ಸ್ಥಳೀಯಾಡಳಿತ ಚುನಾವಣೆಯ ಲೆಕ್ಕಾಚಾರ: 80 ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್, 58ರಲ್ಲಿ ಎಡರಂಗ ಮುನ್ನಡೆ ; ಎರಡರಲ್ಲಿ ಎನ್‌ಡಿಎ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ  ಹೊರಬಂದಾಗ ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ 80ರಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಆಡಳಿತ ಒಕ್ಕೂಟವಾದ ಎಡರಂಗಕ್ಕೆ ೫೮ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಎgಡು ವಿಧಾನಸಭಾ ಕ್ಷೇತ್ರಗಳಲ್ಲಿ  ಮುನ್ನಡೆ ಸಾಧಿಸಿದೆ. ತಿರುವನಂತಪುರ ಜಿಲ್ಲೆಯ ನೇಮಂ ಮತ್ತು ವಟ್ಟಿಯೂರು ಕಾವು  ಎಂಬಿವುಗಳಿಗೆ ಬಿಜೆಪಿ (ಎನ್‌ಡಿಎ) ಮುನ್ನಡೆ ಸಾಧಿಸಿರುವ ವಿಧಾನಸಭಾ ಕ್ಷೇತ್ರಗಳಾಗಿವೆ. ಮಲಪ್ಪುರಂ, ವಯನಾಡು, ಪತ್ತನಂತಿಟ್ಟ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಯುಡಿಎಫ್  …

ಬೈಕ್- ಕಾರು ಢಿಕ್ಕಿ: ಹೇರೂರು ನಿವಾಸಿ ಯುವಕನಿಗೆ ಗಂಭೀರ ಗಾಯ

ಉಪ್ಪಳ: ಉದ್ಯಾವರ ಹತ್ತನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಕಾರು-ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ವಾಹನ ಅಪಘಾತದಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹೇರೂರು ನಿವಾಸಿ ಮೊಹಮ್ಮದ್ ಅಶ್ರಫ್ (30) ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 12.45ರ ವೇಳೆ ಅಪಘಾತವುಂ ಟಾಗಿದೆ. ಮೊಹಮ್ಮದ್ ಅಶ್ರಫ್  ಬೈಕ್‌ನಲ್ಲಿ ತಲಪಾಡಿ ಭಾಗದಿಂದ ಮಂಜೇಶ್ವರ ಭಾಗಕ್ಕೆ ಬರುತ್ತಿದ್ದ ವೇಳೆ ಮಂಗಳೂರು ಭಾಗಕ್ಕೆ  ಶಬರಿಮಲೆ ತೀರ್ಥಾಟಕರು ಸಂಚರಿಸುತ್ತಿದ್ದ  ಕಾರು ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.

ಬೇಳ ಪರಿಸರದಲ್ಲಿ ಬೀದಿ ನಾಯಿಕಡಿತ: ಹಲವರಿಗೆ ಗಾಯ

ಸೀತಾಂಗೋಳಿ: ಬೇಳ ಹಾಗೂ ಪರಿಸರ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಬೀದಿನಾಯಿಯೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ಕಿಳಿಂಗಾರು ಕಟ್ಟತ್ತಂಗಡಿ, ಬೇಳ ಪರಿಸರ ನಿವಾಸಿಗಳಾದ ೮ ಮಂದಿ ನಾಯಿಯ ಕಡಿತದಿಂದ ಗಾಯಗೊಂಡಿದ್ದಾರೆ. ಕಯ್ಯಾರು ಶಾಲಾ ಅಧ್ಯಾಪಕ ಸಿರಿಲ್ ಕ್ರಾಸ್ತಾ (50), ಬದಿಯಡ್ಕ ಶಾಲಾ ಅಧ್ಯಾಪಕ ಸ್ಟೀವನ್ (40), ಶೆಬಿ (45), ಪ್ರಸನ್ನ (45), ಮೇರಿ (60), ಸರಿತ (24), ವಿದ್ಯಾರ್ಥಿಗಳಾದ ಅನ್ವೀನ್ (13), ಅಜಿತ್ (8) ಎಂಬಿವರು ನಾಯಿಯ ಕಡಿತದಿಂದ ಗಾಯಗೊಂಡು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಿನ್ನೆ …

