ಶಾಲಾ ವಿದ್ಯಾರ್ಥಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಶಾಲಾ  ವಿದ್ಯಾರ್ಥಿಯೋರ್ವ  ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿಯಾದ ಪ್ರಜ್ವಲ್ (14)  ಎಂಬಾತ ಮೃತಪಟ್ಟಿದ್ದಾನೆ. ಈತ ಬೆಳ್ಳೂರು ನೆಟ್ಟಣಿಗೆ ಕುಂಜತ್ತೋಡಿ ನಿವಾಸಿ ಜಯಕರ-ಅನಿತಾ ದಂಪತಿಯ ಪುತ್ರನಾಗಿದ್ದಾನೆ. ನಿನ್ನೆ ಅಪರಾಹ್ನ 2.30ರಿಂದ 4.30ರ ಮಧ್ಯೆ ಘಟನೆ ನಡೆದಿದೆ. ತಾಯಿ ಅನಿತಾ ಮುಳ್ಳೇರಿಯ ಶಾಲೆಯಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರು  ಮರಳಿ ಮನೆಗೆ ತಲುಪಿದಾಗ ಪ್ರಜ್ವಲ್ ಬೆಡ್‌ರೂಂನಲ್ಲಿ ಶಾಲು ಬಳಸಿ ನೇಣು …

ನಗರ ಮಧ್ಯದಲ್ಲಿ ಅಪೂರ್ವ ಸಾಧಕ ನಾಗರಾಜ್ : ನಾಟಕ ಕಲಾವಿದನ ಕಾಫಿ ಕೃಷಿ

ಕಾಸರಗೋಡು: ಸುಲಭದಲ್ಲಿ ಯಾವುದು ಸಾಧ್ಯವಿಲ್ಲವೆಂದು ತಿಳಿದುಕೊಳ್ಳಲಾಗಿತ್ತೋ ಅದನ್ನು ಸಾಧ್ಯವೆಂದು ಮಾಡಿ ತೋರಿಸಿದ ಓರ್ವ ಕೃಷಿಕ ನಗರ ಮಧ್ಯದಲ್ಲಿದ್ದಾರೆ ಎಂದರೆ ಮೂಗಿಗೆ ಬೆರಳೇರಿಸಬೇಕಾಗಿದೆ. ಕಾಸರಗೋಡಿನ ಹವಾಮಾನಕ್ಕೆ ಸೂಕ್ತವಲ್ಲದ ಕಾಫಿ ಕೃಷಿಯನ್ನು ಮಾಡಿ ಯಶಸ್ವಿಯಾದ ಓರ್ವ ನಾಟಕ ಕಲಾವಿದನ ಸಾಧನೆಯನ್ನು ಗಮನಿಸಿ ನಗರಸಭೆ, ಕೃಷಿ ಭವನ ಇವರನ್ನು ಗೌರವಿಸಿತ್ತು. ಆನೆಬಾಗಿಲು ರಸ್ತೆ ಬದಿಯ ನಿವಾಸಿ ನಾಗರಾಜ್ ಈ ಸಾಧನೆ ಮಾಡಿದವರು. ಯವನಿಕ ಕಾಸರಗೋಡು ಇದರ ನಟನಾಗಿ ವಿವಿಧ ಬೀದಿ ನಾಟಕಗಳಲ್ಲಿ ಅಭಿನಯಿಸಿ ದೂರದರ್ಶನದಲ್ಲಿ ಕೂಡಾ ಪ್ರಸಾರಗೊಂಡ ನಾಟಕದಲ್ಲಿ ಅಭಿನಯಿಸಿರುವ ಇವರು …

