಪಿಸಲಾರರು. ಸರ್ವ ವಲಯದಲ್ಲೂ ಕೇರಳ ಒಂದನೇ ಸ್ಥಾನದಲ್ಲಿದೆಯೆಂಬ ರೀತಿಯ ವಾದಗಳು ಕೇವಲ ಕಪಟವಾಗಿದೆ. ದೇಶದ ಬಡತನ ರಾಜ್ಯವಾಗಿದ್ದ ಉತ್ತರ ಪ್ರದೇಶದಂತಹ …