ಜಿಲ್ಲಾ ಪಂ.ನ ಪುತ್ತಿಗೆ ಡಿವಿಶನ್‌ನಲ್ಲಿ ಸೋಮಶೇಖರರ ಗೆಲುವು:ಯುಡಿಎಫ್ ಪಾಳಯದಲ್ಲಿ ನವೋತ್ಸಾಹ

ಪೆರ್ಲ: ಜಿಲ್ಲಾ ಪಂಚಾಯತ್‌ನ  ಪುತ್ತಿಗೆ ಡಿವಿಶನ್‌ನಲ್ಲಿ ಯುಡಿಎಫ್‌ನಸೋಮಶೇಖರ ಜೆ.ಎಸ್. ಅವರು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನಲ್ಲಿ ಹೊಸ ಹುರುಪು ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ೬೦೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ೩ನೇ ಸ್ಥಾನದಲ್ಲಿದ್ದ ಯುಡಿಎಫ್ ಅಭ್ಯರ್ಥಿ ಇದೀಗ ಮೊದಲ ಸ್ಥಾನಕ್ಕೆ ತಲುಪಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಗೆಲುವು ಯುಡಿಎಫ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿ 10 ವರ್ಷದ ಅನುಭವ, ಶಿಕ್ಷಣ,  ಸಹಕಾರಿ ಕ್ಷೇತ್ರದಲ್ಲಿ ಸೇವೆ ಹಾಗೂ …

ಕೇರಳದ ಎರಡು ತುದಿಗಳಲ್ಲೂ ಬಿಜೆಪಿಯ ಸಾಧನೆ-ವಿ.ಕೆ. ಸಜೀವನ್

ಮಧೂರು:  ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿ ಆಡಳಿತ ಸತತವಾಗಿ  ೪೬ನೇ ವರ್ಷಕ್ಕೆ  ಕಾಲಿಡುತ್ತಿರುವಾಗ ರಾಜ್ಯದ  ತೆಂಕಣ ಜಿಲ್ಲೆ ರಾಜಧಾನಿ ಯಾದ ತಿರುವನಂತಪುರ ಕಾರ್ಪೋ ರೇಶನ್‌ನ್ನು ಸ್ವಾಧೀನಪಡಿಸಿದ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆಯೆಂದು ಪಕ್ಷದ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಸತತವಾಗಿ  ೪೬ನೇ ವರ್ಷಕ್ಕೆ ಆಡಳಿತ ನಡೆಸಲು ಅವಕಾಶ ಲಭಿಸಿದ ಮಧೂರು ಪಂಚಾಯತ್ ಬಿಜೆಪಿ ಸಮಿತಿಗಳ ಜಂಟಿ ಆಶ್ರಯದಲ್ಲಿ ಹರ್ಷಾಚರಣೆ ಹಾಗೂ ಸಾರ್ವಜನಿಕ ಸಭೆಯನ್ನು  ಮಧೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.  ಕೋಮು ಭೀತಿವಾದಿ ಸಂಘಟನೆಗಳ ಜೊತೆ ಸೇರಿಸಿಕೊಂಡು …

ಸ್ಥಳೀಯಾಡಳಿತ ಚುನಾವಣೆ: ಜಿಲ್ಲೆಯಲ್ಲಿ ಯುಡಿಎಫ್‌ಗೆ ಅತೀ ಹೆಚ್ಚು ಮತ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯುಡಿಎಫ್ಗೆ ಅತೀ ಹೆಚ್ಚು ಮತಗಳು ಲಭಿಸಿವೆ. ಅಂದರೆ ಎಡರಂಗಕ್ಕಿ೦ತ 57,595 ಹೆಚ್ಚು ಮತಗಳು ಯುಡಿಎಫ್ಗೆ ಲಭಿಸಿದೆ.ಯುಡಿಎಫ್ಗೆ ಒಟ್ಟು 3,57,478 ಮತಗಳು (ಶೇ. 42.92) ಲಭಿಸಿದರೆ, ಎಡರಂಗಕ್ಕೆ 2,99,883 (ಶೇ.36) ಮತಗಳು ಲಭಿಸಿದೆ. ಇನ್ನು ಬಿಜೆಪಿ ನೇ ತೃತ್ವದ ಎನ್ಡಿಎಗೆ 1,66,868 (ಶೇ. 20.03) ಮತಗಳು ಲಭಿಸಿದೆ. ಇತರ ರಿಗೆ ಶೇ. 1.05 ಮತಗಳು ಲಭಿಸಿವೆ.ಜಿಲ್ಲೆಯಲ್ಲಿ ಒಟ್ಟು 11,12,190 ಮತದಾರರಿದ್ದು, ಅದರಲ್ಲಿ ಈ ಚುನಾವಣೆಯಲ್ಲಿ 8,32,923 (ಶೇ 74.89) ಮಂದಿ …