ಹ್ಯಾಶಿಶ್ ಆಯಿಲ್  ವಶ: ಹಲವು ಪ್ರಕರಣಗಳ ಆರೋಪಿ ಸಹಿತ ಇಬ್ಬರ ಬಂಧನ  

ಪುತ್ತಿಗೆ:  ಮಾರಕ ಮಾದಕದ್ರ ವ್ಯವಾದ   ಹ್ಯಾಶಿಶ್ ಆಯಿಲ್  ಕೈವಶ ವಿರಿಸಿಕೊಂಡ  ಇಬ್ಬರನ್ನು ಕುಂಬಳೆ ಪೊಲೀಸರು ದಸ್ತಗಿರಿಗೈದಿದ್ದಾರೆ. ಕುಂಬಳೆ ಸಮೀಪದ ಆರಿಕ್ಕಾಡಿ ಲಕ್ಷಂವೀಡು ಕಾಲನಿ ನಿವಾಸಿಗಳಾದ ಮೊಹಮ್ಮದ್ ಫಸಲ್ ಯಾನೆ ಫಾಹು ಯಾನೆ ಕಂಡನ್ ಫಸಲ್(40) ಮತ್ತು ಈತನ ಹತ್ತಿರದ ಸಂಬಂಧಿಕನಾದ ಅಬ್ದುಲ್ ನಿಝಾರ್ ಯಾನೆ  ಇಚ್ಚಾದ್  (23) ಎಂಬಿವರನ್ನು ಕುಂಬಳೆ ಇನ್ಸ್‌ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಅನಂತಕೃಷ್ಣನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ 7.4  ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಲಾಗಿದೆ.    ನಿನ್ನೆ ರಾತ್ರಿ 7.30ರ …

ಯುವತಿಯನ್ನು ಬಿಗಿದಪ್ಪಿಕೊಂಡ ವ್ಯಕ್ತಿ ಬಂಧನ

ಬದಿಯಡ್ಕ: ಯುವತಿಯನ್ನು ಬಿಗಿದಪ್ಪಿಕೊಂಡ ಆರೋಪದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಶಂಕರಂಪಾಡಿ ಮಾಹಿಪಡ್ಪು ನಿವಾಸಿಯೂ ಪ್ರಸ್ತುತ ಬಾಡೂರಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿಬು ಕೆ.ವಿ (48) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತ ನಿನ್ನೆ 21ರ ಹರೆಯದ ಯುವತಿಯನ್ನು ಬಿಗಿದಪ್ಪಿಕೊಂಡಿರುವುದಾಗಿ ದೂರಲಾಗಿದೆ. ಈಬಗ್ಗೆ ಯುವತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯೋತ್ಸವ ವೇಳೆ ಪಟಾಕಿ ಸಿಡಿಸಿ ಮಕ್ಕಳು ಗಾಯಗೊಂಡ ಪ್ರಕರಣ: ಗೆದ್ದ ಅಭ್ಯರ್ಥಿ ಸೇರಿ 51 ಮಂದಿ ವಿರುದ್ಧ ಕೇಸು

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಮಕ್ಕಳು ಗಾಯಗೊಂಡ ಘಟನೆಗೆ ಸಂಬಂಧಿಸಿ ಚುನಾವಣೆಯಲ್ಲಿ ಗೆದ್ದ  ಅಭ್ಯರ್ಥಿ ಸೇರಿ ಒಟ್ಟು ೫೧ ಮಂದಿಯ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನಗರಸಭೆಯ ಕೋಟೆ ರಸ್ತೆ ವಾರ್ಡ್‌ನಲ್ಲಿ   ಯುಡಿಎಫ್‌ನ ಜಾಫರ್ ಕಮಾಲ್ ಗೆಲುವುಸಾಧಿಸಿದ್ದು ಫಲಿತಾಂಶ ಪ್ರಕಟಗೊಂಡ ಬಳಿಕ ಯುಡಿಎಫ್ ಕಾರ್ಯಕರ್ತರು ಜಾಫರ್ ಕಮಾಲ್‌ನೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸುತ್ತಿದ್ದ ವೇಳೆ ಪಟಾಕಿ ಸಿಡಿಸಿ ಗೆಲುವಿನ ಸಂಭ್ರಮ ಆಚರಿಸಿದ್ದರು.  …

