ಮಂಗಲ್ಪಾಡಿ, ಮಡಿಕೈ ಪಂ.ನ ತಲಾ 1 ವಾರ್ಡ್‌ಗಳಲ್ಲಿ ಮತದಾನವಿಲ್ಲ: ಅವಿರೋಧ ಆಯ್ಕೆ, ಅಭ್ಯರ್ಥಿ ಸಾವು ಹಿನ್ನೆಲೆಯಲ್ಲಿ ಕೆಲವು ಕಡೆ ಮತದಾನ ರದ್ದು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ದ್ವಿತೀಯ ಹಂತದ ಮತದಾನ ಇಂದು ನಡೆಯುತ್ತಿರುವಂತೆ ಕೆಲವು ಕಡೆಗಳಲ್ಲಿ ಮತದಾನವನ್ನು ರದ್ದುಗೊಳಿಸಲಾಗಿದೆ. ಕಣ್ಣೂರು ಜಿಲ್ಲೆಯ ಆಂತೂರು ನಗರಸಭೆಯ ಐದು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಮಲಪ್ಪುರಂ ಜಿಲ್ಲೆಯ ಮುತ್ತೇಡಂ ಪಂಚಾಯತ್‌ನ ಪಾಯಿಂಬಾಡ 7ನೇ ವಾರ್ಡ್‌ನಲ್ಲಿ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಮತದಾನ ಇಂದು ನಡೆಯುತ್ತಿಲ್ಲ. ಕಾಸರಗೋಡು ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ಗಳ ಒಂದೊಂದು ವಾರ್ಡ್‌ನಲ್ಲಿ ಇಂದು ಮತದಾನ ನಡೆಯುತ್ತಿಲ್ಲ. ಕಣ್ಣೂರು ಜಿಲ್ಲೆಯಲ್ಲಿ ಒಟ್ಟು 9 ಕಡೆಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮತದಾನವನ್ನು …

11.5 ಕೋಟಿ ರೂ.ಗಳ ಚಿನ್ನ  ಸಹಿತ ಐದು ಮಂದಿ ಸೆರೆ

ಚೆನ್ನೈ:  ವಿಮಾನ ನೌಕರ  ಒಳಗೊಂಡ ಚಿನ್ನ ಸಾಗಾಟ ತಂಡವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ.  11.5 ಕೋಟಿ ರೂ. ಮೌಲ್ಯದ 9.46 ಕಿಲೋ ಚಿನ್ನವನ್ನು ಇವರಿಂದ ವಶಪಡಿಸ ಲಾಗಿದೆ.  ದುಬಾಯಿಯಿಂದ ಬಂದ ವಿಮಾನದ ನೌಕರ ಎದೆ, ಹೊಟ್ಟೆಯ ಲ್ಲಿ ಚಿನ್ನವನ್ನು ಬಚ್ಚಿಟ್ಟು  ಬೆಲ್ಟ್‌ನಲ್ಲಿ ಬಿಗಿದಿಟ್ಟಿದ್ದನು. ಚಿನ್ನವನ್ನು ಪಡೆಯಲು ಬಂದ ಮೂವರು  ಹಾಗೂ ಚಿನ್ನ ಕಳ್ಳಸಾಗಾಟಕ್ಕೆ ಸಹಾಯ ವೊದಗಿಸಲು ತಲುಪಿದ ಓರ್ವನನ್ನು ಈ ಸಂಬಂಧ ಸೆರೆಹಿಡಿಯಲಾಗಿದೆ.

ವಿವಾಹ ವಿಚ್ಛೇಧನ ಬಗ್ಗೆ ಸಂದೇಶ ಹಾಕಿದ ಕಿರುತೆರೆ ನಟಿ ಹರಿತಾ ಜಿ. ನಾಯರ್

ತಿರುವನಂತಪುರ: ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಹರಿತಾ ಜಿ. ನಾಯರ್ ಪತಿ ವಿನಾಯಕನೊಂದಿಗಿನ ಸಂಬಂಧವನ್ನು ವಿಚ್ಛೇಧಿಸಿರುವುದಾಗಿ ಸಂದೇಶ ನೀಡಿದ್ದಾರೆ. ತನ್ನ ಸೋಷ್ಯಲ್ ಮೀಡಿಯಾ ಪೇಜ್‌ನಲ್ಲಿ ಈ ಮಾಹಿತಿಯನ್ನು ಈಕೆ ಬಹಿರಂಗಪಡಿಸಿದ್ದಾರೆ. ಚಿಕ್ಕಂದಿನಲ್ಲೇ ಇವರಿಬ್ಬರು ಗೆಳೆಯರಾಗಿದ್ದು, 15 ವರ್ಷದ ಗೆಳೆತನದ ಬಳಿಕ ೨೦೨೩ರಲ್ಲಿ ವಿವಾಹವಾಗಿದ್ದರು. ನರ್ಸಿಂಗ್ ಕಲಿಯುತ್ತಿದ್ದ ಹರಿತಾ ಜಿ. ನಾಯರ್ ಅನಿರೀಕ್ಷಿತವಾಗಿ ರಿಯಾಲಿಟಿ ಶೋಗೆ ತಲುಪಿದ್ದು, ಅಲ್ಲಿಂದ ಅಭಿನಯರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಹಲವಾರು ಹಿಟ್ ಧಾರಾವಾಹಿಗಳಲ್ಲಿ ವೇಷ ಹಾಕಿದ್ದ ಈಕೆ ಈಗ ‘ಚೆಂಬರತ್ತಿ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. …