ಆಸ್ಪತ್ರೆಯಲ್ಲಿ ದಾದಿಯೊಂದಿಗೆ ಅನುಚಿತ ವರ್ತನೆ: ಯುವಕ ಸೆರೆ

ಕುಂಬಳೆ: ಆಸ್ಪತ್ರೆಯಲ್ಲಿ ದಾದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸೂರಂಬೈಲು ನಿವಾಸಿ ಸಂತೋಷ್ ಕುಮಾರ್ (30) ಎಂಬಾತ ಸೆರೆಗೀಡಾದ ವ್ಯಕ್ತಿ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗೆ ಸಹಾಯಕನಾಗಿ ತಲುಪಿದ ಈತ ರೋಗಿಯ ಸಮೀಪದಲ್ಲಿದ್ದ ದಾದಿಯನ್ನು ಅಪ್ಪಿ ಹಿಡಿಯಲು ಪ್ರಯತ್ನಿಸಿದ್ದಾನೆಂದು ದೂರಲಾಗಿದೆ. ಈ ಬಗ್ಗೆ 21ರ ಹರೆಯದ ದಾದಿ ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.

ಮೀಂಜ ಕಳೆದುಕೊಂಡ ಎಡರಂಗ: ಪೈವಳಿಕೆ, ಮಂಗಲ್ಪಾಡಿಯಲ್ಲೂ ಯುಡಿಎಫ್ ಅಧಿಕಾರಕ್ಕೆ

ಉಪ್ಪಳ: ಜಿಲ್ಲೆಯ ಕೆಲವು ಪಂ ಚಾಯತ್‌ಗಳಲ್ಲಿ ಎಡರಂಗದ ಆಡಳಿತ ನಷ್ಟಗೊಂಡಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.  ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು.  ಆದರೆ ಈ ಬಾರಿ  ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟು ಗಳಿಸಿದ್ದು, ಆಡಳಿತ  ಅದರ ಪಾಲಾಗಿದೆ.  ಇದೇ ರೀತಿ ಮಂಗಲ್ಪಾಡಿ ಪಂಚಾಯತ್‌ನಲ್ಲೂ ಯುಡಿಎಫ್ ಅಧಿಕಾರ …

ಕುಂಬಳೆಯ ಹಿರಿಯ ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆ ಪೈ ಕಂಪೌಂ ಡ್ ರಾಧಾ ನಿವಾಸ್‌ನ ಕೆ. ವಾಮನ ಶೆಣೈ (83) ನಿಧನ ಹೊಂದಿದರು. ಇವರು  ಹಲವು ವರ್ಷಗಳ ಕಾಲ ಕುಂಬಳೆಯಲ್ಲಿ ವ್ಯಾಪಾರಿಯಾಗಿ ದ್ದರು.  ಮೃತರು ಪತ್ನಿ ಸುಮನ ಶೆಣೈ, ಮಕ್ಕಳಾದ ರಾಧಿಕ, ಸಂಧ್ಯಾ, ಸುಕನ್ಯ, ಅಳಿಯಂದಿರಾದ ನಾರಾಯಣ ಪೈ, ಶೋಭನ್ ಭಕ್ತ, ಸಹೋದರಿ ಮೀರಾ ಬಾಳಿಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಪಕ್ಷಗಳಿಗೆ ಲಭಿಸಿದ ಸೀಟುಗಳು

ಕಾಸರಗೋಡು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಪಕ್ಷಗಳಿಗೆ ಲಭಿಸಿದ ಸೀಟುಗಳ ವಿವರ ಇಂತಿದೆ. ಅಜಾನೂರು ಪಂಚಾಯತ್‌ನಲ್ಲಿ ಯುಡಿಎಫ್‌ಗೆ 8, ಎಲ್‌ಡಿಎಫ್‌ಗೆ 12, ಎನ್‌ಡಿಎಗೆ 4 ಸೀಟುಗಳು ಲಭಿಸಿದೆ. ಬದಿಯಡ್ಕ ಪಂ.ನಲ್ಲಿ ಯುಡಿಎಫ್ 10, ಎಲ್‌ಡಿಎಫ್ 1, ಎನ್‌ಡಿಎ 10. ಬಳಾಲ್  ಪಂಚಾಯತ್: ಯುಡಿಎಫ್ 14, ಎಲ್‌ಡಿಎಫ್ 2, ಇತರರು 1. ಬೇಡಡ್ಕ ಪಂ: ಯುಡಿಎಫ್ 2, ಎಲ್‌ಡಿಎಫ್ 17. ಬೆಳ್ಳೂರು ಪಂ:   ಎಲ್‌ಡಿಎಫ್ 2, ಎನ್‌ಡಿಎ 6, ಇತರರು 6. ಚೆಮ್ನಾಡ್ ಪಂ: ಯುಡಿಎಫ್ 18, …