ಗೆಳೆತನ ಬೆಳೆಸಿ ಮದ್ಯ ಸೇವಿಸಿ ಯುಎಸ್ ಪ್ರಜೆಗೆ ಹಲ್ಲೆ: ಚಿನ್ನ, ಹಣ ಅಪಹರಿಸಿದ ಯುವಕರು ಸೆರೆ

ಕೊಚ್ಚಿ: ಐಟಿ ಕಂಪೆನಿ ಆರಂಭಿಸ ಲಿರುವ ಚರ್ಚೆಗಳ ಮಧ್ಯೆ ಕೊಚ್ಚಿಗೆ ತಲುಪಿದ ಯುಎಸ್ ಪ್ರಜೆಯನ್ನು ಹೋಟೆಲ್ ಕೊಠಡಿಯಲ್ಲಿ ಬಂಧನ ಗೊಳಿಸಿ ಹಲ್ಲೆ ನಡೆಸಿ ಹಣವನ್ನು ಅಪಹರಿಸಿದ ಇಬ್ಬರು ಯುವಕರು ಸೆರೆಯಾಗಿದ್ದಾರೆ. ಮುಳಂದುರುತ್ತಿ ನಿವಾಸಿ ಆದರ್ಶ್, ಪಳ್ಳುರುತ್ತಿ ನಿವಾಸಿ ಆಕಾಶ್ ಎಂಬಿವರನ್ನು ಎರ್ನಾಕುಳಂ ಸೆಂಟ್ರಲ್ ಪೊಲೀಸರು ಸಾಹಸಿಕವಾಗಿ ಸೆರೆ ಹಿಡಿದಿದ್ದಾರೆ. ಹಲವಾರು ಕ್ರಿಮಿನಲ್ ಪ್ರಕರಣ ಗಳಲ್ಲಿ ಇವರು ಆರೋಪಿಯಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ. ಯುಎಸ್ ಪ್ರಜೆ ಹಾಗೂ ನ್ಯೂಯೋರ್ಕ್‌ನಲ್ಲಿ ಐಟಿ ಪ್ರೊಫೆಶನಲ್ ಆಗಿರುವ ಒಡಿಶ್ಶಾ ನಿವಾಸಿ ಇನ್ಫೋ ಪಾರ್ಕ್‌ನಲ್ಲಿ …

ಶೋಚನೀಯ ಸ್ಥಿತಿಯಲ್ಲಿರುವ ಮೀನು ಮಾರುಕಟ್ಟೆಗೆ ಹೊಸ ನಗರಸಭಾ ಆಡಳಿತ ಸಮಿತಿಯಿಂದ ಮುಕ್ತಿ ದೊರಕುವ ನಿರೀಕ್ಷೆ

ಕಾಸರಗೋಡು: ನಗರದ ಮೀನು ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನವೀಕರಿಸುವ ಕಳೆದ ನಗರಸಭೆಯ ತೀರ್ಮಾನ ಕಾಗದಕ್ಕೆ ಸೀಮಿತಗೊಂಡಿರುವುದು ನಗರಸಭಾ ಚುನಾವಣೆಯಲ್ಲಿ ಚರ್ಚೆಯಾಗಿತ್ತು.  ಕಾಸರಗೋಡು ನಗರದ ಮಧ್ಯಭಾಗದಲ್ಲಿರುವ ಮೀನು ಮಾರುಕಟ್ಟೆಯ ಶೋಚನೀಯಾವಸ್ಥೆ ಬಗ್ಗೆ ಹಲವು ಬಾರಿ ಮೀನು ಮಾರಾಟಗಾರರು, ಸಮೀಪದ ವ್ಯಾಪಾರಿಗಳು ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿಯೇ ಮೀನು ಮಾರಾಟ, ಸ್ಥಳದ ಇತಿಮಿತಿಯಿಂದಾಗಿ ಉಸಿರುಗಟ್ಟಿಸುವಂತಹ ವಾತಾವರಣ ಈಗ ಮೀನು ಮಾರುಕಟ್ಟೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಆಡಳಿತ ಸಮಿತಿಯ ಕಾಲದಲ್ಲಿ ಜ್ಯಾರಿಯಾಗದ ನವೀಕರಣ ಕೆಲಸಗಳಿಂದಾಗಿ ಮೀನು ಕಾರ್ಮಿಕರು ಚುನಾವಣೆಯಲ್ಲಿ …

