ಪೈವಳಿಕೆ ಪಂಚಾಯತ್‌ನಲ್ಲಿ ತ್ರಿಕೋನ ಸ್ಪರ್ಧೆ: ಆಡಳಿತ ಸ್ವಾಧೀನಕ್ಕೆ ಬಿಜೆಪಿ, ಎಡ-ಬಲ ಒಕ್ಕೂಟಗಳಿಂದ ಪೈಪೋಟಿ
ಪೈವಳಿಕೆ: ಕಳೆದ ಬಾರಿ ಟಾಸ್ ಮೂಲಕ ಆಡಳಿತ ಲಭಿಸಿ ಎಡರಂಗದ ಆಡಳಿತವಿರುವ ಪೈವಳಿಕೆ ಪಂಚಾಯತ್‌ನಲ್ಲಿ ಈ ಬಾರಿ ತೀವ್ರ ಹೋರಾಟ ಕಂಡು ಬರುತ್ತಿದೆ. ಕಳೆದ ಬಾರಿ 19 ವಾರ್ಡ್‌ಗಳಿದ್ದ ಪಂಚಾಯತ್‌ನಲ್ಲಿ ಈ ಬಾರಿ 21 ವಾರ್ಡ್‌ಗಳಿದ್ದು, ಆಡಳಿತ ಯಾವ ಪಕ್ಷಕ್ಕೆ ಲಭಿಸುತ್ತದೆ ಎಂಬ ನಿರೀಕ್ಷೆ ಜನರಲ್ಲಿದೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಇಲ್ಲಿ ಬಿಜೆಪಿ ತಾವರೆ ಚಿಹ್ನೆಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆದರೆ ಎಡರಂಗ ಹಾಗೂ ಯುಡಿಎಫ್ ಪಕ್ಷಗಳಲ್ಲಿ ಕೆಲವು ಕಡೆ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ಪಂಚಾಯತ್‌ನಲ್ಲಿ 8 …