ಅಸೌಖ್ಯ: ನಿಧನ

ಉಪ್ಪಳ: ಜೋಡುಕಲ್ಲು ಬಳಿಯ ಮಡಂದೂರು ನಿವಾಸಿ ಕೇಶವ [73] ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಗೌರಿ, ಮಕ್ಕಳಾದ ಸತೀಶ್, ಸಂದೇಶ್, ಶಾಲಿನಿ, ಅಳಿಯ ಸುರೇಶ್, ಸಹೋ ದರ ಸಹೋದರಿಯರಾದ ಲಕ್ಷ್ಮಣ, ಜಯರಾಮ, ದೇವಕಿ, ಚಂದ್ರಾವತಿ, ಹರಿಣಾಕ್ಷಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿಮಾನ ಕೆಳಮಟ್ಟದಲ್ಲಿ ಹಾರಲಿದೆ: ಭಯಭೀತರಾಗದಿರಲು ಜಿಲ್ಲಾಧಿಕಾರಿ ಸೂಚನೆ

ಕಾಸರಗೋಡು: ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯಂಗ ವಾಗಿ, ಡಿಸೆಂಬರ್ 12 ರಿಂದ 15 ರವರೆಗೆ ವಿಮಾನಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸಲಿವೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್ ಜಿಲ್ಲೆಗಳು ಮತ್ತು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಮಡಿಕೇರಿಯ ಗಡಿ ಪ್ರದೇಶದಲ್ಲಿ ವಿಮಾನ ಕೆಳಮಟ್ಟದಲ್ಲಿ ಹಾರಾಟ ನಡೆಸಲಿದೆ. ಭೂಮಿಯ ಹೊರಪದರದ ಅಡಿಯಲ್ಲಿ ಖನಿಜ ನಿಕ್ಷೇಪಗಳನ್ನು ಕಂಡುಹಿಡಿಯಲು ಈ ವೈಮಾನಿಕ ಸಮೀಕ್ಷೆ ನಡೆಸ ಲಾಗುತ್ತಿದೆ. ವಿಮಾನವು ಕೆಳಮಟ್ಟಕ್ಕೆ ಹಾರುವುದನ್ನು ನೋಡಿ ಸಾರ್ವ ಜನಿಕರು ಭಯಭೀತ ರಾಗಬಾರದು ಎಂದು ಜಿಲ್ಲಾಧಿಕಾರಿ ಕೆ. …

ಬಿಜೆಪಿ ವರ್ಕಾಡಿ, ಮಂಜೇಶ್ವರ ಪಂಚಾಯತ್ ಸಮಾವೇಶ: ನಾಳೆ ಎಂ.ಟಿ. ರಮೇಶ್ ವರ್ಕಾಡಿಗೆ

ಮಂಜೇಶ್ವರ: ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಸಮಾವೇಶ ನಾಳೆ ಸಂಜೆ 6ಗಂಟೆಗೆ ಮಜೀರ್‌ಪಳ್ಳದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ ರಮೇಶ್ ಉದ್ಘಾಟಿಸುವರು. ಮಂಜೇಶ್ವರ ಪಂಚಾಯತ್ ಸಮಿತಿ ಕಾರ್ಯಕರ್ತರ ಸಮಾವೇಶ ಇಂದು ಸಂಜೆ ಮಾಡ ತೀಯಾ ಸಮಾಜ ಭವನದಲ್ಲಿ ನಡೆಯಲಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸುವರು.

ಹಸಿರುಕೋಟೆ ಉಳುವಾರಿನಲ್ಲಿ ಸಿಪಿಎಂನಿಂದ ತೀವ್ರ ಸ್ಪರ್ಧೆ

ಕುಂಬಳೆ:  ಮುಸ್ಲಿಂ ಯೂತ್ ಲೀಗ್ ಮುಖಂಡ ಯೂಸಫ್ ಉಳುವಾರ್‌ನ ಸ್ವಂತ ವಾರ್ಡ್ ಆದ ಕುಂಬಳೆ ಪಂಚಾಯತ್‌ನ ೬ನೇ ವಾರ್ಡ್ ಉಳುವಾರ್‌ನಲ್ಲಿ  ಈ ಬಾರಿ ಮುಸ್ಲಿಂ ಲೀಗ್ ಸುಲಭದಲ್ಲಿ ಗೆಲುವು ಸಾಧಿಸದು ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ. ನ್ಯೂಜನ್ ಮತಗಳು ಸಿಪಿಎಂಗೆ ಲಭಿಸಲಿದ್ದು  ಇದು ಫಲಿತಾಂಶದಲ್ಲಿ ಬದಲಾವಣೆ ಸೃಷ್ಟಿಸಲಿದೆ. ಕುಂಬಳೆ ಪಂಚಾಯತ್‌ನ ಹಸಿರು ಕೋಟೆ ಎಂದು ವಿಶೇಷಣೆ ಹೊಂದಿರುವ ಉಳುವಾರ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ನಾಫಿಯ ಹುಸೈನ್, ಸಿಪಿಎಂನ ಅಭ್ಯರ್ಥಿಯಾಗಿ ಆಯಿಷತ್ ರಜೂಲ, ಬಿಜೆಪಿ ಅಭ್ಯರ್ಥಿಯಾಗಿ ಮಮತ ಶಾಂತರಾಮ ಆಳ್ವ …