ಸಿಪಿಎಂ- ಬಿಜೆಪಿ ಒಳ ಒಪ್ಪಂದದ ದುರಾಡಳಿತಕ್ಕೆ ಕೊಟ್ಟ ಉತ್ತರ ಯುಡಿಎಫ್ ಗೆಲುವು- ಕಾಂಗ್ರೆಸ್

ಪೈವಳಿಕೆ: ಪೈವಳಿಕೆ ಪಂಚಾಯತ್‌ನಲ್ಲಿ ಕಳೆದ ಐದು ವರ್ಷಗಳಿಂದ ಸಿ.ಪಿ.ಎಂ. ಹಾಗೂ ಬಿ.ಜೆ.ಪಿ. ಒಳ ಒಪ್ಪಂದ ಮೂಲಕ ನಡೆಸಿಕೊಂಡು ಬಂದ ದುರಾಡಳಿತಕ್ಕೆ ಜನತೆ ತಕ್ಕ ಉತ್ತರ ನೀಡುವ ಮೂಲಕ ಐಕ್ಯರಂಗ ಹೆಚ್ಚು ಸ್ಥಾನಗಳನ್ನು ಪಡೆಯಲು ಕಾರಣವಾಯಿತು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ತಿಳಿಸಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪಂ.ಮಜಿರ್ಪಳ್ಳ ಡಿವಿಶನ್ ನಿಂದ ಆಯ್ಕೆಯಾದ ಮೋಹನ ರೈ ಕಯ್ಯಾರು ಹಾಗೂ ವಿವಿಧ ವಾರ್ಡ್ ಗಳಲ್ಲಿ ಆಯ್ಕೆಯಾದ ರಾಘವೇಂದ್ರ …

ಯುಡಿಎಫ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿಯಾಗಿ ಲಕ್ಷ್ಮಣ ಪ್ರಭು ಕುಂಬಳೆ ನೇಮಕ

ಕುಂಬಳೆ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಯುಡಿಎಫ್ ಕಾರ್ಯ ದರ್ಶಿಯಾಗಿ ಕಾಂಗ್ರೆಸ್‌ನ ನೇತಾರ ಲಕ್ಷ್ಮಣ ಪ್ರಭು ಕುಂಬಳೆ ಆಯ್ಕೆಯಾಗಿ ದ್ದಾರೆ. ಜಿಲ್ಲಾ ಕಾಂಗ್ರೆಸ್ ಘಟಕ ಇವರನ್ನು ನೇಮಕಗೊಳಿಸಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಐಕ್ಯರಂಗದ ಪ್ರಚಂಡ ಗೆಲುವು ಹಿನ್ನೆಲೆಯಲ್ಲಿ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಡಿಸಿಸಿ ಈ ನೇಮಕಾತಿ ನಡೆಸಿದೆ. ಕಾಂಗ್ರೆಸ್ ಕುಂಬಳೆ ಪಂ. ಘಟಕ ಉಪಾಧ್ಯಕ್ಷ, ಐಎನ್‌ಟಿಯುಸಿ ಮಂಡಲ ಅಧ್ಯಕ್ಷ, ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ, ಬ್ಲೋಕ್ ಅಧ್ಯಕ್ಷ ಮೊದಲಾದ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಪುತ್ತಿಗೆ ಜಿಲ್ಲಾ ಪಂಚಾಯತ್ …

ಸಂತಡ್ಕ ಮಾಡ ಕ್ಷೇತ್ರದ ವಾರ್ಷಿಕ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಶ್ರೀ ಕ್ಷೇತ್ರ ಸಂತಡ್ಕ ಮಾಡದ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 20ರಿಂದ 23ರವರೆಗೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರಾಡಳಿತ ಟ್ರಸ್ಟ್ನ ಅಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿ ಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಕಲಾ ಸುವರ್ಣ, ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಶ್ವರ ವಸಂತ ಭಟ್ ತೊಟ್ಟೆತ್ತೋಡಿ, ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.