ಕುಂಬಳೆ ಪಂ.ನಲ್ಲಿ ಭ್ರಷ್ಟಾಚಾರ ನಡೆದಿದ್ದರೆ  ಯಾಕೆ ಕ್ರಮ ಕೈಗೊಳ್ಳಲಿಲ್ಲ-ಎ.ಕೆ. ಹಾರಿಸ್

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ  ಐದು ವರ್ಷ ಕಾಲ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ಪತ್ತೆಹಚ್ಚಿ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯಾಕೆ ಸಾಧ್ಯವಾಗಿಲ್ಲವೆಂದು  ಮುಸ್ಲಿಂ ಲೀಗ್‌ನ ಮಂಡಲ ಕಾರ್ಯದರ್ಶಿ ಎ.ಕೆ. ಹಾರಿಸ್ ಪ್ರಶ್ನಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆಯಲ್ಲಿ ಯುಡಿಎಫ್‌ನ ಚುನಾವಣಾ ಪ್ರಚಾರ ಸಮಾಪ್ತಿಯಂ ಗವಾಗಿ ನಡೆದ ಕಾರ್ನರ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.  ಪಂಚಾಯತ್‌ನಲ್ಲಿ  ಸಿಪಿಎಂನ ಮೂವರು ಹಾಗೂ ಎಸ್‌ಡಿಪಿಐಯ ಓರ್ವ ಸದಸ್ಯರಿದ್ದರು. ೫ ವರ್ಷಗಳ ಯುಡಿಎಫ್ ಆಡಳಿತದಲ್ಲಿ ಭ್ರಷ್ಟಾ ಚಾರ ನಡೆದಿದೆ …

ಚುನಾವಣೆ: ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯಿಂದ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೋಲಿಂಗ್ ಸ್ಟೇಷನ್‌ಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ ಇಂದು, ನಾಳೆ ಮತ್ತು ಮತ ಎಣಿಕೆ ಕೇಂದ್ರಗಳಾಗಿ ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳಿಗೆ 13ರಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ರಜೆ ಘೋಷಿಸಿದ್ದಾರೆ. ನಾಳೆ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಪೋಲಿಂಗ್ ಬೂತ್‌ಗಳಾಗಿ ಕಾರ್ಯಾಚರಿಸುವ 158 ಅಂಗನವಾಡಿಗಳಿಗೆ ರಜೆ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾಟಂಗುಳಿ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಗೆ ಜಯ ಸಾಧ್ಯತೆ- ಎಡಪಕ್ಷ ಪದಾಧಿಕಾರಿಗಳು

ಕುಂಬಳೆ: ಪಂಚಾಯತ್‌ನ 22ನೇ ವಾರ್ಡ್ ಮಾಟಂಗುಳಿಯಲ್ಲಿ  ಎಡರಂಗದ ಸ್ವತಂತ್ರ ಅಭ್ಯರ್ಥಿ ಜಯ ಗಳಿಸಲಿದ್ದಾರೆ ಎಂದು ಎಲ್‌ಡಿಎಫ್  ಚುನಾವಣಾ ಪ್ರಚಾರ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ೨೦ ವರ್ಷದ ಹಿಂದೆ ಎಡಪಕ್ಷದ ಪಂಚಾಯತ್ ಸದಸ್ಯ ನಡೆಸಿದ ಅಭಿವೃದ್ಧಿ ಕೆಲಸಗಳಲ್ಲದೆ ಆ ಬಳಿಕ ಈ ವಾರ್ಡ್‌ನಲ್ಲಿ ಏನೂ ಸಂಭವಿಸಿಲ್ಲವೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ಪಂಚಾ ಯತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ೮೦ ಮತಗಳನ್ನು ಹೆಚ್ಚಾಗಿ ಗಳಿಸಿ ಎಡರಂಗವನ್ನು ಸೋಲಿಸಿದೆ. ಆ ಸನ್ನಿವೇಶ ಈಗ ಇಲ್ಲ. ಅಲ್ಲದೆ ವಾರ್ಡ್ ವಿಭಜನೆಯಿಂದಾಗಿ …