ರಾಜ್ಯದಲ್ಲಿ ಯುಡಿಎಫ್ ಪರವಾದ ಅಲೆ ಬೀಸುತ್ತಿದೆ- ಪಿ.ಕೆ. ಕುಂಞಾಲಿಕುಟ್ಟಿ

ಕಾಸರಗೋಡು: ರಾಜ್ಯದಲ್ಲಿ ಇದೀಗ ಯುಡಿಎಫ್ ಪರವಾದ ಅಲೆ ಬೀಸುತ್ತಿದೆ ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ತಿಳಿಸಿದ್ದಾರೆ. ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಅವರು ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಮಾತನಾಡುತ್ತಿದ್ದರು. ಪಂಚಾಯತ್ ಚುನಾವಣೆಯಲ್ಲಿ ರಾಜಕೀಯಕ್ಕಿಂತಲೂ ಹೆಚ್ಚಾಗಿ ಪ್ರಾದೇಶಿಕ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹಾಗಿದ್ದರೂ ಈ ಬಾರಿ ಪಂಚಾಯತ್ ಚುನಾವಣೆ ಯಲ್ಲಿ ಮತ ದಾರರಿಂದ ಯುಡಿಎಫ್‌ಗೆ ಅನುಕೂಲ ವಾದ ತೀರ್ಪು ಉಂಟಾ ಗಲಿದೆ ಎಂದು ಕುಂಞಾಲಿ ಕುಟ್ಟಿ ತಿಳಿಸಿದ್ದಾರೆ. ಎಡರಂಗ ಸರಕಾರದ ಚಟುವಟಿಕೆ ಕಳಪೆಯಾಗಿದೆ. ಆದ್ದರಿಂದ ಕೇರಳದಲ್ಲಿ …

ರೈಲ್ವೇ ಹಳಿಯಲ್ಲಿ ಅರೆಯುವ ಕಲ್ಲು ಪತ್ತೆ : ಬುಡಮೇಲು ಕೃತ್ಯ ಶಂಕೆ

ಕೊಚ್ಚಿ: ಕೊಚ್ಚಿಯ ಪಚ್ಚಾಳ ಎಂಬಲ್ಲಿನ ರೈಲು ಹಳಿಯಲ್ಲಿ ಅರೆಯುವ ಕಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇಂದು ಮುಂಜಾನೆ ೪.೩೦ರ ವೇಳೆ ಮೈಸೂರು- ತಿರುವನಂತಪುರ ಕೊಚ್ಚುವೇಳಿ ಎಕ್ಸ್‌ಪ್ರೆಸ್ ರೈಲು ಸಂಚರಿಸಿದ ಬಳಿಕ ಅರೆಯುವ ಕಲ್ಲು ಹಳಿಯಲ್ಲಿ ಕಂಡು ಬಂದಿದೆ. ಹಳಿಯ ಮಧ್ಯದಲ್ಲಿ ಕಲ್ಲು ಇರಿಸಲಾಗಿದೆ. ಕಲ್ಲು ಹೆಚ್ಚು ಎತ್ತರವಿಲ್ಲದಿರುವುದರಿಂದ ರೈಲು ಅದರ ಮೇಲೆ ಹಾದು ಹೋಗಿದೆ. ಇದೇ ರೈಲಿನ ಲೋಕೋ ಪೈಲೆಟ್ ಈ ಮಾಹಿತಿಯನ್ನು …

ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ದುರಸ್ತಿಗೆ ಆಗ್ರಹ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಹಲವು ವರ್ಷಗಳಿಂದ ಶೋಚನೀಯಾವಸ್ಥೆಯಲ್ಲಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉಪ್ಪಳ ಪೇಟೆಯಿಂದ ರೈಲ್ವೇ ನಿಲ್ದಾಣ ತನಕದ ಸುಮಾರು ಒಂದು ಕಿಲೋ ಮೀಟರ್ ಕಾಂಕ್ರೀಟ್ ಹಾಗೂ ಡಾಮರು ರಸ್ತೆ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯ ಮೇಲ್ಬಾಗ ಪಂಚಾಯತ್ ಹಾಗೂ ಕೆಳ ಭಾಗ ರೈಲ್ವೇ ಇಲಾಖೆಗೆ ಸೇರಿದೆ. ರಸ್ತೆಯ ಚರಂಡಿಯನ್ನು ನವೀಕರಿಸುವ ಕೆಲಸ ನಡೆಯುತ್ತಿದೆ. ಈ ಪ್ರದೇಶದಲ್ಲಿ ರೈಲ್ವೆ ನಿಲ್ದಾಣ, ಅಯ್ಯಪ್ಪ ಮಂದಿರ, …