ಬಂದ್ಯೋಡು ನಿವಾಸಿ ದುಬಾಯಿಯಲ್ಲಿ ನಿಗೂಢ ರೀತಿಯಲ್ಲಿ ಸಾವು : ಇಬ್ಬರು ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ಬಂದ್ಯೋಡು ಪಂಜತ್ತೊಟ್ಟಿ ನಿವಾಸಿ ದುಬಾಯಿ ಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಈ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಪಂಜತ್ತೊಟ್ಟಿಯ ಹಸೈನಾರ್-ಸಫಿಯಾ ದಂಪತಿಯ ಏಕ ಪುತ್ರ ಮುಹಮ್ಮದ್ ಶಫೀಕ್ (25) ಮೃತಪಟ್ಟ ವ್ಯಕ್ತಿ. ದುಬಾಯಿ ಪೋರ್ಟ್ ರಾಶಿದ್ ಸಮುದ್ರದಲ್ಲಿ  ಇವರ ಮೃತದೇಹ ಪತ್ತೆಯಾಗಿರುವು ದಾಗಿ ಸಂಬಂಧಿಕರಿಗೆ ಮಾಹಿತಿ ಲಭಿಸಿದೆ. ಬರ್ದುಬೈ ಎಂಬಲ್ಲಿ ವಾಸಿಸಿ ಖಾಸಗಿ ಸಂಸ್ಥೆಯೊಂದರಲ್ಲಿ  ಮುಹ ಮ್ಮದ್ ಶಫೀಕ್ ಕೆಲಸ ನಿರ್ವಹಿಸಿ ದ್ದರು. ಎಂಟು ತಿಂಗಳ ಹಿಂದೆ ಊರಿಗೆ …

ಕಾಸರಗೋಡು ಸೇರಿ ಏಳು ಜಿಲ್ಲೆಗಳಲ್ಲಿ ನಾಳೆ ಮತಗಟ್ಟೆಗೆ

ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದ್ವಿತೀಯ ಹಂತದ ಚುನಾವಣೆ ನಾಳೆ ನಡೆಯಲಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ, ಪಾಲಕ್ಕಾಡ್ ಮತ್ತು ತೃಶೂರು ಜಿಲ್ಲೆಗಳ ಒಟ್ಟು 604 ಸ್ಥಳೀಯಾಡಳಿತ ಸಂಸ್ಥೆಗಳ 12,391 ವಾರ್ಡ್ಗಳಿಗೆ ನಾಳೆ ಮತದಾನ ನಡೆಯಲಿದೆ. ನಾಳೆ ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ಮುಂದುವರಿ ಯಲಿದೆ. ಈ ಏಳು ಜಿಲ್ಲೆಗಳ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆಬಿದ್ದಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಕಾಸರಗೋಡು ಜಿಲ್ಲೆಯಲ್ಲಿ …

ವಿದ್ಯಾರ್ಥಿ ನಾಪತ್ತೆ

ಕಾಸರಗೋಡು: ಪ್ಲಸ್‌ವನ್ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆಗೆ ಸಮೀಪದ ಆರಿಕ್ಕಾಡಿ ಕುನ್ನಿಲ್ ಹೌಸ್‌ನ ನಿವಾಸಿ ಹಾಗೂ ಪಟ್ಲದಲ್ಲಿರುವ ತಹ್ವಾರಿಯಾ ಅಕಾಡೆಮಿಯಲ್ಲಿ ವಾಸಿಸುತ್ತಿರುವ ಪ್ಲಸ್‌ವನ್ ವಿದ್ಯಾರ್ಥಿ ಮೊಹಮ್ಮದ್ ಅರಾಫತ್ (17) ಈ ತಿಂಗಳ ೮ರಂದು ಪ್ರಸ್ತುತ ಅಕಾಡೆಮಿಯಿಂದ ನಾಪತ್ತೆಯಾಗಿ ರುವುದಾಗಿ ಮನೆಯ ವರು ದೂರು ನೀಡಿದ್ದು, ಅದರಂತೆ ವಿದ್ಯಾನಗರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಐಟಿಐ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ:  ಕಾಸರಗೋಡಿನ ಐಟಿಐ ವಿದ್ಯಾರ್ಥಿ ಯೋರ್ವ ಬಾಡಿಗೆ ಮನೆಯ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬಂ ದ್ಯೋಡು ಅಡ್ಕ ಬೈದಲ ನಿವಾಸಿಯೂ ಪ್ರಸ್ತುತ  ಮಂಗಲ್ಪಾಡಿ ಚೆರುಗೋಳಿಯ ಬಾಡಿಗೆ ಮನೆಯಲ್ಲಿ ವಾಸಿಸುವ ಗಲ್ಫ್ ಉದ್ಯೋ ಗಿ   ಮೊಹಮ್ಮದ್ ಬಾಷಾ ಎಂಬವರ ಪುತ್ರ ಶಿಹಾಬ್ (19)  ಸಾವಿಗೀಡಾದ ವಿದ್ಯಾರ್ಥಿ.  ಈತ ಕಾಸರಗೋಡಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದನು. ಇಂದು ಮುಂಜಾನೆ ತಾಯಿ ಎಬ್ಬಿಸಲು ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು. ಕರೆದರೂ  ಪ್ರತಿಕ್ರಿಯೆ ಬಾರದ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವಿದ್ಯಾನಗರ ನೆಲ್ಕಳ ಕಾಲನಿಯಲ್ಲಿ ಯುವಕನೋ ರ್ವ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ದಿವಂಗತರಾದ ಚಂದ್ರ-ಸುಶೀಲ ದಂಪತಿ ಪುತ್ರ ಅಜಯನ್ (28) ಮೃತಪಟ್ಟ ವ್ಯಕ್ತಿ. ಲೈಟ್ ಆಂಡ್ ಸೌಂಡ್ ಕಾರ್ಮಿಕನಾದ ಅಜಯನ್ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯ ಬಾಗಿಲು ತೆರೆಯದಿರುವುದು ಗಮನಕ್ಕೆ ಬಂದ ಸಂಬಂಧಿಕರು ಅಲ್ಲಿಗೆ ತೆರಳಿ ನೋಡಿದಾಗ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಅಜಯನ್ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ …

ನಾಪತ್ತೆಯಾದ ಯುವತಿ ಗೆಳೆಯನಿಂದ ಕೊಲೆ: ಜೀರ್ಣಿಸಿದ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು

ಕೊಚ್ಚಿ: ಮಲೆಯಾಟೂರ್‌ನಿಂದ ನಾಪತ್ತೆಯಾದ 19ರ ಹರೆಯದ ಯುವತಿಯ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮುಂಡಂಙಮಟ್ಟಂ ವೀಟಿಲ್ ಚಿತ್ರಪ್ರಿಯ (19)ರ ಮೃತದೇಹ ಜನವಾಸವಿಲ್ಲದ ಹಿತ್ತಿಲಲ್ಲಿ ಪತ್ತೆಹಚ್ಚಲಾಗಿದೆ. ಯುವತಿಯ ತಾಯಿ ಕೆಲಸ ಮಾಡುವ ಕ್ಯಾಟರಿಂಗ್ ಘಟಕದ ಕಾರ್ಮಿಕರ ಹುಡುಕಾಟದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಚಿತ್ರಪ್ರಿಯಳ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮಣಪ್ಪಾಟ್‌ಚಿರ ಸಮೀಪ ನಿನ್ನೆ ಮಧ್ಯಾಹ್ನ ಮೃತದೇಹವನ್ನು ಸ್ಥಳೀಯರು ಪತ್ತೆಹಚ್ಚಿರುವುದು. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಈಕೆಯ ಗೆಳೆಯ ಅಲನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದು ಪ್ರಶ್ನಿಸಿದಾಗ …

ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಯುವಕನೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರು

ಕಣ್ಣೂರು:  ಚೋಕ್ಲಿಯಿಂದ ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಟಿ.ಪಿ. ಅರುವ ಮರಳಿ ಬಂದಿದ್ದಾರೆ. ಚೊಕ್ಲಿ ಪೊಲೀಸ್ ಠಾಣೆಯಲ್ಲಿ ಅರುವ ಹಾಗೂ ಯುವಕ ಹಾಜರಾಗಿದ್ದಾರೆ.  ಚೊಕ್ಲಿ ಗ್ರಾಮ ಪಂಚಾಯತ್‌ನ ೯ನೇ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ  ಯುಡಿಎಫ್ ಅಭ್ಯರ್ಥಿಯಾಗಿ ಅರುವ ಸ್ಪರ್ಧಿಸುತ್ತಿ ದ್ದಾರೆ.  ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ಅರುವ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಮೊಬೈಲ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ  ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಚೊಕ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಸ್ಥಳೀಯನಾದ ಓರ್ವ ಬಿಜೆಪಿ ಕಾರ್ಯಕರ್ತನೊಂದಿಗೆ  ಟಿ.ಪಿ. ಅರುವ  …

ಬದಿಯಡ್ಕದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ಪಕ್ಷಗಳಿಂದ ವಿಜಯಸಂಕಲ್ಪ ಮೆರವಣಿಗೆ

ಬದಿಯಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯ ಬಹಿರಂಗ ಪ್ರಚಾರ ನಿನ್ನೆ ಸಂಜೆ 6 ಗಂಟೆಗೆ ಕೊನೆಗೊಂ ಡಿತು. ನಾಳೆ ಮತದಾನ ನಡೆಯಲಿದೆ. ಬದಿಯಡ್ಕ ಪಂ. ವ್ಯಾಪ್ತಿಯಲ್ಲಿ ಒಟ್ಟು 21 ವಾರ್ಡುಗಳಿಗೆ, ಮೂರು ಬ್ಲೋಕ್ ಪಂಚಾಯತ್ , ಜಿಲ್ಲಾ ಪಂಚಾಯತ್‌ಗೆ ಮತದಾನ ನಡೆಯಲಿದೆ.25 ವರ್ಷಗಳ ಯುಡಿಎಫ್ ಆಡಳಿತಕ್ಕೆ ಕೊನೆಗಾಣಿಸಿ ಬದಿಯಡ್ಕ ಪಂ. ಆಡಳಿತವನ್ನು ಮರಳಿ ಪಡೆಯುವುದಕ್ಕೋಸ್ಕರ ಬಿಜೆಪಿ ಅಭ್ಯರ್ಥಿಗಳು, ನಾಯಕರು ಶತಪ್ರಯತ್ನದಲ್ಲಿದ್ದಾರೆ. ಪಂ.ನ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳು, ಶೌಚಾಲಯ, ಮನೆ ನಿರ್ಮಾಣ, ಕೃಷಿಗೆ ಅನುದಾನ, ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುವುದಾಗಿ …

ನಿವೃತ್ತ ದೈಹಿಕ ಶಿಕ್ಷಕ ನಿಧನ

ಪೈವಳಿಕೆ: ಬಾಯಾರು ಕಲ್ಲಗದ್ದೆ ನಿವಾಸಿ, ನಿವೃತ ದೈಹಿಕ ಶಿಕ್ಷಕ ಶಿವರಾಮ ಶೆಟ್ಟಿ (80) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದರು. ಕಾಯರ್‌ಕಟ್ಟೆ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ಅಲ್ಲದೆ ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಬೆರಿಪದವು ಶ್ರೀ ಮೂಕಾಂಬಿಕ ಭಜನಾ ಮಂದಿರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಉಮಾವತಿ, ಮಕ್ಕಳಾದ ಅಜಿತ್, ವಿದ್ಯಾ, ಸೊಸೆ ಶ್ವೇತ, ಅಳಿಯ ಹರೀಶ್ ಶೆಟ್ಟಿ, ಸಹೋದರ ಸಹೋದರಿಯ …

ಕುಂಬಳೆಯಲ್ಲಿ ಆವೇಶಭರಿತ ಪ್ರಚಾರ ಅಂತ್ಯ: ಮಧ್ಯೆ ಕೌತುಕ ಸೃಷ್ಟಿಸಿದ ಸ್ವತಂತ್ರ ಅಭ್ಯರ್ಥಿ

ಕುಂಬಳೆ: ಚುನಾವಣೆಯ ಕಾವು ತುತ್ತತುದಿಗೇರಿದ ಪ್ರಚಾರ ಮುಕ್ತಾಯ ಸಮಯದಲ್ಲಿ ಜನಸಮೂಹದ ಮಧ್ಯೆ ಕಾವಿಯುಟ್ಟು ತಲೆಯಲ್ಲಿ ಮುಟ್ಟಾಳೆ ಧರಿಸಿ ನೋಟೀಸ್‌ಗಳೊಂದಿಗೆ ನಡೆಯುತ್ತಿದ್ದ ವ್ಯಕ್ತಿ ನೋಡುಗರಿಗೆ ಕೌತುಕ ಮೂಡಿಸಿದರು. ಪಕ್ಕನೆ ಹಲವರಿಗೆ ಈ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ. ಪರೀಕ್ಷಿಸಿ ನೋಡಿದಾಗ ಆ ವ್ಯಕ್ತಿ ನೀಡಿದ ನೋಟೀಸನ್ನು ಪಡೆದು ಓದಿದಾಗ ಮತದಾರರಿಗೆ ಆ ವ್ಯಕ್ತಿಯ ಗುರುತು ಲಭಿಸಿತು. ಈ ವೇಳೆ ಅವರು ಹಾಂ ಇದು ನಮ್ಮ ೨೪ನೇ ವಾರ್ಡ್‌ನ ಸ್ವತಂತ್ರ ಅಭ್ಯರ್ಥಿ ಕೇಶವ ನಾಯಕ್ ಅಲ್ಲವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಮತ್ತೆ …