ಪಂಚಾಯತ್ ಚುನಾವಣೆ: ಬೆಳ್ಳೂರಿನಲ್ಲಿ ತೀವ್ರಗೊಂಡ ಪ್ರಚಾರ ಕಾವು: ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ನೇರ ಸ್ಪರ್ಧೆ
ಮುಳ್ಳೇರಿಯ: ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಬೆಳ್ಳೂರಿನಲ್ಲಿ ಚುನಾವಣಾ ಪ್ರಚಾರ ಕಾವು ತೀವ್ರ ಗೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡ ಳಿತ ನಡೆಸುವ ಪಂಚಾಯತ್‌ಗಳಲ್ಲಿ ಬೆಳ್ಳೂರು ಕೂಡಾ ಒಳಗೊಂಡಿದೆ. ಕಳೆದ ಎರಡು ಅವಧಿಯಲ್ಲಿ ಈ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಈ ಬಾರಿಯ ಚುನಾವಣೆ ಯಲ್ಲೂ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೈಯ್ಯುವ ನಿರೀಕ್ಷೆಯನ್ನು ಬಿಜೆಪಿ ನೇತಾರರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಬಾರಿ ಈ ಪಂಚಾಯತ್‌ನಲ್ಲಿ ಒಟ್ಟು 13 ವಾರ್ಡ್‌ಗಳಿದ್ದವು. ಈ ಪೈಕಿ ಬಿಜೆಪಿ 9 ಸೀಟುಗಳನ್ನು ಗೆದ್ದುಕೊಂಡು …