ಶಿರಿಯದಲ್ಲಿ ಎಲ್‌ಡಿಎಫ್-ಯುಡಿಎಫ್ ಘರ್ಷಣೆ: ಯುಡಿಎಫ್ ಕಾರ್ಯಕರ್ತನ ಕಾರಿಗೆ ಮತ್ತೊಂದು ಕಾರು ಢಿಕ್ಕಿ ; ನಾಲ್ಕು ಮಂದಿಗೆ ಗಾಯ, ಓರ್ವ ಸೆರೆ
ಕುಂಬಳೆ : ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಉಂಟಾದ ತರ್ಕದ ಹೆಸರಲ್ಲಿ ಶಿರಿಯದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಮಧ್ಯೆ ಘರ್ಷಣೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.ಇದೇ ವೇಳೆ ಎಲ್‌ಡಿಎಫ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಎರಡೂ ಭಾಗದ ಎರಡು ಕಾರುಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಘರ್ಷಣೆ ಆರಂಭಗೊಂಡಿದೆಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಶಿರಿಯ ಮಸೀದಿ ಸಮೀಪ ಕಾರು ನಿಲ್ಲಿಸಿ ಇಳಿದ ಎಲ್‌ಡಿಎಫ್ …