ಅಭ್ಯರ್ಥಿಯ ಮನೆಗೆ ಹಾನಿ: ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕುಂಬಳೆ: ಮಂಗಲ್ಪಾಡಿ ಪಂಚಾಯತ್ 2ನೇ ವಾರ್ಡ್‌ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಶ್ರಫ್ ಪಚ್ಲಂಪಾರೆ ಅವರ ಮನೆಗೆ  ಹಾನಿ ಎಸಗಿದ ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಶ್ರಫ್‌ರ ಪುತ್ರಿ ಫಾತಿಮತ್ ಸೈಲ (23) ನೀಡಿದ ದೂರಿನಂತೆ ಮಶ್ಕೂರ್, ಮಶೂಕ್, ಕೆ.ಎಸ್. ಮೂಸ, ಕೆ.ಎಸ್. ಸತ್ತಾರ್, ಮೋನಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೊನ್ನೆ ಸಂಜೆ ತಂಡವೊಂದು ಮನೆಗೆ ಅತಿಕ್ರಮಿಸಿ ನುಗ್ಗಿ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ್ದು ಬಳಿಕ …

ಕುಂಬಳೆ ಪಂ.ನಲ್ಲಿ ಯುಡಿಎಫ್‌ಗೆ ಲಭಿಸಿದ ಗೆಲುವು 5 ವರ್ಷ ಕಾಲ ನಡೆದ ಅಭಿವೃದ್ಧಿ ಯೋಜನೆಗಳಿಗೆ ಜನರು ನೀಡಿದ ಅಂಗೀಕಾರ- ತಾಹಿರಾ ಯೂಸಫ್

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್‌ಗೆ ಲಭಿಸಿದ ಅಭೂತಪೂರ್ವ ಗೆಲುವು ಕಳೆದ ಐದು ವರ್ಷಗಳ ಕಾಲ ಪ್ರಸ್ತುತ ಪಂಚಾಯತ್‌ನಲ್ಲಿ ನಡೆದ ಆಡಳಿತಕ್ಕೆ ಜನರು ನೀಡಿದ ಅಂಗೀ ಕಾರವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ. ಕಳೆದ ಐದು ವರ್ಷ ಕಾಲದಲ್ಲಿ ಹಲವು ಯೋಜನೆಗಳನ್ನು ಪಂಚಾಯತ್‌ನ ಆಡಳಿತ ಮಂಡಳಿ ಜ್ಯಾರಿಗೊಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಹೊರಿಸಿದ ಭ್ರಷ್ಟಾಚಾರ ಆರೋಪ ವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ‘ಕಾರವಲ್’ಗೆ ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಹೊಯ್ಗೆ ಕಡವಿನ …

ಪೇರಾಲ್ ಕಣ್ಣೂರಿನಲ್ಲಿ ವಾಚನಾಲಯಕ್ಕೆ ಪಟಾಕಿ ಎಸೆತ; ತಂಡದಿಂದ ವ್ಯಕ್ತಿಗೆ ಹಲ್ಲೆ

ಕುಂಬಳೆ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾರ್ ವಾಚನಾಲಯದ ಮೇಲೆ ಪಟಾಕಿ ಎಸೆದು ಹಾನಿಗೈದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಫ್ಲೆಕ್ಸ್ ಬೋರ್ಡ್‌ಗಳನ್ನು ನಾಶಗೊಳಿಸಲಾಗಿದೆ. ಅಲ್ಲದೆ ವಾಚನಾಲಯದ ಮುಂದೆ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಬಗ್ಗೆ ಸಿಪಿಎಂ ನೀಡಿದ ದೂರಿನಂತೆ ಕುಂಬಳೆ …