ಮೊಗ್ರಾಲ್ ವಲಿಯ ನಾಂಗಿಯಲ್ಲಿ ಮುಳ್ಳುಹಂದಿ ಕಾಟ: 15 ತೆಂಗಿನ ಗಿಡಗಳು ನಾಶ

ಮೊಗ್ರಾಲ್: ಹಂದಿಯ ಬೆನ್ನಲ್ಲೇ ಮುಳ್ಳುಹಂದಿ ಕೂಡಾ ಕೃಷಿಯನ್ನು ನಾಶಪಡಿಸಲು ಆರಂಭಿಸಿರುವುದರೊಂ ದಿಗೆ ಕೃಷಿಕರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮೊಗ್ರಾಲ್ ವಲಿಯನಾಂಗಿ ರಸ್ತೆಯ ಕೆ. ಮುಹಮ್ಮದ್ ಕುಂಞಿಯ ವರ ಹಿತ್ತಿಲಲ್ಲಿ ಮೂರು ವರ್ಷದ ಹಿಂದೆ ನೆಟ್ಟಿದ್ದ 15 ತೆಂಗಿನ ಸಸಿಗಳನ್ನು ರಾತ್ರಿ ವೇಳೆ ಮುಳ್ಳುಹಂದಿ ನಾಶಪಡಿಸಿದೆ. ತೆಂಗಿನ ಗಿಡಗಳ ಬುಡವನ್ನು ಅಗೆದು ಸಸಿಗಳನ್ನು ಮಗುಚಿ ಹಾಕಿ ನಾಶಪಡಿಸಿದೆ. ಕಳೆದ ವರ್ಷ ಮೊಗ್ರಾಲ್‌ನ ವಿವಿಧ ಭಾಗಗಳಲ್ಲಿ ಹಂದಿಗಳ ಕಾಟ ವಿಪರೀತ ವಾಗಿತ್ತು. ಮನೆ ಹಿತ್ತಿಲಲ್ಲಿ ನೆಟ್ಟಿದ್ದ ಬಾಳೆಗಳನ್ನು ಅಂದು ವ್ಯಾಪಕವಾಗಿ ನಾಶಪಡಿಸಿತ್ತು. …

ಕುಂಬಳೆ- ಪೇರಾಲ್ ವಾರ್ಡ್‌ನಲ್ಲಿ ಪೈಪೋಟಿ ತೀವ್ರ

ಕುಂಬಳೆ: ಪಂಚಾಯತ್‌ನ 13ನೇ ವಾರ್ಡ್‌ನಲ್ಲಿ ತೀವ್ರ ಸ್ಪರ್ಧೆ ಕಂಡು ಬರುತ್ತಿದೆ. ಐಕ್ಯರಂಗದ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್‌ನ ಫಸಲ್, ಎಲ್‌ಡಿಎಫ್‌ನ ಬಿ.ಎ. ಅಶ್ರಫ್ ಮಧ್ಯೆ ಪ್ರಧಾನ ಸ್ಪರ್ಧೆಯಾಗಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಕೂಡಾ  ರಂಗದಲ್ಲಿದ್ದಾರೆ. ಕಳೆದ ಬಾರಿ ಉತ್ತಮ ಜಯಗಳಿಸಿದ ವಾರ್ಡ್‌ನಲ್ಲಿ ಈ ಬಾರಿಯೂ ಅದನ್ನು ಪುನರಾವರ್ತಿಸಲು ಸಾಧ್ಯವಿದೆ ಎಂದು ಐಕ್ಯರಂಗ ಲೆಕ್ಕಹಾಕಿದೆ. ಆದರೆ ಈ ಬಾರಿ ವಾರ್ಡ್‌ನಲ್ಲಿ ತನಗೆ ಅನುಕೂಲವಾದ ಅಲೆ ಇದೆ ಎಂದು ಎಡಪಕ್ಷದ ಅಭ್ಯರ್ಥಿ ಅಶ್ರಫ್ ನಿರೀಕ್ಷೆ ಹೊಂದಿದ್ದಾರೆ.